Author: UllalaVani

Kannada News From Coastal Karnataka

ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 26ರಂದು ಬೆಳಿಗ್ಗೆ 10.00 ಗಂಟೆಗೆ ಬಿಜೈ (ಮೆಸ್ಕಾಂ ಕಛೇರಿ ಬಳಿ) ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯ್ಕೋಡ್ ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಉಸ್ಮಾನ್ ಎ. ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳ ಉಪಸ್ಥಿತರಿರುವರು.ಪೂರ್ವಾಹ್ನ 11.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಚಾರ…

Read More

ತೊಕ್ಕೊಟ್ಟು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ನಡೆಸುತ್ತಿರುವ ಜಂಟಿ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು , ಕೆಲವು ತಿಂಗಳ ಹಿಂದೆ ಅಮೇರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲಿಯೇ ಅತೀ ಹೆಚ್ಚು ತೈಲ ಸಂಪತ್ತು ಹೊಂದಿರುವಂತಹ ವೆನಿಝುವೆಲಾ ದೇಶದ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಅಪಹರಣ ಮಾಡಿ ಆ ದೇಶವನ್ನು ತನ್ನ ಕಪಿ ಮುಷ್ಟಿಯಲ್ಲಿ ಇಡಲು ಪ್ರಯತ್ನಿಸುತ್ತಾರೆ. ಇದೀಗ ಇರಾನ್ ಮೇಲೆ ಹಿಡಿತ ಸಾಧಿಸಲು ಇಸ್ರೇಲ್ ನೊಂದಿಗೆ ಕೈಜೋಡಿಸಿ ಇರಾನ್ ಮೇಲೆ ಯುದ್ಧ ಸಾರಿದ್ದಾರೆ.ಜಗತ್ತಿನ ತೈಲ ಸಂಪತ್ತು ತನ್ನ ನಿಯಂತ್ರಣದಲ್ಲಿ ಇರಬೇಕು ಎಂಬ ದುರಾಸೆ ಅಮೇರಿಕಾ ದೇಶಕ್ಕಿದೆ.. ಈ ಯುದ್ಧವು ಜಾಗತಿಕವಾಗಿ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವಂತಿದೆ. ಇರಾನಿನ ಸರ್ವೋಚ್ಚ ನಾಯಕ ಆಯತೋಲ್ಲಾಹ್ ಖಾಮಿನಿ ಯನ್ನು ಹತ್ಯೆಗೈದರೆ ಇರಾನ್ ದೇಶ ಸುಮ್ಮನಾಗುತ್ತದೆ ಎಂಬ ಭ್ರಮೆಯೊಂದಿಗೆ ಯುದ್ಧ ಸಾರಿದ ಅಮೇರಿಕಾ…

Read More

ಮಂಗಳೂರು, ಮಾ.24: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಕ್ರಮ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ. ಮಾರ್ಚ್ 23ರಂದು ಬೆಳಿಗ್ಗೆ ಸುಮಾರು 11.56 ಗಂಟೆಯ ವೇಳೆ, ಪಾಲಕ್ಕಾಡ್ ವಿಭಾಗದ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ IPF ಮನೋಜ್ ಕುಮಾರ್ ಯಾದವ್ ಹಾಗೂ ಸಿಬ್ಬಂದಿ, MAS–MAQ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12601) ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಆಗಮಿಸಿದಾಗ ಸಾಮಾನ್ಯ ಡಬ್ಬಿಯಲ್ಲಿ ಅನಾಥವಾಗಿ ಬಿಟ್ಟಿದ್ದ ಸಂಶಯಾಸ್ಪದ ಚೀಲವನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ, ಸುಮಾರು 10.129 ಕೆಜಿ ಒಣ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹5,06,450/- ಎಂದು ತಿಳಿದುಬಂದಿದೆ. ವಶಪಡಿಸಿಕೊಂಡ ಗಾಂಜಾವನ್ನು ಮಂಗಳೂರು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಗಾಂಜಾ ಸಾಗಾಟದ ಹಿಂದೆ ಇರುವವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Read More

