Author: UllalaVani

Kannada News From Coastal Karnataka

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ‘ಜಿಯೋಮೆಟ್ರಿಕಲ್ ಸ್ಟಕ್ಚರ್ಸ್ ಆಂಡ್ ಡಿಫರೆನ್ಸಿಯಲ್ ಅನಲೈಸಿಸ್ ‘ ವಿಷಯದ ಅಂತರಾಷ್ಟ್ರೀಯ ಕಾರ್ಯಾಗಾರವು ಗಣಿತಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ‌ ಪ್ರೊ. ಎಚ್. ದೇವೇಂದ್ರಪ್ಪ ಅವರು ಉದ್ಘಾಟಿಸಿ, ಆಧುನಿಕ ಗಣಿತ ಸಂಶೋಧನೆಯಲ್ಲಿ ಜ್ಯಾಮಿತಿ ಮತ್ತು ವಿಶ್ಲೇಷಣೆಯ ಮಹತ್ವವನ್ನು ವಿವರಿಸಿದರು.ಕಾರ್ಯಾಗಾರದಲ್ಲಿ ಭಾರತ ಮತ್ತು ವಿದೇಶಗಳ ಖ್ಯಾತ ಗಣಿತಶಾಸ್ತ್ರ ವಿದ್ವಾಂಸರು ಉಪನ್ಯಾಸ ನೀಡಿದರು. ಸರ್ಬಿಯಾದ ಮ್ಯಾಥಮ್ಯಾಟಿಕ್ಸ್ ವಿಭಾಗದ ಡಾ.ಜುಬಿಕಾ,‌ ರೋಮೇನಿಯಾ ಟೆಕ್ನಿಕಲ್ ವಿವಿಯ ಪ್ರಾಧ್ಯಾಪಕರಾದ ಡಾ.ಕಾರ್ನೆಲಿಯಾ ಭಾಗವಹಿಸಿ ಗಣಿತ ಭೌತಶಾಸ್ತ್ರ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಅನ್ವಯಗಳ ಇತ್ತೀಚಿನ ಬೆಳವಣಿಗೆಗಳು ಮತ್ತು ಹೊಸ ಪ್ರಕಾರಗಳ ಕುರಿತು ಮಾತನಾಡಿ, ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ‌ ಪ್ರೊ. ಬಿ. ಜೆ. ಗಿರೀಶ,‌ ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ. ಡಿ. ಜಿ. ಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಮೋಹನ ಕೆ. ಎಸ್., ಡಾ. ಚಂದ್ರು ಹೆಗಡೆ ಮತ್ತು ಪ್ರೊ. ಭಾರ್ಗವ…

Read More

ಮುಡಿಪು; ‘ಸಂಗೀತ, ನೃತ್ಯ, ಸಾಹಿತ್ಯ ಇವುಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ. ಸಾಹಿತ್ಯಕ್ಷೇತ್ರ ಮತ್ತು ಸಮಾಜದಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ನಡೆಯದೇ ಇದ್ದರೆ ಅದು ಅಪಾಯಕಾರಿ ಸಂಗತಿ’ ಎಂದು ಹೆಸರಾಂತ ಕಲಾವಿದೆ ಡಾ. ಕೆ.ಎಸ್ ಪವಿತ್ರ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ವಿವೇಕ ರೈ ವಿಚಾರ ವೇದಿಕೆಯಲ್ಲಿ ಕನಕ ಜಯಂತಿ ಪ್ರಯುಕ್ತ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಕನಕದಾಸರ ಕೀರ್ತನೆಗಳಲ್ಲಿ ವೈಚಾರಿಕತೆ, ಭಾವನಾತೀವ್ರತೆ ಇದೆ. ನಾವು ಅಹಂ ಬಿಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕೆಲ‌ಸ ಮಾಡದೇ ಇದ್ದರೆ ಸಮಾಜದಲ್ಲಿ ಎಲ್ಲಾ ಬಗೆಯ ಅಸಮಾನತೆ ಸೃಷ್ಟಿಯಾಗುವ ಅಪಾಯವಿದೆ’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ನಾಗಪ್ಪ ಗೌಡ ಆರ್ ಮಾತಾಡಿ, ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಸವಣ್ಣನಂತೆ ಕನಕದಾಸರು ಪ್ರಮುಖರು. ಇಂದಿನ ಯುವ ಜನಾಂಗವು ಕನಕದಾಸರನ್ನು ಕೇವಲ ಭಕ್ತಿಯ ನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ…

