ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ “ಚಾಪ್ಟರ್ 2” ಘೋಷಿಸಿದ್ದಾರೆ. ಇದು “ಕಾಂತಾರ ಚಾಪ್ಟರ್ 2” ಅಥವಾ ಬೇರೆ ಚಿತ್ರವೇ ಎಂಬ ಚರ್ಚೆ ಹುಟ್ಟುಹಾಕಿದೆ. ಈ ಬೆಳವಣಿಗೆಯು ರಿಷಬ್ ಮತ್ತು ಹೊಂಬಾಳೆ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುವುದರ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಇದು ನಿಜಕ್ಕೂ ‘ಕಾಂತಾರ ಚಾಪ್ಟರ್ 2’ನಾ? ಅಥವಾ ಬೇರೆ ಚಿತ್ರವೇ ಎಂಬ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ರಿಷಬ್ ಅವರ ಒಂದು ನಿರ್ಧಾರ ಅಚ್ಚರಿ ಮೂಡಿಸಿದೆ. ಇನ್ಸ್ಟಾದಲ್ಲಿ ಹೊಂಬಾಳೆ ಫಿಲ್ಮ್ಸ್ ಅನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡದಿದ್ದು ‘ಕಾಂತಾರ’ ಸಿನಿಮಾ ಮೂಲಕ. ಈ…
Author: UllalaVani
ಉಳ್ಳಾಲ; ಉಳ್ಳಾಲ ಯುನೈಟೆಡ್ ಉಳ್ಳಾಲ ಸಂಘಟನೆಯ ವತಿಯಿಂದ ಈದುಲ್ ಫಿತ್ರ್ ಹಬ್ಬವನ್ನು ಸೋಮೇಶ್ವರದ ನೆಹರು ನಗರದ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ಚೇತನ ಕೇಂದ್ರದ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಮಾನವೀಯತೆಯ ದೃಷ್ಟಿಯಿಂದ ಪಶ್ಚಿಮ್ ರಿಹ್ಯಾಬ್ ಸೆಂಟರ್ ಸಮಾಜಕ್ಕೆ ಮಾದರಿಯಾದ ಸೇವೆಯನ್ನು ಸಲ್ಲಿಸುತ್ತಿದೆ. ಆಶ್ರಮವಾಸಿಗಳೊಂದಿಗೆ ಹಬ್ಬ ಆಚರಿಸುವುದು ಸಮಾಜದಲ್ಲಿ ಸಹಾನುಭೂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ. ಎಲ್ಲರ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಒಳಿತು ನೆಲೆಸಲಿ ಎಂದು ಹಾರೈಸಿದರು. ಯುನೈಟೆಡ್ ಉಳ್ಳಾಲ ಸಂಘಟನೆಯ ಆಯೂಬ್ ಉಳ್ಳಾಲ ಅವರು ಮಾತನಾಡಿ, ಉಳ್ಳಾಲ ಪ್ರದೇಶದಲ್ಲಿ ಐಕ್ಯತೆ, ಸೌಹಾರ್ದತೆ, ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ಸಾಮರಸ್ಯಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸಂಘಟನೆಯ ಹೆಸರನ್ನು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಜ್ಜಾಗಿದೆ ಎಂದು ತಿಳಿಸಿದರು. ಪಶ್ಚಿಮ್ ರಿಹ್ಯಾಬ್ ಸೆಂಟರ್‌ನ ಸ್ಥಾಪಕರಾದ ರೋಹಿತ್ ಸಾಂಕ್ಟಸ್…
