ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇದೆಯಾದರೂ ಅದನ್ನು ಮೊಟಕುಗೊಳಿಸಲಾಗಿದೆ, ಈ ನಿಟ್ಟಿನಲ್ಲಿ ಮತ್ತೆ ಪಂಚಾಯಿತಿಗೇ ಅಧಿಕಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಪಂಚಾಯಿತಿ ರಾಜ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಎರಡೂವರೆ ಸಾವಿರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದ್ದು ಒಂದೂವರೆ ಸಾವಿರ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿಗೊಳಿಸಲಾಗಿದೆ. ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಹೆಚ್ಚಿಲಾಗಿದೆ. ಮೂರನೇ ಹಣಕಾಸು ಅಯೋಗದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾ ಪಂಚಾಯಿತಿಗಳಿಗೆ ವಿಶೇಷ ನಿಧಿಯಿಂದ ವರ್ಷಕ್ಕೆ ಒಂದು ಕೋಟಿ ಹಾಗೂ ವಿವೇಚನಾ ನಿಧಿಯಿಂದ ಎರಡು ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು ಎಂದು ಬುಧವಾರ ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ರಮೇಶ್ ಕುಮಾರ್ ವರದಿ ಅನುಷ್ಠಾನ ನಿಟ್ಟಿನಲ್ಲಿ ಬಿಜೆಪಿ ನೇರ ಹೋರಾಟ ನಡೆಸಿದೆ. ಕೇಂದ್ರ ಸರ್ಕಾರ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಯುಪಿಎ ಸರ್ಕಾರ ನೀಡುತ್ತಿದ್ದ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನೋಟೀಸು ನೀಡಿ ನಾಲ್ಕು ವಾರಗಳು ಕಳೆದರೂ ತೊಕ್ಕೊಟ್ಟು ಜಂಕ್ಷನ್ನಿನಲ್ಲಿರುವ ಅಂಗಡಿಗಳನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ ಬುಧವಾರ ಸಹಾಯಕ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಕ್ರೇನ್ ಮೂಲಕ ಆವರಣ ಗೋಡೆಗಳನ್ನು ತೆರವುಗೊಳಿಸುವ ಮೂಲಕ ಮುಂದಿನ ಸೋಮವಾರದ ಒಳಗೆ ಸಂಪೂರ್ಣ ಖಾಲಿ ಮಾಡುವಂತೆ ಗಡುವು ನೀಡಲಾಯಿತು. ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ಇರುವ ಎರಡು ಕಾಂಪ್ಲೆಕ್ಸ್‍ಗಳ ಆವರಣ ಗೋಡೆ, ಆರ್.ಈ.ಬಿ ಕಾಂಪ್ಲೆಕ್ಸ್ ಕಟ್ಟಡದ ಎದುರುಭಾಗದ ಆವರಣ ಗೋಡೆ ಮತ್ತು ಆಕ್ಸಿಸ್ ಬ್ಯಾಂಕಿನ ಖಾಲಿಯಿದ್ದ ಎಟಿಎಂ ಕಟ್ಟಡವನ್ನು ಜೆಸಿಬಿ ಮೂಲಕ ತೆರುವುಗೊಳಿಸುವ ಮೂಲಕ ಮನವರಿಕೆ ಮಾಡಲಾಯಿತು. ಸೋಮವಾರದ ಮುನ್ನ ಖಾಲಿ ಮಾಡಿ : ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಆಯುಕ್ತ ಡಾ. ಅಶೋಕ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಕೊನೆ ಹಂತದಲ್ಲಿದ್ದರೂ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಕಟ್ಟಡಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನೆಡೆಯಾಗಿದೆ. ಇದರಿಂದ ತೊಕ್ಕೊಟ್ಟುವಿನಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗುತ್ತಿದ್ದು, ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ಕಟ್ಟಡ ಮಾಲೀಕರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸಮುದಾಯದ ಅಭಿವೃದ್ಧಿಗೆ ಹಿಫುಲ್ ಕುರಾನ್ ಮತ್ತು ಮದ್ರ ಅಗತ್ಯವಿದ್ದು, ಧಾರ್ಮಿಕ ಶಿಕ್ಷಣವನ್ನು ಪಡೆದರೆ ಮಾತ್ರ ಇಸ್ಲಾಂ ಧರ್ಮ ಮತ್ತು ಸಮಾಜದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದು ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಹೇಳಿದರು. ಅವರು ದೇರಳಕಟ್ಟೆಂiÀ ಬದ್ಯಾರ್‍ನಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಸ್ಥಾಫಿಸಲುದ್ದೇಶಿಸಿರುವ ಹಿಫ್ಲುಲ್ ಕುರಾನ್ ಕಾಲೇಜು ಮತ್ತು ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶಂಸುಲ್ ಉಲಮಾ ಹಿಫ್ಲುಲ್ ಕುರಾನ್ ಕಾಲೇಜು ಸ್ಥಾಪಿಸಲುದ್ದೇಶಿಸಿರುವುದು ಸ್ವಾಗತಾರ್ಹ. ಇಂತಹ ಇಸ್ಲಾಂ ಧರ್ಮದ ಕಲಿಕೆ ಸ್ಫೂರ್ತಿ ನೀಡುವ ಯೋಜನೆಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ. ಎಲ್ಲರೂ ಒಟ್ಟಾಗಿ ಈ ಕಾರ್ಯ ಮಾಡಿದಲ್ಲಿ ಇಲ್ಲಿನ ಜನತೆಗೆ ಕಲಿಕೆಗೆ ಉತ್ತಮ ಅವಕಾಶ ಸಿಗುತ್ತದೆ. ಸಮಾಜ ಮತ್ತು ಧರ್ಮದ ಬಗ್ಗೆ ಕೂಲಂಕಷ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನೆರವೇರಿಸಿದರು.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಕಾಸರಗೋಡ್ ಸಂಯುಕ್ತ…
ಸನ್ನಿ ಲಿಯೋನ್ ಅಭಿನಯದ ಚಿತ್ರ ನೋಡೋದು ಎಂದರೆ ಸಾಕು ಪಟ್ಟೆ ಹುಡುಗರಿಗೆ ಅದು ಎಲ್ಲಿಲ್ಲದ ಹುಚ್ಚು. ಮಾದಕ ನಟಿ, ವೆರಿ ಸೆಕ್ಸ್ ಆಂಡ್ ಗ್ಲಾಮರಸ್ ಚೆಲುವೆ ಇದೀಗ ತಾಯಿಯಾಗುವ ಬಯಕೆಯನ್ನು ಎಲ್ಲರ ಮುಂದೆ ಬಿಚ್ಚಿದ್ದಾಳೆ. ಮಾಧ್ಯಮವೊಂದರಲ್ಲಿ ಮಾತಾನಾಡಿಕೊಳ್ಳುತ್ತ ಸನ್ನಿ ಪ್ರತಿಯೊಂದು ನಟ ನಟಿಯರಿಗೂ ಕೂಡ ಅವರದೇ ಆದ ಖಾಸಗಿ ಜೀವನವಿರುತ್ತದೆ ಅದನ್ನು ಅನುಭವಿಸಬೇಕು ಅದರಂತೆ ನಾನು ಮತ್ತು ನನ್ನ ಗಂಡ ಡೆಸಿಯಲ್ ವೇಬರ್ ತಂದೆ ತಾಯಿ ಪಟ್ಟ ಪಡೆದುಕೊಳ್ಳಲು ಸಿದ್ಧರಾಗುತ್ತಿದ್ದೇವೆ ಎಂದು ಹೇಳಿದ್ದಾಳೆ. ಈಕೆ ಮಾತನ್ನು ಕೇಳಿ ಆದೆಷ್ಟೋ ಸಿನಿಮಾ ನಿರ್ಮಾಪಕ ಎದೆಯಲ್ಲಿ ಢವ ಢವ ಶುರುವಾಗಿದೆ. ಬಿಚ್ಚಲೇ ಗೌರಮನಂತೆ ಎಲ್ಲವನ್ನು ಚಿಚ್ಚಿಹಾಕಿ ತನ್ನ ಮೈಮಾಟದ ಜೊತೆಗೆ ಅದ್ಬೂತ ಅಭಿನಯದ ಮೂಲಕ ಪಟ್ಟೆ ಹುಡುಗರ ಕನಸಿನ ರಾಣಿಯಾಗಿರುವ ಸನ್ನಿ ಲಿಯೋನ್ ಸದ್ಯ ಅಭಿನಯಿಸದಿದ್ದರೆ ಮಾತ್ರ ಅಭಿಮಾನಿಗಳಿಗೆ ಮಾತ್ರ ಇದು ಸಹಿಸಲಾಗದ ನೋವು. ಸನ್ನಿ ಲಿಯೋನ್ ಅಭಿನಯದ ಚಿತ್ರಗಳಿಗೆ ಬೇಡಿಕೆ ಇರುವುದರಿಂದ ಆಕೆಯನ್ನು ನಂಬಿಕೊಂಡು ಚಿತ್ರ ಮಾಡಲೆಂದು ಹೊರಟಿರುವ ಆದೆಷ್ಟೋ ನಿರ್ಮಾಪಕ ನಿರ್ದೇಶಕರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನರ್ಮ್ ಆಶ್ರಯದಲ್ಲಿ ನಗರದಿಂದ ೨೦ಕಿಮೀ ಪರಿಧಿಯಲ್ಲಿ ಸಂಚರಿಸಲು ೩೫ ಬಸ್ಸುಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಈ ನಿಟ್ಟಿನಲ್ಲಿ ನಾಳೆಯಿಂದ ಉಳ್ಳಾಲ ಪ್ರದೇಶಗಳಿಗೆ ಮೂರು ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ ಎಂದು ಕೆಎಸ್‍ಆರ್‍ಟಿಯ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ. ಫೈಲ್ ಚಿತ್ರ ಸ್ಟೇಟ್‍ಬ್ಯಾಂಕ್‍ನಿಂದ ಬೀರಿ, ಮಾಡೂರು, ಮಡ್ಯಾರ್ ರಸ್ತೆಯಿಂದ ಮುಡಿಪಿನ ವರೆಗೂ ಕೆಎಸ್‍ಆರ್‍ಟಿಸಿ ಬಸ್ಸು ಸಂಚರಿಸಲಿದ್ದು, ಸ್ಟೇಟ್‍ಬ್ಯಾಂಕಿನಿಂದ ಸೋಮೆಶ್ವರ ಮಾರ್ಗದ ಮೂಲಕ ಸಂಚಾರಿಸಲಿದೆ. ನಾಳೆಯಿಂದ ಗ್ರಾಮಾಂತರ ಪ್ರದೇಶಗಳಿಗೆ ಎರಡು ಬಸ್ಸುಗಳ ಆರಂಭವಾಗಲಿದ್ದು ಬಳಿಕ ಎರಡು ದಿನಗಳ ನಂತರ ಮತ್ತಷ್ಟು ಬಸ್ಸುಗಳು ರಸ್ತೆಗಿಳಿಯಳಿವೆ. ಪೂರಕ ಸೌಕರ್ಯ ಒದಗಿಸುವ ಅನುಕೂಲವಾಗಲು ಪ್ರಥಮ ಹಂತದಲ್ಲಿ ಪರವಾನಿಗೆ ಪಡೆದಿರುವ ೧೭ ಬಸ್ಸುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಹೊಸ ಬಸ್ ಸೇವೆ ಆರಂಭಿಸುವ ಸಂದರ್ಭದಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಆರ್ಥಿಕ ಸಬಲೀಕರಣದ ಮೂಲಕ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು, ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಮಾಸ್ತಿಕಟ್ಟೆ ಅಜಾದ್ ನಗರದ ಹಝ್ರತ್ ಸೈಯ್ಯದ್ ಮದನಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‍ನ ಉಪಾಧ್ಯಕ್ಷ ಬಿ.