Author: UllalaVani

Kannada News From Coastal Karnataka

ಬಂಟ್ವಾಳ,ನ.13: ಸುರಿಬೈಲು ದಾರುಲ್ ಅಶ್‌ಅರಿಯ್ಯ ಎಜ್ಯುಕೇಶನಲ್ ಸಂಸ್ಥೆಯಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮುಅಲ್ಲಿಮ್ ಮೆಹರ್ಜಾನ್ ಸ್ಪರ್ಧಾಕೂಟವು ನಡೆಯಿತು. ಶೈಖುನಾ ಸುರಿಬೈಲು ಉಸ್ತಾದರ ಮಖಾಂ ಝಿಯಾರತ್‌ನೊಂದಿಗೆ ಆರಂಭಗೊAಡ ಕಾರ್ಯಕ್ರಮವನ್ನು ಬೊಳ್ಮಾರ್ ಉಸ್ತಾದ್ ಉದ್ಘಾಟಿಸಿದರು. ಮುಅಲ್ಲಿಮ್ ಮೆಹರ್ಜಾನ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಜೆಎಂ ರಾಜ್ಯ ಉಪಾಧ್ಯಕ್ಷ ಮುಹಿಯುದ್ದೀನ್ ಸಅದಿ ತೋಟಾಲ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಯಾಕೂಬ್ ಲತೀಫಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಸುಲೈಮಾನ್ ಹಾಜಿ ನಾರ್ಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಎAಎ ಸಿದ್ದೀಕ್ ಸಅದಿ ಅಲ್ ಫುರ್ಖಾನಿ, ಹೈದರ್ ಅಶ್ರಫಿ ಮತ್ತಿತರರು ಭಾಗವಹಿಸಿದ್ದರು.

Read More

ದೇರಳಕಟ್ಟೆ; ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿಗೆ 11ರ ಹರೆಯದ ಈ ಪೋರ ನಿದರ್ಶನವಾಗಿದ್ದಾನೆ. ಕಿರಿಯ ವಯಸ್ಸಿನಲ್ಲೇ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಚಿಂತ್ಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ನಡೆದ ಆಟೋ ಕ್ರಾಸ್ ಡರ್ಟ್ ಬೈಕ್ ರೇಸಿಂಗ್” ಸ್ಪರ್ಧೆಯಲ್ಲಿ ಕಿಡ್ಸ್ ಕ್ಲಾಸ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ತಲಪಾಡಿಯ ಶಾರದ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯ ತನ್ನ ಅವಿರತ ಶ್ರಮದಿಂದ ಎರಡನೇ ಸ್ಥಾನವನ್ನು ಪಡೆದುಕೊಂಡು ತಾನು ವಿದ್ಯಾರ್ಜನೆ ಪಡೆಯುತ್ತಿರುವ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಈ ಅಸಾಧಾರಣ ಪ್ರತಿಭೆ ಅಚಿಂತ್ಯ ಅವರು ದೇರಳಕಟ್ಟೆ ಮಾಗಂತಡಿ ನಿವಾಸಿ ಕಿರಣ್ ಕುಮಾರ್ ಹಾಗೂ ಅಕ್ಷತಾ ದಂಪತಿಯ ಸುಪುತ್ರನಾಗಿದ್ದಾನೆ. ಸಣ್ಣವಯಸ್ಸಿನಿಂದಲೇ ಮಗನ ಪ್ರತಿಭೆಯನ್ನು ಗುರುತಿಸಿ ಅವನಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪೋಷಕರಿಗೆ, ತನ್ನ ಅತೀ ಚಿಕ್ಕ ವಯಸ್ಸಿನಲ್ಲೇ ತನ್ನ ಕ್ರೀಡಾ ಪ್ರತಿಭೆಯಿಂದ ಹೆಮ್ಮೆ ಮೂಡಿಸುವಂತಹ ಕಾರ್ಯವನ್ನು ಅಚಿಂತ್ಯ ಮಾಡಿದ್ದಾನೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ವಯಸ್ಸಿಗಿಂತ ಹೆಚ್ಚಿನ…

Read More

ಪುತ್ತೂರು: ಕಾರು ಮತ್ತು ಅಕ್ಟೀವಾ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಅಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಸಂಜೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ನಡೆದಿದೆ. ಸ್ಕೂಟರ್ ಸವಾರ ಪುತ್ತೂರು ನಗರದ ಸಾಮೆತ್ತಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ ಎಂಬವರ ಪುತ್ರ ಶಶಿಕುಮಾರ್ (36) ಗಾಯಗೊಂಡವರು.ಮಸಾಲ ಹುಡಿಯೊಂದರ ಏಜನ್ಸಿಯಲ್ಲಿ ಕೆಲಸ ಮಾಡುತ್ತಿರುವ ಶಶಿಕುಮಾರ್ ಅವರು ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಪೋಳ್ಯ ತಿರುವಿನಲ್ಲಿ ಹಿಂಬಾಗದಿಂದ ಆಗಮಿಸಿದ ಕಬಕ ನಿವಾಸಿ ತೌಫೀಕ್ ಎಂಬವರು ಚಲಾಯಿಸುತ್ತಿದ್ದ ಹುಂಡೈ ಕಾರು ಸ್ಕೂಟರ್ ಗೆ ಡಿಕ್ಕಿಯಾಗಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ‌ ಸ್ಕೂಟರ್ ಸಹಿತ ರಸ್ತೆಗೆ ಎಸೆಯಲ್ಪಟ್ಟ ಶಶಿಕುಮಾರ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು, ನ. 13  ನಗರದ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ಯುವತಿಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಕುಮಾರ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.ಸುಮಾ ಅವರು ಸುಮಾರು 5 ಅಡಿ ಎತ್ತರ, ಮಧ್ಯಮ ಮೈಕಟ್ಟು ಮತ್ತು ಗೋಧಿ ಬಣ್ಣದ ಮೈಕಟ್ಟು ಹೋಂದಿದ್ದಾರೆ. ಅವರು ಕೊನೆಯದಾಗಿ ಕಪ್ಪು ಪ್ಯಾಂಟ್ ಮತ್ತು ಕಪ್ಪು ಉದ್ದ ತೋಳಿನ ಶರ್ಟ್ ಧರಿಸಿದ್ದರು. ಅವರು ಕನ್ನಡ, ತುಳು ಮತ್ತು…

Read More

ಉಪ್ಪಿನಂಗಡಿ, ನ. 13; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಬಾಲಕಿಯೊಬ್ಬಳು ನವೆಂಬರ್ 12ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಮಗಳು ಹರ್ಷಿತಾ (15) ಎಂದು ಗುರುತಿಸಲಾಗಿದೆ.ಉಪ್ಪಿನಂಗಡಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ಅವರು, ನವೆಂಬರ್ 4ರಂದು ತಲೆನೋವು ಎಂದು ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಈ ವೇಳೆ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದ ಅವಳನ್ನು ತಕ್ಷಣವೇ ತಾಯಿ ಚಿಕಿತ್ಸೆಗೆಂದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ನ. 12ರಂದು ಮೃತಪಟ್ಟಿದ್ದಾರೆ.ಕಡಬದ ರಾಜೇಶ್ ಎಂಬಾತ ಹರ್ಷಿತಾಗೆ ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹೀಗಾಗಿ ಹರ್ಷಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ ಎಂದು ಆಕೆಯ ತಂದ ಶ್ರೀಧರ ಕುಂಬಾರ ಅವರು ಉಪ್ಪಿನಂಗಡಿ ಪೊಲೀಸ್…

Read More

ಬೆಳ್ತಂಗಡಿ, ನ;13: ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಮುಂಬಾಗಿಲ ಬೀಗ ಮುರಿದು ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕುಖ್ಯಾತ ಅಂತಾರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ (71) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 11ರ ರಾತ್ರಿ ಪಿಎಸ್‌ಐ ಓಮನ ಮತ್ತು ಅವರ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ್ದರು. ಆತನ ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನಿಸಿದಾಗ, ಆತನೇ ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಎಂದು ಪೊಲೀಸರು ಗುರುತಿಸಿದರು. ಪ್ರಾಥಮಿಕ ತನಿಖೆಯಲ್ಲಿ, ಮಂಗಳೂರಿನಲ್ಲಿ ನಡೆದ ಕಳ್ಳತನದಲ್ಲೂ ಆತನ ಪಾತ್ರವಿರುವ ಶಂಕೆ ವ್ಯಕ್ತವಾಗಿತ್ತು. ಕುತ್ಲೂರು ಗ್ರಾಮದ ಮನೆಯಲ್ಲಿ ಕಳ್ಳತನ ನಡೆಸಿರುವುದು ಪ್ರಾಥಮಿಕ ತನಿಖೆ ದೃಢಪಟ್ಟಿದೆ.ಮಂಜುಶ್ರೀ ನಗರ ನಿವಾಸಿ ಅವಿನಾಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಕ್ಟೋಬರ್ 2ರಂದು ಅವರು ಮನೆಗೆ ಬೀಗ ಹಾಕಿ ಹೋಗಿದ್ದರು. ಅಕ್ಟೋಬರ್ 6ರಂದು ಸಂಜೆ 5…

