Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಸಿಂಗಾಪುರ ಮೂಲದ ಕೆಇಎಫ್ ಹೋಲ್ಡಿಂಗ್ಸ್ ನ ಅಂಗ ಸಂಸ್ಥೆಯ ಕೆಇಎಫ್ ಇನ್ಫ್ರಾ ಸಂಸ್ಥೆ ಭಾರತದಲ್ಲಿ ಪ್ರಥಮವಾಗಿ ಫ್ಯಾಕ್ಟರಿಯಲ್ಲಿ ತಯಾರಿಸಿದ ಮೆರಿಡಿಯನ್ ವಸತಿ ಸಮುಚ್ಛಯವನ್ನು ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಬುಧವಾರ ಉದ್ಘಾಟಿಸಿದರು. ಕೆಇಎಫ್ ಕ್ರೋನಿಕಲ್ಸ್ ವಿಶೇಷ ಸುದ್ಧಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಕಡಿಮೆ ಅವಧಿ ಹಾಗೂ ಖರ್ಚಿನಲ್ಲಿ ನೂತನ ತಂತ್ರಜ್ಞಾನಗಳೊಂದಿಗೆ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಸರಕಾರ ಹೆಚ್ಚಿನ ಚಿಂತನೆ ನಡೆಸಲಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸರಕಾರಿ ಸಂಬಂಧಿ ಕಟ್ಟಡಗಳನ್ನು ಇದೇ ತಂತ್ರಜ್ಞಾನದೊಂದಿಗೆ ನಿರ್ಮಿಸುವುದರ ಮೂಲಕ ಕಡಿಮೆ ಅನುದಾನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಎಂದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದಾದ ಮನೆ ಹೊಂದುವ ಕನಸಿದ್ದು ಅದು ಈಡೇರುವಲ್ಲಿ ಕೆಇಎಫ್ ಇನ್‍ಫ್ರಾ ತಂತ್ರe್ಞÁನದಲ್ಲಿ ನಿರ್ಮಿಸಲಾಗುವ ಮನೆ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ವಿವರ: ಕುಂಪಲ ಮಸೀದಿಯ ರಾತ್ರಿಯ ನಮಾಜು ಮುಗಿಸಿ ಹೋದ ಬಳಿಕ ತಡರಾತ್ರಿ ಕಿಟಕಿಯ ಬಾಗಿಲಿಗೆ ಕಲ್ಲು ಬಿದ್ದ ಶಬ್ಧ ಸಮೀಪದವರಿಗೆ ಕೇಳಿಸಿತ್ತು. ತಕ್ಷಣ ಮಸೀದಿಯ ಗುರು ಲೈಟ್ ಹಾಕಿದರು ಎನ್ನಲಾಗಿದೆ. ಈ ವೇಳೆ ಕಲ್ಲೆಸೆದ ದುಷ್ಕರ್ಮಿಗಳು ಮಸೀದಿಯ ಕಡೆ ಇರಲಿಲ್ಲ. ಆದರೆ ಮಸೀದಿಯ ಕಿಟಕಿ ಗಾಜು ಹಾನಿಯಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಕಲ್ಲೆಸೆದಿರಬೇಕೆಂದು ಶಂಕಿಸಿದ ಈ ಜಮಾಅತ್‍ನ ಸದಸ್ಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸುರ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಬೈಕ್ ಹಾಗೂ ಇನ್ನೋವಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ಸಂಕೊಳಿಗೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಮೃತರನ್ನು ಉಚ್ಚಿಲ ಗುಡ್ಡೆ ನಿವಾಸಿ ಎಂ.ಇಬ್ರಾಹಿಂ (60) ಮತ್ತು ಉಚ್ಚಿಲ ನ್ಯಾಯಪಟ್ನ ನಿವಾಸಿ ಮಹಮ್ಮದ್ ಆಲಿ(40) ಮೃತಪಟ್ಟವರು. ಘಟನೆ ವಿವರ: ಇಬ್ರಾಹಿಂ ಅವರ ಮೂರನೇ ಮಗಳ ಮದುವೆ ನ.1 ರಂದು ನಿಗದಿಯಾಗಿತ್ತು. ಅದರ ಆಮಂತ್ರಣ ಪತ್ರಿಕೆಯನ್ನು ಹಂಚಲೆಂದು ತಲಪಾಡಿ ಕಡೆಗೆ ದೂರದ ಸಂಬಂಧಿ ಹಾಗೂ ಆಪ್ತ ಸ್ನೇಹಿತ ಮಹಮ್ಮದ್ ಆಲಿ ಅವರ ಜತೆಗೆ ಬೈಕಿನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಉಚ್ಚಿಲ ಬೋವಿ ಶಾಲೆ ಯ ಒಳರಸ್ತೆಯಿಂದ ರಾ.