ಉಳ್ಳಾಲ: ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕೋಟೆಪುರ ನಿವಾಸಿ ಉದ್ಯಮಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಸುಂದರಿಬಾಗ್ ಎಂಬಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ.ಉಳ್ಳಾಲ ಕೋಟೆಪುರ ನಿವಾಸಿ,ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47)ಯಾನೆ ಕಮಾಲ್ ಮೃತರು. ಮಂಗಳೂರು ಧಕ್ಕೆಯಲ್ಲಿ ಮೀನು ವ್ಯವಹಾರ ನಡೆಸುತ್ತಿದ್ದ ಅವರು ಸಂಜೆ ವೇಳೆ ತೊಕ್ಕೊಟ್ಟು ಕಡೆಯಿಂದ ಮನೆ ಕಡೆಗೆ ಪುತ್ರನನ್ನು ಕುಳ್ಳಿರಿಸಿ ಸ್ಕೂಟರಿನಲ್ಲಿ ತೆರಳುವ ಸಂದರ್ಭ, ಆಯತಪ್ಪಿ ಸ್ಕೂಟರ್ ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇಬ್ರಾಹಿಂ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದವರಾಗಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ತೊಕ್ಕೊಟ್ಟುವಿನ ಸಹಾರಾ ಆಸ್ಪತ್ರೆ ಎದುರುಗಡೆ ಜನ ಜಮಾಯಿಸಿದ್ದರು.
Author: UllalaVani
ಮಂಗಳೂರು: ಕಲಾಸಾಧನ ಮಂಗಳೂರು ಇದರ ವತಿಯಿಂದ ಸ್ವರಧಾರಾ ಸಂಗೀತ ಉತ್ಸವ ಆ.10ರಂದು ಸಂಜೆ 5ಗಂಟೆಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಲಾ ಸಾಧನ ಕೇಂದ್ರದ ನಿರ್ದೇಶಕಿ ವಿಭಾಶ್ರೀನಿವಾಸ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಸ್ವರಧಾರಾ ಸಂಗೀತ ಉತ್ಸವದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನೆರವೇರಿಸಲಿದ್ದಾರೆ. ಸಂಗೀತ ಉತ್ಸವದಲ್ಲಿ ಪ್ರಸಿದ್ದ ಹಿಂದೂಸ್ತಾನಿ ಗಾಯಕ ಸಂಗೀತ ನಾಟಕ ಅಕಾಡೆಮಿ ಹೊಸದಿಲ್ಲಿಯ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪಂಡಿತ್ ಕುಮಾರ್ ಮರ್ದೂರ್ ಭಾಗವಹಿಸಲಿದ್ದಾರೆ. ಕುಮಾರ್ ಅವರು ಕಿರಾಣಾ, ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಗಳನ್ನು ಬೆರೆಸಿ ತಮ್ಮದೇ ಆದ ಗಾಯನವನ್ನು ರಚಿಸಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದವರು ಎಂದು ವಿವರಿಸಿದರು. ಉತ್ಸವದಲ್ಲಿ ಅಕ್ಷಯ ಜೋಶಿ ಧಾರವಾಡ್ ತಬಲಾ ಮತ್ತು ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್…
