ಉಳ್ಳಾಲ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಂದಾಗಿ ಜನ ಹಳ್ಳಿ ಸಂಸ್ಕೃತಿಯ ಸೊಬಗನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸಲಾಗುತ್ತಿದೆ. ಆದರೆ ತುಳು ಸಂಸ್ಕೃತಿಯಡಿ ಹುಟ್ಟಿ ಬೆಳೆದವರು ಹಿರಿಯರ ಆದರ್ಶ ಮೌಲ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಸದುದ್ದೇಶದಿಂದ ಹಾಗೂ ಮುಂದಿನ ಪೀಳಿಗೆಯಲ್ಲಿ ಕೃಷಿ ಸಂಸ್ಕೃತಿಯನ್ನು ಜ್ವಲಂತವಾಗಿಡಲು ವಿದ್ಯಾರತ್ನ ಶಾಲೆಯ ಕಾರ್ಯಕ್ರಮ ಪೂರಕವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.ಅವರು ಹರೇಕಳ ಗ್ರಾಮದ ಮಂಜಲಗುತ್ತು ಮನೆಯ ಮುಂಭಾಗದಲ್ಲಿರುವ ಹಡಿಲು ಬಿದ್ದ ಮಡ್ಡೆಲ್ ಮಾರ್ ಗದ್ದೆ ಸೇರಿ ಒಟ್ಟು 16 ಗದ್ದೆಯಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಸಾಂಕೇತಿಕ ನಾಟಿ ಕಾರ್ಯಕ್ರಮ ಮತ್ತು ಕೆಸರುಗದ್ದೆಯಲ್ಲಿ ಆಟೋಟಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ತುಳುನಾಡು ಕೃಷಿಗೆ ಪೂರಕವಾದ ಫಲವತ್ತಾದ ಮಣ್ಣು ಹೊಂದಿದ್ದು, ಹಿಂದೆ ಧರ್ಮಬೇಧ, ವರ್ಗಬೇಧವಿಲ್ಲದೇ ಗದ್ದೆಗಳಲ್ಲಿ ಕೃಷಿ ಮಾಡಿದವರು. ಇದರಿಂದ ಜೀವನೋತ್ಸಾಹದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಸದ್ಯದ ಕಾಲಘಟ್ಟದಲ್ಲಿ ಕೃಷಿಯಿಂದ ದೂರ ಹೋಗುತ್ತಿದ್ದೇವೆ, ಶಿಕ್ಷಣದ ವ್ಯವಸ್ಥೆಯಿಂದಾಗಿ…
Author: UllalaVani
ಉಳ್ಳಾಲ : ಅಮೆರಿಕಾದ ಬಹುರಾಷ್ಟ್ರೀಯ ಐಟಿ ಕಂಪನಿಯ ಪ್ರಮುಖ ನಾಯಕತ್ವ ಹುದ್ದೆಗೆ ಉಳ್ಳಾಲ ಮೂಲದ ನಮ್ರತಾ ಯು.ಪಿ. ಇವರು ಪದೋನ್ನತಿಗೊಂಡಿದ್ದು, ಇವರು ಸಮಾಜಸೇವಕಿ, ಖ್ಯಾತ ರೇಡಿಯೋ ಜಾಕಿ ಆಗಿರುವ ರಶ್ಮೀ ಉಳ್ಳಾಲ್ ಇವರ ಸಹೋದರಿಯಾಗಿದ್ದಾರೆ. ಉಳ್ಳಾಲ ನಿವಾಸಿ ಯು.ಎ. ಪ್ರೇಮನಾಥ್ ಮತ್ತು ಪ್ರಮೀಳಾ ಕುಮಾರಿ ಕೆ. ದಂಪತಿ ಪುತ್ರಿ ಹಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವಾ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆ ಹಾಗೂ ಶ್ರೇಷ್ಠತೆಯ ನಿಷ್ಠೆಗಾಗಿ ಈ ಜಾಗತಿಕ ಗೌರವ ದೊರಕಿದೆ. ನಮ್ರತಾ ಇವರು ದಿಡಿನ್ ರವಿ ಕುಮಾರ್ ಅವರ ಪತ್ನಿ ಹಾಗೂ ಖ್ಯಾತ ಸಮಾಜಸೇವಕಿ ರಶ್ಮಿ ಉಳ್ಳಾಲ ಅವರ ಸಹೋದರಿ. ಅವರು ಮೂರು ವರ್ಷದ ಆದ್ಯಾಳ ತಾಯಿ ಕೂಡ ಹೌದು. ಇವರ ಪ್ರೇರಣಾದಾಯಕ ಪಯಣ ಅನೇಕರಿಗೆ ಮಾದರಿಯಾಗಿದ್ದು, ಉಳ್ಳಾಲದ ಕೀರ್ತಿ ಪತಾಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಸೋಮವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದು, ಮಂಗಳವಾರ ರಾತ್ರಿ ಮಗು ಮೃತಪಟ್ಟ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಸಂಬಂಧಿಕರ ಮನೆಗೆ ಬಂದಿದ್ದಾಗ ಸಂಬಂಧಿಕ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಸಮಯಕ್ಕೆ ಮೊದಲೇ ಮಗು ಜನನವಾಗಿದ್ದರಿಂದಲೇ ಹಾಗೂ ಮಗು ತಿಂಗಳಿಗೆ ತಕ್ಕಂತೆ ತೂಕ ಇಲ್ಲದೇ ಇರುವುದಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ : ಲೋಕಾಯುಕ್ತ ಅಧಿಕಾರಿಗಳು ಆಗಸ್ಟ್ 13 ರ ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿ, ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಉಪ ತಹಶೀಲ್ದಾರ್ ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಉಪ ತಹಶೀಲ್ದಾರ್ ರಾಜೇಶ್ ನಾಯಕ್, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಸಂತೋಷ್ ಮತ್ತು ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ನಂತರ ಮೂವರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ರಾಜೇಶ್ ನಾಯ್ಕ್, ಸಂತೋಷ್, ಗಣೇಶ್ ಭ್ರಷ್ಟಾಚಾರದಲ್ಲಿ ತಹಶೀಲ್ದಾರ್ ಅವರ ಪಾತ್ರವಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ದೃಢಪಡಿಸಿವೆ. ಸಜಿಪಮುನ್ನೂರಿನ ನಿವಾಸಿ ಪುಷ್ಪರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಲಾಗಿದ್ದು, ಮಧ್ಯವರ್ತಿಯ ಮೂಲಕ ಲಂಚದ ವಹಿವಾಟು ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಲೋಕಾಯುಕ್ತ ತಂಡವು ಬಿ.ಸಿ. ರೋಡ್ ರಸ್ತೆಯ ದೇವಸ್ಥಾನದ ಬಳಿ ಲಂಚದ ಹಣವನ್ನು ವಿನಿಮಯ…
ಮಂಗಳೂರು : ಸ್ವಲ್ಪ ಸಮಯದ ವಿರಾಮದ ನಂತರ, ಕರಾವಳಿ ಪ್ರದೇಶದಲ್ಲಿ ಮುಂಗಾರು ಮತ್ತೆ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಆಗಸ್ಟ್ 14 ರಿಂದ 19 ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯಲ್ಲೋ ಎಚ್ಚರಿಕೆ ನೀಡಿದೆ. ಈ ಅವಧಿಯಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದ್ದು, ಗರಿಷ್ಠ ತಾಪಮಾನ 26.9°C ಮತ್ತು ಕನಿಷ್ಠ ತಾಪಮಾನ 22.9°C ಆಗಿತ್ತು. ಉಡುಪಿ ಜಿಲ್ಲೆಯಲ್ಲೂ ಬುಧವಾರ ಸಾಧಾರಣ ಮಳೆಯಾಗಿದ್ದು, ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಪಡುಬಿದ್ರಿ, ಕಾಪು, ಶಿರ್ವ, ಕಟಪಾಡಿ, ಉಡುಪಿ, ಮಲ್ಪೆ, ಬ್ರಹ್ಮಾವರ, ಕೋಟ, ಮಣಿಪಾಲ, ಹೆಬ್ರಿ, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ.
