Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಯುಡಿಎಫ್ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ…!!

UllalaVaniBy UllalaVaniApril 6, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಾಸರಗೋಡು, ಏ. 06 ;ಹತ್ತು ವರ್ಷಗಳ ಎಲ್ ಡಿ ಎಫ್ ಆಡಳಿತ ಕೇರಳವನ್ನು ದಿವಾಳಿಯತ್ತ ಕೊಂಡೊಯ್ದಿದ್ದು ನಿರುದ್ಯೋಗ, ಬೆಲೆ ಏರಿಕೆ , ಹಣದುಬ್ಬರದಿಂದ ಕೇರಳ ತತ್ತರಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ಮಂಜೇಶ್ವರ ಸಮೀಪದ ವರ್ಕಾಡಿ ಮಜೀರ್‌ಪಳ್ಳ‍ದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್‌ರವರ ಪರ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇರಳದಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರ ಹಾಗೂ ಈಗ ಆಡಳಿತ ನಡೆಸಿದ ಎಲ್ ಡಿ ಎಫ್ ಸರಕಾರ ತುಲನೆ ಮಾಡಿ ಕೇರಳದಲ್ಲಿ ನಿರುದ್ಯೋಗ ಹಾಗೂ ಹಣದುಬ್ಬರ, ಹಾಗೂ ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿಕೊಂಡಿದೆ ಎಂದು ಅಂಕಿ ಅಂಶ ಮುಂದಿಟ್ಟು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಕೇರಳದಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಏಕೆಂದರೆ ಬಿಜೆಪಿಯವರು ರೈತರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಗಳು. ಬಿಜೆಪಿಯವರಿಗೆ ಯಾವುದೇ ಸಿದ್ಧಾಂತವಿಲ್ಲ. ಶ್ರೀಮಂತರು, ಮೇಲ್ವರ್ಗದವರು, ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಬಿಜೆಪಿಯಿದೆ. ಕರ್ನಾಟಕದಲ್ಲಿ 2023 ರ ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಆದರೆ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು ಎಂದು ಹೇಳಿದರು.ಗ್ಯಾರಂಟಿಗಳಿಂದ ಸರ್ಕಾರ ಖಜಾನೆ ಖಾಲಿಯಾಗುತ್ತದೆಂಬ ಬಿಜೆಪಿಯವರ ನಿರಂತರ ಟೀಕೆಗಳು ಬಂದವು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದುವರೆಗೆ 1.31 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. 2023 ರ ಮೇ ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಶಕ್ತಿ ಯೋಜನೆ ಜಾರಿಮಾಡಲಾಯಿತು.ಕರ್ನಾಟಕದಲ್ಲಿ 3.5 ಕೋಟಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ಯೋಜನೆಯಾಗಿದೆ. ಕೇರಳದಲ್ಲಿಯೂ ಇಂದಿರಾ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಉಚಿತ ಪ್ರಯಾಣ ಮಾಡುವ ಈ ಯೋಜನೆಯಿಂದ ಜನರಿಗೆ ಹಣ ಉಳಿತಾಯವಾಗಲಿದೆ ಎಂದರು. ಆರ್ಥಿಕತೆಯಲ್ಲಿ ಯೂನಿವರ್ಸಲ್ ಬೇಸಿಕ್ ಇನಕ್ಂ ತತ್ವದಂತೆ ತಳಸಮುದಾಯದವರಿಗೆ ಆರ್ಥಿಕ ನೆರವು ನೀಡಿದರೆ, ಆ ಹಣ ವ್ಯರ್ಥವಾಗುವುದಿಲ್ಲ.ಶಕ್ತಿ ಯೋಜನೆಯಿಂದ ಉಳಿತಾಯವಾಗುವ ಹಣದಿಂದ ಮಹಿಳೆಯರ ಖರೀದಿ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 1ಕೋಟಿ .26 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನೂ ಒದಗಿಸಲಾಗುತ್ತಿದೆ. ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಈ ಯೋಜನೆಗಳನ್ನು ನಕಲು ಮಾಡಿದ್ದಾರೆ.ಕೇರಳ ರಾಜ್ಯ ಕೂಡ ನುಡಿದಂತೆ ನಡೆಯಲಿದೆ ಎಂಬ ನಂಬಿಕೆ ವಿಶ್ವಾಸವಿದ್ದರೆ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರಿಗೆ ಮತ ಹಾಕಬೇಕು ಎಂದರು. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಬಡವರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷವಾಗಿದ್ದು ಯುಡಿಎಫ್ ಕೂಡ ಬಡವರ ಪರವಾಗಿರುವ ಮಿತ್ರ ಪಕ್ಷ ಎಂದರು.ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾ ನ್ , ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣ ಪೆರಿಯ , ಸುಧೀರ್ ಕುಮಾರ್ ಮರೋಳಿ , ಅಭ್ಯರ್ಥಿ ಎ .ಕೆ ಎಂ ಅಶ್ರಫ್ ಮಾತನಾಡಿದರು. ಕರ್ನಾಟಕ ಸಚಿವ ಸಣ್ಣ ನೀರಾವರಿ ಬೋಸ ರಾಜ್, ಸುಬ್ಬಯ್ಯ ರೈ, ಶಾಸಕ ಅಶೋಕ್ ಕುಮಾರ್ ರೈ, ವಿನಯಕುಮಾರ್ ಸೊರಕೆ, ರಮನಾಥ ರೈ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಸೋಮಶೇಖರ ಜೆ. ಎಸ್, ಸುರೇಶ್ ಶೆಟ್ಟಿ,ಮಂಜುನಾಥ ಆಳ್ವ, ಅಜೀಜ್ ಮರಿಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ ಫೈಝಲ್ಉ ಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ದಿವ್ಯಜ್ಯೋತಿ ಕ್ರಿಕೆಟರ್ಸ್‌ನ 20ನೇ ವರ್ಷದ ಕಲಾ ಕಾಣಿಕೆ

