ಮಂಗಳೂರು ;ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದೇರಳಕಟ್ಟೆಯ ಮೇಲ್ತೆನೆ ಸಂಘಟನೆಯು ಸಹಯೋಗದೊಂದಿಗೆ ಎ.14ರಂದು ಉಳ್ಳಾಲ ತಾಲೂಕಿನ ಮುಡಿಪು ಎಸ್.ಕೆ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್.ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮುಡಿಪು ಎಸ್.ಕೆ.ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನದ ಅಂಗವಾಗಿ ಮಹಿಳೆಯರು, ಪುರುಷರು, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಯಶಸ್ಸಿಗೆ ಸಹಕರಿಸಲು ಸುಮಾರು 200ಮಂದಿ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಹಮೀದ್ ಹಸನ್ ಮಾಡೂರು, ಬ್ಯಾರಿ ಅಕಾಡೆಮಿಯ ಸದಸ್ಯ ಶರೀಫ್ ಭಾರತ್ ಬಾಳಿಲು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಎಸ್.ಕೆ ಅಬ್ದುಲ್ ಖಾದರ್ ಹಾಜಿ, ಗೌರವ ಸಲಹೆಗಾರರಾಗಿ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಕಣಚೂರು ಮೋನು, ಹೈದರ್ ಪರ್ತಿಪ್ಪಾಡಿ, ಅಬ್ದುಲ್ ಅಝೀಝ್, ಹಾಜಿ ಬಿ.ಜಿ, ಹನೀಫ್ ಉಳ್ಳಾಲ, ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಹಾಜಿ ಟಿ.ಎಸ್. ಅಬ್ದುಲ್ಲಾ…
Author: UllalaVani
ಉಳ್ಳಾಲ ತಾಲೂಕಿನ ಕಿನ್ಯ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಆ ಮೂಲಕ ಕಿನ್ಯ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕೃತವಾಗಿ ಗುರುತಿಸಿಕೊಂಡಿದೆ. ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಫಾರೂಕ್ ಕಿನ್ಯ ಹಾಗು ಸರ್ವಸದಸ್ಯರ ಸತತ ಪ್ರಯತ್ನ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತುಳಸಿ ಪಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ವಾಣಿಶ್ರೀ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರ ಸಹಕಾರದಿಂದ ಈ ಪುರಸ್ಕಾರ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಉಳ್ಳಾಲ: ಶಾಲೆ ಎಂದರೆ ರಾಜಕೀಯ ಜಾಗೃತಿ, ಶೈಕ್ಷಣಿಕ ಮೇಲುಗೈ, ಕ್ರೀಡಾ ಚಟುವಟಿಕೆಗಳು ಎಲ್ಲವೂ ಸಮಾನವಾಗಿ ಬೆಳೆಸುವ ಕೇಂದ್ರವಾಗಿರಬೇಕು. ಅಂತಹ ಸಮಗ್ರ ಅಭಿವೃದ್ಧಿಗೆ ವೇದಿಕೆಯಾದ ತೊಕ್ಕೊಟ್ಟು ವ್ಯಾಯಾಮ ಶಾಲೆಯ 75ನೇ ಸಂವತ್ಸರದ ಸಂಭ್ರಮಾಚರಣೆ ನಿಜಕ್ಕೂ ಅದ್ಭುತವಾಗಿ ನೆರವೇರಿದೆ ಎಂದು ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಇದರ ಅಮೃತ ಮಹೋತ್ಸವದ ಪ್ರಯುಕ್ತ ಜರಗಿದ ಹನುಮಾಮೃತ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಚಾಲನೆ ನೀಡಿ, ನೂತನ ಗರಡಿ ಮನೆಯ ಉದ್ಘಾಟನೆ, ಹನುಮಾಮೃತ ಸ್ಮರಣ ಸಂಚಿಕೆ ಬಿಡುಗಡೆ , ಸ್ಥಳೀಯ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಆಂಜನೇಯ ಸ್ವಾಮಿಗೆ ಪ್ರೀತಿಯ ದಿನವಾದ ಗುರುವಾರ ನಡೆದ ಈ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ತೊಕ್ಕೊಟ್ಟು ವ್ಯಾಯಾಮ ಶಾಲೆ ಎಂದರೆ ಎಲ್ಲರಿಗೂ ಪರಿಚಿತವಾದ, ವಿಶ್ವಾಸಾರ್ಹ ಸಂಸ್ಥೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಭೆಗಳ ಹೊಳೆ ಇಲ್ಲಿಂದಲೇ ಹರಿದುಬರುತ್ತಿದೆ ಎಂಬುದು ಇದರ…
ಉಳ್ಳಾಲ: ಮೊಗವೀರಪಟ್ಣದ ಚೆನ್ನಮರಕಾಲ ರಸ್ತೆಯ ಶ್ರೀ ವೀರಮಾರುತಿ ದೇವಾಲಯ ಮತ್ತು ವ್ಯಾಯಾಮ ಶಾಲೆ (ರಿ.) ವತಿಯಿಂದ 25ನೇ ಹನುಮ ಜಯಂತಿ ಪೂಜೆಯನ್ನು ವೈಭವದಿಂದ ಆಚರಿಸಲಾಯಿತು. ತಂತ್ರಿವರ್ಯರಾದ ಶ್ರೀಕಾಂತ್ ಭಟ್ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ 7:00 ಗಂಟೆಗೆ ಗಣಹೋಮ ಮಹಾಪೂಜೆ ನಡೆಯಿತು. ಸಂಜೆ ದೀಪ ಪ್ರಜ್ವಲನೆಯನ್ನು ಶ್ರೀಮತಿ ವಿಜೇತ ಕಿರಣ್ ಸಾಲ್ಯಾನ್ ದಂಪತಿ , ಕೃತಿನ್ ಕೆ. ಸಾಲ್ಯಾನ್, ಕ್ರಿಯಾನ್ ಕೆ. ಸಾಲ್ಯಾನ್ ಹಾಗೂ ಶ್ರೀ ಮತ್ತು ಶ್ರೀಮತಿ ರಶ್ಮಿಕ ಕೌಶಿಕ್ ಶಿವನಗರ, ಪಾಂಡೇಶ್ವರ ದಂಪತಿ ನೆರವೇರಿಸಿದರು.ಸಂಜೆ 4:30 ರಿಂದ 8:00ರವರೆಗೆ ಶ್ರೀ ವಿಠೋಭ ಭಜನಾ ಮಂದಿರ ಮತ್ತು ಶ್ರೀ ರಾಮ ಭಜನಾ ಮಂದಿರ ಮೊಗವೀರಪಟ್ಟ, ಉಳ್ಳಾಲ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.ಇದೇ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮವಾಗಿ ‘ನಮ್ಮ ಕಲಾವಿದೆರ್ ಬೆದ್ರ’ ಇವರಿಂದ ‘ವೈರಲ್ ವೈಶಾಲಿ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಕಿಶೋರ್ ಕಾಂಚನ್, ಅಧ್ಯಕ್ಷರಾದ…
ಟ್ರೆಕ್ಕಿಂಗ್ಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ನಡೆದಿದೆ. ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. ನಿನ್ನೆ ನಾಪತ್ತೆಯಾಗಿದ್ದು, ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾಗ ಆಕೆ ನಾಪತ್ತೆಯಾಗಿದ್ದಾಳೆ. ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಯುವತಿ ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಸಂಜೆಯಾದ್ರೂ ಶರಣ್ಯ ವಾಪಸಾಗದ ಹಿನ್ನೆಲೆ ಶರಣ್ಯಳಿಗಾಗಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ನಾಪತ್ತೆಯಾದ ಯುವತಿ ಶರಣ್ಯಾ ಪತ್ತೆಗಾಗಿ ಅರಣ್ಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಇವರಿಗೆ ಪೊಲೀಸ್ ಸಿಬ್ಬಂದಿಯೂ ಸಾಥ್ ನೀಡಿದ್ದು, ತಡರಾತ್ರಿ 3 ಗಂಟೆಯವರೆಗೆ ಹುಡುಕಾಡಿದರೂ ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕಿಲ್ಲ. ನಿನ್ನೆ ತಾನು ದಾರಿ ತಪ್ಪಿರುವುದಾಗಿ ತಮ್ಮ ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ಶರಣ್ಯಾ ಹೇಳಿದ್ದಳು. ಅದಾದ ಬಳಿಕ ಶರಣ್ಯ ಮೊಬೈಲ್ ನಾಟ್ ರೀಚೇಬಲ್ ಆಗಿದೆ. ಕೇರಳದಿಂದ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಯುವತಿ,…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಅವರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಫೌಂಡೇಶನ್ ಆಶ್ರಯದಲ್ಲಿ ವಿವಿಧ ದಾನಿಗಳ ನೆರವಿನಿಂದ ಯಕ್ಷಗಾನ ಕಲಾವಿದರಿಗಾಗಿ ವೈವಿಧ್ಯಮಯ ಸೇವಾಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕದ್ರಿಯ ಮೊಕ್ತೇಸರ ದಿಲ್ ರಾಜ್ ಆಳ್ವ ಅವರಿಗೆ ಯಕ್ಷಧ್ರುವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಪಾವಂಜೆ ಮೇಳದ ಯುವ ಭಾಗವತ ಭರತ್ ರಾಜ್ ಶೆಟ್ಟಿ ಹಾಗೂ ಹಾಸ್ಯಗಾರ ಸಂದೇಶ್ ಮಂದಾರ ಅವರಿಗೆ ಯಕ್ಷ ಗೌರವ ನೀಡಿ ಸನ್ಮಾನಿಸಲಾಯಿತು.ಅತಿಥಿಗಳಾಗಿ ಉದ್ಯಮಿಗಳಾದ…
ತೊಕ್ಕೊಟ್ಟು : ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಕೇವಲ ಸಂವಹನ ಸಾಧನವಾಗಿಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕುಟುಂಬದ ನೆನಪುಗಳು, ಸ್ನೇಹಿತರ ಸಂಪರ್ಕ, ಜೀವನದ ಪ್ರಮುಖ ಕ್ಷಣಗಳನ್ನು ಸಂಗ್ರಹಿಸುವ ಸಾಧನವೇ ಮೊಬೈಲ್.ಈ ಹಿನ್ನೆಲೆದಲ್ಲಿ, ತೊಕ್ಕೊಟ್ಟು ಭಾಗದಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅನು ಮೊಬೈಲ್ಸ್ ಗ್ರಾಹಕರೊಂದಿಗೆ ಭಾವನಾತ್ಮಕ ಬಂಧವನ್ನು ನಿರ್ಮಿಸಿಕೊಂಡಿರುವ ಜನಸ್ನೇಹಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಸಂಸ್ಥೆಯ ಮಾಲೀಕರು ಸೌಮ್ಯ ಸ್ವಭಾವದವರಾಗಿದ್ದು, ಧಾರ್ಮಿಕ, ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಯಾವುದೇ ಪ್ರಚಾರ ಬಯಸದೆ ಮೌನವಾಗಿ ಸಹಕರಿಸುತ್ತಾ ಬಂದಿರುವುದು ವಿಶೇಷವಾಗಿದೆ. ಈ ಮಾನವೀಯ ಮೌಲ್ಯಗಳು ಸಂಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಗ್ರಾಹಕರ ಅಗತ್ಯಗಳನ್ನು ಮನಗಂಡು ಸ್ನೇಹಪೂರ್ಣವಾಗಿ ಸೇವೆ ಸಲ್ಲಿಸುತ್ತಾರೆ. ಮೊಬೈಲ್ ಮಾರಾಟ ಮಾತ್ರವಲ್ಲದೆ, ಎಲ್ಲಾ ರೀತಿಯ ಮೊಬೈಲ್ ಸರ್ವಿಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಆಧುನಿಕ ಶೈಲಿಯ ಮೊಬೈಲ್‌ಗಳ ಕುರಿತು ಗ್ರಾಹಕರಿಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ.ಗ್ರಾಹಕರ ಅಗತ್ಯ, ಬಜೆಟ್ ಹಾಗೂ ಉಪಯೋಗವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೂಕ್ತವಾದ ಮೊಬೈಲ್…