ಉಳ್ಳಾಲ ನಗರಸಭೆ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 19ರಂದು ಬೆಳಗ್ಗೆ 11 ಗಂಟೆಗೆ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಯಲಿದೆ. ಅಂದು ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಉಪ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಪರಿಶೀಲಕರು ಉಪಸ್ಥಿತರಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿ ನಮೂನೆಗಳನ್ನು ಹಂಚಿಕೆ ಮಾಡಲಿದ್ದಾರೆ. ಜೊತೆಗೆ ಅರ್ಜಿ ಭರ್ತಿ ಮಾಡಲು ಸಹಾಯ ಮಾಡಿ, ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಕೆಲಸ ತಡಮಾಡುವ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ನಾಗರಿಕರು ದೂರು ಸಲ್ಲಿಸಬಹುದು. ಇಂತಹ ದೂರುಗಳನ್ನು ಸಾಮಾನ್ಯ ಕಾರ್ಯದಿನಗಳಲ್ಲಿಯೂ ಕಚೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ. ಜೊತೆಗೆ ದೂರವಾಣಿ ಮೂಲಕವೂ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ನಮೂನೆ-1 ಮತ್ತು ನಮೂನೆ-2 ಬಳಸಬೇಕು ಹಾಗೂ ಪ್ರಮಾಣ ಪತ್ರವನ್ನು ಜೋಡಿಸಬೇಕು. ಭರ್ತಿಮಾಡಿದ ಅರ್ಜಿಗಳನ್ನು ಉಳ್ಳಾಲ ಸಭೆಯಲ್ಲಿ, ಲೋಕಾಯುಕ್ತ ಸ್ಥಳೀಯ ಕಚೇರಿಯಲ್ಲಿ ಅಥವಾ ನೇರವಾಗಿ ನೋಂದಣಿ ಅಧಿಕಾರಿಗೆ – ಕರ್ನಾಟಕ ಲೋಕಾಯುಕ್ತ, ಬಹುಮಹಡಿ ಕಟ್ಟಡ, ಡಾ. ಬಿ.ಆರ್.…
ಉಡುಪಿ : ವ್ಯಕ್ತಿಯೋರ್ವನನ್ನು ಮೂವರು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉಡುಪಿಯ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಆಗಸ್ಟ್ 12ರಂದು ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನಯ್ ದೇವಡಿಗ (35) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ವ್ಯಕ್ತಿ ವಿನಯ್ ದೇವಡಿಗ ಆರೋಪಿಗಳಾದ ಅಜಿತ್, ಅಕ್ಷೇಂದ್ರ , ಪ್ರದೀಪ್ ಪೊಲೀಸರ ಪ್ರಕಾರ, ಆಗಸ್ಟ್ 12 ರಂದು ವಿನಯ್ ವೈಯಕ್ತಿಕ ಕೆಲಸಕ್ಕಾಗಿ ಉಡುಪಿಗೆ ತೆರಳಿದ್ದು, ಸಂಜೆ 6 ಗಂಟೆಗೆ ಮನೆಗೆ ಹಿಂದಿರುಗಿದ್ದರು. ನಂತರ ಊಟ ಮಾಡಿ ತನ್ನ ಕೋಣೆಯಲ್ಲಿ ಮಲಗಿದ್ದರು. ರಾತ್ರಿ ಸುಮಾರು 11:45 ಕ್ಕೆ ಆರೋಪಿಗಳಾದ ಅಜಿತ್, ಅಕ್ಷೇಂದ್ರ ಮತ್ತು ಪ್ರದೀಪ್ ಎಂಬುವವರು ವಿನಯ್ ಅವರ ಮನೆಗೆ ನುಗ್ಗಿ ಅವನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ವಿನಯ್ ಮಲಗಿದ್ದ ಕೋಣೆಗೆ ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿನಯ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹತ್ಯೆಯಾದ ವಿನಯ್ ಆರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತ…