August 12, 2026

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಆಸೀಫ್ ಸಾಮಣಿಗೆ ಅವರನ್ನು ಅಭಿನಂದಿಸಿದ ಸಚಿವ ಯು.ಟಿ. ಖಾದರ್

August 12, 2026

ಉಳ್ಳಾಲ ಪೌರಾಯುಕ್ತ ಸಂತೋಷ್ ವರ್ಗಾವಣೆ ವಿಚಾರ: ಮತ್ತೆ ಉಳ್ಳಾಲಕ್ಕೆ ಮರು ನೇಮಕ

August 12, 2026

Comments are closed.

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ದಿವ್ಯಜ್ಯೋತಿ ಕ್ರಿಕೆಟರ್ಸ್‌ನ 20ನೇ ವರ್ಷದ ಕಲಾ ಕಾಣಿಕೆ

By UllalaVaniAugust 12, 20260

ಕುತ್ತಾರು: ಕುತ್ತಾರು ಪಂಡಿತ್ ಹೌಸ್ ದಿವ್ಯಜ್ಯೋತಿ ಕ್ರಿಕೆಟರ್ಸ್ ಹಾಗೂ ದಿವ್ಯಜ್ಯೋತಿ ಮಹಿಳಾ ವಿಭಾಗದ ವತಿಯಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿ…

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಆಸೀಫ್ ಸಾಮಣಿಗೆ ಅವರನ್ನು ಅಭಿನಂದಿಸಿದ ಸಚಿವ ಯು.ಟಿ. ಖಾದರ್

August 12, 2026

ಉಳ್ಳಾಲ ಪೌರಾಯುಕ್ತ ಸಂತೋಷ್ ವರ್ಗಾವಣೆ ವಿಚಾರ: ಮತ್ತೆ ಉಳ್ಳಾಲಕ್ಕೆ ಮರು ನೇಮಕ

August 12, 2026

ಕೇಂದ್ರ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಕಾವಲಾಗುವ ಮೂಲಕ ಯುವಜನತೆಗೆ ದ್ರೋಹ ಬಗೆಯುತ್ತಿದೆ : ಡಿವೈಎಫ್‌ಐ ಕೇರಳ‌ ನಾಯಕ ವಿಪಿಪಿ ಮುಸ್ತಫಾ

August 12, 2026
1 2 3 … 2,057 Next
Automatic YouTube Gallery

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಸೀಫ್ ಸಾಮಣಿಗೆ ಆಯ್ಕೆ ಇಂದಿನ (12.8.2026 ) Highlights

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಪಂಚಾಯತ್ ಸದಸ್ಯ ಆಸೀಫ್ ಸಾಮಣಿಗೆ ಅಭಿನಂದಿಸಿ ಸನ್ಮಾನಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಸೀಫ್ ಸಾಮಣಿಗೆ ಆಯ್ಕೆ ಇಂದಿನ (12.8.2026 ) Highlights
Now Playing
ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಸೀಫ್ ಸಾಮಣಿಗೆ ಆಯ್ಕೆ ಇಂದಿನ (12.8.2026 ) Highlights
ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಪಂಚಾಯತ್ ಸದಸ್ಯ ಆಸೀಫ್ ...
ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಪಂಚಾಯತ್ ಸದಸ್ಯ ಆಸೀಫ್ ಸಾಮಣಿಗೆ ಅಭಿನಂದಿಸಿ ಸನ್ಮಾನಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
Now Playing
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ...
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಅಶೋಕ್
"ತುಳುವರಿಗೂ ಪ್ರಕೃತಿಗೂ ಅವಿನಾಭಾವ ಸಂಬoಧ"-ಉಪನ್ಯಾಸಕಿ ಪಲ್ಲವಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version