Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಒಂಭತ್ತುಕೆರೆ: ಟಿಪ್ಪು ಜಯಂತಿಯ ದಿನದಿಂದ (ನವಂಬರ್ 10) ಆರಂಭವಾದ ಅಹಿತಕರ ಘಟನೆಗಳ ಸರಣಿ ಇತರೆಡೆಗಳಲ್ಲಿ ಕಡಿಮೆಯಾಗುತ್ತಾ ಬಂದಿದ್ದರೂ ಉಳ್ಳಾಲದಲ್ಲಿ ಮಾತ್ರ  ಇಂತಹ ಘಟನೆಗಳು  ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿನ ಒಂಬತ್ತುಕೆರೆಯ ಅಬ್ಬಂಜರ ಶ್ರೀಗೋಪಾಲಕೃಷ್ಣ ಭಜನಾ ಮಂದಿರಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಕಿಟಕಿ ಗಾಜುಗಳನ್ನು ಪುಡಿಗೈದ ಘಟನೆ ಸೋಮವಾರ ನಡೆದಿದೆ. ಜೊತೆಗೆ ಮಂದಿರದ ಮುಂದೆ ನಿಲ್ಲಿಸಲಾಗಿದ್ದ ಮಿನಿಬಸ್‍ಗೆ ಕೂಡಾ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಬಿಗಿಪಹರೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‍ಆರ್‍ಪಿ ಜಂಟಿಯಾಗಿ ಪಥಸಂಚಲನ ನಡೆಸಿದ ಬೆನ್ನಿಗೇ ಇಂದು ಮತ್ತೆ ಕಿಡಿಗೇಡಿಗಳು ತಮ್ಮ ಕುತಂತ್ರವನ್ನು ಮುಂದುವರಿಸಿದ್ದಾರೆ. ಯುವಕರಿಗೆ ಚೂರಿಯಿರಿತ, ಬಸ್‍ಗಳಿಗೆ ಕಲ್ಲು ಹೀಗೆ ಹಲವು ಘಟನೆಗಳ ನಂತರವೂ ಉಳ್ಳಾಲದ ಜನರು ಶಾಂತಿ ಕಾಯ್ದುಕೊಂಡು ಬಂದಿದ್ದು ದುಷ್ಕರ್ಮಿಗಳ ಗಲಭೆಯನ್ನು ಸೃಷ್ಠಿಸುವ ಹುನ್ನಾರವನ್ನು ವಿಫಲ ಮಾಡಿದ್ದಾರೆ. ಈ ಮಧ್ಯೆ ಉಳ್ಳಾಲ ಪರಿಸರದಲ್ಲಿ ಶಾಂತಿ ಕೆಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಕೆಲಸ ಮುಗಿಸಿ ಮನೆಗೆ ಸ್ನೇಹಿತನ ಜತೆಗೆ ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೇರೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಎಂಬಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದಾತನನ್ನು ಪಾವೂರು ಇನೋಳಿ ನಿವಾಸಿ ಧೀರಜ್ (25) ಎಂದು ಗುರುತಿಸಲಾಗಿದೆ. ಮಂಗಳೂರಿನ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮುಗಿಸಿ, ಸ್ನೇಹಿತ ಸೀತೇಶ್ ಎಂಬಾತನ ಬೈಕಿನಲ್ಲಿ ಹಿಂಬದಿ ಸವಾರನಾಗಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಪ್ಪು ಪಲ್ಸಾರ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.  