ನಮ್ಮ ಆಲೋಚನೆಗಳು ನಮ್ಮ ಸಂತೋಷ ಮತ್ತು ದುಃಖವನ್ನು ನಿರ್ಧರಿಸುತ್ತದೆ ನಮ್ಮ ಜೀವನದ ಅನುಭವಗಳು ಭಾವನೆಗಳು ಕಷ್ಟ ಮತ್ತು ದುಃಖಕ್ಕೆ ನಮ್ಮ ಮನಸ್ಥಿತಿಯೇ ಕಾರಣವಾಗುತ್ತದೆ ಮಾತ್ರವಲ್ಲದೆ ದೇಹ ಮತ್ತು ಮನಸ್ಸು ಪರಸ್ಪರ ನಿಕಟ ಪೂರ್ವ ಸಂಬಂಧಗಳನ್ನು ಹೊಂದಿರುತ್ತದೆ ಹಾಗಾಗಿ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡಾಗ ಸದೃಢ ಜೀವನ ಸಾಧ್ಯವೆಂದು ಮಂಗಳೂರಿನ ಪಿ ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಮ್ ಅವರು ಅಭಿಪ್ರಾಯಪಟ್ಟರು.


ಇವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆ ಮತ್ತು ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಕಡೆಂಜ ಶ್ರೀ ಸೋಮಶೇಖರ ಚೌಟ ವಹಿಸಿ ವಿದ್ಯಾ ಶ್ರೀ ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಾದ ದರ್ಶಿನಿ, ಫಾತಿಮ ರಫೀದ, ಮಹಮ್ಮದ್ ಮುಂಝಿರ್ ಇವರುಗಳನ್ನು ಸನ್ಮಾನಿಸಲಾಯಿತು.
ಹಾಗು 2026-27 ನೇ ಸಾಲಿಗೆ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.ಅಧ್ಯಕ್ಷರಾಗಿ ಶ್ರೀಮತಿ ಉಷಾ ಫಜೀರು ಉಪಾಧ್ಯಕ್ಷರುಗಳಾಗಿ ಪ್ರಿಯಾಂಕ ಗ್ರಾಮಚವಾಡಿ , ಅಶ್ರಫ್ ಬಾವಲಿಗುರಿ , ವಿಜಯ್ ಗ್ರಾಮಚವಾಡಿ , ವಿಶ್ವನಾಥ್ ಗ್ರಾಮಚವಾಡಿ , ಶ್ರೀಮತಿ ಲತಾ ಫಜೀರು ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಆಲಡ್ಕ ಕೋಶಾಧಿಕಾರಿಯಾಗಿ ಶ್ರೀಮತಿ ಅಂಕಿತ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸಲೀಮ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಅಶ್ವಿನಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಲತಾ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಆಯಿಷಾ ಮುಂತಾದವರು ಅವಿರೋಧವಾಗಿ ಆಯ್ಕೆಯಾದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಸರ್ವರನ್ನು ಸ್ವಾಗತಿಸಿದರು ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಶಾಲಾ ಶಿಸ್ತು, ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು.ಶಿಕ್ಷಕ ಶಿವಕುಮಾರ್ ಅಭಿನಂದನಾ ಭಾಷಣ ಮಾಡಿದರು.
ಶಿಕ್ಷಕರಾದ ಕೃಷ್ಣಶಾಸ್ತ್ರೀ ವಂದಿಸಿದರು.ಶಿಕ್ಷಕಿಯರಾದ ಶ್ರೀಮತಿ ಸ್ಮಿತಾ, ಶ್ರೀಮತಿ ಯಶಸ್ವಿನಿ, ಭವ್ಯ ಮುಂತಾದವರು ಸಹಕರಿಸಿದರು.
ಸುಮಾರು 160 ಶಾಲಾ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.

