ಬಂಟ್ವಾಳ : ಬುಧವಾರ ಸಂಜೆ ಬಿ.ಸಿ.ರೋಡ್‌ನಲ್ಲಿ ಮಹಿಳೆಯೊಬ್ಬರು ಪತಿಯ ಜವಳಿ ಅಂಗಡಿಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಜ್ಯೋತಿ ಸೋಮಯಾಜಿ ಬುರ್ಖಾ ಧರಿಸಿ ಸೋಮಯಾಜಿ ಜವಳಿ ಅಂಗಡಿಗೆ ಬಂದು ನೇರವಾಗಿ ಕ್ಯಾಶ್ ಕೌಂಟರ್‌ಗೆ ನಡೆದುಕೊಂಡು ಹೋಗಿದ್ದಾರೆ, ಅಲ್ಲಿ ಅವರ ಪತಿ ಕೃಷ್ಣ ಕುಮಾರ್ ಸೋಮಯಾಜಿ ಕುಳಿತಿದ್ದರು. ನಂತರ ಅವರು ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೃಷ್ಣ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು . ದಂಪತಿಗಳು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಜ್ಯೋತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Author: UllalaVani
ಮಂಗಳೂರು : ಸುರತ್ಕಲ್, ಕಾಟಿಪಳ್ಳ ಮತ್ತು ಕೃಷ್ಣಾಪುರ ಪ್ರದೇಶಗಳಲ್ಲಿ ಅದೃಷ್ಟ ಯೋಜನೆಗಳ ಹಾವಳಿ ತೀವ್ರಗೊಂಡಿದ್ದು, ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಹಲವಾರು ಸ್ಕೀಮ್ ಮಾಡಿದ ಖದೀಮರು ಈಗಾಗಲೇ ಪರಾರಿಯಾಗಿವೆ. ಈ ಪಟ್ಟಿಗೆ ಸೇರ್ಪಡೆಯಾಗಿ, ಶುಕ್ರವಾರ ಬೆಳಿಗ್ಗೆ ಗ್ರಾಹಕರು ಕಂಪನಿಯು ತಮ್ಮ ಹಣವನ್ನು ಹಿಂದಿರುಗಿಸಲು ವಿಫಲವಾಗಿದೆ ಎಂದು ಆರೋಪದ ಹಿನ್ನೆಲೆ ಬಿಎಂಆರ್ ಗ್ರೂಪ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದು ಗ್ರಾಹಕರ ಪ್ರಕಾರ, ಬಿಎಂಆರ್‌ನ ದಾವೂದ್ ಹಕೀಮ್ ಈ ಹಿಂದೆ ತಮ್ಮ ಹಣವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದ್ದರು, ಆದರೆ ಇಲ್ಲಿಯವರೆಗೆ ಯಾವುದೇ ಮರುಪಾವತಿ ಮಾಡಲಾಗಿಲ್ಲ. ಕೋಟಿಗಟ್ಟಲೆ ಹಣ ನೀಡದೆ ಮೋಸ ಎಸಗಲು ಯತ್ನಿಸಿದ್ದಾರೆಂದು ತಿಳಿದ ಹ್ರಹಕರು ನಿರಾಶೆಗೊಂಡ ಕಚೇರಿಗೆ ದಾಳಿ ಮಾಡಿದ್ದಾರೆ. ಸುರತ್ಕಲ್ ಪೊಲೀಸರು ಬಿಎಂಆರ್ ಮುಖ್ಯಸ್ಥರನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯಿದಿದ್ದು ಈ ಹಿಂದೆ ಹಲವಾರು ಅದೃಷ್ಟಶಾಲಿ ಯೋಜನೆ ನಿರ್ವಾಹಕರು ಸಾರ್ವಜನಿಕ ಹಣದಿಂದ ಕಣ್ಮರೆಯಾಗಿದ್ದರೂ, ಜನರು ಇಂತಹ ಯೋಜನೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಆಕರ್ಷಕ ಕೊಡುಗೆಗಳನ್ನು ಬಳಸಿಕೊಂಡು…