ಉಡುಪಿ : ಅಜ್ಜರಕಾಡಿನ ನಿರ್ಮಾಣ ಹಂತದ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ಪೈಪ್ ಮತ್ತು ಫಿಟ್ಟಿಂಗ್‌ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆಮ್ಲಜನಕ ಪೈಪ್‌ಲೈನ್ ಅಳವಡಿಕೆಗಾಗಿ ದಾಸ್ತಾನು ಕೋಣೆಯಲ್ಲಿ ಇರಿಸಲಾಗಿದ್ದ ತಾಮ್ರದ ಪೈಪ್‌ಗಳು, ಫಿಟ್ಟಿಂಗ್‌ಗಳು ಮತ್ತು ಹಳೆಯ ತಾಮ್ರದ ಪಟ್ಟಿಗಳು ಕಾಣೆಯಾಗಿವೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜುಲೈ 20 ರಂದು, ಲಿಯಾಕತ್ ಎಂಬಾತನು ಮತ್ತೊಬ್ಬ ಸಹಚರನೊಂದಿಗೆ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವುದು ಕಂಡುಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ, ಉಡುಪಿ ನಗರ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ವಿ. ಬಡಿಗೇರ್ ನೇತೃತ್ವದ ವಿಶೇಷ ಪೊಲೀಸ್ ತಂಡವು ಆಗಸ್ಟ್ 12 ರಂದು ಶಿವಮೊಗ್ಗ ನಗರದಲ್ಲಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಬೆಂಗಳೂರಿನ ವಿದ್ಯಾನಗರ ನಿವಾಸಿ ಮೊಹಮ್ಮದ್ ಜಾವೇದ್ (29) ಮತ್ತು ತುಮಕೂರು…
ಮಂಗಳೂರು : ದ.ಕ. ಜಿಲ್ಲಾ ಅಸೋಸಿಯೇಶನ್ ವತಿಯಿಂದ ಆ. 18 ಮತ್ತು 9ರಂದು ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ನಡೆಯಲಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೋಶಾಧಿಕಾರಿ ಕೃಷ್ಣ ಶೆಣೈ, ಈಗಾಗಲೇ ಸುಮಾರು 450 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಸ್ಪರ್ಧೆಯು ಬಾಲಕ ಬಾಲಕಿಯರ 12, 14, 16 ಮತ್ತು 18 ವಯೋಮಿತಿಯಡಿ ನಡೆಯಲಿದೆ. ಆ. 18ರಂದು ಸಂಜೆ 3.30ಕ್ಕೆ ಉದ್ಘಾಟನೆ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ಆ. 23ರಿಂದ 26ರವರೆಗೆ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಗೋಷ್ಟಿಯಲ್ಲಿ ಉಪಾಧ್ಯಕ್ಷ ಸ್ಟೀವನ್ ಪಿ. ಡಯಾಸ್, ಜತೆ ಕಾರ್ಯದರ್ಶಿ ತಾರನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅನಿಲ್ ಆಳ್ವ, ಸುಜಿತ್ ಕುಮಾರ್ ಉಪಸ್ಥಿತರಿದ್ದರು.
ವಿಟ್ಲ : ಅಡ್ಡದ ಬೀದಿ ಮನೆಯ ಬಾವಿಯಲ್ಲಿ ರವಿ ಜೋಶಿ (68) ಎಂಬವರ ಶವ ಪತ್ತೆಯಾಗಿದೆ. ರಸಿಕ ರತ್ನ ಗೋಪಾಲಕೃಷ್ಣ ಜೋಶಿಯವರ ಪುತ್ರರಾದ ಇವರು ಯಕ್ಷಗಾನ ಕಲಾವಿದರಾಗಿದ್ದರು. ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿದ್ದರು. ಮೃತರು ಪತ್ನಿ, ಒಂದು ಹೆಣ್ಣು ಮಗು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

