ಉಳ್ಳಾಲ: ರಾಯಲ್ ಫೌಂಡೇಶನ್ (ರಿ.) ಮುಕ್ಕಚ್ಚೇರಿ, ಉಳ್ಳಾಲವು ತಮ್ಮ ನೂತನ ಕಚೇರಿ ಉದ್ಘಾಟನೆಯ ಉಪಲಕ್ಷ್ಯವಾಗಿ ಒಲವಿನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಮ್ಮವರ ಜೊತೆ ಒಂದು ದಿನ ಎಂಬ ವಿಶೇಷ ಸಾಮಾಜಿಕ ಸೇವಾ ಮತ್ತು ಸಹವಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ನಿರಾಶ್ರಿತ ವೃದ್ಧರು ಮತ್ತು ವಿಶೇಷಚೇತನರನ್ನು ಒಳಗೊಂಡಿದ್ದು, ಅವರೊಂದಿಗೆ ಸಂತೋಷ ಮತ್ತು ಸಹಬಾಳ್ವೆಯ ದಿನವನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಒಲವಿನಹಳ್ಳಿ ರಿಹ್ಯಾಬಿಲಿಟೇಶನ್ ಸೆಂಟರ್ ನಿರ್ವಾಹಕಿ ಸಿಸ್ಟರ್ ಐಲಿನ್ ಮತಾಯಿಸ್ ಅವರು ಉದ್ಘಾಟಿಸಿದರು. ಮಸೀದಿ ಇಮಾಮ್ ಕಬೀರ್ ಸಅದಿ ಅವರು ಶಾಂತಿ ಮತ್ತು ಸೌಹಾರ್ದದ ದುವಾ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿ ಮತ್ತು ಮಾಜಿ ನಗರಸಭಾ ಕೌನ್ಸಿಲರ್ ಶ್ರೀ ಇಬ್ರಾಹಿಂ ಖಲೀಲ್ ಅವರು ಸಮಾಜದ ಪರಿಧಿಗೆ ಬಂದ ಈ ಬಂಧುಗಳೊAದಿಗೆ ಸಮಯ ಕಳೆಯುವ ಫೌಂಡೇಶನ್ನ ಈ ಮಹತ್ವದ ಉಪಕ್ರಮವನ್ನು ಹೊಗಳಿದರು. ಕಾರ್ಯಕ್ರಮದ ಅಧ್ಯಕ್ಷ ಮತ್ತು ಫೌಂಡೇಶನ್ ಅಧ್ಯಕ್ಷ ಶ್ರೀ ತೌಸೀಫ್ ಅಲಿ ಅವರು ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾಭಾವನೆಯ ಬಗ್ಗೆ…
Author: UllalaVani
ಮಡ್ಯಾರು: ಮಡ್ಯಾರು ಪರಾಶಕ್ತಿ ಕ್ಷೇತ್ರದಲ್ಲಿ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಮಹಾ ಆರಾಧನೆಮರಕಡ ಶ್ರೀ ಗುರುಪರಾಶಕ್ತಿ ಮಠದ ಸಂಸ್ಥಾಪಕ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಮಹಾ ಆರಾಧನೆಯು ಮಡ್ಯಾರು ಪರಾಶಕ್ತಿ ಕ್ಷೇತ್ರದಲ್ಲಿ ನಡೆಯಿತು. ಸ್ವಾಮಿಯವರ ಚಿಂತನ ಬರೇ ಸಾಮಾನ್ಯ ಚಿಂತನ ಅಲ್ಲ. ಇಂತಹ ಭವ್ಯ ಚಿಂತನ ಬರೇ ಮನುಜ ಮಾತ್ರನಿಂದ ಸಾಧ್ಯವಿಲ್ಲ. ಅವರೇ ಅಂದ0ತೆ, ಮಾಯಾತೀತನೋರ್ವ ಮಾಯೆಯೊಳಗೆ ಬಂದು ಉದ್ಧರಿಸುವ ಚಿಂತನ.ಹೇಳುವವನೋರ್ವ ಜೀವಜಾಲಗಳ ಹೊರಗೆ ನಿಂತು ಹೇಳಿದ.ಕೇಳುಗನಿಗೆ ಅದು ಅರ್ಥವೇ ಆಗಲಿಲ್ಲ. ಆದರೆ ಮುಂದೆ ಜನಾಂಗ ವೊಂದು ಬರಲಿದೆ.