Read More

ಉಳ್ಳಾಲ: ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆ ಇಲ್ಲಿನ ವಿದ್ಯಾರ್ಥಿಗಳ ಕ್ರೀಡಾ ಸಂಗಮ 2025 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ರಹೀಮ್ ಉಚ್ಚಿಲ ಅವರು, ಈ ಶಾಲೆಯಲ್ಲಿ ಕಲಿಯುವ ಐವರು ವಿದ್ಯಾರ್ಥಿಗಳು ಮೈಸೂರಿನ ಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದದ್ದು ಸಂತಸ ತಂದಿದೆ.ಪಾಠದೊಂದಿಗೆ ಆಟ ಬೇಕು .ಕಲಿಯಲು ಬೇಕಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಪಾಠದಲ್ಲಿ ಹಿಂದುಳಿಯಬಾರದು ಎಂದು ಕರೆ ನೀಡಿದರು.ಸಲಾಮ್ ಉಚ್ಚಿಲ ಮಾತನಾಡಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಪತ್ರಕರ್ತ ಬಶೀರ್ ಕಲ್ಕಟ್ಟ ಮಾತನಾಡಿದರು.ಕೌನ್ಸಿಲರ್ ಇಸಾಕ್ ಅಜ್ಜಿನಡ್ಕ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕ್ರೀಡಾ ಪ್ರತಿನಿಧಿ ಝಝ್ಮಾ ಪ್ರತಿಜ್ಞಾ ವಿಧಿ ಬೋಧಿಸಿದರು.ಈ ಕಾರ್ಯಕ್ರಮ ದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷ ಬಶೀರ್,ಜಿ.ಐ. ಮೊಹಮ್ಮದ್ ಅಲಿ, ಸಲಾಮ್ ಉಚ್ಚಿಲ, ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲ್, ಶಿಕ್ಷಕರಾದ ಚಂದ್ರ ಶೇಖರ್ ಸಿ.ಎಚ್., ಸಂಧ್ಯಾ ಕುಮಾರಿ, ಬಬಿತಾ, ಮಂಜುನಾಥ,ನಿರೀಕ್ಷಾ, ಅನುಷಾ , ಅಶ್ವಿನಿ, ಸವಿತಾ ಪ್ರಿಯಾ ವಿನುತಾ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ…

Read More

ಕೊಣಾಜೆ: ನಮ್ಮ ಭಾಷೆ, ದೇಶ ಹಾಗೂ ಹಿರಿಯರನ್ನು ಗೌರವಿಸುವುದೇ ಸಂಸ್ಕೃತಿ. ಕನ್ನಡ ಮತ್ತು ಕನಕದಾಸರಂತಹ ಮಹಾತ್ಮರನ್ನು ನೆನೆಯುವುದರಿಂದ ನಮಗೆ ಒಳಿತಾಗುವುದು ಎಂದು ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ಅವರು ಸೋಮವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ, ಕನಕದಾಸ ಪೀಠ ಮಂಗಳೂರು ವಿವಿ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಬೆಳ್ಮ ಸೇವಾಶ್ರಮ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಭಾಷೆಯಷ್ಟೇ ಅಲ್ಲ ಬದುಕುಕನ್ನಡ ನಮಗೆ ಭಾಷೆ, ನೆಲ, ಸಂಸ್ಕೃತಿಯಷ್ಟೇ ಅಲ್ಲ ಅದು ನಮಗೆ ಬದುಕು ಕೊಟ್ಟಿದೆ. ಬಸವಣ್ಣ, ಕನಕದಾಸರಂತಹ ಅನೇಕ ಸಂತರು ಬಾಳಿದ ಕನ್ನಡನಾಡು ಅನೇಕ ಮೌಲ್ಯ ಆದರ್ಶಗಳ ತವರೂರು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಕಸಾಪ ಉಳ್ಳಾಲ ಘಟಕ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ…

Read More

ಕೊಣಾಜೆ: ಕನ್ನಡವನ್ನು ಪುಸ್ತಕ ಹಾಗೂ ತಂತ್ರಜ್ಞಾನದಲ್ಲಿ ಸಮಾನವಾಗಿ ಬಳಸಬೇಕಿದೆ. ತಂತ್ರಜ್ಞಾನ ಯಾವುದೂ ಶಾಶ್ವತವಲ್ಲ.ನಾವು ಅದರ ಗುಲಾಮರಾಗಬಾರದು. ನಮ್ಮ ತಿಳುವಳಿಕೆಯನ್ನು ಬಿಟ್ಟುಕೊಟ್ಟು ಕೃತಕ ಬುದ್ಧಿಮತ್ತೆಗೆ ದಾಸರಾಗದಿರೋಣ. ಕನ್ನಡವನ್ನು ಇಟ್ಟುಕೊಂಡೇ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲಿರಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಅವರು ಹೇಳಿದರು. ಅವರು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಭಾನುವಾರ ನಡೆದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿಗಳ ಒಕ್ಕೂಟ “ಗಿಳಿವಿಂಡು(ರಿ)” ಇದರ ನಾಲ್ಕನೇ ಮಹಾ ಸಮಾವೇಶವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು.1968 ರಲ್ಲಿ ಮೊಳಕೆಯೊಡೆದ ಕನ್ನಡದ ಬೀಜ ಎಸ್ ವಿಪಿ ಕನ್ನಡದ ಅಧ್ಯಯನ ಸಂಸ್ಥೆಯಾಗಿ ರೂಪುಗೊಂಡು ಹೆಮ್ಮರವಾಗಿ ಬೆಳೆಯುವುದರೊಂದಿಗೆ ಕನ್ನಡವನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಏಳು ತಲೆಮಾರುಗಳ ವಿದ್ಯಾರ್ಥಿಗಳು ಈ ಗಿಳಿವಿಂಡು ಸಮಾವೇಶದ ಮೂಲಕ ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದರು. ಉಳ್ಳವರು ಶಿವಾಲಯ ಮಾಡುವರಯ್ಯ ಎಂದು ಅಂದು ಬಸವಣ್ಣ ಹೇಳಿದ್ದರು. ಆದರೆ ಪ್ರಸ್ತುತ ಉಳ್ಳವರು ಆಂಗ್ಲ ಶಾಲೆಯ…

Read More

ಕುಂಪಲ : ಇಲ್ಲಿನ ಬೈಪಾಸ್ ಸಮೀಪ ಮಧ್ಯವಯಸ್ಕನ ಮೃತದೇಹ ರಕ್ತದ ಮಡುವಿನಲ್ಲಿ ಮನೆ ಅಂಗಳದಲ್ಲಿ ಪತ್ತೆಯಾಗಿದೆ. ಸ್ಥಳೀಯ ಚಿಕನ್ ಅಂಗಡಿ ಬದಿಯಲ್ಲಿ ಗಾಯವಾಗಿ ಕಣ್ಣೊಂದು ಹೊರಬಿದ್ದು ಮನೆ ಅಂಗಳಕ್ಕೆ ಓಡಿ ಅಲ್ಲೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಎಂಬವರ ಮೃತದೇಹ ಪತ್ತೆಯಾಗಿದೆ. ಬೆಳಿಗ್ಗೆ ಸುಮಾರು 3 ಗಂಟ ವೇಳೆ ಈತನನ್ನು ಸ್ಥಳದಲ್ಲಿ ಹಲವರು ನೋಡಿದ್ದರು. ಬಳಿಕ ಮೃತದೇಹ ರಕ್ತದ ಮಡುವಿನಲ್ಲಿ ಕಂಡುಬಂದಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ತನಿಖೆ ಆರಂಭಿಸಿದ್ದಾರೆ. ಸ್ಥಳೀಯವಾಗಿ ನಾಯಿಯು ರಕ್ತದ ಮಡುವಿನಲ್ಲಿ ಇರುವುದು ಕಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