ಕಾಸರಗೋಡು, ಮಾ.24: ಶಿರೂರು ಭೂಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಅವರ ತಾಯಿ ಶೀಲಾ ಅವರು ಮಂಜೇಶ್ವರ ಮಂಡಲದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರಿಗೆ ನಾಮಪತ್ರ ಸಲ್ಲಿಕೆಯೊಂದಿಗೆ ಪಾವತಿಸಬೇಕಾದ ಇಡುಗಂಟನ್ನು ನೀಡಿ ಆಶೀರ್ವದಿಸಿದ್ದಾರೆ. ನಾಮಪತ್ರ ಸಮರ್ಪಣೆಗಿಂತ ಪೂರ್ವಭಾವಿಯಾಗಿ ಎಕೆಎಂ ಅಶ್ರಫ್ ಪಾಣಕ್ಕಾಡ್ ತಂಙಳ್ ಆಶೀರ್ವಾದಕ್ಕೆ ತೆರಳಿದ್ದರು. ಮರಳಿ ಬರುವ ದಾರಿ ಮಧ್ಯೆ ಕೋಝಿಕೋಡ್ ಕನ್ನಾಡಿಕ್ಕಲ್‌ನಲ್ಲಿ ವಾಸಿಸುವ ಅರ್ಜುನ್ ತಾಯಿಯನ್ನೂ ಭೇಟಿಯಾಗಿದ್ದರು. ಈ ವೇಳೆ ಅರ್ಜುನ್ ಅಮ್ಮ ಅಶ್ರಫ್ ಅವರಿಗೆ ಇಡುಗಂಟು ನೀಡಿದರು. ಉತ್ತರ ಕರ್ನಾಟಕದ ಶಿರೂರಿನಲ್ಲಿ ಭೂಕುಸಿತ ನಡೆದು ಲಾರಿ ಸಹಿತ ಹೊಳೆಯಲ್ಲಿ ನೀರುಪಾಲಾದ ಅರ್ಜುನ್ ಪತ್ತೆಗೆ ಒಂದೂವರೆ ತಿಂಗಳ ಕಾರ್ಯಾಚರಣೆ ನಡೆದಿತ್ತು. ಕೇರಳ ಕರ್ನಾಟಕದ ಮಧ್ಯವರ್ತಿಯಂತೆ ಶಾಸಕ ಎಕೆಎಂ ಅಶ್ರಫ್ ಶಿರೂರಿನಲ್ಲಿದ್ದರು. ಆ ಸಂದರ್ಭವನ್ನು ಕೇರಳದ ದೃಶ್ಯ ಮಾಧ್ಯಮಗಳು ಬಿತ್ತರಿಸಿದ್ದವು. ಸತತ ನಲುವತ್ತಕ್ಕೂ ಅಧಿಕ ದಿನದ ಹುಡುಕಾಟದಿಂದ ಶಿರೂರು ಹೊಳೆಯಲ್ಲಿ ಅರ್ಜುನನ ಅಸ್ಥಿ ಅವಶೇಷಗಳು ಸಿಕ್ಕಿದ್ದುವು. ಅದನ್ನು ಕೇರಳದುದ್ದಕ್ಕೂ ಅರ್ಜುನ್ ಅಂತ್ಯಾಜಲಿ ಪಯಣದ ಮೂಲಕ ಕೊಂಡೊಯ್ದು ಅರ್ಜುನ್ ಅಮ್ಮನಿಗೆ ಒಪ್ಪಿಸಲಾಗಿತ್ತು. ಈ…

Read More

ಉಳ್ಳಾಲ: ಇಲ್ಲಿನ ತಾಲೂಕಿನ ಸಜಿಪ ಪಡು ತಲೆಮೊಗರು ಮಸೀದಿ ವಠಾರದಲ್ಲಿ ಇತ್ತಂಡಗಳ ನಡುವೆ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ ಇತ್ತಂಡಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಉಳ್ಳಾಲ ಸಜಿಪ ಪಡು ನಿವಾಸಿ ಅಬ್ದುಲ್‌ ನವಾಝ್‌ (42) ಎಂಬವರ ದೂರಿನಂತೆ, ಮಾ.22 ರಂದು ಬೆಳಿಗ್ಗೆ, ಪಿರ್ಯಾದುದಾರರು ಮತ್ತು ಅವರ ಸಂಬಂಧಿ ದಾವೂದ್‌ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಸದ್ರಿ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್‌ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್‌, ಇಸಾಕ್‌, ಸಫಿಕ್‌, ಯಾಕೂಬ್‌, ಮಹಮ್ಮದ್‌ ಮುಸ್ತಫಾ, ನಾಸಿರ್‌ ಹಾಗೂ ನಿಝಾಲ್‌ ರವರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅಬ್ದುಲ್‌ ನವಾಝ್‌ ಹಾಗೂ ದಾವೂದ್‌ ರವರು ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿ ತೆರಳಿದ್ದಾರೆ. ಹಲ್ಲೆಯಿಂದಾದ ಗಾಯಕ್ಕೆ ನವಾಝ್‌ ಹಾಗೂ ದಾವೂದ್‌ ರವರು ಉಪಚರಿಸಿ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು…