ಬರಿಸುವೆ ನಾ. ಅವರು ಅರ್ಥೈಸಿಕೊಳ್ಳುವರು ಎಂದು. ಪೂಜ್ಯರು ನೀಡಿದ ನುಡಿಗಳು ಅದು ದೇವ ನುಡಿಗಳು. ಅದನ್ನು ಅರ್ಥವಿಸಿಕೊಳ್ಳುವುದು ಸುಲಭ ಅಲ್ಲ. ಒಂದೊAದು ಶಬ್ದಗಳು ಒಂದೊAದು ತತ್ತ್ವ.ಇಲ್ಲಿ ಭಕ್ತರು ಎಂದಿಲ್ಲ. ಎಲ್ಲರೂ ಬಂಧುಗಳು. ಒಂದು ಕೈ ಸೋತಾಗ ತಮ್ಮ ಕೈ ಜೋಡಿಸಿ ಮೇಲೆತ್ತುವವರು. ಜಾತಿ ಭೇದಗಳ ಮೀರಿದ ಚಿಂತನ. ಯಾರು ಆರ್ತತೆಯೊಳಗೆ ಬಂದು ಕೇಳಿದರೋ,ಯಾರು ಕಣ್ಣೀರು ಕೊಟ್ಟು ಕೇಳಿದರೋ, ಯಾರು ತಾಯಿ ಎಂದು ಶರಣಾಗತರಾದರೋ ಅವರಿಗೆ ತಕ್ಷಣ…
ಉಳ್ಳಾಲ: ತೊಕ್ಕೊಟ್ಟು, ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಫೆ.1ರಿಂದ 6ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಪರಮೇಶ್ವರ ಜೋಷಿ ನೇತೃತ್ವದಲ್ಲಿ ನಡೆಯಿತು. ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ದಿನೇಶ್, ಕೆ.ಅತ್ತಾವರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ, ಕಾರ್ಯಾಧ್ಯಕ್ಷ ಸುರೇಶ್ ಭಟ್ನಗರ, ಗೌರವ ಸಲಹೆಗಾರ ಕೆ.ಟಿ.ಸುವರ್ಣ, ಉಪಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ಪ್ರಶಾಂತ್ ಕಾಪಿಕಾಡು, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು, ಕ್ಷೇತ್ರದ ಮೊಕ್ತೇಸರರಾದ ಡಾ.ರಾಮಕೃಷ್ಣ ಶೆಟ್ಟಿ, ರಘುರಾಮ ಶೆಟ್ಟಿ ಕೊಸಪ್ಪ ಗಟ್ಟಿ, ನಿರ್ಮಲಾ ಕುಂಙಬು, ಉಗ್ರಾಣ ಸಮಿತಿ ಅಧ್ಯಕ್ಷ ದಿನೇಶ್ ಕಾಜವ, ಸ್ವಾಗತ ಸಮಿತಿ ಸಂಚಾಲಕ ಪ್ರಶಾಂತ್ ಚೌಟ, ಅಂಕಿತ್ ಉಳ್ಳಾಲ, ಕಮಲಾಕ್ಷ ಪಿಲಾರ್, ಸಭಾ ಕಾರ್ಯಕ್ರಮ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಸಂದೀಪ್ ಅಂಬ್ಲಮೊಗರು, ಪ್ರಧಾನ ಸಂಚಾಲಕ ದೀಕ್ಷಿತ್ ನಿಸರ್ಗ, ಹೊರೆಕಾಣಿಕೆ…
ಶಿಮಂತೂರು: ತಾಯಿಯ ಋಣವನ್ನು ಎಷ್ಟೇ ಜನ್ಮವೆತ್ತಿ ಬಂದರೂ ತೀರಿಸೋಕೆ ಆಗಲ್ಲ ಎಂಬ ಮಾತಿದೆ. ಆದ್ರೆ ಈ ಮಕ್ಕಳು ತಾಯಿಯ ಕನಸು, ನಂಬಿಕೆ ಮತ್ತು ಭಕ್ತಿಭಾವವನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದ ಶಿಮಂತೂರು ಬಲೆಪು ಮನೆಯಲ್ಲಿ ಭಕ್ತಿಭಾವಪೂರ್ಣ ಯಕ್ಷಗಾನ ಸೇವೆ ಇದೇ ಜನವರಿ 16 