ಮಂಜನಾಡಿ; ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಒಂದು ಕುಟುಂಬವನ್ನೇ ನಾಶ ಮಾಡಿದ ದುರಂತ. ಈ ಘಟನೆಯನ್ನು “ಪ್ರಕೃತಿ ವಿಕೋಪ” ಎಂದು ಕರೆಯುವ ಮೂಲಕ ಆಡಳಿತ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ನಿಜವಾದ ಕಾರಣ ಅವೈಜ್ಞಾನಿಕ ರಸ್ತೆ ಕಾಮಗಾರಿ, ನಿಯಮ ಉಲ್ಲಂಘನೆ ಮತ್ತು ತಾಂತ್ರಿಕ ನಿರ್ಲಕ್ಷ್ಯ. ಈ ದುರಂತದಲ್ಲಿ ಆಶ್ವಿಯಾ ಎಂಬ ಯುವ ತಾಯಿಯ ಎದುರು ಆಕೆಯ ಇಬ್ಬರು ಮಕ್ಕಳು ಮತ್ತು ಅತ್ತೆ ಮಣ್ಣಿನೊಳಗೈದು ಸಾವನ್ನಪ್ಪಿದರು. ಆಶ್ವಿಯಾ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ಮಾವನ ಒಂದು ಕಾಲು ಶಾಶ್ವತವಾಗಿ ಛಿದ್ರಗೊಂಡಿತು. ಒಂದು ಸಂಸಾರ ಕ್ಷಣದಲ್ಲಿ ನಾಶವಾಯಿತು. ಇಷ್ಟೊಂದು ಭೀಕರ ದುರಂತಕ್ಕೂ ಜಿಲ್ಲಾಡಳಿತ ನೀಡಿದ ಪರಿಹಾರ—ಮೂರು ಪ್ರಾಣಗಳಿಗೆ ₹15 ಲಕ್ಷ, ಆಶ್ವಿಯಾ ಅವರ ಎರಡು ಕಾಲುಗಳಿಗೆ ₹2 ಲಕ್ಷ, ಮಾವನ ಒಂದು ಕಾಲಿಗೆ ₹1 ಲಕ್ಷ. ಒಟ್ಟು ₹18 ಲಕ್ಷ.ಮಾನವ ಜೀವಕ್ಕೆ ಮತ್ತು ಬದುಕಿನ ಶಾಶ್ವತ ನಾಶಕ್ಕೆ ಕಟ್ಟಿದ ಈ “ಬೆಲೆ” ಮಾನವೀಯತೆಗೂ ನ್ಯಾಯಕ್ಕೂ ತಕ್ಕದ್ದೇ? ದುರಂತದ ಬಗ್ಗೆ…
Author: UllalaVani
ಮಂಗಳೂರು: ಮಂಗಳೂರು, ರಥಬೀದಿ, ಪುತ್ತುಪ್ರಭುಲೇನ್‌ನ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತ ಬಾಲಾಂಜನೇಯ ಜಿಮ್ನಾಶಿಯಂನ 2024-2025 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜಿಮ್‌ನ ಆವರಣದಲ್ಲಿ ನಡೆಯಿತು. ಮುಂದಿನ 4ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಎ.ಉಮೇಶ್ ಗಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪರಂದರದಾಸ ಕೂಳೂರು ಮತ್ತು ಎಂ.ಜಯರಾಮ್, ಗೌರವ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕುದ್ರೋಳಿ, ಜಂಟಿ ಕಾರ್ಯದರ್ಶಿಯಾಗಿ ದೇವದಾಸ ಕೂಳೂರು ಮತ್ತು ಪ್ರದೀಪ್ ಆಚಾರ್ಯ, ಕೋಶಾಧಿಕಾರಿಯಾಗಿ ಮಧುಚಂದ್ರ ಮತ್ತು ವ್ಯವಸ್ಥಾಪಕರಾಗಿ ಮೋಹನರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ಕಮಲಾಕ್ಷ ಅಮೀನ್, ರೋನಾಲ್ಡ್ ಲೋಬೋ, ಮಹಮ್ಮದ್ ಹನೀಫ್ ಕೂಳೂರು, ವೇಣುಗೋಪಾಲ ಕಾಮತ್, ವಿನೋದ್ ರಾಜ್, ತಿಲಕ್ ರಾಜ್, ಸದಾನಂದ ಅಮೀನ್ ಮತ್ತು ವಾಲ್ಟರ್ ಡಿಕೋಸ್ತ ಆಯ್ಕೆಯಾಗಿದ್ದಾರೆ. ಉತ್ಕೃಷ್ಟ ಸಾಧನೆಗಾಗಿ ” ಬಾಲಾಂಜನೇಯ ರತ್ನ” ಪ್ರಶಸ್ತಿಯನ್ನು ಸದಸ್ಯರಾದ ಬಿ.ಜಯಶೆಟ್ಟಿ ಹಾಗೂ “ಬಾಲಾಂಜನೇಯ ವಜ್ರ” ಪ್ರಶಸ್ತಿ ಪ್ರಕಾಶ್ ವಿನ್ಸೆಂಟ್ ಕಾರ್ಲೊ ಇವರಿಗೆ ನೀಡಿ ಗೌರವಿಸಲಾಯಿತು. ಅಧ್ಯಕ್ಷರಾದ ಎ.ಉಮೇಶ್ ಗಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿಯವರು…
ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣದ ಮನೆಯಲ್ಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ. 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಳ್ಳಾಲ: ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ದೀಪೋತ್ಸವದ ನಂದಾದೀಪ ಪ್ರಜ್ವಲನೆಯನ್ನು AE ಮೆಸ್ಕಾಂ, ಮಂಗಳೂರು ನೀನಾ ಸಂದೇಶ್ ಶೆಟ್ಟಿ , ಸಹಾಯಕ ಇಂಜಿನಿಯರ್ ಮೆಸ್ಕಾಂ, ಉಳ್ಳಾಲ ಕಿಶೋರಿ ನಿತೇಶ್ , ಹೊಸಗದ್ದೆ, ಸುಶ್ಮಿತಾ ಅಖಿಲ್, ಬೀರಿ, ಸುಶ್ಮಿತಾ ನಿತೇಶ್ಅಂ ಬಿಕಾ ನಗರ, ರಮ್ಯಶ್ರೀ ದೇವಿಪ್ರಸಾದ್, ಮಣ್ಣಗುಡ್ಡೆ, ಮಂಗಳೂರು, ವಾಣಿಶ್ರೀ ಪಿ.ಕೆ ರಾಜ,ಕುತ್ತಾರ್, ಹಿತೈಷಿ ಕೌಶಿಕ್,ಅಂಬಿಕಾ ನಗರ, ಗಜೇಂದ್ರ,ಪೂಜಾರಿ,ಮಡಿಲು ಸೇವಾ ತಂಡ,ಪಡೀಲ್ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಡಿಲು ಸೇವಾ ತಂಡ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ನಂತರ ಮಹಾಪೂಜೆ,ಪಲ್ಲಕ್ಕಿ ಬಲಿ, ದಿಂಡು ಪೂಜೆ ಅನ್ನದಾನ ಸೇವೆ ನಡೆಯಿತು,ಜಗದೀಶ್ ಆಚಾರ್ಯ ತೋಕ್ಕೊಟ್ಟು ಮತ್ತು ಬಲಗದವರಿಂದ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸುರತ್ಕಲ್: ಯುವ ಕಾಂಗ್ರೆಸ್ ಮಂಗಳೂರು ಉತ್ತರ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ವಿಧ್ವಂಸಕ ಕೃತ್ಯ ಮತ್ತು ʼವೋಟ್ ಚೋರಿʼ ವಿರುದ್ಧ ಬೃಹತ್ ಪಂಜಿನ ಮೆರವಣಿಗೆ ಬುಧವಾರ ಸಂಜೆ ಕೃಷ್ಣಾಪುರ ಕ್ರಾಸ್ ನಿಂದ ಸುರತ್ಕಲ್ ಪೇಟೆಯವರೆಗೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಮಾತಾಡಿದ ಇನಾಯತ್ ಅಲಿ ಅವರು, “ಬಿಜೆಪಿ ಪಕ್ಷ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಾಮಮಾರ್ಗವನ್ನು ಅನುಸರಿಸುತ್ತಿರುವುದು ಖಂಡನೀಯ. ಮತಗಳ್ಳತನ ಈಗಾಗಲೇ ಬಯಲಾಗಿದ್ದು, ಒಂದೇ ಹೆಸರಲ್ಲಿ ಹತ್ತಾರು ಕಡೆಗಳಲ್ಲಿ ಮತ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ಬ್ರೆಝಿಲ್ ಮಾಡೆಲ್ ಒಬ್ಬಳ ಫೋಟೋ ಬಳಸಿ 22ಕ್ಕೂ ಹೆಚ್ಚು ಕಡೆಗಳಲ್ಲಿ ಮತದಾನ ಮಾಡಲಾಗಿದೆ. ಬಿಹಾರದಲ್ಲಿ ಅಧಿಕಾರಕ್ಕೇರಲು ಮತಗಳ್ಳತನವೇ ಪ್ರಮುಖ ಕಾರಣವಾಗಿದೆ. ದಿಲ್ಲಿಯಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳಲ್ಲಿ ಬಿಜೆಪಿ ಸರಕಾರದ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯಲಿದೆ” ಎಂದರು. ರಾಷ್ಟ್ರೀಯ ಉಸ್ತುವಾರಿ ನಿಗಮ್ ಭಂಡಾರಿ ಮಾತಾಡಿ, “ಬಿಹಾರದಲ್ಲಿ…