Read More

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಗಿಲೆಟ್‌ ದೋಣಿಯಲ್ಲಿ ಅವಘಡ ಸಂಭವಿಸಿ, ಮೀನುಗಾರಿಕೆಗಾಗಿ ಬಳಸುತ್ತಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದಲ್ಲಿ ಮುಳುಗಿ ಹಾನಿಯಾದ ಘಟನೆ ನಡೆದಿದೆ. ಸಂಖ್ಯೆಯ ಗಿಲೆಟ್‌ ದೋಣಿಯಲ್ಲಿ ಕೋಟೆಪುರದಿಂದ ಕ್ಯಾಪ್ಟನ್‌ ಅಬ್ದುಲ್‌ ರೆಹಮಾನ್‌, ಅರುಣ್‌ ಹಾಗೂ ಚಾಲೋಸ್‌ ಅವರು ಮಾ.16ರಂದು ಮೀನುಗಾರಿಕೆಗೆ ತೆರಳಿದ್ದರು. ಅಳಿವೆ ಬಾಗಿಲಿನಿಂದ ಪಶ್ಚಿಮಕ್ಕೆ ಸುಮಾರು 8 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಬಲೆ ಹಾಗೂ ಇತರ ಉಪಕರಣಗಳು ನೀರಿನಲ್ಲಿ ಮುಳುಗಿ ಕಾಣೆಯಾಗಿವೆ. ಈ ಅವಘಡದಿಂದ ಮೀನುಗಾರರಿಗೆ ಅಪಾರ ಆಥಿಕ ನಷ್ಟ ಉಂಟಾಗಿದೆ. ಈ ಸಂಬಂಧ ಅಬ್ದುಲ್‌ ರೆಹಮಾನ್‌ ನೀಡಿದ ದೂರಿನ ಮೇರೆಗೆ ಕರಾವಳಿ ಕಾವಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಮಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ನಿಷೇದಿತ ಮಾದಕ ವಸ್ತುವಾದ ಎಂಡಿಎAಎ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತೊಕ್ಕೊಟ್ಟು ನಿವಾಸಿಗಳಾದ ಹೈದರ್ ಅಲಿಯಾಸ್ ಹೈದರ್ ಆಲಿ (53), ಮೊಹಮ್ಮದ್ ಸಜಾದ್ (29) ಹಾಗೂ ಪಂಪ್‌ವೆಲ್ ನಿವಾಸಿ ಜೈಸನ್ ಮೆನೆಜಸ್ (26) ಅವgನ್ನು ಬಂಧಿಸಲಾಗಿದೆ. ಮಂಗಳೂರು ನಗರಕ್ಕೆ ಎಂಡಿಎoಎ ಮಾದಕ ವಸ್ತುವನ್ನು ತಂದು ಆಟೋ ರಿಕ್ಷಾದಲ್ಲಿ ಪಂಪವೆಲ್ ಎಕ್ಕೂರು ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಬಂಧಿತರಿAದ ಸುಮಾರು 26 ಗ್ರಾಂ ತೂಕದ ಎಂಡಿಎAಎ ಮಾದಕ ವಸ್ತು, ರೂ.37,000 ನಗದು, 5 ಮೊಬೈಲ್ ಫೋನ್, ತೂಕಮಾಪನ ಯಂತ್ರ ಹಾಗೂKA-19-AC-2245 ಸಂಖ್ಯೆಯ ಆಟೋ ರಿಕ್ಷಾ ಸೇರಿ ಒಟ್ಟು ರೂ.4,37,500 ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಹೈದರ್ ಅಲಿ ವಿರುದ್ಧ ಈ ಹಿಂದೆ ಮಾದಕ ವಸ್ತು ಮಾರಾಟ, ಪೊಲೀಸ್…