ರ ಪುಣ್ಯ ಶುಕ್ರವಾರದ ಸಂಜೆ 6ಗಂಟೆಗೆ ನಡೆಯಲಿದೆ. ಹೌದು, ದಿವಂಗತ ಶಕುಂತಲಾ ಅವರ ಸ್ಮರಣಾರ್ಥವಾಗಿ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಪ್ರಸಿದ್ಧ ದಶಾವತಾರ ಯಕ್ಷಗಾನ ಮಂಡಳಿಯಿAದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಭಕ್ತಿ ಸೇವೆಯನ್ನು ಕಿರಿಯ ಪುತ್ರ ಡಾ. ಚಂದ್ರಶೇಖರ್ ಅವರು ತಾಯಿಯ ಅಪೇಕ್ಷೆಯಂತೆ ಶ್ರದ್ಧಾಭಕ್ತಿಯಿಂದ ಆಯೋಜಿಸಿದ್ದು, ತಂದೆ ಬಾಬು ಪೂಜಾರಿ ಬಲೆಪು ಮನೆ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮಕ್ಕೆ ವಿಶೇಷ ಅರ್ಥಪೂರ್ಣತೆ ದೊರೆತಿದೆ. ಬಲೆಪು ಮನೆ, ಶಿಮಂತೂರು ಇವರ ಮನೆಯ ಮುಂಭಾಗದಲ್ಲಿ ವಿದ್ಯುದ್ದೀಪಾಲಂಕೃತಗೊAಡ ಭವ್ಯ ರಂಗಮAಟಪದಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಸೇವೆಯ ಬಯಲಾಟವಾಗಿ ಯಕ್ಷಗಾನ ಕಲಾವಿದರು ಆಡಿತೋರಿಸಲಿದ್ದಾರೆ. ಸಂಜೆ 6.00…
ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಸಂಸ್ಥೆಯ ಲಂಚುಲಾಲ್ ಕೆ.ಎಸ್. ನಿರ್ಮಾಣದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ತುಳು ಸಿನಿಮಾ ‘ಕಟ್ಟೆಮಾರ್’ ಇದೇ ಜನವರಿ 23ರಂದು ತೆರೆಗೆ ಬರಲಿದ್ದು, ಅದರ ಟ್ರೇಲರ್ ಬಿಡುಗಡೆ ಸಮಾರಂಭ ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಲಂಚುಲಾಲ್ ಕೆ.ಎಸ್., “ಜನವರಿ 23ರಂದು ಕಟ್ಟೆಮಾರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳಿಗಿಂತ ತುಳು ಚಿತ್ರವೂ ಯಾವುದಕ್ಕೂ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ಭರ್ಜರಿಯಾಗಿ ನಿರ್ಮಿಸಿದ್ದೇವೆ. ತುಳು ಚಿತ್ರರಂಗಕ್ಕೆ ಕಟ್ಟೆಮಾರ್ ನಮ್ಮ ವಿಶೇಷ ಕೊಡುಗೆ. ಎಲ್ಲರೂ ಈ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಬೇಕು. ನಿಮ್ಮ ಬೆಂಬಲ ದೊರೆತರೆ ತುಳು ಸಿನಿ ಇಂಡಸ್ಟ್ರಿಗೆ ಇನ್ನೂ ಹಲವು ಹೊಸ ಸಾಹಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ನಟ ರೂಪೇಶ್ ಶೆಟ್ಟಿ ಮಾತನಾಡಿ, “ಈ ಚಿತ್ರಕ್ಕೆ ರಿವ್ಯೂ ಕೊಡುವ ಅವಶ್ಯಕತೆಯೇ ಇಲ್ಲ. ಟ್ರೇಲರ್ ಪ್ರದರ್ಶನದ ವೇಳೆ ಕೇಳಿಬಂದ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳೇ ಇದರ ಮಟ್ಟವನ್ನು ತೋರಿಸಿವೆ” ಎಂದರು.…