ಪುತ್ತೂರು, ನ. 20; ಮಾದಕವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದಾತನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ಪೊಲೀಸ್ ರಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಪುತ್ತೂರು ಕಬಕ ನಿವಾಸಿ ಮಹಮ್ಮದ್ ಮುಸ್ತಪಾ (36) ಎಂದು ಗುರುತಿಸಲಾಗಿದೆ.ನ.15 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ, ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್ ಬಳಿ ವೀಣಾ ಎಂಬವರ ಬಾಬ್ತು ಬಾಡಿಗೆ ಕೋಣೆಯಲ್ಲಿ ಮಹಮ್ಮದ್ ಮುಸ್ತಾಫ ಎಂಬಾತನು ಅಕ್ರಮವಾಗಿ ನಿಷೇದಿತ ಮನೋನ್ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಯಿತು.ಪೊಲೀಸ್ ಉಪನಿರೀಕ್ಷಕ ಜನಾರ್ಧನ ಕೆ.ಎಂ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳ ಪರೀಶಿಲಿಸಿದಾಗ, ಬಾಡಿಗೆ ಕೋಣೆಯಲ್ಲಿ ಆರೋಪಿಯು ಅಕ್ರಮವಾಗಿ 14 ಗ್ರಾಂ ನಿಷೇದಿತ ಮಾದಕ ಮನೋನ್ಮಾದಕ ವಸ್ತು ಎಂಡಿಎಂಎ ವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.ಈ ಬಗ್ಗೆ ಆರೋಪಿ ಮಹಮ್ಮದ್ ಮುಸ್ತಪಾ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ;- 8(C),22(b)…
ಕೊಣಾಜೆ: ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಲವು ಪ್ರಮುಖ ಗ್ರಾಮಗಳು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಪಾವೂರು, ಹರೇಕಳ, ಫಜೀರು, ಕೊಣಾಜೆ, ಬೆಳ್ಮ, ಅಂಬ್ಲಮೊಗರು, ಬಾಳೆಪುಣಿ, ಕುರ್ನಾಡು, ಮಂಜನಾಡಿ, ಬೋಳಿಯಾರ್, ಇರಾ, ಸಜೀಪ ನಡು, ಸಜೀಪ ಪಡು, ನರಿಂಗಾನ ಸೇರಿದಂತೆ 13 ಗ್ರಾಮ ಪಂಚಾಯತ್ ಗಳಿಗೆ ಒಳಪಟ್ಟಿವೆ. ಈ ಎಲ್ಲಾ ಗ್ರಾಮಗಳಲ್ಲಿ ಕಾಲದಿಂದ ಕಾಲಕ್ಕೆ ಜನಸಂಖ್ಯೆ ಹೆಚ್ಚಳಗೊಳಲ್ಳುತ್ತಿದ್ದು ಅಲ್ಲದೆ ಈ ಭಾಗಗಳಲ್ಲಿ ಕಳ್ಳತನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಂತವುಗಳು ರಾಜಾರೋಷವಾಗಿ ನಡೆಯುತ್ತಿದ್ದು ಇವುಗಳನ್ನೆಲ್ಲಾ ನಿಯಂತ್ರಿಸಬೇಕಾಗಿದ್ದ ಸ್ಥಳೀಯ ಠಾಣೆಗಳಿಗೆ ವಿಪರೀತ ಒತ್ತಡ ಹೆಚ್ಚಾಗಿದೆ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ, ಪೊಲೀಸರಿಗೆ ಗಸ್ತು ತಿರುಗಲು ಸರಿಯಾದ ವಾಹನದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ನಾವು ಕಂಡಂತೆ ಇಲ್ಲಿ ಕೇವಲ ಒಂದು ವಾಹನವಷ್ಟೇ ಗಸ್ತು ಸಂದರ್ಭದಲ್ಲಿ ತಿರುಗಾಡುವುದು ಬಿಟ್ಟರೆ ಉಳಿದದ್ದು ಬಳಕೆಗೆ ಅಯ್ಯೋಗ್ಯವಾಗಿ ಶಿಥಿಲಾವಸ್ಥೆಯಲ್ಲಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ…
