ಮಂಗಳೂರು: ಶಾರದಾ ಅಕಾಡ್‌ಎಕ್ಸ್ಪೋ 2025ರ ಸ್ಪರ್ಧೆಯಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನÀದ ಹೈಸ್ಕೂಲ್ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಗಳಿಸಿಕೊಂಡಿದ್ದಾರೆ. ನ.15ರಂದು ಕೋಡಿಯಾಲ್‌ಬೈಲ್‌ನಲ್ಲಿರುವ ಭುವನರಾಜ ಸಭಾಂಗಣದಲ್ಲಿ ಶಾರದಾ ಪಿಯು ಕಾಲೇಜು ಆಯೋಜಿಸಿದ್ದಹೈಸ್ಕೂಲ್ ವಿದ್ಯಾರ್ಥಿಗಳ ಅಂತರ್ ಶಾಲಾ ಸ್ಪರ್ಧೆಯಾದ ಶಾರದಾ ಅಕಾಡ್‌ಎಕ್ಸ್ಪೋ 2025ರಲ್ಲಿ ಒಟ್ಟು ಚಾಂಪಿಯನ್‌ಶಿಪ್‌ನ್ನು ಪಡೆದುಕೊಳ್ಳುವ ಮೂಲಕ ಶಾರದಾ ವಿದ್ಯಾನಿಕೇತನ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಶಾರದಾ ಅಕಾಡ್‌ಎಕ್ಸ್ಪೋ -2025ರ ಫಲಿತಾಂಶಗಳು ಹೀಗಿವೆ. ಡಂಬ್ ಶೆರೇಡ್ಸ್ ಸ್ಪರ್ಧೆಯಲ್ಲಿ ಸೋಹನ್ ರಾಜ್, ಆರ್ಯನ್, ಧರ್ಮಿಕ್- ಪ್ರಥಮ ಸ್ಥಾನ ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ವಿಶ್ರುತ್, ಅಕ್ಷಜ್ -ಪ್ರಥಮ ಸ್ಥಾನ ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ರಿತೇಶ್, ಜೈವಲ್- ದ್ವಿತೀಯ ಸ್ಥಾನ ಸೈನ್ಸ್ ಮಾದರಿ ಸ್ಪರ್ಧೆಯಲ್ಲಿ ದೈವಿಕ್ ಮತ್ತು ಮಹಿತ್- ಪ್ರಥಮ ಸ್ಥಾನ ಕ್ವಿಜ್ ಇಂಟೆಲಿಜೆನ್ಸಿಯಾ ಸ್ಪರ್ಧೆಯಲ್ಲಿ ಶ್ರೀಶರಣ್ ಮತ್ತು ಪ್ರಯಾಗ್ -ದ್ವಿತೀಯ ಸ್ಥಾನ ಗುಂಪು ಗಾನ ಸ್ಪರ್ಧೆಯಲ್ಲಿ ಅಶ್ಲೇಶ್, ಪ್ರಯಾಗ್, ಶ್ರಾವ್ಯ, ಶ್ರೀಧಾ, ಶಾರಣ್ಯ, ಸ್ನೇಹಾ ಭಟ್, ಪಾವನಿ, ನಿವೇದ್ಯ- -ದ್ವಿತೀಯ ಸ್ಥಾನರೀಲ್ ಮೇಕಿಂಗ್ ಸ್ಪರ್ಧೆಯಲ್ಲಿ ಮಣ್ವಿತ್, ಯತಿರಾಜ್ -ದ್ವಿತೀಯ ಸ್ಥಾನ…
Author: UllalaVani
ಉಳ್ಳಾಲ: ಕ್ರೈಸ್ತರು ಬೈಬಲ್ ಓದುತ್ತಾರೆ, ಮುಸ್ಲಿಮರು ಕುರಾನ್ ಓದುತ್ತಾರೆ. ಆದರೆ ನಮ್ಮ ಹಿಂದೂ ಮಕ್ಕಳು ಏನು ಓದಬೇಕು? ಅವರಿಗೆ ಮೌಲ್ಯಾಧಾರಿತ ಜ್ಞಾನ ನೀಡುವುದು ಜವಾಬ್ದಾರಿ. ಅದಕ್ಕಾಗಿ ಮಹಾಸಂಗಮದoತಹ ವೇದಿಕೆಗಳು ಜ್ಞಾನ, ಸಂಸ್ಕೃತಿ ಮತ್ತು ಸಮಾಜೋದ್ಧಾರದ ಸಮ್ಮಿಲನವಾಗಬೇಕು ಎಂದು ಕೇರಳ ತಿರುವನಂತಪುರ ಶಿವಗಿರಿ ಮಠ ವರ್ಕಳದ ಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ನಾರಾಯಣ ಗುರುಗಳ ಮತ್ತು ಮಹಾತ್ಮ ಗಾಂಧೀಜಿಯವರ 1924ರ ವರ್ತುಲ ಸಂವಾದದ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಹಣ ಶತಮಾನೋತ್ಸವದ ಅಂಗವಾಗಿ ಡಿ.3 ರಂದು ಕೊಣಾಜೆ ಮೈದಾನದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಯಶಸ್ವಿಗೊಳಿಸುವ ಸಲುವಾಗಿ ಕೊಲ್ಯ ಬಿಲ್ಲವ ಸಭಾಭವನದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಎದ್ದಿರುವ ಕಟ್ಟಡ ಸಮಾಧಾನಕರವಾಗಿಲ್ಲ. ಕನಿಷ್ಠ ಎರಡು ಎಕರೆ ಜಾಗದಲ್ಲಿ ದೊಡ್ಡ ಮಟ್ಟದ, ದೃಷ್ಟಾಂತವಾಗುವAತೆ ಜ್ಞಾನ ಮಂದಿರ. ದೇಗುಲದಂತೆ ಕಾಣುವ ಕಟ್ಟಡ ನಿರ್ಮಾಣವಾಗಬೇಕು. ಈ ಯೋಜನೆಗೆ ಸುಮಾರು 1.4 ಕೋಟಿ ರೂಪಾಯಿ ವೆಚ್ಚ…
ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್, ಫುಲ್ ಡಲ್ ಆಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಶತಕಗಳಿಸಿದ್ದ ಜೈಸ್ವಾಲ್, ರಾಜಸ್ಥಾನ್ ವಿರುದ್ಧ ರಣಜಿ ಟ್ರೋಫಿಯಲ್ಲೂ ಘರ್ಜಿಸಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ಜೈತ್ರಯಾತ್ರೆ ಮುಂದುವರೆಸುತ್ತಿರುವ 24 ವರ್ಷದ ಯಶಸ್ವಿ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಜೈಸ್ವಾಲ್, ತವರಿನಲ್ಲಿ ರನ್ಗಳಿಸೋಕೆ ಪರದಾಡ್ತಿದ್ದಾರೆ. ಅದ್ರಲ್ಲೂ ಎಡಗೈ ವೇಗಿಗಳ ವಿರುದ್ಧ ಜೈಸ್ವಾಲ್ ಪರದಾಡ್ತಿರೋದು ಟೀಮ್ ಮ್ಯಾನೇಜ್ಮೆಂಟ್ಗೆ ದೊಡ್ಡ ಟೆನ್ಶನ್ ಆಗಿದೆ. ಕೊಲ್ಕತ್ತಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್, ಎಡಗೈ ವೇಗಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ರು. ಎರಡನೇ ಇನ್ನಿಂಗ್ಸ್ನಲ್ಲೂ ಜೈಸ್ವಾಲ್, ಯಾನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ, ಔಟಾದ್ರು. ಯಾನ್ಸನ್ ಎಸೆದ ಒಂದೊಂದು ಎಸೆತವವೂ, ಜೈಸ್ವಾಲ್ಗೆ ಬೆಂಕಿ ಚೆಂಡಿನಂತಿತ್ತು. ಎಡಗೈ ವೇಗಿಗಳೇ ಜೈಸ್ವಾಲ್ಗೆ ರಿಯಲ್ ವಿಲನ್ಸ್..! ಯಂಗ್ ಯಶಸ್ವಿ ಜೈಸ್ವಾಲ್ ಟೆಸ್ಟ್…
ಮಂಗಳೂರು: ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಅದನ್ನು ಪರಿಶೀಲಿಸಿ ಮುಂದಿನ 5 ದಿನಗಳೊಳಗಾಗಿ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ತಿಳಿಸಬೇಕು. ಮತ್ತೆ ನಾಯಿಗಳ ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅವಗಳನ್ನು ಸ್ಥಳಾಂತರಿಸುವ ವೆಚ್ಚವನ್ನು ಆಯಾ ಸಂಸ್ಥೆಯಿAದಲೇ ವಸೂಲಿ ಮಾಡಲಾಗುತ್ತದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ವಹಿಸಲಾಗುತ್ತದೆ ಎಂದು ಮಂಗಳೂರು ಮಹಾನಗರ-ಪಾಳಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ : ಇಲ್ಲಿನ ನಗರ ಸಭೆಯ ಸ್ಥಾಯಿ ಸಮಿತಿಯನ್ನು ಸರ್ಕಾರದ ನಿರ್ದೇಶನ ಮೇರೆಗೆ ವಿಸ್ತರಣೆ ಮಾಡಿ ನೂತನ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನಗರ ಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ವಿಸ್ತರಣೆ ಮಾಡಿ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಫೀಲುಗಳ ಸ್ಥಾಯಿಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ,ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸ್ಥಾಯಿಸಮಿತಿ, ಲೆಕ್ಕಪತ್ರಗಳ ಸ್ಥಾಯಿ ಸಮಿತಿಗಳನ್ನು ರಚಿಸಲಾಯಿತು. ತೆರಿಗೆ ನಿರ್ದರಣೆ ಹಣಕಾಸು ಮತ್ತು ಅಫೀಲುಗಳ ಸ್ಥಾಯಿಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಅಶ್ರಫ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಖಲೀಲ್ ಇಬ್ರಾಹಿಂ, ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಭಾರತಿ, ಲೆಕ್ಕಪತ್ರಗಳ ಸ್ಥಾಯಿಸಮಿತಿಯ ಅಧ್ಯಕ್ಷ ರಾಗಿ ವೀಣಾ ಶಾಂತಿ ಡಿಸೋಜ ಅವರನ್ನು ನೇಮಕ ಮಾಡಲಾಗಿದೆ. ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ, ಉಪಾಧ್ಯಕ್ಷ ಸಪ್ನಾ ಹರೀಶ್, ತೆರಿಗೆ ವಿಭಾಗದ ನಿರೀಕ್ಷಕ ಚಂದ್ರ ಹಾಸ್…
ದೇರಳಕಟ್ಟೆ ನ.18: ಫಾರ್ಮಸಿ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಫಾರ್ಮಸ್ಯೂಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಜೀತಾ ಬಿಜು ಅವರಿಗೆ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ. ಇವರು ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ರಿಸರ್ಚ್ ಸೆಂಟರ್, ಮಂಗಳೂರು ಇವರ ಫಾರ್ಮಸ್ಯೂಟಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ‘ಚರ್ಮದ ಫಂಗಲ್ ಸೋಂಕುಗಳಿಗೆ ಚಿಕಿತ್ಸೆ ನೀಡುವ ವಿಧಾನವಾಗಿ ಕಾರ್ಬಮೈಡ್ ಮತ್ತು ಲುಲಿಕೋನಾಜೋಲ್ ನಿಯೋಸೋಮಲ್ ಜೆಲ್’ ವಿಷಯ ಕುರಿತು ಯಶಸ್ವಿ ಸಂಶೋಧನೆ ನಡೆಸಿದ ಹಿನ್ನೆಲೆ ಇವರಿಗೆ ದೇರಳಕಟ್ಟೆಯ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯು 15ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಜೀತಾ ಬಿಜು ಅವರು ಪಿಎಚ್.ಡಿ ಪದವಿಯನ್ನು ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಪ್ರಜೀತಾ ಬಿಜು ಅವರು, ತಮ್ಮ ಸಂಶೋಧನೆಯನ್ನು ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್ ಮತ್ತು ಯೆನೆಪೊಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಶೆಣೈ ಇವರ…
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವ ಘಟನೆ ನ .15ರಂದು ಸಂಜೆ 5 ಗಂಟೆಯ ವೇಳೆ ಮೂಡಬಿದ್ರೆ ತಾಲೂಕು ಹೊಸ್ಮರು-ನೆಲ್ಲಿಕಾರು ಪ್ರದೇಶದಲ್ಲಿ ನಡೆದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಟಾಟಾ ಏಸ್ ಕಂಟೇನರ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವತ್ ಹಾಗೂ ಅಬ್ದುಲ್ ಮೊಹಮ್ಮದ್ ನಿಶಾಂ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್ ವಿರುದ್ಧವೇ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳು ದಾಖಲಾಗಿದ್ದು, ಇದು 30ನೇ ಪ್ರಕರಣ ಎಂದು ತಿಳಿದುಬಂದಿದೆ.ಎರಡನೇ ಆರೋಪಿ ಮೊಹಮ್ಮದ್ ಅಶ್ವತ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಸಂಬಂಧಿತ ಒಂದು ಪ್ರಕರಣ ದಾಖಲಾಗಿದ್ದರೆ, ಮೂರನೇ ಆರೋಪಿ ನಿಶಾಂ ವಿರುದ್ಧ ಇದು ಮೊದಲ ಪ್ರಕರಣವಾಗಿದೆ.ಈ ಬಗ್ಗೆ ಮೂಡಬಿದ್ರೆ ಅಪರಾಧ ಕ್ರಮಾಂಕ 178/2025ರಂತೆಕಲಂ 111(BNS), 11(1)(D) – ಪ್ರಾಣಿ ಹಿಂಸೆ ಪ್ರತಿಬಂಧಕ…
