UN networks
ಉಳ್ಳಾಲ: ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಪ್ರಯತ್ನಗಳಲ್ಲಿ ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್ರವರನ್ನು ನಿರ್ಲಕ್ಷಿಸುವಂತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ರಾಷ್ಟ್ರ ನಿರ್ಮಾಣದ ಆಸಕ್ತಿಯೇ ಅವರಲ್ಲಿ ಹೆಚ್ಚಾಗಿತ್ತು. ಆರ್ಯ ಬಾಲಸಭಾ ಎಂಬ ಕ್ಲಬ್ ಕಟ್ಟುವುದರ ಮೂಲಕ ಇಡೀ ರಾಷ್ಟ್ರಕ್ಕೆ ಪ್ರೇರಣೆಯಾದವರು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು.



ಅವರು ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಕಾಂಗ್ರೆಸ್ ಸೇವಾದಳ ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಜರಗಿದ ದಿ| ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ
ಟಿ.ಕೆ ಸುಧೀರ್, ಸುರೇಖಾ ಚಂದ್ರಹಾಸ್, ಪುರುಷೋತ್ತಮ ಅಂಚನ್, ಕಿಶೋರ್ ಮುಂಡೋಳಿ, ಸೇವಾದಳದ ನಾಗೇಶ್ ಶೆಟ್ಟಿ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.


