ಉಳ್ಳಾಲ: ಇಲ್ಲಿನ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಉಳ್ಳಾಲ ವಲಯ ಜಂಟಿಯಾಗಿ ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿರುವ ಅಬ್ಬಕ್ಕ ಪ್ರತಿಮೆ ಬಳಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿಯವರು ಬೆಳಿಗ್ಗೆ 8 ಗಂಟೆಗೆ ಉಳ್ಳಾಲ ಅಬ್ಬಕ್ಕ ಸರ್ಕಲ್‌ನಲ್ಲಿ ನೇರವೇರಿಸಲಿರುವರು ಹಾಗೂ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಉಳ್ಳಾಲ ವಲಯದ ಅಧ್ಯಕ್ಷರಾದ ಪ್ರವೀಣ್ ಬೀರಿಯವರು ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆಗೈಯಲಿರುವರು.
Author: UllalaVani
ಕೊಣಾಜೆ : ಇಂದಿನ ಆಧುನಿಕ ಕಾಲದ ಒತ್ತಡ, ಜಂಜಾಟದ ಬದುಕಿಗೆ ದೇವಾಲಯ, ಮಂದಿರಗಳು ನಮಗೆ ಏಕಾಗ್ರತೆಯೊಂದಿಗೆ ನೆಮ್ಮದಿ ಕೊಡುತ್ತದೆ. ಜ್ಞಾನಕ್ಕಿಂತ, ವಿದ್ಯೆಗಿಂತ ಮಿಗಿಲಾದುದು ಯಾವುದೂ ಇಲ್ಲ. ವಿದ್ಯೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಬೆಳೆಸಿಕೊಳ್ಳಬೇಕು. ಸತ್ಯ,ನ್ಯಾಯ, ನೀತಿಯೊಂದಿಗೆ ಧರ್ಮಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ ಎಂದು ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು ಅವರು ಹೇಳಿದರು. ಅವರು ಪಜೀರು ಸುದರ್ಶನ ನಗರದ ಶ್ರೀ ಕೃಷ್ಣ ಭಜನಾ ಮಂದಿರ(ರಿ) ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 60 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿಯಾಗಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ದೈವೀ ಶಕ್ತಿಯೊಂದಿಗೆ ಮಾನವೀ ಶಕ್ತಿಯು ಇದ್ದಾಗ ಕ್ಷೇತ್ರವು ಬೆಳಗುತ್ತದೆ. ಬಹಳ ವರ್ಷದ ಇತಿಹಾಸ ಹೊಂದಿರುವ ಈ ಮಂದಿರದ ಮೂಲಕ ಸಾಮಾಜಿಕ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಾ ಬಂದಿರುವುದು ಮಹತ್ವದ ವಿಷಯವಾಗಿದೆ ಎಂದರು. ರಾಜ್ಯ…
ಮಂಗಳೂರು : ಇಂದಿನ ಕಾಲದಲ್ಲಿ ರಕ್ಷಾ ಬಂಧನದ ಅರ್ಥ ಇನ್ನೂ ವಿಸ್ತಾರವಾಗಿದೆ. ಕೆಲವರು ತಮ್ಮ ಆಪ್ತ ಸ್ನೇಹಿತರಿಗೆ, ಗುರುಗಳಿಗೆ, ಅಥವಾ ದೇಶವನ್ನು ಕಾಪಾಡುವ ಸೈನಿಕರಿಗೆ ರಾಖಿ ಕಟ್ಟುತ್ತಾರೆ. ಹೀಗೆ, ಈ ಹಬ್ಬವು ಕೇವಲ ಕುಟುಂಬದಷ್ಟೇ ಅಲ್ಲ, ಸಮಾಜದ ಏಕತೆಯ ಸಂಕೇತವೂ ಆಗಿದೆ ಎಂದು ಮಂಗಳೂರು ಮಹಾನಗರ ಸಾಮರಸ್ಯ ಟೋಳಿ ಸದಸ್ಯರಾದ ಪ್ರಸಾದ್ ಕಣ್ಣೂರ್ ಹೇಳಿದರು. ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ 567 ನೇ ಸೇವಾ ಯೋಜನೆಯ ಅಂಗವಾಗಿ ಜೆಪ್ಪು ಮಾರ್ಕೆಟ್ ಬಳಿ ಇರುವ ಭಗಿನಿ ಸಮಾಜದಲ್ಲಿ ಭಗಿನಿ ಸಮಾಜದ ಸಹೋದರಿಯರೊಂದಿಗೆ “ರಕ್ಷಾಬಂಧನ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಭಗಿನಿ ಸಮಾಜದ ಅಧ್ಯಕ್ಷರಾದ ರತ್ನಾ.ಟಿ.ಆಳ್ವ ಮಾತನಾಡಿ, ರಕ್ಷಾ ಬಂಧನದ ಆಚರಣೆಯಿಂದ ಸಹೋದರತ್ವ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತವನ್ನು ಪ್ರತಿಬಿಂಬಿಸಿದಂತೆ ಆಗುವುದು ಎಂದರು.ಸಂಸ್ಥಾಪಕರಾದ ದೀಪಕ್ .ಜಿ. ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ಭಗಿನಿ ಸಮಾಜದ ಉಪಾಧ್ಯಕ್ಷ ಚಿತ್ರಾ ಪ್ರಭು, ಸಾಮಾಜಿಕ ಸೇವಾಕರ್ತೆ ಶಬರಿ ನಿತಿನ್ ಶೆಟ್ಟಿ, ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್…
ಸುರತ್ಕಲ್ : ನಮ್ಮ ಗ್ರಾಹಕರೇ ನಮ್ಮ ಬ್ರಾಂಡ್ ರಾಯಭಾರಿಗಳು. ಕಳೆದ ಎಂಟು ವರ್ಷಗಳಲ್ಲಿ ₹500 ಕೋಟಿ ವ್ಯವಹಾರದಿಂದ ₹1,300 ಕೋಟಿಗೆ ಬ್ಯಾಂಕ್ ತಲುಪಿದೆ. ಈ ಬೆಳವಣಿಗೆಗೆ ಬಲವಾದ ನಾಯಕತ್ವ, ಆಡಳಿತ ಮಂಡಳಿಯ ಬದ್ಧತೆ ಮತ್ತು ಅಚಲವಾದ ಗ್ರಾಹಕರ ನಂಬಿಕೆ ಕಾರಣವಾಗಿದೆ. ಎಂಸಿಸಿ ಬ್ಯಾಂಕ್ ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 25 ಶಾಖೆಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಎಂ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದ್ದಾರೆ. ಅವರು ಎಂ.ಸಿ.ಸಿ ಬ್ಯಾಂಕ್ ನ ಸುರತ್ಕಲ್ ಶಾಖೆಯಲ್ಲಿ 10 ನೇ ಎಟಿಎಂ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದು ಕೇವಲ ಸಿಬ್ಬಂದಿ ಅಥವಾ ನಿರ್ದೇಶಕರಿಗೆ ಸೇರದೇ ಗ್ರಾಹಕರು ಮತ್ತು ಎಲ್ಲಾ ಸಮುದಾಯಗಳಿಗೆ ಸೇರಿದೆ. ನಮ್ಮ ಗ್ರಾಹಕರು ನಮ್ಮ ಬ್ರಾಂಡ್ ರಾಯಭಾರಿಗಳು. ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್’ಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಯುಪಿಐ ಸೇವೆಗಳನ್ನು ಪರಿಚಯಿಸುವ ಯೋಜನೆಗಳಿವೆ. ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಮತ್ತು ಸಮುದಾಯದ ಸದಸ್ಯರಿಗೆ ಅವರ ನಿರಂತರ…
ಮಂಗಳೂರು : ಈಜುಕೊಳದಲ್ಲಿ ಉಸಿರು ಬಿಗಿ ಹಿಡಿದು ಸೋಮರ್‌ಸಾಲ್ಟ್ ಮತ್ತು ಆಸನಗಳನ್ನು ಪ್ರದರ್ಶಿಸಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಕೆ. ಚಂದ್ರಶೇಖರ ರೈ ಸೂರಿಕುಮೇರು (52) ಎಂಬವರು ರವಿವಾರ ನಗರದ ಮನಪಾದ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ಬರಿಬರದ ಎಂಬಲ್ಲಿನ ಚಂದ್ರಶೇಖರ ನಗರದ ಕುದ್ರೋಳಿಯಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ. ಉಡುಪಿಯ ಈಜುಕೊಳದಲ್ಲಿ ಗುತ್ತಿಗೆ ಆಧಾರದಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಮೂರು ವರ್ಷದ ಹಿಂದೆ ನಗರದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿದ್ದರು. ಜೀವರಕ್ಷಕರಾಗಿದ್ದ ಅವರು ಈಜು ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ರವಿವಾರ ಬೆಳಗ್ಗೆ ಕೆಲಕಾಲ ಈಜುಕೊಳದಲ್ಲಿ ಅಭ್ಯಾಸ ಮಾಡುವುದಾಗಿ ಹೇಳಿ ಮೊಬೈಲ್ ಫೋನನ್ನು ಕಾವಲುಗಾರನಿಗೆ ನೀಡಿದ್ದ ಚಂದ್ರಶೇಖರ್ ಡೈವ್ ಮಾಡಿದ್ದರು. ಬಳಿಕ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು…
ವಿಟ್ಲ: ಕಾರೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಆ.8ರಂದು ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ.ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ನ ಮಾಲಿಕ ಜಗನ್ನಾಥ ಶೆಟ್ಟಿಗಾರ್ ಗಂಭೀರ ಗಾಯಗೊಂಡವರಾಗಿದ್ದಾರೆ.ಜಗನ್ನಾಥ ಶೆಟ್ಟಿಗಾರ್ ರವರು ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರ ದ್ವಿಚಕ್ರ ವಾಹನದ ಟಯರ್ ಪಂಚರ್ ಆಗಿತ್ತು. ಆದ್ದರಿಂದ ಅವರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲೆ ಪಕ್ಕದಲ್ಲಿ ನಿಂತಿದ್ದ ವೇಳೆ ಪುತ್ತೂರು ಭಾಗದಿಂದ ಸಾಲೆತ್ತೂರು ಕಡೆ ತೆರಳುತ್ತಿದ್ದ ಪುತ್ತೂರು ಮೂಲದವರಿದ್ದ ಕಾರೊಂದು ಅವರಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಜಗನ್ನಾಥ ಶೆಟ್ಟಿಗಾರ್ ರವರನ್ನು ಕೂಡಲೇ ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ
ಸೋಮೇಶ್ವರ : ಇಲ್ಲಿನ ರೆಸಾರ್ಟ್ ನಿರ್ವಹಣೆ ವ್ಯಕ್ತಿ ರೆಸಾರ್ಟ್ ನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮೇಶ್ವರದ ಮುಡಾ ಬಡವಾಣೆಯಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದೆ.ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ವಸಂತ್ ಸುವರ್ಣ(54)ಆತ್ಮ ಹತ್ಯೆಗೈದ ದುರ್ದೈವಿ. ಮೃತ ವಸಂತ್ ಅವರು ಪತ್ನಿಯೊಂದಿಗೆ ಸೋಮೇಶ್ವರದ ಮೂಡ ಬಡಾವಣೆಯ ಖಾಸಗಿ ರೆಸಾರ್ಟ್ ವೊಂದರ ನಿರ್ವಹಣೆ ನಡೆಸುತ್ತಿದ್ದರು.ವಸಂತ್ ದಂಪತಿಗೆ ಮಕ್ಕಳಿರಲಿಲ್ಲ.ಇಂದು ಮಧ್ಯಾಹ್ನ ವಸಂತ್ ಅವರು ತಾನು ನಿರ್ವಹಣೆ ನಡೆಸುತ್ತಿದ್ದ ಮೂಡದ ರೆಸಾರ್ಟ್ ನೊಳಗಿನ ಸಣ್ಣ ಮನೆಯೊಳಗಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಡಿಪು: ಕೈರಂಗಳ ಪುಣ್ಯಕೋಟಿನಗರದ ಅಮೃತಧಾರ ಗೋಶಾಲೆಯ ಮೇಲ್ಛಾವಣಿ ಭಾರೀ ಗಾಳಿ ಮಳೆಯ ಹೊಡೆತಕ್ಕೆ ಮಗುಚಿಬಿದ್ದಿದ್ದು, ಅದೃಷ್ಠವಶಾತ್ ಯಾವುದೇ ಗೋವುಗಳಿಗೆ ಪ್ರಾಣಾಪಾಯ ಸಂಭವಿಸಿಲ್ಲ.