ಹೆ.66ರನ್ನು ಪ್ರವೇಶಿಸಲು ರಸ್ತೆಬದಿಯಲ್ಲಿ ಬೈಕನ್ನು ನಿಲ್ಲಿಸಿದ್ದ ಸಂದರ್ಭ ಕಾಸರಗೋಡು ಕಡೆಯಿಂದ ಮಂಗಳೂರಿಗೆ ಅತಿವೇಗವಾಗಿ ಬರುತ್ತಿದ್ದ ದೆಹಲಿ ನೋಂದಾಯಿತ ಇನೋವಾ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಬೈಕನ್ನು 20 ಮೀ.ವರೆಗೆ ಎಳೆದೊಯ್ದಿತ್ತು. ಗಂಭೀರ ಗಾಯಗೊಂಡ ಈರ್ವರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕಿ ಪ್ರೊ.ಉಪಿಂದರ್ ಸಿಂಗ್ ಅವರು ಸೋಮವಾರ ಭೇಟಿ ನೀಡಿ ಮೆಚ್ಚುಗೆ ನೀಡಿದರು. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ, ಪ್ರೊ.ಬಿ. ಸುರೇಂದ್ರರಾವ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳೂರು ವಿವಿ ತಂಡವು ಅಣ್ಣಾಮಲೈ ವಿಶ್ವವಿದ್ಯಾನಿಲಯವನ್ನು 22-18, ಭಾರತಿದಾಸನ್ ವಿಶ್ವವಿದ್ಯಾನಿಲಯವನ್ನು 28-14 ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದೊಂದಿಗೆ ನಡೆದ ಪಂದ್ಯಾಟದಲ್ಲಿ ಸಮಬಲವನ್ನು ಸಾಧಿಸಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ದಕ್ಷಿಣ ವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ದಿವಾಕರ್(ಕಪ್ತಾನ), ನಾಗರಾಜ್ ನಾಯ್ಕ್(ಉಪನಾಯಕ) ಧನರಾಜ್, ಪ್ರವೀಣ್ ಕುಮಾರ್, ಜಸ್ವಂತ್, ಹರ್ಷಿತ್, ಸಂತೋಷ್, ಮೂರ್ತಿ, ಜಾಯ್ಸನ್, ಮಲ್ಲಿಕಾರ್ಜುನ್, ವಿಕ್ರಾಂತ್, ವಿಜಯ್ ಸಚಿನ್ ಭಾಗವಹಿಸಿದ್ದರು. ತರಬೇತುದಾರರಾಗಿ ಸತೀಶ್ ನಾಯ್ಕ್ ಮತ್ತು ಕಿರಣ್ ಕುಮಾರ್, ವ್ಯವಸ್ಥಾಪಕರಾಗಿ ಎಲಿಯಾಸ್ ಪಿಂಟೋ ಭಾಗವಹಿಸಿದ್ದರು. ದಕ್ಷಿಣವಲಯ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 25 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಹಿಂದೂ ಧರ್ಮವೆಂದರೆ ಅದೊಂದು ಜೀವನ ಶೈಲಿ, ಪ್ರತಿಯೊಂದರಲ್ಲಿಯೂ ದೇವರನ್ನು ಕಾಣುವುದು ಇದರ ವೈಶಿಷ್ಠ್ಯ. ದೇವರು ಕೇವಲ ಸ್ವರೂಪದಲ್ಲಿ ಇಲ್ಲ, ದೇವರು ನಂಬಿಕೆಯಲ್ಲಿ ಇದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ. ಅವರು ಉಳ್ಳಾಲದ 68ನೇ ಸಾರ್ವಜನಿಕ ನವರಾತ್ರಿ ಶ್ರೀ ಶಾರದೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುತ್ತು ರತ್ನಗಳನ್ನು ಬೀದಿಬೀದಿಗಳಲ್ಲಿ ಇಟ್ಟು ಅಳೆದು ಮಾರಿದ ದೇಶ ನಮ್ಮದು. ಅಂತಹ ಸಂಪತ್ತನ್ನು ಬ್ರಿಟೀಷರು, ಫ್ರೆಂಚರು ಮುಂತಾದ ವಿದೇಶೀಯರು ಲೂಟಿಮಾಡಿದರು. ಆದರೂ ನಾವು ಕುಗ್ಗಲಿಲ್ಲ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅನೇಕರು ತಮ್ಮ ಶೌರ್ಯವನ್ನು ಮೆರೆದಿದ್ದಾರೆ. ನಮ್ಮ ಸಂಸ್ಕøತಿ, ಆಚರಣೆ, ಮೌಲ್ಯಗಳ ಮೇಲೆ ಶತಮಾನಗಳಿಂದ ದಾಳಿಗಳು ನಡೆಯುತ್ತಲೇ ಇವೆ. ಇದನ್ನು ಎದುರಿಸಬೇಕಾದರೆ ಹಿರಿಯರು ಹಾಕಿಕೊಟ್ಟ ಸಮರ್ಪಣಾ ಹಾದಿಯಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಜಾಗೃತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ರಘುಚಂದ್ರ ಬಲ್ಲಾಳ್ ವಹಿಸಿದ್ದರು. ವೇದಿಕೆಯಲ್ಲಿ ಉತ್ಸವ ಸಮಿತಿಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ ಇದರ ಜಂಟಿ ಆಶ್ರಯದಲ್ಲಿ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ದಸರಾ ಪ್ರಯುಕ್ತ ಶಾರದನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟದಲ್ಲಿ ರಾಕೇಶ್ ಪುತ್ರನ್ ಶಾರದ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ವಿಜಯ್ ಶಾರದಾ ಶ್ರೀ ಪ್ರಶಸ್ತಿ ಮತ್ತು ಮಂಜುನಾಥ್, ಶಾರದಾ ಕಿಶೋರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಕುಸ್ತಿ ಪಂದ್ಯಾಟದ 74 ಕೆ.ಜಿ.ವಿಭಾಗದಲ್ಲಿ ಅಂಜನೇಯ ಸಸಿಹಿತ್ಲುವಿನ ರಾಕೇಶ್ ಪುತ್ರನ್ ಅವರು ವೀರಭಾರತಿ ಬೆಂಗ್ರೆಯ ಸುಮಿತ್ ಅವರನ್ನು ಸೋಲಿಸಿ ಶಾರದಾ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡರೆ 60 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ವಿಜಯ್ ಅವರು ಕೆ.ಎಂ. ಚಿತ್ರಾಪುರದ ಹನುಮಂತ ಅವರನ್ನು ಸೋಲಿಸಿ ಶಾರದಾ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. 36 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ನಾಗರಾಜ್ ಅವರನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಶಾರದಾನಗರದ ಸಪ್ತಸ್ವರ ಕಲಾತಂಡ ಕೊಣಾಜೆ ಮತ್ತು ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆಯವ ಸಾರ್ವಜನಿಕ ಶಾರದೋತ್ಸವ ಅ. 19ಮತ್ತು 20ರಂದು ಕೊಣಾಜೆ ಶಾರದಾ ನಗರದಲ್ಲಿ ನಡೆಯಲಿದೆ. ಸುತ್ಕಲ್‍ನ ಜಗದೀಶ್ ಐತಾಳ್ ಅವರ ನೇತೃತ್ವದಲ್ಲಿ ರಾಘವೇಂದ್ರ ಹೊಳ್ಳ ಕುತ್ತಾರು ಅವರ ಪೌರೋಹಿತ್ಯದಲ್ಲಿ ಅ.19ರಂದು ಸಂಜೆ 4.58ಕ್ಕೆ ಶಾರದಾ ಪ್ರತಿಷ್ಠೆ ನಡೆಯಲಿದ್ದು, ಬೆಳಗ್ಗೆ 8ಗಂಟೆಗೆ ಧ್ವಜಾರೋಹಣವನ್ನುನಿವೃತ್ತ ಶಿಕ್ಷಕ ಶಂಕರ ಭಟ್ ಕೊಣಾಜೆ ನೆರವೇರಿಸಲಿದ್ದು, ಸಂಜೆ 7.00ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಮ ಗೌರವ, ಹಿರಿಯರಿಗೆ ಗೌರವ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 9.00ರಿಂದ ಗೆಜ್ಜೆದ ಪೂಜೆ ಯಕ್ಷಗಾನ ಬಯಲಾಟ ನಡೆಯಲಿದ್ದು, ಅ. 20ರಂದು ಮಂಗಳವಾರ ಬೆಳಗ್ಗೆ ಭಜನಾ ಸಂಕೀರ್ತನೆ ಉದ್ಘಾಟನೆ, ಅಕ್ಷರಾಭ್ಯಾಸ, ಸಂಜೆ 4.30ಕ್ಕೆ ಶೋಭಾಯಾತ್ರೆ ನಡೆಯಲಿದೆ ಎಂದು ಕಲಾತಂಡದ ಪ್ರಕಟನೆ ತಿಳಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ‘ಪ್ರತಿಭೋತ್ಸವ 2015’ ಇತ್ತೀಚೆಗೆ ಬದ್ಯಾರ್ ಫಾರೂಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಎಸ್‍ಜೆಎಂ ಅಧ್ಯಕ್ಷÀ ಇಸ್ಮಾಯಿಲ್ ಸಅದಿ ಉರುಮಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷರು ಮತ್ತು ಪ್ರತಿಭೋತ್ಸವದ ಅಧ್ಯಕ್ಷ ಸಿದ್ದೀಖ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಧ್ವಜಾರೋಹಣವನ್ನು ಫಾರೂಖ್ ಜುಮಾ ಮಸ್ಜಿದ್ ಅಧ್ಯಕ್ಷÀ ಅಬ್ದುಲ್ ಹಮೀದ್ ದೇರಳಕಟ್ಟೆ ನೆರವೇರಿಸಿದರು. ಎಸ್ಸೆಸ್ಸೆಫ್ ದೇರಳಕಟ್ಟೆÉ ಸೆಕ್ಟರ್ ವ್ಯಾಪ್ತಿಯ 17ಶಾಖೆಗಳ 285ಮಕ್ಕಳು ಭಾಗವಹಿಸಿ ಭಾಷಣ, ಹಾಡು, ಚಿತ್ರ ರಚನೆ ಸೇರಿದಂತೆ 4 ವಿಭಾಗಗಳ 61 ಸ್ಪರ್ಧೆ ಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಬೆಳ್ಮ ರೆಂಜಾಡಿ ಶಾಖೆಯು ಪ್ರಥಮ ಸ್ಥಾನವನ್ನು ಪಡಕೊಂಡಿತ್ತು. ದ್ವಿತೀಯ ಸ್ಥಾನವನ್ನು ಬೆಳರಿಂಗೆ ಶಾಖೆ ಪಡಕೊಂಡರೆ ತೃತೀಯ ಸ್ಥಾನವನ್ನು ಕುತುಬಿನಗರ ಪಡೆದುಕೊಂಡಿತು. ಇಬ್ರಾಹಿಂ ಮೋನು, ಹನೀಫ್ ಸಖಾಫಿ,ಹಿದಾಯತುಲ್ಲಾಹ್ ಝುಹ್ರಿ, ಬದ್ರುಲ್ ಮುನೀರ್ , ಹಸನ್ ಸಅದಿ, ಸ್ವಾಲಿಹ್ ರೆಂಜಾಡಿ ಸೇರಿದಂತೆ ಸೆಕ್ಟರ್ ಪದಾ„ಕಾರಿಗಳು, ಇಹ್ಸಾನ್ ಕರ್ನಾಟಕ ಕನ್ವೀನರ್ ಇಸ್ಹಾಖ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅನಸ್ತೀಶಿಯಾ ವಿಭಾಗದ ವತಿಯಿಂದ ಜಾಗತಿಕ ಅನಸ್ತೀಶಿಯಾ ದಿನಾಚರಣೆ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾ„ಪತಿ ಡಾ| ಶಾಂತಾರಾಮ ಶೆಟ್ಟಿ ಉದ್ಘಾಟಿಸಿ ಶಸ್ತ್ರಚಿಕಿತ್ಸೆಯ ಆಧುನಿಕ ಬೆಳವಣಿಗೆಯಲ್ಲಿ ಅನಸ್ತೀಶಿಯಾದ ಪಾತ್ರದ ಕುರಿತು ಮಾಹಿತಿ ನೀಡಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ| ಎಂ.ಎಸ್. ಮೂಡಿತ್ತಾಯ, `ಕ್ಷೇಮ’ದ ಸಹ ಪ್ರಾಚಾರ್ಯ ಡಾ| ಪಿ.ಎಸ್. ಪ್ರಕಾಶ್, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅ„ೀಕ್ಷಕಿ ಡಾ| ಕರುಣಾ ರಮೇಶ್, ಕ್ಷೇಮದ ರಿಜಿಸ್ಟ್ರಾರ್ ಡಾ| ಜಯಪ್ರಕಾಶ್ ಶೆಟ್ಟಿ ಭಾಗವಹಿಸಿದ್ದರು. ಅನಸ್ತೀಶಿಯಾ ವಿಭಾಗದ ಪ್ರಾಧ್ಯಾಪಕ ಡಾ| ರವೀಂದ್ರ ಯು.ಎಸ್. ಅವರು `ನೋವು ಶಮನ’ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ನಡೆದ ರಸಪ್ರಶ್ನೆಯಲ್ಲಿ ವಿಜೇತರಾದ ಗೃಹವೈದ್ಯರಿಗೆ ಬಹುಮಾನ ವಿತರಿಸಲಾಯಿತು. ಡಾ| ಮುರಳಿ ಶಂಕರ್ ಭಟ್ ಹಾಗೂ ಡಾ| ಗೋವಿಂದರಾಜ್ ಭಟ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಕ್ಷೇಮ ಅನಸ್ತೀಶಿಯಾ ವಿಭಾಗದ ಮುಖ್ಯಸ್ಥ ಡಾ| ಆನಂದ…

Read More