ಕೊಣಾಜೆ; ಕೊಣಾಜೆ ಠಾಣಾ ವ್ಯಾಪ್ತಿಯ ಕಂಬಳಪದವು ಬಳಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ನಡುಪದವಿನ ಸುಶಾಂತ್ (23 ) ಎಂದು ಗುರುತಿಸಲಾಗಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ಸಂದರ್ಭದಲ್ಲಿ ತಲೆಗೆ ಗಂಭೀರವಾದ ಗಾಯವಾಗಿದ್ದು ಕೂಡಲೇ ಆತನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಿಟ್ ಆಂಡ್ ರನ್; ಲಾರಿ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದರೂ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದು, ಸಾರ್ವಜನಿಕರು ಪರಿಸರ ನಿವಾಸಿಗಳು ಆಕ್ರೋಶಗೊಂಡಿದ್ದರು. ಬಳಿಕ ಪೊಲೀಸರು ಲಾರಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೋಳಿಯಾರ್ ನಿವಾಸಿ ಮಹಮ್ಮದ್ ಆರೀಫ್ ಎಂಬಾತನನ್ನು ಬಂಧಿಸಲಾಗಿದೆ. ಕೊಣಾಜೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯನ್ವಯ ಆರೋಪಿಯನ್ನು ಬಂಧಿಸಲಾಗಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಎದುರುಗಡೆ ಮೈದಾನದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡುವ ಮಾಹಿತಿ ಪಡೆದುಕೊಂಡ ಕೊಣಾಜೆ ಎಸ್. ಐ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಏ. 02 ; ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಮೂಲಕ ಹೊರಬಂದಿರುವ ಆರೋಪಿಗಳ ಜಾಮೀನು ರದ್ದುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 29ರಂದು ಮಧ್ಯರಾತ್ರಿ ಸುಮಾರು 2:15 ಗಂಟೆಗೆ, ಆರೋಪಿಗಳು ಹಾಡಿಯಂಗಡಿಯ ಜಯಶ್ರೀ ಪೂಜಾರಿ ಎಂಬುವವರ ಮನೆಗೆ ನುಗ್ಗಿದ್ದರು. ಜಯಶ್ರೀ ಅವರಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು, ಕೊಟ್ಟಿಗೆಯಲ್ಲಿದ್ದ ಮೂರು ಜಾನುವಾರುಗಳನ್ನು ಕಳ್ಳತನ ಮಾಡಿ ಬಳಿಕ ಅವುಗಳನ್ನು ಹತ್ಯೆಗೈದಿದ್ದರು ಎನ್ನಲಾಗಿದೆ.ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪೊಲೀಸರು ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29) ಮತ್ತು ಮೊಹಮ್ಮದ್ ನಾಸಿರ್ (28) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ನಂತರ ಈ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ತನಿಖೆಯ ವೇಳೆ ಆರೋಪಿಗಳು ಈ ಕೃತ್ಯವನ್ನು ಸಂಘಟಿತ ರೀತಿಯಲ್ಲಿ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಅವರ ವಿರುದ್ಧ ‘ಕೋಕಾ’ ಕಾಯ್ದೆಯಡಿ ಕ್ರಮಕೈಗೊಂಡಿದ್ದಾರೆ. ಜೊತೆಗೆ…