Read More

ಕೊಣಾಜೆ: ನಮ್ಮ ತುಳುನಾಡಿನ ಸಂಸ್ಕೃತಿಯು ವಿಭಿನ್ನವಾದುದು ಹಾಗೂ ಶ್ರೇಷ್ಠವಾದುದು. ನಮ್ಮ ತುಳುನಾಡು, ಸಂಸ್ಕೃತಿ , ಆರಾಧನೆ, ಆಚರಣೆಯಂತಹ ಅನೇಕ ಮಹತ್ವದ ಸಂಗತಿಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಕೃತಿಯ ಮೂಲಕ ನಮ್ಮ ನೆಲದ ಇತಿಹಾಸವನ್ನು ದಾಖಲಿಸುವ ಪ್ರಯತ್ನ ನಡೆದಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಕೊಣಾಜೆ ಕೆಳಗಿನ ಮನೆಯ ಶ್ರೀ ನಾಗಬ್ರಹ್ಮ‌ ಸನ್ನಿಧಿಯಲ್ಲಿ ಗುರುನಿತ್ಯಾನಂದ ಸೇವಾವೃಂದ ಇದರ ವತಿಯಿಂದ ಆಯೋಜಿಸಲಾದ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ತುಳು ಸಂಸ್ಕೃತಿಯ ರಕ್ಷಣೆಗೆ ಹಾಗೂ ತುಳುನಾಡಿಗೆ ನಾವೇನು ಕೊಡುಗೆ ಕೊಡಬಹುದು ಎಂಬ ಚಿಂತನೆಯೊಂದಿಗೆ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.ಹಿರಿಯರಾದ ಭಾಗಿ ನೀರ್ ದೀಪಿಕಲ್ ತಲಪಾಡಿ ಕ್ಷೇತ್ರ ಮಹಾತ್ಮೆ ಹಾಗೂ ತುಳುನಾಡ ದೈವಾರಾಧನೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ಧಾರ್ಮಿಕ ವಾಗ್ಮಿ ತಮ್ಮಣ್ಣ…

Read More

ಕೊಣಾಜೆ: ಮಂಗಳೂರು ವಿವಿ ಜೀವವಿಜ್ಞಾನ ವಿಭಾಗದ ಉಪನ್ಯಾಸಕರಾದ‌ ಡಾ. ದಿವಾಕರ್ ಎಂ. ಎಸ್. ಅವರ ಇಂಡಿಯನ್ ಡಯಾಬಿಟಿಸ್ ಕಿಚನ್ – ಟ್ರೆಡಿಷನಲ್ ಫುಡ್ ಫಾರ್ ಗುಡ್ ಹೆಲ್ತ್ “Indian Diabetes Kitchen – Traditional Foods for Good Health” ಎಂಬ ಕೃತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಶುಕ್ರವಾರ ಬಿಡುಗಡೆಗೊಳಿಸಿದರು. ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ಡಾ. ದಿವಾಕರ್ ಅವರ ಕೃತಿಯು ಭಾರತೀಯ ಪಾರಂಪರಿಕ ಆಹಾರದ ವೈಜ್ಞಾನಿಕ ಅಂಶಗಳನ್ನು ಜನರಿಗೆ ಸರಳವಾಗಿ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ. ಇಂತಹ ಪುಸ್ತಕಗಳು ಆಹಾರ ವಿಜ್ಞಾನ ಮತ್ತು ಪೌಷ್ಠಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ,” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ರಾಜು ಮೊಗವೀರ ಕೆ ಅವರು ಮಾತನಾಡಿ, ಈ ಕೃತಿಯು ಸಂಶೋಧನೆ ಮತ್ತು ಆರೋಗ್ಯಕರ ಜೀವನ ಶೈಲಿಯ ಕಡೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಶ್ಲಾಘಿಸಿದರು.ಪ್ರಾಧ್ಯಾಪಕ ಪ್ರೊ. ರಾಜು ಕೃಷ್ಣ ಸಿ.ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಆಹಾರ ವಿಜ್ಞಾನ ಮತ್ತು ಪೌಷ್ಠಿಕಶಾಸ್ತ್ರ…

