Author: UllalaVani

Kannada News From Coastal Karnataka

ಉಳ್ಳಾಲ ನಗರ ಸಭೆಯಲ್ಲಿ ಸತತವಾಗಿ ದಾಖಲೆ 6 ಬಾರಿ ಸದಸ್ಯರಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಗುರುತಿಸಿ 2025-26ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದ ಹಾಲಿ ಸದಸ್ಯ ಮೊಹಮ್ಮದ್ ಮುಕ್ಕಚೇರಿ ಯವರು ಅನಾರೋಗ್ಯಕ್ಕಾಗಿ ಕಣಚೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರಿಗೆ ಜಿಲ್ಲಾಡಳಿತದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯ ಆಗಿರಲಿಲ್ಲ .ಇದೀಗ ಜಿಲ್ಲಾಧಿಕಾರಿ ಗಳ ಪ್ರತಿನಿಧಿಯಾಗಿ ಸಹಾಯಕ ಜಿಲ್ಲಾಧಿಕಾರಿ ಯವರು ಇಂದು ಕಣಚೂರ್ ಆಸ್ಪತ್ರೆಗೆ ಭೇಟಿ ಮೊಹಮ್ಮದ್ ಮುಕ್ಕಚೇರಿ ಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರಿಗೆ ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಮೊಹಮ್ಮದ್ ಮುಕ್ಕಚೇರಿ ರನ್ನು ಶಾಲು ಹೊದಿಸಿ ಆಕರ್ಷಕ _ನಗದು ಬಹುಮಾನದೊಂದಿಗೆ ಸನ್ಮಾನಿಸಿ ಶೀಘ್ರ ಆರೋಗ್ಯ ಚೇತರಿಸಿ ಕೊಳ್ಳಲು ಹಾರೈಸಿತು . ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷ ರಮೇಶ್‌ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಸಿಟಿ ಕಾಂಗ್ರೆಸ್‌ ಅಧ್ಯಕ್ಷ ಮುಸ್ತಫ ಅಬ್ದುಲ್ಲಾ,ಬ್ಲಾಕ್…

Read More

ನೀರು ವ್ಯತ್ಯಯದಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು ಪನ್ನೀರ್, ಮುಳಿಹಿತ್ತು ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್‌ ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕದ ಮುಂತಾದ ಭಾಗದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ರೇಚಕ ಸ್ಥಾವರದಿಂದ ಸಂಪರ್ಕಿಸುವ 1100 ಮಿಮೀ ವ್ಯಾಸದ ಮುಖ್ಯ ಕೊಳವೆ ಅಡ್ಯಾರ್ ಕಣ್ಣೂರಿನಲ್ಲಿ ಒಡೆದು ಹೋಗಿದೆ. ಖಾಸಗಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ನೀರಿನ ಪೈಪ್ ಮೇಲೆ ಮಣ್ಣು ತುಂಬಿದ್ದರಿಂದ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಬಾರಿ ಎನ್ನಾರ್ಸಿ ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ ಮಣ್ಣು ಹಾಕಲಾಗಿದೆ. ತುಂಬೆಯಿಂದ ನೀರು ಪೂರೈಸುವ ಕೊಳವೆಯ…

Read More

ಪಜೀರು: ಬ್ಯಾನರ್ ಅಳವಡಿಕೆ ಕೆಲಸ ನಿರ್ವಹಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸುರತ್ಕಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪಜೀರು ಗ್ರಾಮದ ಭಾಸ್ಕರ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ನ.11 ರಂದು ಸುರತ್ಕಲ್‌ನಲ್ಲಿ ತನ್ನ ವೃತ್ತಿಯಾದ ಬ್ಯಾನರ್ ಅಳವಡಿಕೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಮಾರಣಾಂತಿಕವಾಗಿ ಗಾಯವಾಗಿತ್ತು. ಕೂಡಲೇ ಹತ್ತಿರದ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ತಲೆಯ ಭಾಗಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಭಾಸ್ಕರ್ ಪುಜಾರಿ ಕಡು ಬಡತನದ ಕುಟುಂಬದವರಾಗಿದ್ದು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಚಿಕ್ಕ ಪ್ರಾಯದಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ತನ್ನ ಸ್ವಂತ ಪರಿಶ್ರಮದಿಂದ ತನ್ನ ಮೂರು ಸಹೋದರಿಯರಿಗೆ ಮದುವೆ ಮಾಡಿ, ಕಳೆದ 5 ತಿಂಗಳ ಹಿಂದೆ ತೀರಾ ಬಡ ಕುಟುಂಬದ ಹುಡುಗಿಯನ್ನು ವಿವಾಹವಾಗಿರುತ್ತಾರೆ.ಕಳೆದ ಒಂದು ವಾರದಲ್ಲಿ ಚಿಕಿತ್ಸಾ ವೆಚ್ಚ ಸುಮಾರು 7 ಲಕ್ಷದಷ್ಟು ಆಗಿರುತ್ತದೆ. ತೀರಾ ಗಂಭೀರ ಪರಿಸ್ಥಿತಿಯ ಕಾರಣ…