ಮಂಗಳೂರು: ಬಲ್ಮಠದಲ್ಲಿ ಪಾರ್ಕ್ ಮಾಡಲಾಗಿದ್ದ ಕಂಟೈನರ್‌ಗೆ ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಳಿಗ್ಗೆ ನಡೆದಿದೆ.ಮೃತಪಟ್ಟ ಯುವಕನನ್ನು ಮೊಡಂಕಾಪು ನಿವಾಸಿ ಮೆಲ್ರಾಯ್ ಶಾನ್ ಡಿಸೋಜಾ (24) ಎಂದು ಗುರುತಿಸಲಾಗಿದೆ.ಮೃತನು ಮಂಗಳೂರು ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಜಿಎನ್‌ಎಮ್ ತೃತೀಯ ವರ್ಷದ ವಿದ್ಯಾರ್ಥಿಯಾಗಿದ್ದರೂ, ಸರಕಾರಿ ಆಸ್ಪತ್ರೆಗೆ ಇಂಟರ್ನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಈ ಸಂಬಂಧ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಓಪನ್ ಡೇ ಕಾರ್ಯಕ್ರಮ ಜರಗಿತು.1,300ಕ್ಕೂ ಹೆಚ್ಚು ಭೇಟಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಕುಲಪತಿಗಳಾದ ರೆ. ಫಾದರ್ ಡಾ. ವಿಕ್ಟರ್ ಲೋಬೊ ಎಸ್.ಜೆ. , ರಾಜೀವ್ ಗಾಂಧಿ ಜೈವಿಕತಂತ್ರಜ್ಞಾನ ಕೇಂದ್ರದ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ ಮತ್ತು ಕಾರ್ಯಕ್ರಮ ಸಂಯೋಜಕ ಡಾ. ವಿ. ಕ್ರಿಸ್ಟೋ ಸೆಲ್ವನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿದ್ದು, ವಿಜ್ಞಾನ ವಿಭಾಗದ ಕ್ಯಾನ್ಸರ್ ಸಂಶೋಧನೆ, ಬಯೋಪ್ಲಾಸ್ಟಿಕ್ ತಯಾರಿಕೆ, ವಾಣಿಜ್ಯ ವಿಭಾಗದ ಸೆಗ್ರೆಬಾಟ್ ಯೋಜನೆ, ಇತಿಹಾಸ ವಿಭಾಗದ ವಿಜಯನಗರ ಸಾಮ್ರಾಜ್ಯದ ಮಾದರಿ ಮತ್ತು ಮಾಧ್ಯಮ ವಿಭಾಗದ ಸೃಜನಾತ್ಮಕ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿದ್ದವು.ಈ ಸಂದರ್ಭ “ಶೈಕ್ಷಣಿಕ ಸೇತುವೆಗಳ ನಿರ್ಮಾಣ” ಎಂಬ ವಿಶೇಷ ಸಭೆಯಲ್ಲಿ ಡಿಪಿಎಸ್ ಈಸ್ಟ್ ನ ಪ್ರಾಂಶುಪಾಲೆ ಮನಿಲಾ ಕಾರ್ವಾಲ್ಕೋ ಸೇರಿದಂತೆ ಅನೇಕ ಶಿಕ್ಷಣತಜ್ಞರು ಭಾಗವಹಿಸಿದ್ದರು. ವಿದ್ಯಾರ್ಥಿ ಸಂಸದೀಯ ಸಭೆ 2025 ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಹಾಯಕವಾಗಿತ್ತು. ಪೋಷಕರಿಗಾಗಿ “ಉನ್ನತ ಶಿಕ್ಷಣ…
ಉಳ್ಳಾಲ: ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾ ಮಂಗಳೂರು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರ ಆಶಯದಂತೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮವು ಅಲ್ಪಸಂಖ್ಯಾತ ಮೋರ್ಚಾ ಮಂಡಲ ಅಧ್ಯಕ್ಷರಾದ ಕರೀಂ ಉಚ್ಚಿಲ್ ರವರ ನಿವಾಸದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ರವರು ಮಾತನಾಡಿ, ಬಿಜೆಪಿಯ ಎಲ್ಲಾ ಅಲ್ಪಸಂಖ್ಯಾತರ ಕಾರ್ಯಕರ್ತರ ಮನೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಜಿ ರವರ ತಾಯಿಯ ಹೆಸರಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಬೇಕೆಂದು ಹಾಗೂ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷರಾದ ಮುಕ್ತಾರ್ ಪಠಾಣ್ ಹುಸೇನ್ ರವರು ಮಾತನಾಡಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಜನಪರ ಹಾಗೂ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿಯ ಯೋಜನೆಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ದಕ್ಷಿಣ ಕನ್ನಡ…
ಮಂಗಳೂರು, ಆ.6 – ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕರ ಉತ್ತಮ ಆರೋಗ್ಯದ ಕಡೆಗೆ ಕಾಳಜಿ ತೋರುವ ಉದ್ದೇಶದಿಂದ ರೋಹನ್ ಕಾರ್ಪೋರೇಶನ್ ಸಂಸ್ಥೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಈ ಶಿಬಿರ ಮಂಗಳೂರು ಬಿಜೈ ಮುಖ್ಯ ರಸ್ತೆಯಲ್ಲಿರುವ ರೋಹನ್ ಸಿಟಿ ಆವರಣದಲ್ಲಿ ನಡೆಯಿತು. ಶಿಬಿರವನ್ನು ಹಿಂದ್ ಕುಷ್ಟ್ ನಿವಾರಣ್ ಸಂಘ (ರಿ) ಮತ್ತು ಲಯನ್ಸ್ ಕ್ಲಬ್ ಮಂಗಳಾದೇವಿ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದಲೇ ಶಿಬಿರದಲ್ಲಿ ನೂರಾರು ಉದ್ಯೋಗಿಗಳು ಮತ್ತು ಕಾರ್ಮಿಕರು ಭಾಗವಹಿಸಿದ್ದು, ತಜ್ಞ ವೈದ್ಯರ ತಂಡದಿಂದ ರಕ್ತದೊತ್ತಡ, ಡಯಾಬಿಟಿಸ್, ದಂತಚಿಕಿತ್ಸೆ, ಇ.ಸಿ. ಜಿ ,ಸಾಮಾನ್ಯ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಿತು.ರೋಹನ್ ಕಾರ್ಪೋರೇಶನ್ ನ ಡೈರೆಕ್ಟರ್ ಡಿಯೋನ್ ಮೊಂತೇರೊರವರು “ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾಗಿದೆ. ಅವರ ಆರೋಗ್ಯದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತಿದ್ದೇವೆ. ಈ ಶಿಬಿರವು ಕಾಳಜಿಯ ಪ್ರತಿಬಿಂಬವಾಗಿದೆ” ಎಂದು ಅಭಿಪ್ರಾಯಪಟ್ಟರು.ಮಂಗಳೂರು ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕರಾದ ಶ್ರೀ ಮಹೇಶ್ ರವರು “ಇದೊಂದು ಸಾಮಾನ್ಯ ಆರೋಗ್ಯ ತಪಾಸಣೆಯ…
