ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ನೂತನ ಸೇತುವೆಯಲ್ಲಿ ಡಾಮರೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ನೂತನ ಸೇತುವೆಯಲ್ಲಿ ಸೇತುವೆಯ ಸುರಕ್ಷತೆಗಾಗಿ ಸೋಮವಾರ ಡಾಮರೀಕರಣ ಕಾರ್ಯ ನಡೆಯುತ್ತಿದ್ದು, ಅದೂ ವಾರದ ಮೊದಲ ದಿನವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರವಿದ್ದುದರಿಂದ ಪಂಪುವೆಲ್‍ನಿಂದ ಕೊಲ್ಯ ತನಕ ವಾಹನಗಳ ಸರತಿ ಸಾಲು ಕಂಡುಬಂತು. ಇನ್ನೊಂದು ಭಾಗದಲ್ಲಿ ಮಂಗಳೂರಿನಿಂದ ತೊಕ್ಕೊಟ್ಟು ಜಂಕ್ಷನ್ ದಾಟಿ ವಿವಿ ಕಡೆಗೆ ಸಂಚರಿಸುವ ವಾಹನಗಳಿಗೆ ವಿಳಂಬವಾಯಿತಾದರೂ ತೊಕ್ಕೊಟ್ಟು ಜಂಕ್ಷನ್ ದಾಟಿದ ಬಳಿಕ ವಾಹನಗಳ ಸಂಚಾರ ಸುಸೂತ್ರವಾಗಿತ್ತು. ಹಾಗಿದ್ದರೂ ವಿವಿ ರಸ್ತೆಯ ಮೂಲಕ ಮಂಗಳೂರಿಗೆ ಸಂಚರಿಸುವ ವಾಹನಗಳಿಗೆ ಈ ಸಂಕಷ್ಟ ತಪ್ಪಲಿಲ್ಲ. ಉಳ್ಳಾಲ ತಲಪಾಡಿ ಕಡೆಗೆ ಸಂಚರಿಸುವ ವಾಹನಗಳ ತೊಂದರೆ ಹೆಳತೀರದು. ನೇತ್ರಾವತಿ ಸೇತುವೆಯಲ್ಲಿ ಏಕಮುಖ ಸಂಚಾರವಿದ್ದುದರಿಂದ ವಾಹನ ಸಂಚಾರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಯಿತು.ಪೊಲೀಸ್ ಸಿಬ್ಬಂದಿ ಹಾಗೂ ಹೋಂ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ವಿದ್ಯಾರ್ಥಿಗಳು ಗದ್ದೆಗಿಳಿದು ಬಿತ್ತನೆ ಮತ್ತು ನೇಜಿ ನಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೊಣಾಜೆ ಪರಂಡೆಯ ಒಂದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಕಿಟೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೇ ಬಿತ್ತುವುದರಿಂದ ಹಿಡಿದು ಮುಡಿ ಕಟ್ಟುವವರೆಗೆ ಹಂತ ಹಂತವಾಗಿ 3 ತಿಂಗಳ ಅವಧಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅನ್ನದಾತರೆನಿಸಿಕೊಂಡಿದ್ದಾರೆ. ಮಂಗಳೂರಿನಂತಹ ನಗರದ ಹೃದಯ ಭಾಗದ ಕಾಲೇಜೊಂದರ ವಿದ್ಯಾರ್ಥಿಗಳು ಗದ್ದೆಗೆ ಇಳಿಯುವುದೇ ಸೋಜಿಗ. ಅಂತಹದ್ದರಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಗದ್ದೆಗೆ ಇಳಿದಿಲ್ಲ. ಒಬ್ಬ ಪ್ರಗತಿಪರ ಕೃಷಿಕರು ಮಾಡಿದಂತೆ ಭತ್ತದ ಬಿತ್ತನೆ, ನಾಟಿ, ಕಳೆ ತೆಗೆಯುವುದು, ಕಟಾವು ಮಾಡಿ ಮುಗಿಸಿ ಹಾರಿಸಿ, ಅದೇ ಬಳಿಕ ಭತ್ತವನ್ನು ಹಂಡೆಯಲ್ಲಿ ಬೇಯಿಸಿ ಸೆಗಣಿ ಸಾಸಿದ ಆಂಗಳದಲ್ಲಿ ಒಣಗಿಸಿ ಬಳಿಕ ಭತ್ತ ಕುಟ್ಟುವ ಗುಂಡಿಯಲ್ಲಿ ಕುಟ್ಟಿ ಅದರಿಂದ ಅಕ್ಕಿ ತೆಗೆದು ಮುಡಿ ಕಟಟ್ಟುವವರೆಗೆ ಏನೆಲ್ಲ ಮಾಡಬೇಕು ಅದೆಲ್ಲವನ್ನು ಮಾಡಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆಯೇ ಸರಿ. ಕೊಣಾಜೆ ಪರಂಡೆಯ ಧನಂಜಯ…