Read More

ಮಂಗಳೂರು,ನ.19: ಮಂಗಳೂರು, ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್‌ನ 26ನೆ ವಾರ್ಷಿಕ ಹಾಗೂ 3ದಿವಸಗಳ ಧಾರ್ಮಿಕ ಪ್ರವಚನವು ನವಂಬರ್ .28ರಿಂದ 30ರವರೆಗೆ ರಾತ್ರಿ 8:00ಕ್ಕೆ ಮಸೀದಿಯ ಅಧ್ಯಕ್ಷ ಕೆ,ಪಿ,ಹುಸೈನ್ ಸಅದಿ ಕೆ ಸಿ ರೋಡ್ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಸೈಯದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೂಸಿ ನೇತೃತ್ವವಹಿಸುವ ಕಾರ್ಯಕ್ರಮದಲ್ಲಿ ಅಲ್ ಹಿದಾಯ ಜುಮಾ ಮಸ್ಜಿದ್ ಖತೀಬ್ ಬಹು ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಮುಖ್ಯಬಾಷಣ ಮಾಡಲಿದ್ದಾರೆ.ನವೆಂಬರ್ 29 ರಂದು ಬಹು ಅಬ್ದುರ್ರಶಿದ್ ಸಖಾಫಿ ಖಾಮಿಲ್ ತಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಹು ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಬಾಷಣ ಮಾಡಲಿದ್ದು, ನ.30 ರಂದು ನಡೆಯುವ ಬೃಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಇಬ್ರಾಹಿಮ್ ಫೈಝಿ ಖತೀಬ್ 407 ಜುಮಾ ಮಸ್ಜಿದ್ ಉಚ್ಚಿಲ ನೆರವೇರಿಸಲಿದ್ದಾರೆ. ಸ್ವಲಾತ್ ನೇತೃತ್ವವನ್ನು ಹಾಗೂ ಇದೇ ವೇಳೆ ಭಾಷಣವನ್ನುಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಶ್ವಾಸಕೋಶ ಸಂಬಂಧಿತ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