ನವದೆಹಲಿ : ಆನ್‌ಲೈನ್ ವಂಚನೆಗಳನ್ನು ತಡೆಯುವ ಪ್ರಯತ್ನದ ಭಾಗವಾಗಿ, ವಾಟ್ಸಾಪ್ ಭಾರತದಲ್ಲಿ ಹೊಸ ‘ಸೇಫ್ಟಿ ಓವರ್ವ್ಯೂ’ ಎಂಬ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅನಾಮಧೇಯ ವ್ಯಕ್ತಿಗಳು ಬಳಕೆದಾರರನ್ನು ಅನುಮತಿ ಇಲ್ಲದೇ ಗುಂಪು ಚಾಟ್‌ಗಳಿಗೆ ಸೇರಿಸುವ ವಂಚನಾ ಪ್ರಯೋಗಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ.ಈ ಹೊಸ ವೈಶಿಷ್ಟ್ಯವು ಬಳಕೆದಾರನಿಗೆ ಗುಂಪಿಗೆ ಸೇರಿಸುವ ಮೊದಲು ಒಂದು ಪೂರ್ವದೃಶ್ಯ (preview screen) ಅನ್ನು ತೋರಿಸುತ್ತದೆ. ಇದು ಗುಂಪಿನ ರಚಿಸಿದವರು ಯಾರು, ಎಷ್ಟು ಮಂದಿ ಸದಸ್ಯರು ಇದ್ದಾರೆ ಎಂಬ ಮಾಹಿತಿಯ ಜೊತೆಗೆ ಸುರಕ್ಷತಾ ಸಲಹೆಗಳನ್ನೂ ನೀಡುತ್ತದೆ. ಬಳಕೆದಾರನು ಗುಂಪಿಗೆ ಸೇರಿಕೊಳ್ಳಬೇಕೇ ಅಥವಾ ಬಿಟ್ಟುಕೊಡಬೇಕೇ ಎಂಬ ನಿರ್ಧಾರ ತೆಗೆದುಕೊಳ್ಳುವವರೆಗೆ ಗುಂಪಿನಿಂದ ಯಾವುದೇ ನೋಟಿಫಿಕೇಶನ್‌ಗಳು ಬರುತ್ತದೆ.ಇದು ವಾಟ್ಸಾಪ್‌ನ ಭದ್ರತಾ ಪ್ರೇರಿತ ಆವೃತ್ತಿಯ ಭಾಗವಾಗಿದ್ದು, ಉದ್ಯೋಗ ಸಂಬಂಧಿತ ವಂಚನೆಗಳು, ಕ್ರಿಪ್ಟೋಕರೆನ್ಸಿ ಮೋಸಗಳು ಹಾಗೂ ಫಿಷಿಂಗ್ ದಾಳಿಗಳನ್ನು ತಡೆಯುವಲ್ಲಿ ಸಹಾಯಕವಾಗಲಿದೆ.ವಾಟ್ಸಾಪ್–ಮೆಟಾ ಕಾರ್ಯಪಡೆ 6.8 ಮಿಲಿಯನ್ ವಂಚನೆ ಖಾತೆಗಳನ್ನು ನಿರ್ಬಂಧಿಸಿದೆ2025ರ ಜನವರಿಯಿಂದ ಜೂನ್ ವರೆಗೆ 6.8 ಮಿಲಿಯನ್ ವಂಚನೆಗೆ ಸಂಬಂಧಿಸಿದ ಖಾತೆಗಳನ್ನು ವಾಟ್ಸಾಪ್ ತಕ್ಷಣವೇ ತಪಾಸಿಸಿ ನಿರ್ಬಂಧಿಸಿದೆ.…
ಮಂಗಳೂರು: ಪ್ರಸಕ್ತ (2025-26ನೇ) ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ (ಪಿಜಿ) ನೇಮಕಾತಿ-ಸಂದರ್ಶನ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿದೆ. ಆಯ್ಕೆಗೆ ಸಂಬಂಧಿಸಿ ಸಂದರ್ಶನವು ಮಂಗಳೂರು ವಿವಿಯ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ನಡೆಯಲಿದೆ.ವಿಷಯವಾರು ದಿನಾಂಕ ಮತ್ತು ಸಮಯ ಆ.11: ಬೆಳಗ್ಗೆ 10ರಿಂದ 10:30 ಕನ್ನಡ, 10:30 ರಿಂದ 11 ಇಂಗ್ಲಿಷ್, 11ರಿಂದ 11:30 ಹಿಂದಿ, 11:30ರಿಂದ 11:40 ಕೊಂಕಣಿ, 11:40ರಿಂದ 12 ತುಳು, 12ರಿಂದ 1 ಗಂಟೆಯವರೆಗೆ ಇತಿಹಾಸ. ಮಧ್ಯಾಹ್ನ 2:15 ರಿಂದ 2:45 ಅರ್ಥಶಾಸ್ತ್ರ, 2:45ರಿಂದ 3 ರಾಜ್ಯಶಾಸ್ತ್ರ, 3ರಿಂದ 3:15 ಸಮಾಜಶಾಸತ್ರ, 3:15ರಿಂದ 3:45 ಸೋಶಿಯಲ್ ವರ್ಕ್, 3:45 ರಿಂದ 4 ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, 4 ರಿಂದ 5:30 ಎಂಪಿಎಡ್/ಬಿಪಿಎಡ್. *ಆ.12: ಬೆಳಗ್ಗೆ 10 ರಿಂದ 10:30 ಬಯೋಸೈನ್ಸ್, 10:45ರಿಂದ 11:30 ಬಯೋಟೆಕ್ನಾಲಜಿ, 11:30 ರಿಂದ 12:15 ಮೈಕ್ರೋ ಬಯಾಲಜಿ, 12:15ರಿಂದ 12:45 ಎನ್ವಿರಾನ್ಮೆಂಟಲ್ ಸೈನ್ಸ್, 12:45ರಿಂದ…
