Author: UllalaVani

Kannada News From Coastal Karnataka

ಉಡುಪಿ, ನ. 21: ಮೀನುಗಾರಿಕಾ ಬೋಟ್ ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮೀನು, ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಾಸ್ತಾನಾ ಕೋಡಿಕನ್ಯಾನದ ರವೀಂದ್ರ ಎನ್. ಪೂಜಾರಿ ಅವರಿಗೆ ಸೇರಿದ ‘ವೀರಕಲ್ಕುಡ’ ಎಂಬ ಹೆಸರಿನ ಬೋಟು, ನವೆಂಬರ್ 17ರ ಸಂಜೆ ತಂಡೇಲ್ (ಮುಖಂಡ) ಮತ್ತು ನಾಲ್ವರು ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಹೊರಟಿತ್ತು. ಅವರು ಪಣಂಬೂರು ಎನ್‌ಎಂಪಿಎ ಬಂದರು ಮತ್ತು ತಣ್ಣೀರುಬಾವಿ ಮಾರ್ಗದ ಮೂಲಕ ಮೀನುಗಾರಿಕೆ ನಡೆಸುತ್ತ, ನವೆಂಬರ್ 18ರಂದು ಸಮುದ್ರದಲ್ಲಿಯೇ ಇದ್ದು, ನಂತರ ಮಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು 17 ನಾಟಿಕಲ್ ಮೈಲಿ ದೂರದಲ್ಲಿ ಈ ಬೋಟ್ ಮೀನುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ.ನವೆಂಬರ್ 19 ರಂದು ಮೀನುಗಾರಿಕೆ ನಡೆಸುತ್ತಿದ್ದಾಗ, ಸಮುದ್ರ ಅಲೆಗಳ ಹೊಡೆತಕ್ಕೆ ಬೋಟಿನ ಕೆಳಭಾಗದ ಫೈಬರ್ ರಚನೆಗೆ ಹಾನಿಯಾಗಿದ್ದು, ನೀರು ರಭಸವಾಗಿ ಒಳನುಗ್ಗಿದೆ ಎನ್ನಲಾಗಿದೆ. ಬೋಟ್ ಮುಳುಗಲು ಪ್ರಾರಂಭಿಸುತ್ತಿದ್ದಂತೆಯೇ, ಸಮೀಪದಲ್ಲಿದ್ದ ‘ವೀರ ಮಾರುತಿ’ ಎಂಬ ಇನ್ನೊಂದು ಮೀನುಗಾರಿಕಾ ಬೋಟಿನ ಮೀನುಗಾರರು…

Read More

ಬಾಲ್ಯದ ಶಾಲಾ ಜೀವನದಲ್ಲಿಯೇ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಅತ್ಯುನ್ನತ “ಸಿಲ್ವರ್ ಎಲಿಫೆಂಟ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾನು ಈ ಮಟ್ಟಕ್ಕೆ ಬೆಳೆದು ನಿಲ್ಲಲು ತನ್ನ ಜೀವನದಲ್ಲಿ ಸೇವಾ ಮನೋಭಾವ,ಶಿಸ್ತು ಹಾಗೂ ತಾಳ್ಮೆ ಗಳಿಸಲು ಕಾರಣವಾಗಿದ್ದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಿಂದ ಎಂಬುದನ್ನು ಹಲವಾರು ಬಾರಿ ಯು.ಟಿ.ಖಾದರ್ ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.ಇದೇ ತಿಂಗಳ 26 ರಂದು ಲಕ್ನೋದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ರವರ ದಿವ್ಯ ಹಸ್ತದಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಹಾಗೂ ಮಲೇಶಿಯಾದ ಮೇಜರ್ ಜನರಲ್ ಡಾಟೋ ಟೋಹ್ ಚೂನ್ ಸಿಯಾಂಗ್ ರವರು ಕೂಡಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ .

Read More

ತೊಕ್ಕೊಟ್ಟು: ಉಳ್ಳಾಲ – ತೊಕ್ಕೊಟ್ಟು ಪ್ರದೇಶದ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಬಿಜೆಪಿ ಮುಖಂಡೆ ಲಲಿತಾ ಡಿ ಸುಂದರ್ (79) ಇಂದು ಸಂಜೆ ತಮ್ಮ ತೊಕ್ಕೊಟ್ಟು ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಲಲಿತಾ ಡಿ ಸುಂದರ್‌, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲೂ ಹೋರಾಟಗಾರರಿಗೆ ನೆರವಾಗಿದ್ದರು. ಮಹಿಳಾ ದೌರ್ಜನ್ಯಕ್ಕೆ ವಿರುದ್ದ ಹೋರಾಡಿ ಅನೇಕ ಅಶಕ್ತ, ಬಡ ಮಹಿಳೆಯರಿಗೆ ನೆರವಾಗಿದ್ದರು. ಬಡ ಹೆಣ್ಣು ಮಕ್ಕಳ ವಿವಾಹ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಅಪಘಾತಕ್ಕೀಡಾದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರು. ತೊಕ್ಕೊಟ್ಟುವಿನ ಹೃದಯಭಾಗದಲ್ಲಿರುವ ತಮ್ಮ ಕಟ್ಟಡದಲ್ಲಿ ಅನೇಕ ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದ ಕಚೇರಿಗಾಗಿ ಉಚಿತವಾಗಿ ಒದಗಿಸುತ್ತಾ ಬಂದಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ದ.ಕ. ಘಟಕ, ಸಮುದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷೆ, ಜನ್ಮಭೂಮಿ ಸಹಕಾರಿ ಸಂಘದ ನಿರ್ದೇಶಕಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದರು. ಸೇವಾ ಮನೋಭಾವದಿಂದ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತೆ ಎಂದು ಖ್ಯಾತರಾಗಿದ್ದರು. ಉಳ್ಳಾಲ…

Read More

ಉಳ್ಳಾಲ:ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಮಾಡೂರು ಇದರ ಶಾಲಾ ಕ್ರೀಡೋತ್ಸವ 2025 ಕಾರ್ಯಕ್ರಮ ಮಾಡೂರು ಮೈದಾನದಲ್ಲಿ ನಡೆಯಿತು. ಪಾರಿವಾಳ ಹಾಗೂ ಬಲೂನ್ ನನ್ನು ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರುತಲಪಾಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಭಟ್ ತಲಪಾಡಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿ ,ಶಿಕ್ಷಕರು ಎಂಟು ಗಂಟೆ ಮಕ್ಕಳನ್ನು ಸಾಕಿ ಬೆಳೆಸುತ್ತಾರೆ. ಪೋಷಕರು ಮಕ್ಕಳನ್ನು ಶಿಕ್ಷಕರಿಗೆ ಬಿಟ್ಟು ಕೊಡಬೇಕು. ಶಿಕ್ಷಕರು ಅವರನ್ನು ಉನ್ನತ ಹಂತಕ್ಕೆ ತಲುಪಿಸುತ್ತಾರೆ. ಶಿಕ್ಷಣ, ಮಕ್ಕಳು ಬೆಳೆಯಬೇಕು, ಇದಕ್ಕೆ ನಾವು ಪ್ರೋತ್ಸಾಹ ನೀಡಬೇಕು . ಅವರು ದೇಶದ ಉತ್ತಮ ಪ್ರಜೆ ಆಗಬೇಕು ಎಂದರು. ಮಂಗಳೂರು ದಕ್ಷಿಣ ವಲಯ ಶಿಕ್ಷಣ ಕೇಂದ್ರದ ಬಿಆರ್ ಪಿ ಸುಜಾತ ಮಾತನಾಡಿ, ಮಕ್ಕಳ ಸಂಖ್ಯೆ ಹೆಚ್ಚಾಗಲು ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮುಖ್ಯ.ಸರಕಾರಿ ಶಾಲೆಯನ್ನ ಉನ್ನತೀಕರಿಸಲು ಎಲ್ಲರ ಶ್ರಮ ಅಗತ್ಯ ಎಂದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಭೂಮಾಪಕರ ಸಂಘದ ಅಧ್ಯಕ್ಷ ನಾಗರಾಜ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ವಿದ್ಯಾರ್ಥಿಗಳ ಸಾಮೂಹಿಕ ಪಥ…

Read More

ಕೊಣಾಜೆ: ವಿಶ್ವವಿದ್ಯಾನಿಲಯಗಳು ಕಟ್ಟಡದಿಂದ ಅಲ್ಲ ವಿದ್ಯಾರ್ಥಿಗಳ ಸಾಧನೆಯಿಂದ ಬೆಳೆಯಬೇಕು. ಸ್ನಾತಕೋತ್ತರ ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ತರ ಜವಬ್ಧಾರಿಯಾಗಿದೆ ಮತ್ತು ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಂಗಳೂರು ವಿವಿಯು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಡಿ ವಿವೇಕ್ ಆಳ್ವ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಣೇಮಪಾಲನಾ ನಿರ್ದೇಶನಾಲಯ ಇದರ ವತಿಯಿಂದ ಮೂರು ದಿನಗಳ ಪ್ರತಿಭಾ ಪ್ರತಿಭಾ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಕೀಳರಿಮೆಯ ಬಿಟ್ಟು ಉತ್ತಮ ಪರಿಶ್ರಮದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಸ್ನಾತಕೋತ್ತರ ಶಿಕ್ಷಣ‌ಕ್ಕೆ ಇಂದಿಗೂ ಬಹಳ ಬೇಡಿಕೆ ಇದೆ. ವಿವಿಗೆ ಪೂರಕವಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಅವರು ಮಾತನಾಡಿ, ಅವಕಾಶಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿರಬೇಕು ಜೊತೆಗೆ ಅವಕಾಶಗಳ ಸೃಷ್ಡಿಕರ್ತರಾಗಬೇಕಿದೆ ಎಂದರುಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಅಧ್ಯಕ್ಷತೆಯ ವಹಿಸಿ‌ ಮಾತನಾಡಿ, ಜೀವನದಲ್ಲಿ ತಾಳ್ಮೆ, ಅನುಕಂಪ,‌ ಮಾನವೀಯ ಮೌಲ್ಯ ಬಹಳ ಮುಖ್ಯವಾಗುತ್ತವೆ.…