ಉಳ್ಳಾಲ : ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಂದ್ರಹಾಸ್ ಅವರು ಸಹಪಾಠಿ ಅಯ್ಯಪ್ಪ ಮಾಲಾ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಇಂದು ಬೆಳಗ್ಗೆ ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಂದ್ರಹಾಸ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ನಾಳೆ ಬೆಳಗ್ಗೆ ಪಾರ್ಥಿವ ಶರೀರ ಉಳ್ಳಾಲ ತಲುಪಲಿದೆ. ಮೃತ ಚಂದ್ರಹಾಸ್ ಅವರು ಮೂಲತಃ ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಕಳೆದ ಹತ್ತು ವರ್ಷದಿಂದ ಪತ್ನಿಯ ಊರು ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಇತ್ತೀಚೆಗಷ್ಟೆ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿದ್ದರು. ಇದೀಗ ಶಬರಿಮಲೆ ತೆರಳಿದ್ದ…
ಬಂಟ್ವಾಳ,ಜ.12: ಗಡಿನಾಡ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಮಲಯಾಳ ಕಡ್ಡಾಯ ಮಸೂದೆಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ. ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲಯಾಳ ಭಾಷಾ ಮದೂದೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯಿಂದ ಕನ್ನಡಕ್ಕೆ ಕುತ್ತು ಬರಲಿದೆ ಎಂಬ ಆತಂಕ ಮೂಡಿದೆ. ಇದನ್ನು ನಿವಾರಿಸುವ ಕಾರ್ಯವಾಗಬೇಕು. ಕಾಸರಗೋಡಿನಲ್ಲಿ ಸುಮಾರು ಏಳೂವರೆ ಲಕ್ಷ ಕನ್ನಡಿಗರಿದ್ದು, 210ಕನ್ನಡ ಮಾಧ್ಯಮ ಶಾಲೆಗಳಿವೆ. ಕನ್ನಡ ಕಲಿಯುವ ಹಕ್ಕನ್ನು ಮೊಟಕುಗೊಳಿಸುವ ಕಾರ್ಯ ಕೇರಳ ಸರಕಾರದಿಂದ ಆಗುತ್ತಿರುವುದು ಖೇದನೀಯ. ಬಂಟ್ವಾಳದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದ್ದಾರೆ. ಸಭೆ ಸರ್ವಾನುಮತದಿಂದ ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳ ಹೇರಿಕೆಯನ್ನು ಖಂಡಿಸಿತು.