Read More

ಉಡುಪಿ, ಮಾ. 23: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಕರಾವಳಿ ಭಾಗದ ಮೀನುಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ. ಹೋಟೆಲ್ ಬಂದ್ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಕುಸಿದಿದ್ದು, ಮೀನುಗಾರಿಕೆ ಉದ್ಯಮವು ಸಂಕಷ್ಟದಲ್ಲಿ ಸಿಲುಕಿದೆ. ಏಷ್ಯಾದ ಅತಿದೊಡ್ಡ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಮೀನುಗಾರಿಕೆ ಉದ್ಯಮವು ತೀವ್ರ ಸಂಕಷ್ಟ ಎದುರಿಸುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಮೀನು ರಫ್ತು ಸ್ಥಗಿತಗೊಂಡಿರುವುದು ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮುಚ್ಚಿರುವುದು ಮೀನಿನ ಬೆಲೆ ದಿಢೀರ್ ಕುಸಿಯಲು ಕಾರಣವಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ಮೀನಿನ ತಳಿಗಳಿಗೆ ಅನುಗುಣವಾಗಿ ಪ್ರತಿ ಕೆಜಿಗೆ 50 ರೂ. ನಿಂದ 200 ರೂ. ವರೆಗೆ ಬೆಲೆ ಇಳಿಕೆಯಾಗಿದೆ.ಈ ಬಿಕ್ಕಟ್ಟಿನಿಂದ ಮಹಿಳಾ ಮೀನು ಮಾರಾಟಗಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. “ಕೇರಳ ಮೂಲದ ವ್ಯವಹಾರಗಳಿಗಾಗಿ ಮಲ್ಪೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೀನು ಖರೀದಿಸುತ್ತಿದ್ದ ಹೋಟೆಲ್‌ಗಳು ಈಗ ಮುಚ್ಚಲ್ಪಟ್ಟಿವೆ. ಇದರಿಂದ ಮೀನಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ‘ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ…

Read More

ಪುತ್ತೂರು, ಮಾ. 23 : ಕಳೆದ ಶುಕ್ರವಾರದಂದು ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲ ಎಂಬಲ್ಲಿ ತನ್ನ ಪತ್ನಿಯನ್ನು ಕೊಲೆಗೈದು, ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಆರೋಪಿ ಎಮೆಟ್ಟಿ ನಿವಾಸಿ ಪುರುಷೋತ್ತಮ ಅಲಿಯಾಸ್ ಬೈರಪ್ಪ ಎಂಬಾತ ಘಟನೆಯ ನಂತರ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದನು. ಪ್ರಸ್ತುತ ಆತ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಹೊರಬಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಬೈರಪ್ಪ ತನ್ನ ಪತ್ನಿ ಸಾವಿತ್ರಿಯನ್ನು ಚಾಕುವಿನಿಂದ ಬೆನ್ನಟ್ಟಿ ಇರಿದು ಕೊಂದಿದ್ದನು. ನಂತರ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಪ್ರಸ್ತುತ ಆತನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.ಈ ಮಧ್ಯೆ, ಸಾವಿತ್ರಿಯ ತಂದೆ ಕುಮಾರಮಂಗಲದ ಟಿಪ್ಪ ಎಂಬುವವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೈರಪ್ಪ ತನ್ನ ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿ ಈ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ…

Read More

ಕೊಣಾಜೆ: ಬೆಳ್ಮ ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷದ ಆರು ಸಾವಿರ ರೂ.ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೂಳೂರು ಕಸಬ ಬೆಂಗ್ರೆ ನಿವಾಸಿ ಝಾಕಿರ್ ಹುಸೈನ್ (19) ಎಂದು ಗುರುತಿಸಲಾಗಿದೆ.ಈತ ದೇರಳಕಟ್ಟೆ ಮೆಡಿಕಲ್ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಆತನಿಂದ 10.6 ಗ್ರಾಂ ತೂಕದ ಎಂಡಿಎ0ಎ, ಮೊಬೈಲ್ ಫೋನ್, ಸಿರಿಂಜ್, ಸಿಗರ್ ಲೈಟ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More