ಉಳ್ಳಾಲ; ಅಲ್ಫಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಳ್ಳಾಲ ಫುಟ್ಬಾಲ್ ಅಕಾಡೆಮಿ ವತಿಯಿಂದ ಬೇಸಿಗೆ ಫುಟ್ಬಾಲ್ ಶಿಬಿರವು ಎ.9ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ.

ಉಳ್ಳಾಲದ ಗ್ರೀನ್ಸ್ ಫೀಲ್ಡ್ ಮೈದಾನದಲ್ಲಿ ಬೆಳಗ್ಗೆ 6;30ರಿಂದ 9;30ರವರೆಗೆ ಶಿಬಿರ ನಡೆಯಲಿದೆ. 6ರಿಂದ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದು ಉಳ್ಳಾಲ ಫುಟ್ಬಾಲ್ ಅಕಾಡೆಮಿಯ ಹೆಡ್ ಕೋಚ್ ತಮೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9972724345