ತೊಕ್ಕೊಟ್ಟು: ಹಕ್ಕು ಮತ್ತು ಚೈತನ್ಯದ ಜತೆಗೆ ಗೌರವ ಹಾಗೂ ನ್ಯಾಯ ಒದಗಿಸುವ ಕಾರ್ಯ ಟೈಲರ್ಸ್ ಸಂಘಟನೆಯಿಂದ ಆಗಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟುವಿನ ಕ್ಲಿಕ್ ಸಭಾಂಗಣದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್‍ನ ಉಳ್ಳಾಲ ಕ್ಷೇತ್ರ ಸಮಿತಿ ಇದರ 6 ನೇ ಬೃಹತ್ ಕ್ಷೇತ್ರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲಾ ಕ್ಷೇತ್ರದಲ್ಲಿ ಸಂಘಟನೆಗಳಿದ್ದರೂ, ರಾಜಕಾರಣಿಗಳು ಮಾತ್ರ ಅಸಂಘಟಿತರಿದ್ದಾರೆ. ವೃತ್ತಿಯನ್ನು ಪ್ರೀತಿಸಿದಾಗ ಬದುಕು ಅರಳುವುದು. ವೇಗದ ಸಮಾಜದಲ್ಲಿ ವೃತ್ತಿಗಳು ಪರಿವರ್ತನೆಯಾಗುತ್ತಲೇ ಇರುತ್ತದೆ. ಇದು ಸಮಾಜದ ಪರಿವರ್ತನೆಗೂ ಪೂರಕ. ಆದರೆ ಸಂಘಟನೆಗಳಿರುವಲ್ಲಿ ಮಾತ್ರ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯ . ಈ ನಿಟ್ಟಿನಲ್ಲಿ ಸ್ವರ ಮತ್ತು ಶಕ್ತಿಯನ್ನು ಒಂದುಗೂಡಿಸಿ ಕಾರ್ಯ ನಿರ್ವಹಿಸುವ ಟೈಲರ್ಸ್ ಸಂಘಟನೆಗೆ ಸರಕಾರದಿಂದ ಎಲ್ಲಾ ರೀತಿಯೂ ಸಹಕಾರ ನೀಡಲು ಸಿದ್ಧ ಎಂದರು. ಕಾರ್ಯಕ್ರಮವನ್ನು ಟೈಲರ್ಸ್ ಅಸೋಸಿಯೇಷನ್‍ನ ರಾಜ್ಯಾಧ್ಯಕ್ಷ ಬಿ.ವಸಂತ್ ಉದ್ಘಾಟಿಸಿದರು. ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ನಾರಾಯಣ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾ. ಹೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಉಳ್ಳಾಲ ನಗರಸಭೆ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಅವರು ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ಬಳಿ ಇರುವ ಅನಧಿಕೃತ ಗೂಡಂಗಡಿಗಳನ್ನು ಪೌರ ಕಾರ್ಮಿಕರ ಮುಖೇನ ತೆರವುಗೊಳಿಸಿದರು. ಅಂಗಡಿ ಮಾಲೀಕರ ತೀವ್ರ ವಿರೋಧದ ನಡುವೆಯೂ ಪೋಲೀಸರ ಮಧ್ಯಸ್ಥಿಕೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಉಳ್ಳಾಲ ನಗರಸಭೆಯು ಧ್ವನಿವರ್ಧಕದ ಮೂಲಕ ಸೂಚನೆ ನೀಡಿತ್ತಾದರೂ ಅಂಗಡಿಗಳು ತೆರವುಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಅವರು ಗುರುವಾರದಂದು ಸಿಬ್ಬಂದಿ ಮತ್ತು ಪೌರಾಯುಕ್ತರ ಸಹಕಾರದಿಂದ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಗೂಡಂಗಡಿ ಮಾಲೀಕರು ಅಂಗಡಿಗಳಲ್ಲಿ ಸಾಮಾನು ಇದ್ದು ಈಗ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಪೋಲೀಸರು ಮಧ್ಯ ಪ್ರವೇಶಿಸಿದರು .ಈ ವೇಳೆ ಪೋಲೀಸರ ಜತೆಯೂ ವರ್ತಕನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ನಡೆಯಿತು. ಪೌರಾಯುಕ್ತೆ ರೂಪಾ ಟಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮುದ್ರ ತೀರದಲ್ಲಿ ನಾಡದೋಣಿಯವರು ಮೀನುಗಾರಿಕೆ ಮಾಡುವ ಪ್ರದೇಶದಲ್ಲಿ ದೊಡ್ಡ ಬೋಟಿನ `ಬುಲ್ ಟ್ರಾಲ್’ ಬಲೆ ಹಾಕಿ ಮೀನಿನ ಸಂತತಿಯನ್ನು ನಾಶ ಮಾಡಿ ಉಳ್ಳಾಲ ಪ್ರದೇಶದ ಮೀನುಗಾರರಿಗೆ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಉಳ್ಳಾಲ ಮೊಗವೀರಪಟ್ನದ ನಾಡದೋಣಿ ಮೀನುಗಾರಿಕಾ ಒಕ್ಕೂಟದ ಮಾಲಕರು ಮತ್ತು ಕಾರ್ಮಿಕರು ಬುಲ್ ಟ್ರಾಲ್ ಅನ್ನು ನಿಷೇಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮೀನುಗಾರರು ಹಿರಿಯರು ಕಲಿಸಿಕೊಟ್ಟಂತಹ ಪರಿಸರಕ್ಕೆ ಪೂರಕವಾದ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಸಮುದ್ರ ದಡದಿಂದ ಸುಮಾರು ಐದು ಮಾರು ದೂರದವರೆಗೆ ಹುಟ್ಟು (ದಂಡ್ ) ನ ಸಹಾಯದಿಂದ ದೋಣಿಯಲ್ಲಿ ನೀರನ್ನು ತಳ್ಳುತ್ತಾ ಮೀನಿಗೆ ತಕ್ಕಂತೆ ಬಲೆಯನ್ನು ಹಾಕಿ ಕಷ್ಟದಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ ಕಳದ ಮೂರು ವರ್ಷದಿಂದ ಉಳ್ಳಾಲ ಮತ್ತು ಬೆಂಗರೆಯ ಸುಮಾರು ಹತ್ತು ಜೋಡಿ ಬೋಟಿನವರು ಬುಲ್ ಟ್ರಾಲ್ ನಲ್ಲಿ ಒಂದು ದೊಡ್ಡ ಬಲೆಯನ್ನು 100 ಮೀಟರ್ ಅಂತರದಲ್ಲಿ ಎರಡು ಬೋಟಿನವರು ಎಳೆದುಕೊಂಡು ದಡದಿಂದ…
ಉಳ್ಳಾಲ್ ನ್ಯೂಶ್ ನೆಟ್ ವರ್ಕ್ ಮಾರಿಪಳ್ಳ: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನನ್ನು ಬರ್ಬರವಾಗಿ ಹತ್ಯೆಗೈಯಲು ಪ್ರಯತ್ನಿಸಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳ ಎಂಬಲ್ಲಿ ನಡೆದಿದೆ. ಮಾರಿಪಳ್ಳ ನಿವಾಸಿ ಮಾದ ಹನೀಫ್(೩೦) ಎಂಬಾತನನ್ನು ಕಾರು ಮತ್ತು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಇತನನ್ನು ನಗರದ ಆಸ್ಪತ್ರೆಗೆ ಸೇರಿಸಲಾಗಿದ್ದು ಇತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹನೀಪ್ ಯಾನೆ ಮಾದ ಹನೀಪ್ ರೌಡಿ ಶೀಟರ್ ಆಗಿದ್ದು, 2014ರಲ್ಲಿ ನಡೆದ ಆಟೋ ಚಾಲಕ ರಿಫಾಯಿ ಹತ್ಯೆಯಲ್ಲಿ ಭಾಗಿಯಾಗಿದ್ದು ಈ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇತ ಹತ್ತು ದಿನಗಳ್ ಹಿಂದೆಯಷ್ಟೆ ಜೈಲಿನಿಂದ ಬಂದಿದ್ದನೆಂದು ತಿಳಿದು ಬಂದಿದ್ದು, ರಿಫಾಯಿ ಹತ್ಯೆಗೆ ಪ್ರತಿಕಾರ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಬಂಟ್ವಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿ ಪ್ರಕರಣ ದಾಖಲಿಸಿಕೊಂಡು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಲಯನ್ಸ್ ಕ್ಲಬ್ ಲಿಯೋ ಲಯನೆಸ್ ಕ್ಲಬ್ ಲಿಯೋ ಮಂಗಳೂರು, ದ.ಕ.ಜಿಲ್ಲಾ ಗೃಹರಕ್ಷಕದಳ, ಚೂಂತಾರು ಸರೋಜಿನಿ ಭಟ್ ಪ್ರತಿಸ್ಠಾನ (ರಿ) ಮಂಗಳೂರು ಮತ್ತು ಮುನೀಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಇವರ ಪ್ರಾಯೋಜಕತ್ವದಲ್ಲಿ ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಇವರ ಸಹಕಾರದೊಂದಿಗೆ ‘ಗೃಹರಕ್ಷಕರ ದಿನ’ ದ ಅಂಗವಾಗಿ ರಕ್ತದಾನ ಶಿಬಿರವು ಮಂಗಳೂರಿನ ಶ್ರಿ ಮುನೀಶ್ವರ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಗೃಹರಕ್ಷಕದಳದ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಸ್ವಾರ್ಥ ಸೇವೆ ನೀಡುವ ಗೃಹರಕ್ಷಕರನ್ನು ಅಭಿನಂದಿಸಿ ರಕ್ತದಾನ ದಂತಹ ಮಹತ್ಕಾರ್ಯ ಮಾಡುವ ಗೃಹರಕ್ಷಕ ಬಳಗದ ಸಮಾದೇಷ್ಟರನ್ನು ಶ್ಲಾಘಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅರವಿಂದ್ ಕಿಣಿ ಮತ್ತು ಕಾರ್ಯದರ್ಶಿ ಗಳಾದ ಮೋನಪ್ಪ ಶೆಟ್ಟಿ ಲಯನೆಸ್ ಅಧ್ಯಕ್ಷರಾದ ಹೇಮಾ ರಾವ್ ತೇಜಸ್ವಿನಿ ಆಸ್ಪತ್ರೆಯ ಸಂಯೋಜಕರಾದ ಕೆ ಪ್ರಬಾಕರ್ ರಾವ್ ಪೊಲೀಸ್ ಲೇನ್ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾದ್ಯಕ್ಷರಾದ ಹರಿಶ್ಚಂದ್ರ ಕುಂಬ್ಳೆ ಮತ್ತು ಕೋಶಾಧಿಕಾರಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಣಚೂರು: ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ದೇರಳಕಟ್ಟೆ ಇದರ 2015-16ನೇ ಸಾಲಿನ ವಾರ್ಷಿಕೋತ್ಸವವು ಸಮಾರಂಭವು ಕಾಲೇಜು ಸಭಾಂಗಣದಲ್ಲಿ ವಿಜೃಂಭಣೆಯೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಕಣಚೂರು ವಿದ್ಯಾಸಂಸ್ಥೆಯ ಮುಖ್ಯಸ್ಥ ಯು.ಕೆ.ಮೋನುರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಆಸ್ಪತ್ರೆಯ ಅನಾಟಮಿ ವಿಭಾಗದ ಮುಖ್ಯಸ್ಥ ಹಾಗೂ ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಉಪಾಧ್ಯಕ್ಷರಾದ ಡಾ.ಅರುಣಾಚಲಂ ಕುಮಾರ್ , ಸಲಹಾ ಮಂಡಳಿಯ ಚೇರ್ ಮೆನ್ ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತಾರವರಿಂದ ವಾರ್ಷಿಕ ವರದಿ ಮಂಡಿಸಿದರು. ನಂತರ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನೆರವೇರಿತು. ಕಾಲೇಜಿನ ವಿದ್ಯಾರ್ಥಿನಿಯರ ವಿಜ್ಞಾನ ವಸ್ತುಪ್ರದರ್ಶನ ಮತ್ತು ಆಹಾರಮೇಳ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿತ್ತು. ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಮೊನಿಸ್, ಅಬ್ದುಲ್ ರಹಿಮಾನ್, ಕಣಚೂರು…
(ರಾಮಗಢ)ಜಾರ್ಖಂಡ್: ಕಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಮಗಢ ಜಿಲ್ಲೆಯ ಬುರ್ಕುಂಡಾ ರೇಲ್ವೆ ಕ್ರಾಸಿಂಗ್ ಬಳಿ ಸಂಭವಿಸಿದೆ. ಹೌರಾ-ಭೂಪಾಲ್ ಎಕ್ಸ್‌ಪ್ರೆಸ್ ರೈಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಐವರು ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಪತ್ರತು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ ಎಸ್ಪಿ ಎಂ. ತಮಿಳವವನ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ತಜಿಕಿಸ್ತಾನ್ ನಲ್ಲಿ 7.2ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಹಿಂದುಖುಷ್ ಪರ್ವತ ಶ್ರೇಣಿಯಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆಯಲ್ಲಿ ಕಂಪನ ಸಂಭವಿಸಿದೆ. ಭೂಕಂಪದಿಂದ ಇದುವರೆಗೂ ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ನೆರೆಯ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ದೆಹಲಿ, ಶ್ರೀನಗರ್,ಜಮ್ಮು-ಕಾಶ್ಮೀರ ಉತ್ತರಪ್ರದೇಶ್, ಪಂಜಾಬ್ ಸೇರಿದಂತೆ ಉತ್ತರ ಭಾರತಕ್ಕೂ ಭೂಕಂಪನದ ಬಿಸಿ ತಟ್ಟಿದೆ ಎಂದು ವರದಿ ವಿವರದಿಸಿದೆ.

