Author: UllalaVani

Kannada News From Coastal Karnataka

ನರಿಂಗಾನ: ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ನರಿಂಗಾನ ಗ್ರಾಮಪಂಚಾಯತ್ ಅಧ್ಯಕ್ಷರಾದ ನವಾಝ್ ಎಂ.ಬಿ ತೆಂಗಿನ ಸಿರಿ ಅರಳಿಸಿ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ನಯನ ಕುಮಾರಿ.ಕೆ ಅವರು ವಹಿಸಿಕೊಂಡಿದ್ದರು.ವೇದಿಕೆಯಲ್ಲಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಝಾಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬೂಬಕ್ಕರ್, ಪ್ರಾ ಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಸುಜಾತ ಅವರು ಉಪಸ್ಥಿತರಿದ್ದರು.ಶಾಲಾ ವಿಜ್ಞಾನ ಶಿಕ್ಷಕಿ ವಿನಿತಾ ಮೇಡಂ ಅವರು ಆಷಾಢ ತಿಂಗಳಲ್ಲಿ ಹಿರಿಯರು ಪಟ್ಟ ಕಷ್ಟ, ರೋಗ ರುಜಿನ ದೂರ ಗೊಳಿಸುವ ಆಟಿ ಕಳೆಂಜನ ಬಗ್ಗೆ, ಆಷಾಢ ಅಮಾವಾಸ್ಯೆಯ ದಿನ ಕುಡಿಯುವ ಹಾಳೆಮರದ ತೊಗಟೆಯಿಂದ ತಯಾರಿಸುವ ಕಷಾಯದ ಬಗ್ಗೆ ಮಾಹಿತಿ ನೀಡಿದರು.ಹಿರಿಯ ಶಿಕ್ಷಕಿ ಸೀಮಾ ಮರಿಯಾ ಡಿಸೋಜ ಸ್ವಾಗತಿಸಿದರು, ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷಿ÷್ಮÃ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ಮಕ್ಕಳು ತಮ್ಮ ಹೆತ್ತವರ ಸಹಕಾರದೊಂದಿಗೆ ತಯಾರಿಸಿದ 47 ಖಾದ್ಯಗಳನ್ನು ವೇದಿಕೆಯಲ್ಲಿ ಜೋಡಿಸಿ ಇಟ್ಟು,…

Read More

ಕುತ್ತಾರು : ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜನಾಡಿ ಇದರ 20ನೇ ವರ್ಷಾಚರಣೆ ಅಂಗವಾಗಿ ಸರಣಿ ಕಾರ್ಯಕ್ರಮದ ಪ್ರಯುಕ್ತ 9ನೇ ಕಾರ್ಯಕ್ರಮವು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶೃತಿಲಯ ಕಲಾ ಕೇಂದ್ರದ ಸಹಯೋಗದಿಂದ ಜರಗಿತು.ಶೃತಿಲಯ ಕಲಾ ಕೇಂದ್ರದ ಸಂಚಾಲಕರಾದ ಹರೀಶ್ ಮಾಸ್ಟರ್, ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ, ಯಕ್ಷಗಾನ ಅಧ್ಯಯನ ಟ್ರಸ್ಟ್ ನ ನಿರ್ದೇಶಕರಾದ ಜಗದೀಶ್ ಎಸ್ ಗಟ್ಟಿ ಉಚ್ಚಿಲ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕೃಷ್ಣಪ್ಪ ಕೀನ್ಯಾ, ಸಮರ್ಪಣಾ ಪರಿವಾರ ಟ್ರಸ್ಟ್ ರಿಜಿಸ್ಟರ್ಡ್ ಮಂಗಳೂರು ಇದರ ರಾಮಚಂದ್ರ ಆಚಾರ್ಯ ದೇರ್ಲಕಟ್ಟೆ, ಜೀವನ್ ಕೆಎಸ್ ಮಾಡೂರು, ಮೋಹನ್ ಶಿರ್ಲಾಲ್, ವಸಂತ ಕೋಡಿ, ಶ್ರೀ ವಿಷ್ಣುಮೂರ್ತಿ ಜನಾರ್ಧನ ಭಜನಾ ಮಂಡಳಿಯ ಕಾರ್ಯದರ್ಶಿ ಪುರಂದರ ಅಸೈ, ಟ್ರಸ್ಟಿನ ಅಧ್ಯಕ್ಷ ಹರೀಶ್ ಭಟ್ಯಡ್ಕ, ಅಧ್ಯಯನ ಟ್ರಸ್ಟಿನ ಸಾಂಸ್ಕöÈತಿಕ ಕಾರ್ಯದರ್ಶಿ ಉದಯ ಅಂಚನ್ ಮಂಜನಾಡಿ ಹಾಗೂ ಅಂಗನವಾಡಿ ಶಿಕ್ಷಕಿ ಸುಜಾತ ಕಲ್ಕಟ್ಟ ಉಪಸ್ಥಿತರಿದ್ದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಸ್ಸಿಸಿ…