ಇದರಿಂದ ಭುಜದ ಭಾಗಕ್ಕೆ ಗಾಯಗೊಂಡಿರುವ ಧೀರಜ್ ನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ:  ಸಮುದ್ರಕ್ಕೆ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಈಜುಗಾರ ಸಂಘದವರು ರಕ್ಷಣೆಗೆ ಮುಂದಾದರೂ ಕಾರ್ಯಾಚರಣೆ ವಿಫಲವಾಗಿ ಆತ ಸಾವನ್ನಪ್ಪಿರುವ ಘಟನೆ  ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.ಮಾಡೂರು ನಿವಾಸಿ ದಿ| ನಾರಾಯಣ ಎಂಬವರ ಪುತ್ರ ರಂಜಿತ್ (26) ಆತ್ಮಹತ್ಯೆಗೈದವರು ಎಂದು ಗುರುತಿಸಲಾಗಿದೆ.  ಶನಿವಾರ ಮಧ್ಯಾಹ್ನ ಸೋಮೇಶ್ವರದ ರುದ್ರಪಾದೆಯಲ್ಲಿ ಕುಳಿತಿದ್ದ ರಂಜಿತ್ ಏಕಾಏಕಿ ಸಮುದ್ರಕ್ಕೆ ಧುಮುಕಿದಾಗ  ಸ್ಥಳದಲ್ಲೇ ಇದ್ದ ಈಜುಗಾರರಾದ  ಅಶೋಕ್ ಮತ್ತು ಮೋಹನ್ ಎಂಬವರು  ಸಮುದ್ರಕ್ಕೆ ರಕ್ಷಣೆಗೆಂದು ತೆರಳಿದ್ದರು. ಆದರೆ ನೀರಿನ ರಭಸಕ್ಕೆ ರಂಜಿತ್  ಮುಳುಗಿದ್ದರಿಂದಾಗಿ  ನೀರಿನಲ್ಲಿ ಸಾವನ್ನಪ್ಪಿದ್ದಾರೆ.  ಒಂದು ಗಂಟೆ ಕಾಲ  ಇಬ್ಬರೂ ಈಜುಗಾರರು ಸಮುದ್ರದಲ್ಲಿ ಹುಡುಕಾಡಿ ಮೃತದೇಹವನ್ನು  ಹೊರತೆಗೆದಿದ್ದಾರೆ.  ಬೆಂಗಳೂರಿನಲ್ಲಿ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಂಪೆನಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಇತ್ತೀಚೆಗೆ  ಊರಿಗೆ ಬಂದಿದ್ದ.  ಮಾನಸಿಕವಾಗಿ ನೊಂದುಕೊಂಡಿದ್ದ ಈತ ಆತ್ಮಹತ್ಯೆಗೈದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿಚಾರಣೆಗೆಂದು ಕರೆದ ಪೊಲೀಸರನ್ನು ಕಂಡು ಸಮುದ್ರದಲ್ಲಿ ಈಜಿ ಪರಾರಿಯಾಗಲು ಯತ್ನಿಸುತ್ತಿದ್ದ ಮೂರು ಮಂದಿಯ ತಂಡಕ್ಕೆ ದೋಣಿಯಲ್ಲಿ ಇದ್ದ ದುಷ್ಕರ್ಮಿಗಳು ದೊಣ್ಣೆಯಿಂದ ತಲೆಗೆ ಬಡಿದು ಸಮುದ್ರದಲ್ಲೇ ಹಲ್ಲೆ ನಡೆಸಿರುವ ಘಟನೆ ಮೊಗವೀರಪಟ್ನದ ಸಮುದ್ರತೀರದಿಂದ ಕೆಲ ಮೀ ದೂರದಲ್ಲಿ ಶನಿವಾರ ಸಂಜೆ ಸಂಭವಿಸಿದ್ದು, ಘಟನೆಯಿಂದಾಗಿ ಮೊಗವೀರಪಟ್ನದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಉಳ್ಳಾಲಬೈಲು ನಿವಾಸಿ ಇಕ್ಬಾಲ್ ಎಂಬವರಿಗೆ ತಂಡವೊಂದು ಕೋಟೆಪುರ ಡೀರೋಡ್ ಬಳಿ ಮಾರಕಾಸ್ತ್ರದಿಂದ ಶುಕ್ರವಾರ ರಾತ್ರಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಉಪನಿರೀಕ್ಷಕಿ ಭಾರತಿ ಅವರ ತಂಡ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿತ್ತು. ಈ ಸಂದರ್ಭ ಮೊಗವೀರಪಟ್ನದತ್ತ ತೆರಳಿದ್ದ ಎಸ್.ಐ ಭಾರತಿ ನೇತೃತ್ವದ ಪೊಲೀಸರ ತಂಡ ಮೀನುಗಾರಿಕೆಯಿಂದ ವಾಪಸ್ಸಾಗಿ ಊಟ ಮುಗಿಸಿ ಮೊಗವೀರಪಟ್ನ ಬಳಿ ಸಮುದ್ರ ತೀರದಲ್ಲಿ ಕುಳಿತಿದ್ದ ಐದು ಮಂದಿಯನ್ನು ವಿಚಾರಣೆಗೆಂದು ಕರೆದಿದ್ದರು. ಇದರಿಂದ ಗಾಬರಿಗೊಂಡ ಐದು ಮಂದಿ ಯುವಕರ ಪೈಕಿ ಮೂವರು ಓಡಿ ಪರಾರಿಯಾದರೆ, ಇಬ್ಬರು ಸಮುದ್ರಕ್ಕೆ ಜಿಗಿದು ಈಜುತ್ತಲೇ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ದೊಣ್ಣೆಯಿಂದ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಬೋಳಿಯಾರ್: ಬೋಳಿಯಾರ್ ಗ್ರಾಮದ ಜಳಕದಕಟ್ಟೆ ಎಂಬಲ್ಲಿ ಕೂಲಿ ಕಾರ್ಮಿಕ ಮಹಿಳೆಯೋರ್ವರು ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಕುರುವಿನಕೊಪ್ಪ ಸೌಂದತ್ತಿ ನಿವಾಸಿ ಅಶೋಕ್ ಮೊರಬದ ಎಂಬವರ ಪತ್ನಿ ಅನ್ನಪೂರ್ಣ(29) ಆಕೆಯ ಮಕ್ಕಳಾದ ಪರಶುರಾಮ (9) ಹಾಗೂ ತಾರಾ (10) ಆತ್ಮಹತ್ಯೆಗೆ ಶರಣಾದವರು. ಮೂರು ವಾರಗಳ ತನ್ನ ಪ್ರಿಯಕರ ಅಶೋಕ್ ಎಂಬಾತನ ಜೊತೆ ಬೋಳಿಯಾರ್‍ಗೆ ಬಂದಿದ್ದ ಅವರು ಜಾರದಗುಡ್ಡ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಮಹಿಳೆ ಮಕ್ಕಳ ಜೊತೆ ಜಳಕದಕಟ್ಟೆ ನದಿಬಳಿ ಬಂದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಶನಿವಾರ ಬೆಳಗ್ಗೆ ಮೂವರ ಮೃತದೇಹ ಪತ್ತೆಯಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಗನ ಕಾಲನ್ನು ಮತ್ತು ಮಗಳ ಸೊಂಟಕ್ಕೆ ಶಾಲಿನಿಂದ ತನ್ನ ಸೊಂಟಕ್ಕೆ ಕಟ್ಟಿ ನದಿಗೆ ಹಾರಿದ್ದು ಕಂಡು ಬಂದಿದೆ. ಇದರಿಂದಾಗಿ ಮೂವರು ಮೃತದೇಹವೂ ಒಂದೇ ಕಡೆ ಜೊತೆಯಾಗಿಯೇ ಪತ್ತೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಪ್ರಿಯಕರ ಅಶೋಕ್‍ನನ್ನು ಕೊಣಾಜೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸೋಮೇಶ್ವರ ಸಮುದ್ರಕ್ಕೆ ಹಾರಿ 20-25ರೊಳಗಿನ ಯುವಕನೋರ್ವ ಆತ್ಮಹತ್ಯೆಗೈದಿರುವ ಘಟನೆ ನಡೆದಿದ್ದು, ಮಧ್ಯಾಹ್ನ ವೇಳೆ ಮೃತದೇಹವನ್ನು ಸ್ಥಳೀಯ ಈಜುಗಾರರು ನೀರಿನಿಂದ ಹೊರತೆಗೆದಿದ್ದಾರೆ. ಅಪರಿಚಿತನಾಗಿರುವ ಈತ ನೀಲಿ ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟನ್ನು ಧರಿಸಿದ್ದು, ಸುಮಾರು 20-25ರೊಳಗಿನ ವಯಸ್ಸಿನವನಾಗಿದ್ದಾನೆಂದು ತಿಳಿದುಬಂದಿದೆ. ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ ಈತನನ್ನು ಸ್ಥಳೀಯ ಈಜುಗಾರರಾದ ಅಶೋಕ್ ಮತ್ತು ಮೋಹನ್ ಎಂಬವರು ರಕ್ಷಿಸಲು ಯತ್ನಿಸಿದರಾದರೂ ನೀರಿನ ರಭಸಕ್ಕೆ ಅದು ಸಾಧ್ಯವಾಗಲಿಲ್ಲ. ಬಳಿಕ ಒಂದು ಗಂಟೆಯ ಕಾಲ ಹುಡುಕಾಡಿದ ನಂತರ ಮೃತದೇಹ ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆಂದು ತಿಳಿದುಬಂದಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರಿನಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದ ಬಸ್ ಗೆ ಮುಕ್ಕಚ್ಚೇರಿ ಸಮೀಪ ದುಷ್ಕರ್ಮಿಗಳು ಕಲ್ಲೆಸೆದು ಗಾಜು ಪುಡಿಗೈದಿರುವ ಘಟನೆ ಇಂದು ನಡೆದಿದೆ. ಕರಾವಳಿ ಟ್ರಾವೆಲ್ಸ್ ಬಸ್ಸಿನ ಎಡಬದಿಯ ಗಾಜಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕ ವಿಜಯ್ ಎಂಬವರು ಸ್ವಲ್ಪ ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಇಕ್ಬಾಲ್ ಎಂಬವರ ಮೇಲೆ ನಾಲ್ವರು ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳ್ಳಾಲದಲ್ಲಿ ಗಲಭೆ ನಡೆಸುವ ಹುನ್ನಾರದಿಂದ ಕಿಡಿಗೇಡಿಗಳು ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

Read More

ಪ್ಯಾರೀಸ್: ಪ್ರಾನ್ಸ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇವರ ದಾಳಿಗೆ ಸುಮಾರು 153ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಪ್ಯಾರೀಸ್ ನ ಕನ್ಸರ್ಟ್ ಸಭಾಂಗಣಕ್ಕೆ ನುಗ್ಗಿದ್ದ ಉಗ್ರರು ಸರಣಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 153ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಐಎಸ್ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ. ದಾಳಿ ನಡೆಸಿದ 15 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪ್ಯಾರೀಸ್ ಪೊಲೀಸರು ತಿಳಿಸಿದ್ದಾರೆ. ಉಗ್ರರು ಅಟ್ಟಹಾಸಕ್ಕೆ ಅಮಾಯಕರು ಬಲಿಯಾಗಿರುವ ಬಗ್ಗೆ ಜಗತ್ತಿನೆಲ್ಲೆಡೆ ವ್ಯಾಪಕ ಖಂಡಣೆ ವ್ಯಕ್ತವಾಗಿದೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಕಾಪಿಕಾಡಿನ ಪೂಜಾ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದ್ದ ಮದುವೆ ನಿಶ್ಚಿತಾರ್ಥ ಸಮಾರಂಭವನ್ನು ನಿಲ್ಲಿಸಲು ಮುಂದಾದ ಉಳ್ಳಾಲ ಪೊಲೀಸರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಡೆದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಂದುವರಿಸಿದ ಘಟನೆ ನಡೆಯಿತು. ಮಾಡೂರು ನಿವಾಸಿ ಯುವಕನ ನಿಶ್ಚಿತಾರ್ಥ ಸಮಾರಂಭ ಕಾಪಿಕಾಡಿನ ಪೂಜಾ ಕಾಂಪ್ಲೆಕ್ಸ್‍ನಲ್ಲಿ ಆಯೋಜಿಸಲಾಗಿತ್ತು. ರಸ್ತೆಬದಿಯಲ್ಲಿ ಜನ ಸೇರಿರುವುದನ್ನು ಕಂಡು ಉಳ್ಳಾಲ ಪೊಲೀಸರು ನಿಶ್ಚಿತಾರ್ಥ ಸಭಾಂಗಣದ ಹೊರಗೆ ಜಮಾಯಿಸಿ, ಕಾರ್ಯಕ್ರಮವನ್ನು ಮುಂದೂಡಲು ಒತ್ತಡ ಹೇರಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಉಳ್ಳಾಲ್ ಅವರು ಪೊಲೀಸರ್ನು ತರಾಟೆಗೆ ತೆಗೆದುಕೊಂಡು, ಬಂದ್ ಗೆ ಪೊಲೀಸರೇ ಪ್ರಚೋದಿಸಿದಂತಾಗಿದೆ. ಗಲಭೆ ಪೊಲೀಸರಿಂದಲೇ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿ ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ ಅವರಿಗೆ ಕರೆ ಮಾಡಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಡ್ಡಿಪಡಿಸದಂತೆ ಒತ್ತಡ ಹೇರಿದ್ದರೆನ್ನಲಾಗಿದೆ. ಆ ಬಳಿಕ ನಿಶ್ಚಿತಾರ್ಥ ಸಮಾರಂಭ ಸುಸೂತ್ರವಾಗಿ ನಡೆಯಿತೆನ್ನಲಾಗಿದೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಟಿಪ್ಪು ಸುಲ್ತಾನ್ ಜಯಂತಿ ವಿಚಾರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಗಲಭೆಗೆ ಸಂಬಂಧಿಸಿ ಬಂಟ್ವಾಳದಲ್ಲಿ ಹತ್ಯೆಗೀಡಾದ ಹರೀಶ್ ಹತ್ಯೆಯನ್ನು ಖಂಡಿಸಿ ಹಿಂದು ಸಂಘಟನೆಗಳು ಕರೆ ನೀಡಿದ ಬಂದ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗಲಭೆಗೆ ಪ್ರಚೋದಿಸುವ ಕೃತ್ಯ ನಡೆದಿದ್ದು, ಮುಡಿಪು ಸಮೀಪ ಎರಡು ಬಸ್ಸುಗಳಿಗೆ ಕಲ್ಲು ತೂರಾಟ, ಕುತ್ತಾರು ಸಮೀಪ ಅಳವಡಿಸಲಾದ ಬ್ಯಾನರುಗಳಿಗೆ ಹಾನಿ ಮಾಡಲಾಗಿದ್ದು, ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿ ಬಿಗಿ ಬಂದೋಬಸ್ತ್ ಮುಂದುವರಿದಿದೆ. ಮುಡಿಪು ಜಂಕ್ಷನ್ನಿನಲ್ಲಿ ನಿಲ್ಲಿಸಲಾಗಿದ್ದ ಎರಡು ಖಾಸಗಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಗಾಜು ಪುಡಿಗೈದು ಹಾನಿಗೊಳಿಸಿದ್ದಾರೆ. ಕುತ್ತಾರು ಜಂಕ್ಷನ್ನಿನಲ್ಲಿ ಟಿಪ್ಪು ಜಯಂತಿಗೆ ಶುಭಹಾರೈಸಿ ಹಾಕಲಾದ ಬ್ಯಾನರುಗಳನ್ನು ಬ್ಲೇಡಿನಿಂದ ಹರಿದು ಹಾನಿಗೊಳಿಸಲಾಗಿದೆ. ಮಾಡೂರು ಸಮೀಪ ರಸ್ತೆಯಲ್ಲಿ ಟಯರ್ ಗಳನ್ನು ಸುಟ್ಟು ಹಾಕಲಾಗಿದೆ. ಮೆಡಿಕಲ್ ಅಂಗಡಿ- ಪೇಪರ್ ಸ್ಟಾಲ್ ಮುಚ್ಚಿದಕ್ಕೆ ವಿರೋಧ: ತೊಕ್ಕೊಟ್ಟುವಿನಲ್ಲಿ ಮೆಡಿಕಲ್ ಅಂಗಡಿಗಳನ್ನು ಮತ್ತು ಪೇಪರ್ ಸ್ಟಾಲನ್ನು ಮುಚ್ಚಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿರೋಧಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ…

Read More