ಚಿಕ್ಕಮಗಳೂರು ; ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಮಾಣಿಕ್ಯಧಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 2, 3 ಹಾಗೂ 4ರಂದು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ.ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 5ರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಭಾಗ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಬಂಟ್ವಾಳ; ಇಂಜಿನಿಯರಿ0ಗ್ ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಕಾವಳಕಟ್ಟೆ ಸಮೀಪದ ಎನ್.ಸಿ.ರೋಡ್ ಬಳಿ ಸಂಭವಿಸಿದೆ. ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ 21 ವರ್ಷದ ಅನನ್ಯ ಮೃತ ಪಟ್ಟ ವಿದ್ಯಾರ್ಥಿನಿಯಾಗಿದ್ದಾರೆ. ಗುರುವಾಯನಕೆರೆ ನಿವಾಸಿ ಪೃಥ್ವಿ ರಾವ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು; ನಿರoತರ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡವೊoದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಹೌದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸರಿಗಮ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಂಗೀತ ಲೋಕದ ಗಾಯಕ ದಿ.ಕಿಶೋರ್ ಕುಮಾರ್ ಅವರ ಗೌರವಾರ್ಥವಾಗಿ ಮಂಗಳೂರು ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಡಿ ವೈ ಎಸ್ ಪಿ ಮಹೇಶ್ ಕುಮಾರ್ ಚಾಲನೆ ನೀಡಿದರು. ಮಹಾ ಸಂಗೀತ ಸಂಭ್ರಮದಲ್ಲಿ ನೂರಮೂವತ್ತಕ್ಕೂ ಹೆಚ್ಚು ಹಾಡುಗಾರರು ಭಾಗಿಯಾಗಿದ್ದು, ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು. ದಾಖಲೆ ಪೂರೈಸಿದ ಷೋಡಶಿ…
ಎಂಸಿಸಿ ಬ್ಯಾಂಕ್ ತನ್ನ ಅರ್ಧ ವಾರ್ಷಿಕ ಕಾರ್ಯಕ್ಷಮತೆ ವಿಮರ್ಶೆ ಮತ್ತು ಸೈಬರ್ ಭದ್ರತಾ ಜಾಗೃತಿ ಕಾರ್ಯಕ್ರಮವನ್ನು “ಸೈಬರ್ ಸೇಫ್ ಬ್ಯಾಂಕ್” ಎಂಬ ಶೀರ್ಷಿಕೆಯೊಂದಿಗೆ ನವೆಂಬರ್ 8, 2025 ರಂದು ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಸಿತು. ಬ್ಯಾಂಕಿನ ಅಧ್ಯಕ್ಷರಾದ ‘ಸಹಕಾರ ರತ್ನ’ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೋಂದೆಲ್‌ನ ಸೇಂಟ್ ಲಾರೆನ್ಸ್ ಚರ್ಚಿನ ಧರ್ಮಗುರು ವಂದನೀಯ ಫಾ| ಆಂಡ್ರ‍್ಯೂ ಲಿಯೋ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. Principal Investigator & Cyber Security Expert ಡಾ| ಅನಂತ್ ಪ್ರಭು, ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವೇದಿಕೆಯಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷೀಯ ಭಾಷಣದಲ್ಲಿ, ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ತಮ್ಮ ಸಮರ್ಪಿತ ಪ್ರಯತ್ನಗಳಿಂದ ಗುರಿಗಳನ್ನು ಸಾಧಿಸಿದ ಬ್ಯಾಂಕಿನ ಶಾಖಾ ಸಿಬ್ಬಂದಿಗಳನ್ನು ಅಭಿನಂದಿಸಿದರು. ಬ್ಯಾಂಕಿನ ಪ್ರಗತಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿ ನಿರಂತರ ಬೆಳವಣಿಗೆಯನ್ನು ಸಾಧಿಸಲು ಗಮನ…
20 ನೇ ಕನ್ನಡ ರಾಜ್ಯೋತ್ಸವವನ್ನು, ಬ್ಯಾಂಕ್ ಆಫ್ ಬರೋಡಾ ವಲಯ ಕಛೇರಿ, ಮಂಗಳೂರಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ವಲಯ ಕಛೇರಿಯ ಮಹಾಪ್ರಬಂಧಕರಾದ ರಾಜೇಶ್ ಖನ್ನಾರವರು ಹಾಗೂ ಉಪಾಧ್ಯಕ್ಷರಾಗಿ ವಲಯ ಕಚೇರಿಯ ಉಪಮಹಾಪ್ರಬಂಧಕರಾದ ರಮೇಶ್ ಕನ್ನಾಡೆ ರವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವಸಂತ್ ಕುಮಾರ್ ಪೆರ್ಲರವರು ಹಾಗೂ ಹರೇಕಳ ಹಾಜಬ್ಬರವರು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಕವಿ, ಸಾಹಿತಿ ವಿದ್ವಾಂಸರು, ಸಾಹಿತ್ಯ ಸಂಘಟಕರು ಹಾಗೂ ಮಂಗಳೂರು ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ. ವಸಂತ್ ಕುಮಾರ್ ಪೆರ್ಲರವರು ಕರ್ನಾಟಕದ ಇತಿಹಾಸವನ್ನು ಚೊಕ್ಕವಾಗಿ ಪ್ರಸ್ತಾಪಿಸಿದರು. ಅವರು ಆಂಗ್ಲ ಭಾಷೆಯನ್ನು ಹೋಲಿಸಿದರೆ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ಆದ್ದರಿಂದ ಕನ್ನಡವನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಎಲ್ಲರಿಗೂ ಮನವಿ ಮಾಡಿದರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಬ್ಬರವರು ಬೆಳೆದುಬಂದ ಮಾರ್ಗ, ಅವರು ಎದುರಿಸಿದ ಸವಾಲಿನ ಬಗ್ಗೆ ಸಭೆಯೊಂದಿಗೆ ಹಂಚಿಕೊಂಡರು. ಅವರು ತಮ್ಮ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಾಟದಿಂದ ಬಂದ ಹಣದ ಜೊತೆಗೆ ದಾನದ ಮೂಲಕ ಧನ ಸಂಗ್ರಹಿಸಿ…
ಮಂಗಳೂರು; “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವನ್ನು 2025ರ ನವೆಂಬರ್ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ CODP®️ ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ – ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಹಾಗೂ CODP ಲಿಂಗ ಸಮಾನತೆ ಮತ್ತು ನ್ಯಾಯ ಬಾಹ್ಯ ತಂಡದ ಮುಖ್ಯಸ್ಥರು ಮತ್ತು ದಕ್ಷಿಣ ಕೆನರಾ ಕ್ಯಾಥೊಲಿಕ್ ಅಸೋಸಿಯೇಶನ್‌ನ ಉಪಾಧ್ಯಕ್ಷರು, ಕು. ಮರ್ಲಿನ್ ಮಾರ್ಟಿಸ್ – ನಿರ್ದೇಶಕಿ, ಡೀಡ್ಸ್ ಸೋಷಿಯಲ್ ಸರ್ವಿಸ್; ಶ್ರೀಮತಿ ಸೀಮಾ – ಕಾರ್ಯದರ್ಶಿ, ಮಾನಿನಿ ರಾಜ್ಯ ಮಹಿಳಾ ಮಹಾಸಂಘ ಹಾಗೂ ರೆ। ವಿನ್ಸೆಂಟ್ ಡಿಸೋಜಾ – ನಿರ್ದೇಶಕರು, CODP ಇವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾದ ಮರ್ಲಿನ್ ಮಾರ್ಟಿಸ್ ಅವರು ಲಿಂಗ ಸಮಾನತೆ ಮತ್ತು ನ್ಯಾಯದ ಮಹತ್ವವನ್ನು…
