ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಪ್ರಾರಂಭವಾಗಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಬೋಧನೆಗೆ ದ್ವಿ ಭಾಷಾ ನೀತಿಯಂತೆ ಶಿಕ್ಷಣ ಇಲಾಖೆಯು ತಯಾರಿ ನಡೆಸುತ್ತಿದೆ.

ಸರಕಾರಿಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ ನಡೆಯುತ್ತಿದೆ. ಇದು ಸಂತೋಷದಾಯಕವಾದAತ ವಿಚಾರ. ಆದರೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇದರಿಂದಾಗಿ ಮಕ್ಕಳ ಸಂಖ್ಯೆಯು ತೀರಾ ಕಡಿಮೆಯಾಗುವ ಸಂಭವವಿದೆ. ಆದುದರಿಂದ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿಯೂ ಅನುದಾನಿತ ಎಲ್ ಕೆ ಜಿ ಮತ್ತು ಯುಕೆಜಿ ಹಾಗೂ ಒಂದನೇ ತರಗತಿ ಪ್ರಾರಂಭಿಸಲು ಅನುಮತಿ ನೀಡುವಂತೆ ಮಂಗಳೂರು ವಿಧಾನಸಭಾ ಶಾಸಕರು, ಕರ್ನಾಟಕ ರಾಜ್ಯದ ಜನಪ್ರಿಯ ವಿಧಾನಸಭಾಧ್ಯಕ್ಷರಾದ ಹಾಜಿ ಯುಟಿ ಖಾದರ್ ಫರೀದರ್ ಅವರಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ಶಿಕ್ಷಕರ ಸಂಘದ ಪರವಾಗಿ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಪರವಾಗಿ ವಿನಂತಿಸಲಾಯಿತು. ಸಂಘದ ಮನವಿಗೆ ತಕ್ಷಣ ಸ್ಪಂದಿಸಿದ ಮಾನ್ಯ ಸ್ಪೀಕರ್ ರವರು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಪ್ರಸ್ತುತ ಸಮಸ್ಯೆಯನ್ನು ಮನವರಿಕೆ ಮಾಡಿ ಕೊಟ್ಟರು. ಅದಕ್ಕೆ ಇರುವ ಕಾನೂನು ತೊಡಕುಗಳನ್ನ ಮುಂದಿನ ದಿವಸಗಳಲ್ಲಿ ಪರಿಹರಿಸಿ ಸೂಕ್ತ ಪರಿಹಾರವನ್ನು ಒದಗಿಸುವುದಾಗಿಯೂ ಅವರು ತಿಳಿಸಿದರು.
ಅಲ್ಲದೆ ಅನುದಾನಿತ ಶಾಲೆಗಳು ಎದುರಿಸುತ್ತಿರುವ ಹಲವರು ಸಮಸ್ಯೆಗಳನ್ನು ಮಾನ್ಯ ಸ್ಪೀಕರ್ ರವರೊಂದಿಗೆ ಚರ್ಚಿಸಿ ಪ್ರಮುಖವಾಗಿ ಮಾನ್ಯತೆ ನವೀಕರಣದ ಬಗ್ಗೆ ಗಮನ ಸೆಳೆದಾಗ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದ ಗೌರವಾನ್ವಿತ ಸ್ಪೀಕರ್ ರವರು ಮಾನ್ಯತೆ ನವೀಕರಣದ ಬಗ್ಗೆ ಇರುವ ಎಲ್ಲಾ ಕ್ಲಿಷ್ಟಕರವಾದ ಅಂಶಗಳನ್ನು ಹೋಗಲಾಡಿಸಿ ಶೀಘ್ರದಲ್ಲಿಯೇ ಅನುದಾನಿತ ಶಾಲೆಗಳಿಗೆ ಪೂರಕವಾದ ಆದೇಶ ಹೊರಬರಲಿದೆ ಎಂದು ತಿಳಿಸಿದರು. ಅನುದಾನಿತ ಪ ಶಾಲೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಎಲ್ಲಾ ಅಂಶಗಳನ್ನು ಸಡಿಲಗೊಳಿಸಲಾಗುವುದು ಮತ್ತು ನವೀಕರಣದ ಅವಧಿಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಸ್ಪೀಕರ್‌ರವರನ್ನ ಭೇಟಿಯಾದ ನಿಯೋಗದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ತ್ಯಾಗಂ ಹರೇಕಳ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆಎಂ ಕೆ ಮಂಜನಾಡಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಡಾಕ್ಟರ್ ಮಂಜುಳಾ ಶೆಟ್ಟಿ, ಶಿವಕುಮಾರ್, ರವಿಶಂಕರ್ ಅವರು ಉಪಸ್ಥಿತರಿದ್ದರು