Read More

ಕೊಣಾಜೆ: ಬಿಲ್ಲವರ ಕುಲಕಸುಬು ಮೂರ್ತೆದಾರಿಕೆಯಾದರೂ ಇಂದು ಮೂರ್ತೆದಾರಿಕೆಯತ್ತ ಸಮುದಾಯದ ಒಲವು ಕಡಿಮೆಯಾಗಿದೆ. ಮೂರ್ತೆದಾರರ ವಿವಿದೋದ್ಧೇಶ ಸಹಕಾರಿ ಸಂಘದ ಮೂಲಕ ಸಮಾಜದ,‌ಸಮುದಾಯದ ಅಭಿವೃದ್ಧಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಜನರ‌ ಪ್ರೀತಿ ವಿಶ್ವಾಸದೊಂದಿಗೆ ಇದೀಗ ಸಂಘದ ಎರಡನೇ ಬ್ರಾಂಚ್ ಆರಂಭಗೊಂಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರಿಂದ ಸಹಕಾರ ಸಿಗುವಂತಾಗಲಿ ಎಂದು ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಆರ್ ಪದ್ಮರಾಜ್ ಅವರು ಹೇಳಿದರು. ಅವರು ಪಾವೂರಿನಲ್ಲಿ ಮೂರ್ತೆದಾರರ ವಿವಿದೋದ್ಧೇಶ ಸಹಕಾರಿ ಸಂಘ ( ನಿ) ಪಾವೂರು ಇದರ ನೂತನ ಎರಡನೇ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಸಂಘದ ಉಳಿತಾಯ ಖಾತೆಯನ್ನು ಉದ್ಘಾಟಿಸಿದ .ಕ.ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಕುಂಪಲ ಅವರು ಮಾತನಾಡಿ, ಸಹಕಾರ ಸಂಘವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಎಲ್ಲರ ಒಗ್ಗಟ್ಟು ಸಹಕಾರದೊಂದಿಗೆ ಮೂರ್ತೆದಾರರ ಸಹಕಾರ ಸಂಘವು ಎರಡನೆ ಶಾಖೆಯಾಗಿ ಬೆಳೆದು ನಿಂತಿದೆ. ಅಲ್ಲದೆ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.ಸಂಘದ ಕೊಠಡಿಯನ್ನು ಮಂಗಳೂರು ಸಹಕಾರಿ‌ಸಂಮಘದ ಸಹಾಯಕ ನಿಬಂಧಕರು ತ್ರಿವೇಣಿ ರಾವ್ ಅವರು ಉದ್ಘಾಟಿಸಿ ಶುಭಹಾರೈಸಿದರು.…

Read More

ಉಳ್ಳಾಲ: ನ-13; ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ‌ ಸದಸ್ಯತ್ವ ಕಳಕೊಂಡವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ರಾಜ್ಯ ವಕ್ಫ್ ಬೋರ್ಡ್,ಹೈಕೋರ್ಟ್ ಗೆ ದೂರು ನೀಡಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿರುವಾಗಲೇ ಸಂಶಯದ ಆಧಾರ ಮೇಲೆ ಪತ್ರಿಕಾಗೋಷ್ಟಿ ನಡೆಸಿ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರಲು ಯತ್ನಿಸಿರುವುದು ಖಂಡನೀಯ.ಇಂತವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಎಚ್ಚರಿಸಿದರು.ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.ವಕ್ಫ್ ನಿಯಮದಡಿ ನಿರಂತರ ಮೂರು ಬಾರಿ ಸಮಿತಿ ಸಭೆಗೆ ಹಾಜರಾಗದೆ ದರ್ಗಾ ಸಮಿತಿಯ ಸದಸ್ಯತನವನ್ನ ಕಳಕೊಂಡವರೇ ಪತ್ರಿಕಾಗೋಷ್ಟಿ ಕರೆದು ಅಪಪ್ರಚಾರ ನಡೆಸಿದ್ದಾರೆ.ದರ್ಗಾ ಸಮಿತಿಯಿಂದ ಅವ್ಯವಹಾರ ನಡೆದಿದೆಯೆಂದು ಜಿಲ್ಲಾ ,ರಾಜ್ಯ ವಕ್ಫ್ ಬೋರ್ಡ್,ಹೈಕೋರ್ಟಿಗೂ ಅವರು ದೂರು ನೀಡಿದ್ದಾರೆ.ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಪತ್ರಿಕಾಗೋಷ್ಟಿ ನಡೆಸುವ ಅವಶ್ಯಕತೆ ಇದೆಯೇ..?ಇತಿಹಾಸ ಪ್ರಸಿದ್ಧ ದರ್ಗಾ ಆಡಳಿತ ಸಮಿತಿಯ ಪಾರದರ್ಶಕತೆಗೆ ಕಪ್ಪು ಚುಕ್ಕೆ ತರುವುದೇ ಇದರ ಉದ್ದೇಶವಾಗಿದೆ.ಸಮಿತಿಯು ಮಹಾಸಭೆ…

Read More