ಮಂಗಳೂರು; ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿ – ರಚನಾದ 26ನೇ ಸಾಮಾನ್ಯ ಸಭೆ ಬೆಂದೂರ್ ಹಾಲ್‌ನಲ್ಲಿ ನಡೆಯಿತು. ಕಥೊಲಿಕ್ ಮುಖಂಡ ಮತ್ತು ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಂಸ್ಥೆಯ ನೇತೃತ್ವದಲ್ಲಿ ಇದು ಒಂದು ಪ್ರಮುಖ ಬದಲಾವಣೆ ಆಗಿದ್ದು, ಕ್ಯಾಥೋಲಿಕ್ ಸಮುದಾಯದ ಉದ್ಯಮಶೀಲತೆ ಮತ್ತು ವೃತ್ತಿ ಅಭಿವೃದ್ಧಿಗೆ ಸಮರ್ಪಿತವಾದ ಈ ಪ್ರಮುಖ ಸಂಘಟನೆಯ ಮುಂದಿನ ದಾರಿಗೆ ಇದು ಮಹತ್ವದ್ದಾಗಿದೆ. ಪ್ರಾದೇಶಿಕ ವಾಣಿಜ್ಯ ವಲಯದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರುವ ಕ್ಯಾಸ್ತೆಲಿನೊ ಅವರು ತಮ್ಮ ಅಪಾರ ಅನುಭವ ಮತ್ತು ದೃಢ ನಾಯಕತ್ವದ ದಾಖಲೆಯೊಂದಿಗೆ ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.ಸಭೆಯಲ್ಲಿ ಇತರ ಹುದ್ದೆಗಾರರನ್ನೂ ಆಯ್ಕೆ ಮಾಡಲಾಯಿತು. ಲೆಸ್ಲಿ ರೇಗೊ ಉಪಾಧ್ಯಕ್ಷರಾಗಿ, ಎಲ್ರೊನ್ ರೊಡ್ರಿಗಸ್ ಕಾರ್ಯದರ್ಶಿಯಾಗಿ, ಜೇಮ್ಸ್ ಜೆ. ಮಾಡ್ತಾ ಸಂಯುಕ್ತ ಕಾರ್ಯದರ್ಶಿಯಾಗಿ ಮತ್ತು ನವೀನ್ ಲೋಬೊ ಖಜಾಂಚಿಯಾಗಿ ಆಯ್ಕೆಯಾದರು. ಇದರಂತೆಯೇ, ಆಡಳಿತ ಮಂಡಳಿಗೆ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೊಮ್ಸ್, ಸ್ಟ್ಯಾನಿ ಅಲ್ವಾರಿಸ್, ವಿಲಿಯಂ ಡಿಸೋಜಾ, ನೆಲ್ಸನ್ ಮೊಂತೇರೊ ಮತ್ತು…
ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ ತನ್ನ ಸಾಹಿತ್ಯದ ಸಹ ಸಂಸ್ಥೆ ಅಕಾಡೆಮಿ ಮಿಟಾಕಣ್ ಮೂಲಕ ಸಾಹಿತ್ಯದ ಬಗ್ಗೆ ಒಲವು ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. 2025 ಡಿಸೆಂಬರ್ 07 ರಂದು ಭಾನುವಾರ ಮುಂಜಾನೆ 8.45 ರಿಂದ ಸಂಜೆ 4.00 ಗಂಟೆ ತನಕ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ ಮೈದಾನದಲ್ಲಿ ಈ ಸಮ್ಮೇಳನ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಸಮ್ಮೇಳನದ ಮೆರವಣಿಗೆಯನ್ನು ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ವಂ. ಪ್ರಶಾಂತ್ ಮಾಡ್ತಾ ವಹಿಸಲಿರುವರು. 9 ನೇ ತರಗತಿಯ ವಿದ್ಯಾರ್ಥಿನಿ ಸಂಜನಾ ರಿವಾ ಮತಾಯಸ್ ಆಶಯ ಭಾಷಣವನ್ನು ಮಾಡಲಿರುವರು. ʻಮಕ್ಕಳ ಸಾಹಿತ್ಯದ ಭವಿಷ್ಯʼ ಎಂಬ ವಿಷಯದ ಮೇಲೆ ವಿಚಾರ ಗೋಷ್ಟಿ ನಡೆಯಲಿದೆ. ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆದ ಶಿಕ್ಷಕತ್ರಯರಾದ ಆಲ್ವಿನ್ ದಾಂತಿ, ಪೆರ್ನಾಲ್, (ಅಧ್ಯಕ್ಷತೆ), ಫೆಲ್ಸಿ ಲೋಬೊ ದೇರೆಬೈಲ್ (ಅಜ್ಜಿಕತೆಗಳು ಹಾಗೂ…