Read More

ನವದೆಹಲಿ, ನ. 13 ; ದೆಹಲಿಯ ಕೆಂಪು ಕೋಟೆ ಬಳಿ ನ.10ರಂದು ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ಎನ್ನುವುದು ಅಧಿಕೃತವಾಗಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಹೀಗಾಗಿ ಪುಲ್ವಾಮಾದಲ್ಲಿರುವ ಉಮರ್ ತಾಯಿಯ ಡಿಎನ್‌ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.ಸ್ಫೋಟದ ಬಳಿಕ ಉಮರ್ ಕಾಲು ಸ್ಟೀರಿಂಗ್ ವೀಲ್ ಮತ್ತು ಆಕ್ಸಿಲರೇಟರ್ ನಡುವೆ ಸಿಲುಕಿಕೊಂಡಿತ್ತು. ಡಿಎನ್‌ಎ ಮಾದರಿ ಉಮರ್ ತಾಯಿಯ ಮಾದರಿಯೊಂದಿಗೆ ಹೊಂದಿಕೆಯಾಗಿದೆ ಎಂದು ದೆಹಲಿ ಪೊಲೀಸರ ಮೂಲಗಳಿಂದ ತಿಳಿದುಬಂದಿದೆ.ಇನ್ನು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಗೊಳಿಸಿದ್ದು, ಬುಧವಾರ ಅಧಿಕಾರಿಗಳು ಸ್ಫೋಟಗೊಂಡಿದ್ದ ಕಾರು ಹೊರತಾಗಿ ದೆಹಲಿಗೆ ಎಂಟ್ರಿಯಾಗಿದ್ದ ಇನ್ನೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಸ್ಫೋಟಕ್ಕೂ ಮುನ್ನ ದೆಹಲಿಗೆ ಉಗ್ರರ ಎರಡು ಕಾರುಗಳು ಎಂಟ್ರಿಯಾಗಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.ಈ ಎರಡು ಕಾರುಗಳ ಪೈಕಿ ಕೆಂಪುಕೋಟೆ ಬಳಿ ಒಂದು ಕಾರು…

Read More

ಮುಡಿಪು;ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗ್ರಸಾಲೆ ಕೊರಗಲೋಟ್ಟು ರಸ್ತೆ, ಸೀಗೆದಡಿ ಮಧ್ಯನಡ್ಕ ರಸ್ತೆ, ಮಾಲೆಮಾರ್ ಹೂವಿನಕೊಪ್ಪಲ ಕುರ್ನಾಡು ಮುಖ್ಯರಸ್ತೆಗೆ ಶಿಲನ್ಯಾಸವನ್ನು ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಿದ್ರು. ಕುರ್ನಾಡು ದತ್ತಾತ್ರೇಯ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕುರ್ನಾಡು ಗ್ರಾಮಾಭಿವೃದ್ಧಿಗಾಗಿ 1.90 ಕೋಟಿ ಅನುದಾನ ಮಂಜೂರಾಗಿದೆ. ಶಾಸಕರಾಗಿ ಮಾತ್ರವಲ್ಲ, ಸಭಾಧ್ಯಕ್ಷನಾಗಿ ನನ್ನ ಶಕ್ತಿಮೀರಿದ ಪ್ರಯತ್ನದ ಫಲವಾಗಿ ಈ ಎಲ್ಲ ಕೆಲಸಗಳು ಶಾಶ್ವತವಾಗಿ ನಡೆಯುತ್ತಿವೆ. ಎಲ್ಲ ವರ್ಗದವರನ್ನೂ ಒಳಗೊಂಡ ಅಭಿವೃದ್ದಿಯೇ ನಮ್ಮ ಉದ್ದೇಶ. ಪ್ರತಿಯೊಂದು ಪ್ರದೇಶವನ್ನೂ ಗುರುತಿಸಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಮಿತ್ತಕೋಡಿಯಿಂದ ಬೋಳಿಯಾರ್‌ವರೆಗೆ ಸಂಪರ್ಕ ರಸ್ತೆಯು ಮೊದಲು ಕಷ್ಟಕರವಾಗಿತ್ತು, ಕ್ರಶರ್ ಜಲ್ಲಿ ಇರುವುದರಿಂದ ಸಂಚಾರ ಅಸಾಧ್ಯವಾಗಿತ್ತು. ಆದರೆ ಈಗ ಆರ್ಕಾನ-ಮಿತ್ತಕೋಡಿಬೋಳಿಯಾರ್ ಮಾರ್ಗಕ್ಕೆ 6 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಹಂತದಲ್ಲಿದೆ.ಕೆದುಂಬಾಡಿ–ಮೂರುಗೋಳಿ–ತೌಡುಗೋಳಿ ರಸ್ತೆ ನಿರ್ಮಾಣಕ್ಕೂ ₹30 ಲಕ್ಷ ಬಿಡುಗಡೆಗೊಂಡಿದೆ. ಅತ್ಯುತ್ತಮ ಮಾದರಿ ಗ್ರಾಮದ ರೂಪದಲ್ಲಿ ಕುರ್ನಾಡು ಅಭಿವೃದ್ಧಿಯಾಗುತ್ತಿದೆ. ಕುಡಿಯುವ ನೀರಿಗಾಗಿ ಜೆಜೆಎಂ (Jal Jeevan Mission) ಅಡಿ ಟ್ಯಾಂಕ್‌ಗಳು…