ಇದೀಗ ತಾತ್ಕಾಲಿಕ ಕಟ್ಟಡದಲ್ಲಿ ಗೋಶಾಲೆ ಕರ‍್ಯಾಚರಿಸುತ್ತಿದ್ದು, ದುರಸ್ತಿ ಕಾರ್ಯಕ್ಕೆ ರೂ.4 ಲಕ್ಷಕ್ಕೂ ಅಧಿಕ ಮೊತ್ತ ತಗಲುವುದರಿಂದ ಗೋಪ್ರೇಮಿಗಳು ಸಹಕರಿಸುವಂತೆ ಅಮೃತಧಾರಾ ಗೋಶಾಲಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿನಂತಿಸಿದ್ದಾರೆ. ಜು. 26 ರಂದು ಭಾರೀ ಗಾಳಿ ಮಳೆಯ ಹೊಡೆತಕ್ಕೆ ಮರ ಗೋಶಾಲೆ ಮೇಲೆ ಬಿದ್ದು, ಗೋಶಾಲೆ ಸಂಪೂರ್ಣ ಕುಸಿದುಬಿದ್ದಿತ್ತು. ಇದೀಗ ತಾತ್ಕಾಲಿಕವಾಗಿ ಕಟ್ಟಿದ ಶೆಡ್ ನಲ್ಲಿ ಗೋವುಗಳನ್ನು ಸಲಹಲಾಗುತ್ತಿದ್ದು, ಶಾಶ್ವತ ಕಟ್ಟಡಕ್ಕೆ ಗೋಪ್ರೇಮಿಗಳು ಮುಂದೆ ಬರಬೇಕಿದೆ.
ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ, ಪ್ರಭುತ್ವದ ಧಾಳಿ, ದಬ್ಬಾಳಿಕೆ ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶವು ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಜರಗಿತು. ಈ ವೇಳೆ ಸುಮಾರು 40 ವರ್ಷಕ್ಕಿಂತಲೂ ಅಧಿಕವಾಗಿ ನಗರದ ಸೆಂಟ್ರಲ್ ಮಾರುಕಟ್ಟೆ ಸಮೀಪ ಬೀದಿಬದಿ ವ್ಯಾಪಾರ ನಡೆಸಿ ಯಶ್ವೀ ಜೀವ ನಿರ್ವಹಿಸಿದ ಬೇಕಲ ಮೂಲದ ಚಂದ್ರಶೇಖರ್ ಭಟ್ ಸೇರಿದಂತೆ ಹಲವು ವ್ಯಾಪಾರಸ್ಥರನ್ನು ಗೌರವಿಸಲಾಯಿತು.ಸುಮಾರು 250ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷರೂ, ವಕೀಲರೂ ಆದ ಬಿ.ಎಂ ಭಟ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ ಐದು ಕೋಟಿಗೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಬೀದಿ ವ್ಯಾಪಾರಿಗಳು ಅತ್ಯಂತ ಶ್ರಮ ಜೀವಿಗಳು ಅವರ ಬೇಡಿಕೆಗಳು ನ್ಯಾಯತವಾಗಿದ್ದು ಹಕ್ಕುಪ್ರಾಪ್ತಿಗೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ . ಬೀದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ ಸಂಘಟನೆ…
ಉಳ್ಳಾಲ: ಫಿಶ್ ಮಿಲ್ ಗೆ ಕಟ್ಟಿಗೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉಳ್ಳಾಲಬೈಲ್ ನಲ್ಲಿ ಉರುಳಿದೆ. ಲಾರಿಯಲ್ಲಿ ಚಾಲಕನೋರ್ವನೇ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೃಹತ್ ಗಾತ್ರದಲ್ಲಿ ಕಟ್ಟಿಗೆಗಳನ್ನು ಲೋಡ್ ಮಾಡಿಕೊಂಡು ಬರುವ ಲಾರಿಗಳ ತಡರಾತ್ರಿಯೇ ಕಾರ್ಯಾಚರಿಸುತ್ತಿವೆ, ಅರಣ್ಯ ಇಲಾಖೆ ಕಣ್ತಪ್ಪಿಸಿ ಸಾಗಾಟ ನಡೆಯುತ್ತಿದೆಯೋ ? ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