ಜೆ. ಹನೀಫ್, ಕೋಶಾಧಿಕಾರಿ ನಾಝಿಂ, ಆಡಳಿತಾಧಿಕಾರಿ ಅಬ್ದುಲ್ ಲತೀಫ್, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಾಫ, ಉಳ್ಳಾಲ ನಗರ ಪಂಚಾಯಿತಿ ಸದಸ್ಯ ಅಶ್ರಫ್ ಬಾವಾ, ಇಬ್ರಾಹಿಂ ಶೌಕತ್, ಎಮ್.ಎಚ್. ಮಲಾರ್, ಕೆ.ಎಂ.ಕೆ. ಮಂಜನಾಡಿ, ದರ್ಗಾ ಮ್ಯಾನೇಜರ್ ಯೂಸುಫ್ ಅಲ್ ಮಸ್ಜಿದುಲ್ ಫಾರೂಕ್‍ನ ಉಪಾಧ್ಯಕ್ಷ ಅಹಮ್ಮದ್ ರಫೀಕ್ ಯು.ಸಿ., ಕೋಶಾಧಿಕಾರಿ ಮಹಮ್ಮದ್, ಅಬ್ದುಲ್ ಖಾದರ್ ಮುಸ್ಲಿಯಾರ್ ಹಾಗೂ ತೌಸಿಫ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಡವರಿಗೆ ಸಹಾಯ ಮಾಡುವುದು ಅವರ ಕಷ್ಟಕರ ದಿನಗಳಲ್ಲಿ ಸ್ಪಂದಿಸುವುದು ಪ್ರವಾದಿಯವರಿಗೆ ಇಷ್ಟದ ಕಾರ್ಯ ಎಂದು ಸುನ್ನತ್ ಮಾಸಿಕ ಸಂಪಾದಕ ಖತೀಬ್ ಯುನುಸ್ ಇಮ್ದಾದಿ ಹೇಳಿದರು. ಅವರು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಅಲ್-ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಪ್ರವಾದಿರವರ ಜನ್ಮ ತಿಂಗಳಿನ ಪ್ರಯುಕ್ತ “ಮೀಲಾದ್ ಕಿಟ್”ನ್ನು ಆರ್ಥಿಕವಾಗಿ ಹಿಂದುಳಿದ ಅರ್ಹ 20ಕುಟುಂಬಕ್ಕೆ ಉಚಿತ ರೇಶನ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಲ್-ಅಮೀನ್ ರಿಲೀಫ್ ಫೌಂಡೇಶನ್ 20ಕುಟುಂಬಗಳಿಗೆ ಪ್ರವಾದಿ ಜನ್ಮದ ನೆನಪಿಗಾಗಿ ಒಂದು ತಿಂಗಳಿಗೆ ಬೇಕಾಗುವ ರೇಶನ್ ಸಾಮಾಗ್ರಿಗಳನ್ನು ನೀಡುವ ಈ ಉತ್ತಮ ಮಾದರಿ ಕಾರ್ಯಕ್ರಮ ಬೇರೆ ಬೇರ ಸಂಘ ಸಂಸ್ಥೆಗಳು ಮುಂದಿನ ದಿನಗಳಲ್ಲಿ ನಡೆಸಿಕೊಂಡು ಬರಲಿ ಎಂದು ಆಶಿಸಿದರು. ಅಲ್-ಅಮೀನ್ ರಿಲೀಫ್ ಫೌಂಡೇಶನ್ ಚೇರ್‍ಮೆನ್ ಮನ್ಸೂರ್ ಹಳೇಕೊಟೆ ಪ್ರಾಸ್ತವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಸಮದ್ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಂದರಿ ಭಾಗ್ ಖತೀಬ್ ಶರೀಫ್ ಸಅದಿ, ಅಲ್-ಅಮೀನ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಬದಲಾದ ಜೀವನ ಶೈಲಿಯಲ್ಲಿ ಆಹಾರ ಪದ್ಧತಿಗೆ ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿಯೇ ಏರುಪೇರುಗಳು ಉಂಟಾಗುತ್ತಿದ್ದು ಯುವಕರು ಸಣ್ಣಪುಟ್ಟ ಎದೆನೋವನ್ನು ಲಘುವಾಗಿ ಪರಿಗಣಿಸದೆ, ದೇಹ ತಪಾಸಣೆ ನಡೆಸುವುದು ಉತ್ತಮ ಎಂದು ದೇರಳಕಟ್ಟೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಯು.ಕೆ. ಮೋನು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಕೈರಂಗಳ ಪಡಿಕ್ಕಲ್‍ನ ಬದ್ರುಲ್ ಹುದಾ ಅಸೋಸಿಯೇಶನ್ ವತಿಯಿಂದ ನಡೆದ ವೈದ್ಯಕೀಯ ಶಿಬಿರವನ್ನು ಕಣಚೂರು ಆಸ್ಪತ್ರೆಯ ಸಂಚಾಲಕ ಯು.