Read More

ಕಾಪಿಕಾಡು: ತುಳುನಾಡಿನಲ್ಲಿ ಆಟಿ ತಿಂಗಳ ಕಾರ್ಯಕ್ರಮ ವನ್ನು ಸಂಘ ಸಂಸ್ಥೆಗಳು ಎಲ್ಲರನ್ನೂ ಒಟ್ಟು ಸೇರಿಸಿ ಆಚರಿಸುವುದರ ಜತೆಗೆ ಯುವ ಪೀಳಿಗೆಗೆ ತುಳುವ ಸಂಸ್ಕöÈತಿಗಳನ್ನು ತಿಳಿಸುವ ಕಾರ್ಯ ಆಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ವತಿಯಿಂದ ಕಾಪಿಕಾಡು ಖಾಸಗಿ ಸಭಾಂಗಣದಲ್ಲಿ ನಡೆದ ಬಿರುವೆರ್ನ ಆಟಿದ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ವಹಿಸಿದ್ದರು. ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ಗೌರವ ಸಲಹೆಗಾರರಾದ ಎ.ಜೆ.ಶೇಖರ್, ದಿನೇಶ್ ಕೆ.ಅತ್ತಾವರ, ಚಂದ್ರಶೇಖರ ಉಚ್ಚಿಲ, ಮಾಧವ ಪೂಜಾರಿ,ಪ್ರಧಾನ ಕಾರ್ಯದರ್ಶಿ ಆನಂದ ಕೆ.ಅಸೈಗೋಳಿ, ಕೋಶಾಧಿಕಾರಿ ಲಕ್ಷ÷್ಮಣ ಪೂಜಾರಿ, ಮಹಿಳಾ ವೇದಿಕೆ ಗೌರವಧ್ಯಕ್ಷರಾದ ಯೋಗಿನಿ ಕೆ.ಟಿ.ಸುವರ್ಣ, ಅಧ್ಯಕ್ಷರಾದ ಗಂಗಾ ಆನಂದ, ವೇದಿಕೆಯ ಪ್ರಮುಖರಾದ ಹರೀಶ್ ಅಂಬ್ಲಮೊಗರು, ರಾಜೇಶ್ ಕೆರೆಬೈಲು, ಭಗವಾನ್ ದಾಸ್, ಜಗದೀಶ್ ಕೆರೆಬೈಲು, ಗೋಪಿನಾಥ್ ಬಗಂಬಿಲ, ರಾಜೀವ ಮಾಸ್ಟರ್, ರಾಕೇಶ್ ಕುಮಾರ್, ಉದಯ ಆರ್.ಕೆ, ಮೋಹನ್ ಸಾಲ್ಯಾನ್, ರಾಜೇಶ್ ಪಿಲಾರು, ಪ್ರವೀಣ್ ನೆರಿಯ,…

Read More

ಕೊಣಾಜೆ: ಇಲ್ಲಿನ ಗ್ರಾಮಚಾವಡಿ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ 2025-2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜೇತ್ ಪಜೀರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸುಭಾಷ್ ಬೋಳ್ಯಾ‌ರ್, ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಪಾವೂರು, ಜತೆ ಕಾರ್ಯದರ್ಶಿಯಾಗಿ ಸುಜಾತ ಹರೇಕಳ, ಕೋಶಾಧಿಕಾರಿಯಾಗಿ ದಿನೇಶ್ ಬಂಗೇರ ಕೊಣಾಜೆ, ಪೂಜಾ ಸಂಚಾಲಕರಾಗಿ ಜನಾರ್ಧನ ಕೋಟ್ಯಾನ್ ಕೊಣಾಜೆ, ಭಜನಾ ಸಂಚಾಲಕರಾಗಿ ಸುರೇಶ್ ಪೂಜಾರಿ ಹರೇಕಳ, ಪ್ರವಾಸ ಸಂಚಾಲಕರಾಗಿ ರವೀಂದ್ರ ಬಂಗೇರ ಕೊಣಾಜೆ ಮತ್ತು ದಾಮೋದರ ಕುಂದರ್ ಕೊಣಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂರ್ಣಿಮಾ ಪಜೀರು, ಆ್ಯಂಬುಲೆನ್ಸ್ ಸಂಚಾಲಕರಾಗಿ ಹರೀಶ್ ಕೊಣಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಖ ಹರೀಶ್ ಕೊಣಾಜೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಬಬಿತಾ ಪಜೀರು, ಉಪಾಧ್ಯಕ್ಷರಾಗಿ ಲಾವಣ್ಯ ಬೋಳ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಪಾವೂರು, ಜತೆಕಾರ್ಯದರ್ಶಿಯಾಗಿ ಉಮಾವತಿ ಹರೇಕಳ, ಕೋಶಾಧಿಕಾರಿಯಾಗಿ ಸುರೇಖ ಹರೀಶ್ ಕೊಣಾಜೆ ಇವರುಗಳು ಆಯ್ಕೆಯಾಗಿರುತ್ತಾರೆ.

