ಸುರತ್ಕಲ್ : ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್ ನ ನವೀಕರಿಸಿದ ಮಸೀದಿ
ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನವೀಕರಿಸಿದ ಮೊಹಿಯುದ್ದೀನ್ ಜುಮಾ ಮಸೀದಿಯನ್ನು ಡಾ.ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಅಹ್ದಲ್ ಮುತ್ತನ್ನೂರು ತಂಙಳ್ ಉದ್ಘಾಟಿಸಿದರು.


ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ವಕ್ಫ್ ಬೋಡ್೯ ಮಾಜಿ ಅಧ್ಯಕ್ಷ ಮೊಹಮ್ಮದ್ ಶಾಫಿ ಸ ಅದಿ , ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಂಆರ್ ರಶೀದ್ ಹಾಜಿ, ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಎನ್.ಎಚ್ ಯಾಕೂಬ್ ಮದನಿ ಅಲ್-ಪುರ್ಕಾನಿ, ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಖಿಲ ಭಾರತ ಬಂದರು ಮತ್ತು ದಕ್ಕೆ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಅಬೂಬಕ್ಕರ್, ಡೆಕ್ಕನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ನ ಮಾಲಕ ಹಾಜಿ ಬಿ.ಎಚ್ ಅಸ್ಗರ್ ಅಲಿ, ಸಮಾಜಿಕ ಕಾರ್ಯಕರ್ತ ಇಬ್ರಾಹಿಂ ಗೊಳಿಕಟ್ಟೆ ಅತಿಥಿಯಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಮೊಹಮ್ಮದ್ ಹಸನ್ ಶಮೀರ್, ಉಪಾಧ್ಯಕ್ಷ ಚೈಬಾವಕ, ಕೋಶಾಧಿಕಾರಿ ಫಾರೂಕ್, ಸದಸ್ಯರಾದ ಮುಕ್ತಾರ್, ರಫೀಕ್, ಯಾಹಿಯ್ಯಾ, ಚೈಯಾಕ, ಇರ್ಫಾನ್ ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಹಸನ್ ಶಮೀರ್ ರವರನ್ನು ಸನ್ಮಾನಿಸಲಾಯಿತು.
ಮೊಹಿಯುದ್ದೀನ್ ಜುಮಾ ಮಸೀದಿ ಸದಸ್ಯ ಸೈದುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