ಕೆ. ಮೋನು ಅವರು ಉದ್ಘಾಟಿಸಿ ಮಾತನಾಡಿದರು. ಯುವಕರು ಸಮಾಜದ ಎಲ್ಲ ಕಾರ್ಯಚಟುವಟಿಕೆಗಳಲ್ಲೂ ತಮ್ಮನ್ನು ಉತ್ಸಾಹದಿಂದ ತೊಡಗಿಸುತ್ತಿದ್ದು, ಬಳಲಿದ ತಮ್ಮ ಶರೀರವನ್ನು ಮಾತ್ರ ವೈದ್ಯಕೀಯ ಪರೀಕ್ಷೆಗೊಳಪಡಿಸಲು ಉದಾಸೀನ ಪೃವೃತ್ತಿಯನ್ನು ತಾಳುತ್ತಿರುವುದು ಕಳವಳಕಾರಿ. ಬದಲಾದ ಜೀವನ ಶೈಲಿಯಲ್ಲಿ ಆರೋಗ್ಯದ ಏರುಪೇರುಗಳು ಸಹಜವಾಗಿದ್ದು, ಯುವಕರು ಇಂತಹ ಉಚಿತ ವೈದ್ಯಕೀಯ ಶಿಬಿರಗಳಲ್ಲಾದರೂ ತಮ್ಮ ದೇಹ ಪರೀಕ್ಷೆಗೊಳಪಡಿಸುವುದು ಉತ್ತಮ ಎಂದು ಹೇಳಿದರು. ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಧ್ಯಪ್ರದೇಶ : ಮದುವೆಗೆ ತೆರಳುತ್ತಿದ್ದ ದಿಬ್ಬಣದ ಬಸ್ ಉರುಳಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 15 ಮಂದಿ ದಾರುಣವಾಗಿ ಸಾವನ್ನಪ್ಪಿ ,20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಬಮ್ಮೊರಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಇಂಧೋರ್‌ನಿಂದ ಚಿಂದ್‌ವಾಡ ಎಂಬಲ್ಲಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದ್ದು ಬಸ್‌ನಲ್ಲಿ ಒಟ್ಟು 55 ಮಂದಿ ಇದ್ದರು ಎಂದು ಹೇಳಲಾಗಿದ್ದು, ದುರಂತದಲ್ಲಿ ೧೫ ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಗಾಯಾಳು ಗಳನ್ನು ಜಿಲ್ಲಾ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪುತ್ತೂರು : ಭಕ್ತಕೋಡಿ ರೆಂಜಿಲಾಡಿ ಸಮೀಪ ಮನುಷ್ಯನ ತಲೆಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ದ. 14ರಂದು ವರದಿಯಾಗಿದೆ. ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಇರುವ ಪದ್ಮಜ ಫಾರ್ಮ್ಸ್ ನ ಹಟ್ಟಿಯ ಬಳಿ ಗೋಣಿ ಚೀಲಗಳಲ್ಲಿ ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರ ಕಂಡುಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳದಲ್ಲಿ ನೂರಾರು ಮಂದಿ ಕುತೂಹಲಿಗರು ಜಮಾಯಿಸಿದ್ದಾರೆ. ಸಂಜೆಯ ವೇಳಗೆ ಗೋಣಿ ಚೀಲವೊಂದರಲ್ಲಿ ತಲೆಬುರುಡೆ ಪತ್ತೆಯಾಗಿತ್ತು. ಸ್ಥಳದಲ್ಲಿ ಜಮಾಯಿಸಿದ್ದ ಜನರು ಶರೀರದ ಇತರ ಭಾಗಗಳ ಅಸ್ಥಿಗಾಗಿ ಹುಡುಕಾಟ ನಡೆಸಿದ ವೇಳೆ ಇನ್ನೊಂದು ಚೀಲವೊಂದರಲ್ಲಿ ಕಾಲು ಬೆರಳು ಗೋಚರಿಸುವಂತಹ ಅಸ್ಥಿ ಪತ್ತೆಯಾಗಿದೆ.