Read More

ಇನೋಳಿ: ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ತೆರಳಿದ ಇನೋಳಿ ಪಾವೂರು ಕೆಳಗಿನಕೆರೆ ನಿವಾಸಿ ಐ.ಮೊಹಮ್ಮದ್ ನಿಯಾಜ್ (೩೩) ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಿಯಾಜ್, ಆ.೨ ರಂದು ತಾಯಿ ಹಾಜಿರಾ ಎಂಬವರಲ್ಲಿ ಬೆಂಗಳೂರಿನಲ್ಲಿ ಕೆಲಸವಿರುವುದಾಗಿ ಹೇಳಿ ಬಟ್ಟೆಗಳನ್ನು ಹಿಡಿದುಕೊಂಡು, ಅದೇ ದಿನ ಮದ್ಯಾಹ್ನ ಪತ್ನಿ ಶಹಳಾಳಿಗೆ ಕರೆ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿರುವುದಾಗಿ ಹೇಳಿರುತ್ತಾರೆ. ನಂತರ ಆಕೆ ಫೋನಾಯಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕುರಿತು ಸಂಬAಧಿಕರ ಮನೆಗಳಲ್ಲಿ ಹುಡುಕಾಡಿದರೂ ನಿಯಾಝ್ ಪತ್ತೆಯಾಗದೇ ಇದ್ದಾಗ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More

ಬೈಂದೂರು: ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವರವಾದು. ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ, ಉತ್ತಮ ಸೇವೆ, ಆಡಳಿತ ಮಂಡಳಿ ಕಾರ್ಯವೈಖರಿಯ ಮೂಲಕ ಬ್ಯಾಂಕುಗಳು ಜನರ ವಿಶ್ವಾಸ ಪಡೆದುಕೊಳ್ಳುತ್ತದೆ. ಸಮಾಜಮುಖಿಯಾಗಿರುವ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ವರ್ಗದ ಜನರನ್ನು ಸೌಹಾರ್ದ, ಸಾಮರಸ್ಯೆತೆಯ ಜೀವನ ನಡೆಸಲು ಕಾರಣವಾಗಿದೆ ಎಂದು ಬೈಂದೂರಿನ ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ವಂ.ವಿನ್ಸೆಂಟ್ ಕುವೆಲ್ಹೊ ಹೇಳಿದ್ದಾರೆ.ಬೈಂದೂರು ಮುಖ್ಯರಸ್ತೆಯ ದೀಪಾ ಕಾಂಪ್ಲೆಕ್ಸ್‌ನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಎಂ.ಸಿ.ಸಿ. ಬ್ಯಾಂಕು ಉತ್ತಮ ಸೇವೆಗೆ ಹೆಸರಾಗಿದೆ. ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯ, ಸ್ನೇಹಮಯ ವಾತಾವರಣವನ್ನು ಇಲ್ಲಿದೆ. ಕ್ಲಪ್ತ ಸಮಯದ ಸ್ಪಂದಿಸುವ ರೀತಿ, ಅಗತ್ಯತೆಗಳನ್ನು ಪೂರೈಸುವಿಕೆ, ಪರಿಸರದ ಬೇಡಿಕೆಯನ್ನು ಆಧರಿಸಿ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಈ ಬ್ಯಾಂಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು 125ನೇ ವರ್ಷ ಬ್ಯಾಂಕು ಇನ್ನಷ್ಟು ಶಾಖೆಗಳನ್ನು ತೆರೆದು ಸಾಧನೆ ಮಾಡಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ,…

Read More

ಚಾಮರಾಜನಗರ : ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಆ.1 ರಂದು ವಿಧಿವಶರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ವಾಸಿಸುತ್ತಿದ್ದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರಾಜ್‌ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