Read More

ಮಂಗಳೂರು: ಮೊಂಟೆಪದವು ನಿವಾಸಿಗಳಾಗಿದ್ದ ಮರಿಕ್ಕಳ ಜಮಾಅತಿಗೆ ಒಳಪಟ್ಟ ಸುನ್ನೀ ಕಾರ್ಯಕರ್ತರಾದ ಇಬ್ರಾಹಿಮ್ ಬಟ್ಯಡ್ಕ . ಅಟೋ ಚಾಲಕ ಮನ್ಸೂರ್ ಮರಿಕ್ಕಳ ಅಬೂಬಕ್ಕರ್ ಮೊಂಟೆಪದವು ಅವರು ಇತ್ತೀಚೆಗೆ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದು , ಆ ಕುಟುಂಬದ ಮನೆಗೆ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಿಷೇಶ ಪ್ರಾರ್ಥನೆ ನಡೆಸಿದ್ದಾರೆ. ಅದಾದ ಬಳಿಕ ನ.18 ಮಂಗಳವಾರ ಬೆಳಿಗ್ಗೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಪ್ರಧಾನ ಕಾರ್ಯದರ್ಶಿ ಆಶ್ರಫ್ ಸಅದಿ ಮಲ್ಲೂರು ನೇತೃತ್ವದಲ್ಲಿ ಆ ಕುಟುಂಬಕ್ಕೆ ಗರಿಷ್ಠ ಸಹಾಯವನ್ನು ಸರಕಾರ ನೀಡಬೇಕು ಎಂದು ಕರ್ನಾಟಕ ವಿಧಾನ ಸಭಾದ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸಿದ್ದೀಖ್ ಸಖಾಫಿ ಮೂಳೂರು,ಬದ್ರುದ್ದೀನ್ ಅಝ್ಹರಿ ಕೈಕಂಬ, ಹೈದರ್ ಅಲಿ ಹಿಮಮಿ ಮಲಾರ್ ಉಪಸ್ಥಿತರಿದ್ದರು

Read More

ಬೆಂಗಳೂರು : ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಹಾಡಹಗಲೇ ಎಟಿಎಂ ವಾಹನವನ್ನು ತಡೆದು 7.11 ಕೋಟಿ ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡೆದಿದೆ. ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ಹಾಕಲೆಂದು ಜಿಜೆ 10 ಎಚ್‌ಟಿ 9173 ಸಂಖ್ಯೆ ವಾಹನ ಹಣ ತುಂಬಿಕೊAಡು ತೆರಳುತ್ತಿತ್ತು. ಈ ವೇಳೆ ಇನ್ನೋವಾದಲ್ಲಿ ಬಂದ ಆರೇಳು ಜನರ ಗ್ಯಾಂಗ್ ಎಟಿಎಂ ವಾಹನ ತಡೆದು ನಾವು ಆರ್‌ಬಿಐ ಅಧಿಕಾರಿಗಳು ಎಂದು ಹೇಳಿಕೊAಡು ದೋಚಿದ್ದಾರೆ. ಬುಧವಾರ ಹಾಡಹಗಲೇ ನಗರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದಾರೆ. ಇದಕ್ಕೆ ಕಾರಣ ಏನು?ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ. ಎಂಬುದರ ಬಗ್ಗೆ ಈಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ…