Read More

ಜನರು ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದ್ರೂ ರಸ್ತೆಯಲ್ಲಿ ಗುಂಡಿ ನಿರ್ಮಿಸುವುದನ್ನ ಮಾತ್ರ ಇವರು ಬಿಡುವ ತರ ಕಾಣುತ್ತಿಲ್ಲ. ಇದೀಗ ದೇರಳಕಟ್ಟೆಯಲ್ಲಿ ಒಂದು ವಾರದ ಹಿಂದೆ ಅಷ್ಟೇ ಹಾಕಿದ್ದ ಇಂಟರ್ ಲಾಕ್‌ನ್ನು ತೆರವುಗೊಳಿಸಲಾಗಿದೆ. ಹೌದು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಿಟಿ ವಾರ್ಡಿನ ದೇರಳಕಟ್ಟೆ ಜಂಕ್ಷನ್ ಮುಖ್ಯ ರಸ್ತೆಯ ಬದಿಯಲ್ಲಿ ಇತ್ತೀಚೆಗೆ ಇಂಟರ್ಲಾಕ್ ಹಾಕಿ ಸುಂದರಗೊಳಿಸಲಾಗಿತ್ತು. ಇದೀಗ ಪುನಃ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಈಗಾಗಲೇ ಹಾಕಿದ್ದ ಇಂಟರ್ಲಾಕ್ ಅನ್ನು ಅಗೆದು ಹೊಂಡಗಳು ನಿರ್ಮಾಣಗೊಂಡಿದೆ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿದ ಬಳಿಕ ಇಂಟರ್ಲಾಕ್ ಹಾಕುವುದನ್ನು ಬಿಟ್ಟು ತರಾತುರಿಯಲ್ಲಿ ಇಂಟರ್ಲಾಕ್ ಹಾಕುವ ಪ್ರಮೇಯವೇನಿತ್ತು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ತೆರಿಗೆ ಹಣವನ್ನು ಪೋಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Read More

ಉಳ್ಳಾಲ, ನ; 12: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿರುವ ಉಳ್ಳಾಲದ ಮಾರುತಿ ಜನಸೇವಾ ಸಂಘ (ರಿ.),ಮಾರುತಿ ಯುವಕ ಮಂಡಲ (ರಿ) ವತಿಯಿಂದ ಮಾರುತಿ ಮಾಣಿಕ್ಯ ಮಹೋತ್ಸವ -2025ರ ಅಂಗವಾಗಿ ಉಳ್ಳಾಲದ ಭಾರತ್ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಅತಿಥಿ ಗಣ್ಯರು, ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ವಿವಿಧ ರೀತಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮಾತನಾಡಿ, ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಮಕ್ಕಳಿಗೆ ಇದೆ. ವನಮಹೋತ್ಸವದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಒಂದು ಸಂಸ್ಥೆಯ ಬೆಳವಣಿಗೆ ಇಡೀ ವಿಶ್ವಕ್ಕೆ ತಿಳಿಯುವುದು ಪ್ರಕೃತಿಯ ಜೋಡಣೆಯಿಂದ ಮಾತ್ರ. ಮುಂದಿನ ದಿನಗಳಲ್ಲಿ ನಾವು ನೆಟ್ಟ ಗಿಡಗಳು ಫಲವನ್ನು ಕೊಡಲು ಆರಂಭಿಸುತ್ತದೆ. ಇಂದು ಇಡೀ ವಿಶ್ವಕ್ಕೆ ಬೇಕಾಗಿರುವುದು ಪ್ರಕೃತಿ. ಹಾಗಾಗಿ ಮಾರುತಿ ಮಾಣಿಕ್ಯ ತಂಡದ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭ ಫುಟ್‌ಬಾಲ್ ತರಬೇತಿದಾರ ಸಮಾಜ ಸೇವಕ…

Read More