ಸೋಮೇಶ್ವರ; ಶ್ರೀ ಅಯ್ಯಪ್ಪ ಮಂದಿರ ಸೋಮೇಶ್ವರ ಇದರ 51ನೇ ವಾರ್ಷಿಕೋತ್ಸವವು ನವೆಂಬರ್ 30ರಂದು ವಿಜೃಂಭಣೆಯಿ0ದ ನಡೆಯಲಿದೆ. ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸೋಮೇಶ್ವರ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 6;30ಕ್ಕೆ ಗಣಹೋಮ, ಬಿಂಬಶುದ್ಧಿ, ಕಲಶಪೂಜೆ ನಡೆಯಲಿದೆ. ಬೆಳಿಗ್ಗೆ ಗಂಟೆ 8;30ರಿಂದ ಮಾತೆಯರಿಂದ `ಲಲಿತ ಸಹಸ್ರನಾಮ’ಪಠಣ, ಕಲಶಾಭಿಷೇಕ, ತುಪ್ಪಾಭಿಷೇಕ, ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12;30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ2;30ರಿಂದ ಭಜನಾ ಸಂಕೀರ್ತನೆ ಮೊಳಗಲಿದ್ದು, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6;30ರಿಂದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ “ನೃತ್ಯ ಕಾರ್ಯಕ್ರಮ’ ನಾಟ್ಯ ಶಿಕ್ಷಕಿಯಾದ ಸುಶ್ಮಿತಾ ಬ್ರಿಜೇಶ್ ಶೆಟ್ಟಿ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಪ್ರಖ್ಯಾತ ಗಾಯಕಿ ಶ್ರೀಮತಿ…
ಸುಳ್ಯ, ನ. 19 : ಬೋರುಗುಡ್ಡೆ ಅಬ್ಬುಲ ಅಡ್ಕತ್ಬೈಲ್ ಅವರ ಮನೆಯಲ್ಲಿ ನ.19ರಂದು ಮುಂಜಾನೆ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಸ್ಟೌವ್ ನಲ್ಲಿ ಇದ್ದ ಕುಕ್ಕರ್ ಸಿಡಿದು ಅಡುಗೆಮನೆಗೆ ಹಾನಿಯಾಗಿ ಮನೆಯವರು ಅಪಾಯದಿಂದ ಪಾರಾಗಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದ ಪರಿಣಾಮ ಅಡುಗೆಮನೆಯ ಗೋಡೆ, ಟೈಲ್ಸ್, ಮೇಲ್ಚಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಳಗೊಂಡಿವೆ.ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಮಹಿಳೆ ಸಮನ್ವಿತಾ ಧಾರೇಶ್ವರ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮಗುವಿಗೆ ಜನ್ಮ ನೀಡಲು ಕೆಲವೇ ಕೆಲವು ವಾರಗಳು ಬಾಕಿ ಉಳಿದಿದ್ದವು. ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಶುಕ್ರವಾರ ರಾತ್ರಿ 8 ಗಂಟೆಗೆ ಹಾರ್ನ್ಸ್‌ಬೈಯ ಜಾರ್ಜ್ ಸ್ಟ್ರೀಟ್‌ನಲ್ಲಿ ಧಾರೇಶ್ವರ್ ಮತ್ತು ಅವರ ಕುಟುಂಬವು ಪಾದಚಾರಿ ಮಾರ್ಗವನ್ನು ದಾಟಲು ಪ್ರಯತ್ನಿಸಿತ್ತು. ಆ ಸಮಯದಲ್ಲಿ ಕಿಯಾ ಕಾರ್ನಿವಲ್ ಕಾರು ಕಾರು ನಿಧಾನಗೊಳಿಸಿತ್ತು, ಆದರೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆ ಡಿಕ್ಕಿ ಪರಿಣಾಮ ಕಿಯಾ ಕಾರು ಮುಂದಕ್ಕೆ ದೂಡಿದಂತಾಗಿ ಪಾರ್ಕ್ ಕಡೆಗೆ ದಾಟುತ್ತಿದ್ದ ಮೂವರಿಗೂ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಸಮನ್ವಿತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸಮನ್ವಿತಾ ಹಾಗೂ ಅವರ ಗರ್ಭದಲ್ಲಿರುವ ಮಗುವನ್ನು ಉಳಿಸಲು…