Read More

ಮಂಗಳೂರು, ನ. 18 : ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ವಾಟ್ಸಾಪ್ ಸಂಖ್ಯೆಯನ್ನು ನವೆಂಬರ್ 17ರ ಮಧ್ಯಾಹ್ನ ಹ್ಯಾಕ್ ಮಾಡಲಾಗಿದೆ. ವಂಚಕರು ಅವರ ಪ್ರೊಫೈಲ್ ಬಳಸಿಕೊಂಡು ಹಲವಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾವಾ ಅವರಿಗೆ ಪರಿಚಯವಿರುವ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಇತರರಿಗೆ ಅವರ ಸಂಖ್ಯೆಯಿಂದ ತುರ್ತು ಆರ್ಥಿಕ ಸಹಾಯಕ್ಕಾಗಿ ಸಂದೇಶಗಳನ್ನು ಕಳುಸಲಾಗಿದೆ. ಹ್ಯಾಕರ್‌ಗಳು “ನನಗೆ ನಿಮ್ಮ ಸಹಾಯ ಬೇಕು” ಎಂಬ ಸಂದೇಶವನ್ನು ಕಳುಹಿಸಿದ್ದಾರೆ.”ಏನಾಯಿತು, ಬಾವಾ?” ಎಂದು ಕೆಲವರು ಪ್ರತಿಕ್ರಿಯಿಸಿದಾಗ, ಹ್ಯಾಕರ್‌ಗಳು ಇಂಗ್ಲಿಷ್‌ನಲ್ಲಿ ವಿಸ್ತೃತ ಕಥೆಗಳನ್ನು ಕಳುಹಿಸಿ, ನಂತರ ಬೇರೊಂದು ಯುಪಿಐ ಐಡಿಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಹಣ ಪಾವತಿಸಿದ ನಂತರ ಅದರ ಸ್ಕ್ರೀನ್‌ಶಾಟ್ ಕಳುಹಿಸುವಂತೆ ಸಹ ಅವರು ಬೇಡಿಕೆ ಇಟ್ಟಿದ್ದಾರೆ.ಬಾವಾ ಅವರ ನಂಬರ್ ನಿಂದ ಸಂದೇಶಗಳನ್ನು ಸ್ವೀಕರಿಸಿದ ಕೆಲವರು ನೇರವಾಗಿ ಬಾವಾ ಅವರಿಗೆ ಕರೆ ಮಾಡಿ ಸತ್ಯವನ್ನು ಪರಿಶೀಲಿಸಿದ್ದಾರೆ. ಈ ವಿಚಾರ ತಿಳಿದು ದಿಗ್ಭ್ರಮೆಗೊಂಡ ಮಾಜಿ ಶಾಸಕರು, ತಮ್ಮ ವಾಟ್ಸಾಪ್ ಸಂಖ್ಯೆ ನಿಜವಾಗಿಯೂ ಹ್ಯಾಕ್ ಆಗಿರುವುದು…

Read More

ಕಾಂಗೋ, ನ. 18 : ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ತಾಮ್ರದ ಗಣಿ ಬಳಿ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ನೂರಾರು ಗಣಿಗಾರರು ಕೆಲಸ ಮಾಡುವ ಲುವಾಲಾಬಾ ಪ್ರಾಂತ್ಯದ ಕಲಾಂಡೋ ಗಣಿಗಾರಿಕೆ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಆ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಹಿಂಸಾಚಾರಕ್ಕೆ ಹೆದರಿ, ಜನರು ಸ್ಥಳದಿಂದ ಹೊರಬರಲು ಸಾಮಾನ್ಯವಾಗಿ ಬಳಸಲಾಗುವ ಕಿರಿದಾದ ಸೇತುವೆಯತ್ತ ಧಾವಿಸಿದರು. ಓಡಿಹೋಗುತ್ತಿದ್ದ ಜನಸಮೂಹದ ಹಠಾತ್ ಒತ್ತಡದಿಂದ ಸೇತುವೆ ಕುಸಿದುಬಿದ್ದಿತ್ತು. 20 ಕ್ಕೂ ಹೆಚ್ಚು ಗಣಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ

Read More

ಬೆಂಗಳೂರು ;ಬೆಂಗಳೂರು ನಗರದ 57 ವರ್ಷದ ಮಹಿಳೆಯನ್ನು ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು 31.83 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡಡಿಜಿಟಲ್ ಅರೆಸ್ಟ್’ ಪ್ರಕರಣ ಇದಾಗಿದೆ. ಇಂದಿರಾನಗರ ನಿವಾಸಿಯಾಗಿರುವ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೂರ್ವ ಸೈಬರ್ ಕ್ರೆöÊಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಐ.ಟಿ.ಕ್ಷೇತ್ರದ ಹಿರಿಯ ಉದ್ಯೋಗಿಯಾಗಿರುವ ಸಂತ್ರಸ್ತೆಗೆ 2024ರ ಸೆಪ್ಟೆಂಬರ್ 15ರಮದು ಕರೆ ಮಾಡಿದ ವ್ಯಕ್ತಿ, ತಾನು ಡಿಎಚ್‌ಎಲ್ ಕೊರಿಯರ್ ಸರ್ವೀಸ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Read More