Read More

ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ, ಚಿತ್ರದುರ್ಗ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಅಶ್ಲೀಲ ಕಮೆಂಟ್ ಹಾಕಿ ಸವಾಲು ಹಾಕಿದ್ದರು. ಐಪಿ ಅಡ್ರೆಸ್ ಆಧರಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ರಮ್ಯಾ ದೂರು ದಾಖಲಿಸುವ ವೇಳೆ 43 ಅಕೌಂಟ್‌ಗಳ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದರು. ನಂತರ ಪೊಲೀಸರ ಮುಂದೆ ಹೇಳಿಕೆ ನೀಡುವ ವೇಳೆ ಮತ್ತೆ ಐದು ಅಕೌಂಟ್‌ಗಳನ್ನು ಸೇರಿಸಿ 48 ಅಕೌಂಟ್‌ಗಳ ಮೇಲೆ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾದ ತಕ್ಷಣ ಬಹುತೇತ ಅಕೌಂಟ್‌ಗಳು ಡಿಲಿಟ್ ಆಗಿದ್ದವು. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಐಪಿ ಅಡ್ರೆಸ್‌ಗಳು ಅಕೌಂಟ್ ಡಿಟೇಲ್ಸ್ ನೀಡುವಂತೆ ಕೋರಿದ್ದರು. ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‌ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ. ಇದೀಗ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ…

Read More

ಉಳ್ಳಾಲ : ಶಿಕ್ಷಕ ವೃತ್ತಿಯು ತುಂಬಾ ಜವಾಬ್ದಾರಿಯುತವಾದ ವೃತ್ತಿಯಾಗಿದೆ. ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ತನ್ನ ವೃತ್ತಿಯನ್ನು ಗೌರವಿಸುತ್ತಾರೆ. ಈ ವೃತ್ತಿಯಿಂದ ನಿರ್ಗಮಿಸುವಾಗ ಪರಿತಪಿಸುತ್ತಾರೆ. ಬೆಳಗ್ಗೆ ಶಾಲೆಗೆ ಬಂದು ವಿದ್ಯಾರ್ಥಿಗಳೊಂದಿಗೆ ತನ್ನ ಕೌಶಲತೆಯೊಂದಿಗೆ ವೃತ್ತಿಯನ್ನು ಪ್ರಾರಂಭಿಸಿದರೆ ಎಲ್ಲಾ ನೋವು ನಲಿವುಗಳಿಂದ ದೂರವಿದ್ದು ಮನಸ್ಸಿಗೆ ಉಲ್ಲಾಸವನ್ನು ಮತ್ತು ಸಂತಸವನ್ನು ತುಂಬುತ್ತಾರೆ. ಇಂತಹ ಪವಿತ್ರವಾದ ವೃತ್ತಿ ಜೀವನದಿಂದ ನಿರ್ಗಮಿಸುವುದು ಅಥವಾ ನಿವೃತ್ತಿ ಯಾಗುವುದು ನೋವಿನ ಸಂಗತಿಯಾಗಿದೆ ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಹೇಳಿದರು. ಉಳ್ಳಾಲದ ಟಿಪ್ಪುಸುಲ್ತಾನ್ ಪ್ರೌಢಶಾಲೆಯಲ್ಲಿ 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಶಾಹಿನಾ ಬೇಗಂ ಅವರಿಗೆ ಗುರುವಾರ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಶಾಲೆ ಕೈತೋಟದಲ್ಲಿ ಗಿಡ ನೆಟ್ಟರು. ಹಳೆಕೋಟೆಯ ಸೈಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಶಾಲಾ ಸಂಸತ್ತನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ…

Read More

ಮಂಗಳೂರು : ದ.ಕ.ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಜಿ.ಸಂತೋಷ್ ಕುಮಾರ್ ಅವರನ್ನು ಶುಕ್ರವಾರ ಮತ್ತೆ ವರ್ಗಾವಣೆಗೊಳಿಸಲಾಗಿದೆ. ಎಡಿಸಿ ಆಗಿದ್ದ ಸಂತೋಷ್ ಕುಮಾರ್‌ರನ್ನು ದ.ಕ.ಜಿಲ್ಲೆಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಜುಲೈ 29ರಂದು ವರ್ಗಾಯಿಸಲಾಗಿತ್ತು. ಇದೀಗ ಆ ಹುದ್ದೆಯನ್ನು ರದ್ದುಗೊಳಿಸಿರುವ ಸರಕಾರ ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ. ದ.ಕ.ಜಿಲ್ಲೆಯ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ರಾಜು ಕೆ. ಅವರನ್ನು ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿತ್ತು. ಜುಲೈ 31ರಂದು ರಾಜು ಕೆ. ಅವರನ್ನು ದ.ಕ.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿತ್ತು. ಇದೀಗ ಮತ್ತೆ ಅದನ್ನು ರದ್ದುಪಡಿಸಿ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

Read More