ಬೆಳಗಾವಿ, ನವೆಂಬರ್ 18: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾಲು ಸಾಲು ಸಾವಿನ ಬೆನ್ನಲ್ಲೇ ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿಯೂ ಸಾಂಕ್ರಾಮಿಕ ರೋಗದ ಭೀತಿ ಆರಂಭವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಳ ಪೈಕಿ 31 ಮೃತಪಟ್ಟಿದ್ದು, ಗಳಲೆ ರೋಗದಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸುತ್ತಲಿನ ಗ್ರಾಮದಲ್ಲೂ ಗಳಲೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಸಸ್ಯಾಹಾರದ ಪ್ರಾಣಿಗಳಿಗೂ ಗಳಲೆ ರೋಗ ಹರಡುವ ಸಾಧ್ಯತೆ ಇರುವುದರಿಂದ, ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಗಳಲೆ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆಯೂ ಮನವಿ ಮಾಡಲಾಗಿದೆ. ಮೃತ ಕೃಷ್ಣ ಮೃಗಗಳ ಕಿಡ್ನಿ, ಹಾರ್ಟ್, ಲಿವರ್, ರಕ್ತ ಎಲ್ಲವನ್ನೂ ವೈದ್ಯರು ಈಗಾಗಲೇ ಸ್ಯಾಂಪಲ್ ಪಡೆದಿದ್ದು ಅವನ್ನು ಲ್ಯಾಬ್ಗೆ ಕಳುಹಿಸಿಕೊಡಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಇಂದು ಹೊರಬರಲಿದ್ದು, ಮಧ್ಯಾಹ್ನದ ವೇಳೆಗೆ…
ಬೆಳ್ತಂಗಡಿ, ನ.18: ಸುಮಾರು 18 ಅಡಿ ಎತ್ತರದಿಂದ ಬಿದ್ದು ಗಂಭಿರ ಗಾಯಗೊಂಡಿದ್ದ ಪೈಂಟರ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಉಜಿರೆ ರೆಂಜಾಳ ನಿವಾಸಿ ಪ್ರಮೋದ್ ಗೌ (37) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಋಎ. ಪೈಂಟಿAಗ್ ಕೆಲಸ ಮಾಡುತ್ತಿದ್ದ ಪ್ರಮೋದ್ ಗೌಡ ಒಂದು ತಿಂಗಳ ಹಿಂದೆ ಎತ್ತರದಿಂದ ಬಿದ್ದು, ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ಪುತ್ರಿಯನ್ನು ಆಗಲಿದ್ದಾರೆ.
ಬೆಳ್ತಂಗಡಿ, ನ. 17: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊoದು ಪಲ್ಟಿಯಾಗಿ, 12 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಲಾಯಿಲ ಗ್ರಾಮದ ಕುತ್ರೊಟ್ಟು-ಟಿ.ಬಿ. ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನವೆಂಬರ್ 16ರ ತಡರಾತ್ರಿ ಸಂಭವಿಸಿದೆ. ಮೃತನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಅವರ ಪುತ್ರ ತನ್ವಿತ್ (12) ಎಂದು ಗುರುತಿಸಲಾಗಿದೆ. ನಾವೂರಿನ ಶಶಿ ಎಂಬುವವರ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕಾಗಿ ತೆರಳುತ್ತಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತನ್ವಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಾಹನದಲ್ಲಿದ್ದ ಇತರ ಐವರು ಸಹ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