ಉಡುಪಿ, ನ. 18 : ಮಲ್ಪೆ ಹನುಮಾನ್ ನಗರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ ಹಂಚಿಕೆ ಮಾಡಿರುವ ಸರ್ಕಾರಿ ಭೂಮಿಯ ಗುತ್ತಿಗೆ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಮನವಿ ಸಲ್ಲಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರ ಮೂಲಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಈ ಮನವಿಯನ್ನು ಸಲ್ಲಿಸಲಾಯಿತು.ಈ ವರ್ಷದ ಏಪ್ರಿಲ್‌ನಲ್ಲಿ ಕರ್ನಾಟಕ ಜಲಮಾರ್ಗಗಳ ಮಂಡಳಿಯು, ಮಲ್ಪೆಯ ಸೀ ವಾಕ್ ಪ್ರದೇಶ ಮತ್ತು ಹನುಮಾನ್ ಭಜನಾ ಮಂದಿರದ ಬಳಿಯಿರುವ ಸುಮಾರು ೮ ಎಕರೆ ಸರ್ಕಾರಿ ಭೂಮಿಯನ್ನು 15 ವರ್ಷಗಳ ಅವಧಿಗೆ ಮಹಾಮಂಡಳಿಗೆ ಗುತ್ತಿಗೆ ನೀಡಿತ್ತು.ಈ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಕರಾವಳಿ ಭೂಮಿಯನ್ನು ಮೀನುಗಾರಿಕಾ ಫೆಡರೇಷನ್‌ಗೆ ಗುತ್ತಿಗೆ ನೀಡುವುದರಿಂದ ಮುಂಬರುವ ದಿನಗಳಲ್ಲಿ ಸ್ಥಳೀಯ ಮೀನುಗಾರರಿಗೆ, ಭಜನಾ ಮಂದಿರದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಬ್ಲಾಕ್…

Read More

ಭಾರತದಲ್ಲಿ 2026 ರ ಮಾರ್ಚ್ ತಿಂಗಳೊಳಗೆ ನಕ್ಸಲ್ ಸಮಸ್ಯೆ ನಿವಾರಣೆ ಮಾಡಬೇಕೆಂಬ ಗುರಿಯನ್ನು ಕೇಂದ್ರ ಗೃಹ ಇಲಾಖೆ ಹಾಕಿಕೊಂಡಿದೆ. ಮತ್ತೊಬ್ಬ ನಕ್ಸಲ್ ಕಮ್ಯಾಂಡರ್ ಮದ್ವಿ ಹಿಡ್ಮಾನನ್ನು ಭದ್ರತಾ ಪಡೆಗಳು ಹತ್ಯೆಗೈದ್ದಿವೆ. ಈತನ ತಲೆಗೆ ಪೊಲೀಸರು 50 ಲಕ್ಷ ಬಹುಮಾನ ಘೋಷಿಸಿದ್ದರು. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ  ಮಾವೋವಾದಿ ಕಮ್ಯಾಂಡರ್ ಮದ್ವಿ ಹಿಡ್ಮಾ ನನ್ನು ಗುಂಡಿಕ್ಕಿ  ಕೊಂದಿವೆ. ಇಂದು ಆರು ಮಂದಿ ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ಇದರಲ್ಲಿ ಮದ್ವಿ ಹಿಡ್ಮಾ ಪತ್ನಿ ಕೂಡ ಸೇರಿದ್ದಾರೆ. ಮದ್ವಿ ಹಿಡ್ಮಾ , ಭಾರತದ ಭದ್ರತಾ ಪಡೆಗಳ ವಿರುದ್ಧ 26 ಸಶಸ್ತ್ರ ದಾಳಿಯನ್ನ ನಡೆಸಿದ್ದ ಉನ್ನತ ಮಾವೋವಾದಿ ನಕ್ಸಲ್ ನಾಯಕನಾಗಿದ್ದ.  ಮದ್ವಿ ಹಿಡ್ಮಾ ಬಗ್ಗೆ ಮಾಹಿತಿಗಾಗಿ ಭದ್ರತಾ ಪಡೆಗಳು 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು.  ಮದ್ವಿ ಹಿಡ್ಮಾ ನೇತೃತ್ವದಲ್ಲಿ ನಕ್ಸಲರು 2010ರ ದಾಂತೇವಾಡ ದಾಳಿ ಮತ್ತು 2013ರ ಜೀರಂ ಕಣಿವೆಯ ದಾಳಿಗಳನ್ನು ನಡೆಸಿದ್ದರು . 2021ರ ಸುಕ್ಮಾ-…

Read More