Read More

ಕುತ್ತಾರ್: ಮುನ್ನೂರು ಗ್ರಾಮ ಕುತ್ತಾರ್ ಭಂಡಾರ ಬೈಲ್ ಪದ್ಮಪ್ಪ ನಾಯ್ಕ್ ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಪದ್ಮಪ್ಪ ನಾಯ್ಕ್ ಮಂಗಳೂರು ಹೆಂಚಿನ ಕಾರ್ಖಾನೆಯಲ್ಲಿ ದುಡಿಯುತ್ತ ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲ ಕಾರ್ಮಿಕರನ್ನು ಪಕ್ಷ ಸದಸ್ಯರಾಗಿ ಮಾಡಿ ಸಿಪಿಎಂ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದರು. ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಯ ಮುಖಾಂತರ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿ ಗುರುತಿಸಿ ಕೊಂಡಿದ್ದರು.ಮೃತರ ಅಂತಿಮ ದರ್ಶನ ಅವರ ಸ್ವಲ್ಪ ಗೃಹದಲ್ಲಿ ನಡೆದ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಗೌರವ ಸಲ್ಲಿಕೆ ನಡೆಸಲಾಯಿತು. ಪಕ್ಷದ ಜಿಲ್ಲಾ, ಮತ್ತು ಸ್ಥಳೀಯ ಮುಖಂಡರುಗಳಾದ ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲಿಯಾನ್, ಆನಂದ ದೇಸೋಡಿ, ವಿಶ್ವನಾಥ್ ತೇವುಲ, ಜಯಂತ್ ನಾಯ್ಕ್, ಮಹಾಬಲ್ ದೆಪ್ಪೆಲಿಮಾರ್, ಶೇಖರ್ ಕುಂದರ್, ವಿಕಾಸ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು ; ಶ್ರೀ ಕದ್ರಿ ಮಂಜುನಾಥ ಸ್ವಾಮಿ, ಶ್ರೀ ಶರವು ಮಹಾಗಣಪತಿ, ಶ್ರೀ ಮಂಗಳಾದೇವಿಯ ಆಶೀರ್ವಾದದೊಂದಿಗೆ, ಉರ್ವಾ ಮಾರಿಯಮ್ಮನ ಸಾನಿಧ್ಯದಲ್ಲಿ ನಿರ್ಮಾಣವಾಗಲಿರುವ ಕನ್ನಡ ಚಲನಚಿತ್ರ “ವಾದಿರಾಜ ವಾಲಗ ಮಂಡಳಿ” ಯ ಮುಹೂರ್ತ ನ. 21 ರಂದು ಶುಕ್ರವಾರ 9 ಗಂಟೆಗೆ ನಡೆಯಲಿದೆ ಎಂದು ನಿರ್ಮಾಪಕರಾದ ಡಾ.ಎಂ ಎನ್ ರಾಜೇಂದ್ರ ಕುಮಾರ್ ರವರು ತಿಳಿಸಿದ್ದಾರೆ. ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, “ಹೋಗುಳ” ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ “ಜೀಕನ್ನಡ” ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಹಾಗೇನೇ, ಪ್ರತಿಭಾವಂತ ನಿರ್ದೇಶಕ ಎಂ.ಡಿ.ಶ್ರೀಧರ ಅವರ ಜನಮೆಚ್ಚುಗೆಯನ್ನು ಪಡೆದಿರುತ್ತದೆ. ನಿರ್ದೇಶನದಲ್ಲಿ “ಗಲಾಟೆ” ಎಂಬ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು, ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ “ಗಲಾಟೆ” ಚಲನಚಿತ್ರ ‘ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ ಎಂದರು. ‘ಎಂ.ಎನ್. ಆರ್ ಪ್ರೊಡಕ್ಷನ್’ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ…

Read More

ಕಾರ್ಕಳ : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದ ಮೇರೆಗೆ ಅತಿಥಿ ಶಿಕ್ಷಕನನ್ನು ಕರ್ತವ್ಯದಿಂದ ವಜಾ ಗೊಳಿಸಿದ ಘಟನೆ ಸೋಮವಾರ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ನಡೆದಿದೆ. ಮೂಲತಃಕಲಬುರಗಿಯನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್‌ ವಜಾಗೊಂಡ ಶಿಕ್ಷಕ. ಈ ಶಿಕ್ಷಕ 2025ರ ಜೂನ್‌ನಲ್ಲಿ ಅತಿಥಿ ಶಿಕ್ಷಕನಾಗಿ ಸೇರ್ಪಡೆಗೊಂಡಿದ್ದರು. ವಿದ್ಯಾರ್ಥಿಗಳಿಗೆ 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಅವರ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರವನ್ನು ತೆಗೆಸುವುದು ಇತ್ಯಾದಿ ಕೃತ್ಯಗಳ ಮೂಲಕ ಪೋಷಕರ ಕೆಂಗಣ್ಣಿಗೆ ತುತ್ತಾಗಿದ್ದರು. ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಸೋಮ ವಾರ ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ಪೊಲೀಸರೂ ತೆಗೆದುಕೊಂಡಿದ್ದರು. ಅನೇಕ ಬಾರಿ ಎಚ್ಚರಿಕೆ ಮಕಾಂದಾರ್‌ಗೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಪ್ರಾಂಶುಪಾಲರು ಆ ಶಿಕ್ಷಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕ್ರಮ ಕೈಗೊಂಡಿದ್ದಾರೆ.

Read More