ಬೆಂಗಳೂರು, ಜ. 12 : ಕೇರಳ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕೇರಳ ಮಸೂದೆ ವಿರೋಧಿಸಿ ವಾಟಾಳ್ ನಾಗರಾಜ್ ರಾಜಭವನ ಮುತ್ತಿಗೆಗೆ ಯತ್ನಿಸಿದ್ದಾರೆ. ರಾಜ್ಯದ ಗಡಿಯಲ್ಲಿರುವ ಕಾಸರಗೋಡು ಪ್ರದೇಶದಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಸೂದೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿದ್ದು, ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.ಕೇರಳ ಸರ್ಕಾರದ ಮಸೂದೆ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆಗೆ ಯತ್ನ ನಡೆದಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ರಾಜಭವನದ ಬಳಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಭಾಷಾ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾಸರಗೋಡಿನಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಮಸೂದೆ ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಂಗಳೂರಿನಲ್ಲಿ ಬೃಹತ್ ಚಳವಳಿ ರೂಪಿಸಲಾಗುವುದು. ರಾಷ್ಟ್ರೀಯ…
ಕುಂಬಳೆ, ಜ. 12 : ರಾಷ್ಟ್ರೀಯ ಹೆದ್ದಾರಿ ಕಾಸರಗೋಡಿನ ಕುಂಬಳೆ ಆರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ವಿರುದ್ಧ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಟೋಲ್ ಶುಲ್ಕ ವಸೂಲಾತಿ ವಿರುದ್ಧದ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೂರಾರು ಪ್ರತಿಭಟನಾಕಾರರು ಅರಿಕ್ಕಾಡಿ ಟೋಲ್ ಪ್ಲಾಜಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕುಂಬಳೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಇದರಿಂದಾಗಿ ಕಚೇರಿಗೆ ಹೋಗುವ ಸಿಬ್ಬಂದಿ ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು. ಕೇರಳ-ಕರ್ನಾಟಕ ಗಡಿಯಲ್ಲಿರುವ ತಲಪಾಡಿ ಟೋಲ್ ಗೇಟ್ ನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ತಾತ್ಕಾಲಿಕ ಪ್ಲಾಜಾದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಯೋಜಿಸಿದ ಮೊದಲ ದಿನವೇ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದ ಹೋರಾಟ ಸಮಿತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಟೋಲ್ ಪ್ಲಾಜಾಗಳ ನಡುವೆ 60 ಕಿ.ಮೀ ಕಡ್ಡಾಯ ನಿಯಮವನ್ನು NHAI ಪಾಲಿಸಬೇಕೆಂದು…
ಕತಾರ್,ಜ. 12:ಕರ್ನಾಟಕದ ತುಳುನಾಡು ಪ್ರದೇಶದ ಅಪರ್ಣಾ ಶರತ್ ಅವರು ಕೇಂದ್ರ ಸರ್ಕಾರದ “ನಾರಿ ಶಕ್ತಿ ಸಮ್ಮಾನ್” ಪ್ರಶಸ್ತಿಯನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಗೌರವಿಸಲ್ಪಟ್ಟ ಮೊದಲ ಮಹಿಳೆಯಾಗಿದ್ದಾರೆ. ರಾಯಭಾರ ಕಚೇರಿ ಆಯೋಜಿಸಿದ್ದ ಪ್ರವಾಸಿ ಭಾರತೀಯ ದಿನಾಚರಣೆ ಸಂದರ್ಭದಲ್ಲಿ, ಸಮುದಾಯ ಸೇವೆ ಹಾಗೂ ನಾಯಕತ್ವದಲ್ಲಿ ನೀಡಿದ ವಿಶಿಷ್ಟ ಕೊಡುಗೆಗಾಗಿ ಆಯ್ಕೆಯಾದ ಕೇವಲ 12 ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿ ಅವರನ್ನು ಸನ್ಮಾನಿಸಲಾಯಿತು.ಈ ಗೌರವವು ಭಾರತೀಯ ವಲಸಿಗ ಸಮುದಾಯದ ಸಬಲೀಕರಣ ಹಾಗೂ ಭಾರತ–ಕತಾರ್ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಮಹತ್ವದ ಪಾತ್ರವನ್ನು ಗುರುತಿಸುತ್ತದೆ. ಈ ಸಾಧನೆ ತುಳುನಾಡು ಹಾಗೂ ವಿದೇಶದಲ್ಲಿರುವ ಭಾರತೀಯ ಸಮುದಾಯಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ.

