ಉಳ್ಳಾಲ: ನೂರೆ ಅಜ್ಮೀರ್ ಇದರ ಐದನೇ ವಾರ್ಷಿಕದ ಐತಿಹಾಸಿಕ ಮಹಾ ಸಂಗಮ ಕಾರ್ಯಕ್ರಮ ಉಳ್ಳಾಲ ಹಝ್ರತ್ ಕಾಲೇಜು ಮೈದಾನದಲ್ಲಿ ನಡೆಯಿತು.

ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವಿಧ ಧಾರ್ಮಿಕ ಕೇಂದ್ರಗಳ ಜೊತೆ ಸೌಹಾರ್ದ ಸಾಮರಸ್ಯ ಇರುವ ಈ ಉಳ್ಳಾಲ ಅಭಿವೃದ್ಧಿ ಆಗಬೇಕು.ಇದು ನಮ್ಮ ಯೋಜನೆ ಆಗಬೇಕು. ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ನಾವು ಮಾಡಬೇಕು ಎಂದು ಕರೆ ನೀಡಿದರು.
ಶೈಖುನಾ ಇರ್ಶಾದ್ ದಾರಿಮಿ ಮಿತ್ತ ಬೈಲ್ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಶುಭಹಾರೈಸಿದರು. ವಲಿಯುದ್ದೀನ್ ಫೈಝಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಫಾರೂಕ್ ಉಳ್ಳಾಲ್, ಶರೀಫ್ ಹಾಜಿ ವೈಟ್ ಸ್ಟೋನ್, ಉಳ್ಳಾಲ ದರ್ಗಾ ಮಾಜೀ ಅಧ್ಯಕ್ಷ ಅಬ್ದುಲ್ ರಶೀದ್ , ಮುಸ್ತಫಾ ಅಬ್ದುಲ್ಲಾ, ಲತೀಫ್ ಗುರುಪುರ, ನಾಝಿಮ್ ಮುಕ್ಕಚೇರಿ,ಎಂ ಎಚ್ ಮೊಯ್ದಿನ್ ಹಾಜಿ, ಆಸಿಫ್ ಅಬ್ದುಲ್ಲಾ,ಅಬ್ದುಲ್ ರಹ್ಮಾನ್ ಫ್ಲವರ್, ಫಕೀರಬ್ಬ ಮಾಸ್ಟರ್, ಕೆ.ಎಸ್.ಮೊಯ್ದಿನ್, ಹಮೀದ್ ಕಣ್ಣೂರು, ಅಶ್ರಫ್ ಮುಕ್ಕಚೇರಿ, ಯು.ಟಿ.ಫರೀದ್, ಅಬ್ದುಲ್, ಅಬ್ದುಲ್ ರಹ್ಮಾನ್ ಅದ್ದಾಮ, ಮೊಯ್ಯದ್ದೀನ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ಇಕ್ಬಾಲ್ ಬಾಳಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.