ಸ್ಪೀಕರ್ ಯು.ಟಿ. ಖಾದರ್ ಅವರು ಪವಿತ್ರ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ರಾಜ್ಯದ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ರಮಝಾನ್ ತಿಂಗಳ ಉಪವಾಸ, ಪ್ರಾರ್ಥನೆ ಮತ್ತು ದಾನಧರ್ಮದ ನಂತರ ಬರುವ ಈದುಲ್ ಫಿತ್ರ್ ಹಬ್ಬವು ಸಹೋದರತ್ವ, ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತದೆ. ಈ ಪವಿತ್ರ ಹಬ್ಬವು ಸಮಾಜದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಿಸಿ ಸೌಹಾರ್ದತೆಯನ್ನು ಬಲಪಡಿಸಲಿ ಎಂದು ಅವರು ಆಶಿಸಿದರು. ಎಲ್ಲಾ ಸಮುದಾಯದವರು ಐಕ್ಯತೆಯಿಂದ ಬದುಕಿ, ನಾಡಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸ್ಪೀಕರ್ ಯು.ಟಿ. ಖಾದರ್ ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಕರಾವಳಿ ಭಾಗದೆಲ್ಲೆಡೆ ಮುಸ್ಲಿಂ ಬಾಂಧವರು ಪವಿತ್ರ ‘ಈದುಲ್ ಫಿತ್ರ್’ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಿದರು. ಒಂದು ತಿಂಗಳ ರಮಝಾನ್ ಉಪವಾಸದ ನಂತರ ಬಂದ ಈ ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ಬೆಳಗ್ಗಿನ ಜಾವವೇ ವಿಶೇಷ ನಮಾಝ್ ನೆರವೇರಿಸಲಾಯಿತು. ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು ಸೇರಿದಂತೆ ಕರಾವಳಿಯ ವಿವಿಧ ಭಾಗಗಳ ಮಸೀದಿಗಳಲ್ಲಿ ಸಾವಿರಾರು ಭಕ್ತರು ಈದ್ ನಮಾಝ್ ಸಲ್ಲಿಸಿ, ದೇಶದ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಗುರುಗಳು ಕುತುಬಾ ಬಾಷಣದಲ್ಲಿ ಮಾನವೀಯತೆ, ಸಹೋದರತ್ವ ಮತ್ತು ಪರಸ್ಪರ ಪ್ರೀತಿ-ವಿಶ್ವಾಸದ ಮಹತ್ವವನ್ನು ಸಾರಿದರು. ನಮಾಝ್ ಬಳಿಕ ಪರಸ್ಪರ ಅಪ್ಪಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಎಲ್ಲೆಡೆ ಕಂಡುಬಂತು. ಮನೆಗಳಲ್ಲಿ ವಿಶೇಷ ಸಿಹಿ ತಿಂಡಿಗಳು, ಶೀರ್ ಖುರ್ಮಾ, ಬಿರಿಯಾನಿ ಸೇರಿದಂತೆ ವಿವಿಧ ಆಹಾರಗಳನ್ನು ತಯಾರಿಸಿ ಆತ್ಮೀಯರು ಹಾಗೂ ಬಂಧುಬಳಗದೊಂದಿಗೆ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಬಡವರಿಗೆ ಜಕಾತ್ ಹಾಗೂ ಫಿತ್ರಾ ನೀಡುವ ಮೂಲಕ ಸಹಾಯ ಮಾಡುವ ಪರಂಪರೆ…
ನವದೆಹಲಿ, ಮಾ.20: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಮುದ್ದಾದ ವಿಡಿಯೋ ಇದೀಗ ನೆಟ್ಟಿಗರ ಮನಸೂರೆಗೊಂಡಿದೆ. ಪುಟಾಣಿ ಮಕ್ಕಳು ಏನು ಮಾಡಿದರೂ ನೋಡಲು ಚೆಂದವೇ ಸರಿ, ಆದರೆ ಅವರ ತೊದಲು ಮಾತುಗಳು ಮತ್ತು ಮುಗ್ಧತನ ಎಲ್ಲರನ್ನೂ ಹೆಚ್ಚು ಆಕರ್ಷಿಸುತ್ತದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಂದು ಪುಟ್ಟ ಮಗು ಅಮ್ಮ ಬೈದ ಕಾರಣ ಬೇಸರಗೊಂಡು ದೇವರ ಮುಂದೆ ಹೋಗಿ ಅಳುತ್ತಾ ದೂರು ಹೇಳುತ್ತಿರುವುದು ಕಾಣಿಸುತ್ತದೆ. ಅಮ್ಮನತ್ತ ಕೈ ತೋರಿಸಿ ತನ್ನ ನೋವನ್ನು ದೇವರಿಗೆ ಹೇಳಿಕೊಳ್ಳುವ ಈ ದೃಶ್ಯ ತುಂಬಾ ಮನಮೋಹಕವಾಗಿದೆ. ಸಾಮಾನ್ಯವಾಗಿ ಮಕ್ಕಳು ಅಮ್ಮ ಬೈದರೆ ಅಪ್ಪನ ಬಳಿ ದೂರು ಹೇಳುತ್ತಾರೆ. ಆದರೆ ಈ ಪುಟಾಣಿ ಮಾತ್ರ ವಿಭಿನ್ನವಾಗಿ ದೇವರನ್ನೇ ತನ್ನ ನ್ಯಾಯಾಧೀಶನನ್ನಾಗಿ ಮಾಡಿಕೊಂಡಿರುವುದು ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.“ಈ ದೂರು ಕೇಳಿ ದೇವ್ರೇ ನಕ್ಕಿರಬಹುದು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಮುಗ್ಧತೆ ಅಂದ್ರೆ ಇದೇ” ಎಂದು ಇನ್ನೊಬ್ಬರು…
ಮಂಗಳೂರು, ಮಾ. 20 ; ಕುದ್ರೋಳಿ ಕಂಡತ್‌ಪಳ್ಳಿ ಎಂಬಲ್ಲಿ ಗ್ಯಾಸ್ ಹಂಡೆಯಿಂದ ಇನ್ನೊಂದು ಗ್ಯಾಸ್ ಹಂಡೆಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಾ.17ರಂದು ಮಧ್ಯಾಹ್ನ 1:30ಕ್ಕೆ ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿ ಲಕ್ಷ್ಮೀನಾರಾಯಣ ಟೆಂಪಲ್ ಕಡೆಯಿಂದ ಕಂಡತ್‌ಪಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಗ್ಯಾಸ್ ಪಾಯಿಂಟ್ ವೊಂದರ ಪಕ್ಕದಲ್ಲಿರುವ ಗೋದಾಮಿನಲ್ಲಿ ಈ ಇಬ್ಬರು ಆರೋಪಿಗಳು ಅಕ್ರಮವಾಗಿ ಗ್ಯಾಸ್ ಸಿಲೆಂಡರ್‌ಗಳನ್ನು ಸಂಗ್ರಹಿಸಿ ದೊಡ್ಡ ಹಂಡೆಯಿಂದ ಸಣ್ಣ ಹಂಡೆಗೆ ಮರುಪೂರಣ ಮಾಡುತ್ತಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲ್ಲೂಕಿನ ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈದ್ ನಮಾಝ್ ಬಳಿಕ ಮಸೀದಿಯ ಗುರುಗಳು ಕುತುಬಾ ಬಾಷಣದಲ್ಲಿ ನಾಡಿನ ಸರ್ವ ಜನಾಂಗದ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗಾಗಿ ದುಆ ಮಾಡಿದರು. ಈ ಸಂದರ್ಭದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಬೇಕು, ಸಮಾಜದಲ್ಲಿ ಐಕ್ಯತೆ ಬೆಳೆಸಬೇಕು ಎಂಬ ಸಂದೇಶವನ್ನು ನೀಡಲಾಯಿತು. ನಮಾಝ್ ಬಳಿಕ ಭಕ್ತರು ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕೋಟೆಕಾರ್: ಅಲ್ ಹಿದಾಯ ಜುಮಾ ಮಸ್ಜಿದ್, ಕರ್ನಾಟಕ ಮುಸ್ಲಿಂ ಜಮಾತ್, ಎಸ್ ವೈ ಎಸ್ ಹಾಗೂ ಎಸ್ಸೆಸ್ಸಫ್ ಸಂಘಟನೆಗಳ ವತಿಯಿಂದ ಮಸೀದಿ ವಠಾರದಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅವರು ದುವಾ ನೆರವೇರಿಸಿದರು. ಕೆ ಎಮ್ ಜೆ ಅಧ್ಯಕ್ಷ ಅಬ್ದುಲ್ ಕರೀಂ, ಎಸ್ ವೈ ಎಸ್ ಅಧ್ಯಕ್ಷ ಸಬೀರ್ ಅಶ್ ಅರಿ, ಎಸ್ಸೆಸ್ಸಫ್ ಅಧ್ಯಕ್ಷ ಸದಕತುಲ್ಲಾ, ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್ ಉಪಸ್ಥಿತರಿದ್ದರು. ಸುನ್ನೀ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮಂಗಳೂರು: ಸಿರಿ ತೋಟಗಾರಿಕೆ ಸಂಘ (ರಿ.) ಮಂಗಳೂರು ಆಶ್ರಯದಲ್ಲಿ, ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಸಂಪೂರ್ಣ ಸಹಕಾರದೊಂದಿಗೆ ಉಚಿತ ಕೈತೋಟ ಹಾಗೂ ತಾರಸಿ ತೋಟ ತರಬೇತಿ, ಜೊತೆಗೆ ತರಕಾರಿ ಬೀಜ ಮತ್ತು ಸಸಿ ವಿತರಣೆ ಕಾರ್ಯಕ್ರಮ ಮಾರ್ಚ್ 22 ರಂದು ನಡೆಯಲಿದೆ. ಈ ಕಾರ್ಯಕ್ರಮವು ತೊಕ್ಕೊಟ್ಟುವಿನ ಸ್ವಾಮಿ ಕೊರಗಜ್ಜ ಶಿವಾಜಿ ಸೇವಾ ಸಮಿತಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಘನ ಉಪಸ್ಥಿತಿ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ ಅವರು ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷರಾದ ಡಾ. ಭಾರತಿ ನಿರ್ಮಲ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಐ.ಕೆ. ದೊಡ್ಡಮನಿ,ಜನ ಶಿಕ್ಷಣ ಟ್ರಸ್ಟ್ ಮುಡಿಪುವಿನ ಶೀನ ಶೆಟ್ಟಿ,…
ಉಳ್ಳಾಲ: ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ, ಇನ್ನೊಂದು ಧರ್ಮದ ಸಂಸ್ಕೃತಿಯನ್ನು ಅರಿತು ಬದುಕಿದಾಗ ಸೌಹಾರ್ದ ಸಮಾಜ ಹಾಗು ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಯಾವುದೇ ಧರ್ಮದ ಸಂದೇಶ ಮನಸ್ಸಿನ ಗಾಯ ಗುಣಪಡಿಸುವ ಔಷಧವಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಇವರು ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ಮಾಸ್ತಿಕಟ್ಟೆಯಲ್ಲಿ ನಡೆದ ಬೃಹತ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು. ಯುನಿವೆಫ್ ಕರ್ನಾಟಕ ಸ್ಥಾಪಕಾಧ್ಯಕ್ಷರ ರಫೀವುದ್ದೀನ್ ಕುದ್ರೋಳಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನಾ ಸ್ಪೂರ್ತಿ ಪ್ರಶಸ್ತಿ ಪುರಸ್ಕೃತ ಹಳೆಕೋಟೆ ಸಯ್ಯಿದ್ ಮದನಿ ಪ್ರೌಢಶಾಲಾ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಅವರನ್ನು ಸನ್ಮಾನಿಸಲಾಯಿತು. ಕೋಡಿಜಾಲ್ ರಿಫಾಯಿ ಜುಮಾ ಮಸೀದಿಯ ಖತೀಬ್ ಉವೈಸ್ ಮದನಿ ಅಲ್‌ಅಝ್ಹರಿ ತೋಕೆ ದುಆ ನೆರವೇರಿಸಿದರು. ಉಳ್ಳಾಲ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ನವಾಝ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅರ್ಜುನ್, ತೊಕ್ಕೊಟ್ಟು ರೀಚಲ್ ಸರ್ವಿಸಸ್ ಸ್ಥಾಪಕ ಸಿರಿಲ್ ಡಿ’ಸೋಜ, ಮೂಡ ಅಧ್ಯಕ್ಷ…