ಮಂಗಳೂರು: ಮಾಧ್ಯಮಗಳು ವಸ್ತು ನಿಷ್ಠವಾಗಿ, ನಿಷ್ಪಕ್ಷಪಾತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮಾಧ್ಯಮ ಒಂದು ವಿಚಾರದ ಪರ ಮಾತ್ರ ಇರಬಾರದು, ವಾಸ್ತವಿಕ ಸಂಗತಿಗಳನ್ನು ಸಮಾಜದ ಮುಂದಿಡಬೇಕು. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಆಗುತ್ತಿರುವುದು ಖೇದಕರ.ಈ ವಿಚಾರಗಳು ಪತ್ರಕರ್ತರ ಸುವರ್ಣ ಸಂಭ್ರಮದ ವೇಳೆ ವಿಮರ್ಶೆಯಾಗಬೇಕು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಕ್ಕೆ ನಿಯಂತ್ರಣ ಇರುತ್ತದೆ. ಆದರೆ ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಹತೋಟಿ ಇಲ್ಲದೆ ದುರ್ಬಳಕೆಯಾಗುತ್ತಿರುವುದು ಖೇದಕರ ಎಂದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಶಯ ಭಾಷಣ ಮಾಡಿದರು, ಮಾಜಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸಂಘ ನಡೆದು ಬಂದ…
ಮಂಗಳೂರು: ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ (ED) ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಯ್ಯದ್ ಯಾಸಿನ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ₹29,176 ಮೊತ್ತವನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. 2022ರ ನವೆಂಬರ್ 19ರಂದು ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಆಟೋ ರಿಕ್ಷಾ ಸ್ಫೋಟ ಪ್ರಕರಣದ ಭಾಗವಾಗಿ ಈ ಜಪ್ತಿಯು ನಡೆದಿದ್ದು, ಈ ಪ್ರಕರಣವು ಭಯೋತ್ಪಾದನೆಗೆ ಸಂಬಂಧಿಸಿದ ಹಣಕಾಸು ನಡವಳಿಕೆಗಳ ತನಿಖೆಯೊಂದರ ಅಂಗವಾಗಿದೆ ಎಂದು ED ಪ್ರಕಟಣೆಯಲ್ಲಿ ತಿಳಿಸಿದೆ.ಈ ಘಟನೆ ಸಂಬಂಧಿಸಿದಂತೆ ಆಟೋ ಚಾಲಕ ಕೆ. ಪುರುಷೋತ್ತಮ ಅವರು ನೀಡಿದ ದೂರು ಆಧರಿಸಿ ಕಂಕನಾಡಿ ಪೊಲೀಸರು FIR ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪುನರ್‌ನೋಂದಣಿ ಮಾಡಿತ್ತು. ಈ ಪ್ರಕರಣದಲ್ಲಿ ಬಳಸಲಾದ ಸ್ಫೋಟಕ ಪದಾರ್ಥಗಳ ಕಾಯಿದೆಗಳ ಅನ್ವಯ (Explosive Substances Act, 1908) ವಿಧಿಸಿರುವ ಸೆಕ್ಷನ್ 3, 4 ಮತ್ತು 5ಗಳು PMLA ಕಾಯಿದೆಯಲ್ಲಿನ ನಿಗದಿತ ಅಪರಾಧಗಳಾಗಿರುವುದರಿಂದ ED ತನ್ನ ತನಿಖೆ…

