ಉಳ್ಳಾಲ : ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ತೊಕ್ಕೊಟ್ಟು ಪ್ರದೇಶದಲ್ಲಿನ ಬಟ್ಟೆ ಮಳಿಗೆಗಳಲ್ಲಿ ಮುಕುಟ ಕಿರೀಟ ಅನಿಸಿಕೊಂಡಿರುವ ಸಾಗರ್ ಸಿಲ್ಕ್ಸ್ ಆಂಡ್ ಸಾರೀಸ್ ಸಂಪೂರ್ಣ ಮದುವೆ ವಸ್ತ್ರಗಳ ಮಳಿಗೆ ನೂತನ ಕಟ್ಟಡಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು, ನೂತನ ಮಳಿಗೆಯ ಉದ್ಘಾಟನೆ ಫೆ.17 ಕ್ಕೆ ತೊಕ್ಕೊಟ್ಟುವಿನಲ್ಲಿ ನಡೆಯಲಿದೆ .
1985 ರಿಂದ ಮದುವೆ ವಸ್ತ್ರಗಳು ಸೇರಿದಂತೆ ಆಕರ್ಷಕ, ನಾವೀನ್ಯತೆಯುಳ್ಳ ಬಟ್ಟೆಗಳನ್ನು ಗ್ರಾಹಕರಿಗೆ ಪೂರೈಸುತ್ತಾ ಬಂದಿರುವ ಸಾಗರ್ ಸಿಲ್ಕ್ಸ್ ಆಂಡ್ ಸಾರೀಸ್ 4Oನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ನೂತನ ಮಳಿಗೆಯನ್ನು ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರಗೊಳ್ಳುತ್ತಿದೆ. ಹೊಸ ಕಟ್ಟಡ ದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಎಲ್ಲ ರೀತಿಯ ಸವಲತ್ತುಗಳನ್ನು ಪೂರೈಸಲಾಗುತ್ತಿದ್ದು,. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಘಾಟನೆಯ ದಿನದಿಂದ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ.
10,000 ಮೇಲ್ಪಟ್ಟು ಸಿಂಗಲ್ ಬಿಲ್ ಮಾಡಿದವರಿಗೆ ಆಕರ್ಷಕ ಬಹುಮಾನ
ಉದ್ಘಾಟನೆ ಸುಸಂದರ್ಭದಲ್ಲಿ ಗ್ರಾಹಕರಿಗೆ ಸಂಸ್ಥೆ ಆಕರ್ಷಕ ಬಹುಮಾನವನ್ನು ಘೋಷಿಸಿದೆ. 10000 ಒಂದೇ ಬಿಲ್ ಮಾಡಿದಲ್ಲಿ ಆಕರ್ಷಕ ಬಹುಮಾನವನ್ನು ನೀಡಲಿದೆ.


