Author: UllalaVani

Kannada News From Coastal Karnataka

ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ತಜಿಕಿಸ್ತಾನ್ ನಲ್ಲಿ 7.2ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಹಿಂದುಖುಷ್ ಪರ್ವತ ಶ್ರೇಣಿಯಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ  7.2ರಷ್ಟು ತೀವ್ರತೆಯಲ್ಲಿ ಕಂಪನ ಸಂಭವಿಸಿದೆ. ಭೂಕಂಪದಿಂದ ಇದುವರೆಗೂ ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ನೆರೆಯ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ದೆಹಲಿ, ಶ್ರೀನಗರ್,ಜಮ್ಮು-ಕಾಶ್ಮೀರ ಉತ್ತರಪ್ರದೇಶ್, ಪಂಜಾಬ್ ಸೇರಿದಂತೆ ಉತ್ತರ ಭಾರತಕ್ಕೂ ಭೂಕಂಪನದ ಬಿಸಿ ತಟ್ಟಿದೆ ಎಂದು ವರದಿ ವಿವರದಿಸಿದೆ.

Read More

ಮುಂಬೈ: ಮುಂಬೈನ ಕಂಡವಲಿ ಪ್ರದೇಶದ ಗೋದಾಮುವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ 25-30 ಗ್ಯಾಸ್ ಸಿಲಿಂಡರ್‍ಗಳು ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 2ಭಾರಿ ಸ್ಫೋಟದಿಂದ ಮುಂಬೈ ಜನತೆಯೇ ಬೆಚ್ಚಿಬಿದ್ದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ 12 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಭವ್ಯ ಭಾರತ ದೇಶಕ್ಕೆ ಸಂವಿಧಾನ ಬರೆದ ಡಾ.ಬಿ. ಆರ್ ಅಂಬೇಡ್ಕರ್ ರವರು ಮರಣ ಹೊಂದಿದ ದಿನದಂದೇ ಪ್ಯಾಸಿಸ್ಟ್ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಬಾಬರಿ ಮಸೀದಿ ಕೇವಲ ಮುಸ್ಲಿಮರ ಪ್ರಾರ್ಥನ ಮಂದಿರವಾಗಿರಲಿಲ್ಲ , ಅದು ದೇಶದ ಸಂವಿಧಾನ ಹಾಗೂ ಜಾತ್ಯತೀತ ಮೌಲ್ಯಗಳ ಸಂಕೇತವಾಗಿತ್ತು . ಬಾಬರಿ ಮಸೀದಿ ದ್ವಂಸಗೊಂಡು ಇಂದಿಗೆ ಸುಮಾರು 23 ವರ್ಷ ಸಂದರೂ ಇದುವರೆಗೂ ಆರೋಪಿಗಳನ್ನು ಬಂಧಿಸದೇ ಇರುವುದು ನಿಜಕ್ಕೂ ಖೇದಕರ ಎಂದು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕರ್ನಾಟಕ ಉಪಾಧ್ಯಕ್ಷ ಸಯ್ಯದ್ ಇಬ್ರಾಹೀಂ ಅಲ್ ಖಾಸಿಮಿ ತಂಙಲ್ ಅಭಿಪ್ರಾಯಪಟ್ಟರು. ಅವರು ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ದೇರಳಕಟ್ಟೆ ಬಿ.ಸಿ.ಸಿ ಹಾಲ್ ನಲ್ಲಿ ನಡೆದ ಬಾಬರೀ ಮಸ್ಜಿದ್ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಾಬರಿ ಮಸ್ಜಿದ್ ವಿಚಾರದಲ್ಲಿ ಪಕ್ಷ ಭೇದ ಬಾವ ,ಅಭಿಪ್ರಾಯ ವ್ಯತಾಸವಿಲ್ಲದೇ ಇಮಾಮ್ ಕೌನ್ಸಿಲ್ ನಂತೆ ಸರ್ವ ಉಲಮಾ ಸಂಘಟನೆಗಳು ಹಾಗೂ ಮುಸ್ಲಿಂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಶ್ರೀ ನಾಗಬ್ರಹ್ಮ ಸ್ಥಾನದಲ್ಲಿ ಜನವರಿಯಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಆಮಂತ್ರಣ ಬಿಡುಗಡೆಗೊಳಿಸಿ, ಯಾವುದೇ ಒಂದು ಸಾಧನೆ ಮಾಡಬೇಕಾದರೆ ಅದರ ಹಿಂದೆ ಸಾಕಷ್ಟು ತ್ಯಾಗ ಇರುತ್ತದೆ, ಕೊಲ್ಯದಲ್ಲಿ ನಾಗಮಂಡಲ ನಡೆಯಲು ತ್ಯಾಗವೇ ಕಾರಣ. ಹಿಂದೆ ರಾಜಾಡಳಿತದಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಿದ್ದರೂ ರಾಜರ ನೆರವು ಕೇಳಲಾಗುತ್ತಿತ್ತು, ಇಂದು ಸರ್ಕಾರದ ನೆರವು ಅಗತ್ಯ ಎಂದು ತಿಳಿಸಿದರು. ನಾಗಮಂಡಲೋತ್ಸವಕ್ಕೆ ವರ್ಷಾನುಗಟ್ಟಲೆ ಯೋಜನೆ ರೂಪಿಸಿ ಮುಂದಿನ ಕಾರ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ಕೊಲ್ಯದಲ್ಲಿ ಇದೇ ರೀತಿ ಯೋಜನೆ ರೂಪಿಸಲಾಗಿದ್ದು ಈ ಮೂಲಕ ಕ್ಷೇತ್ರ, ನಾಡು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು. ಆgರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಹರೇಕಳದಲ್ಲಿ ನಾಗಮಂಡಲೋತ್ಸವ ನಡೆಯುವ ಸಂದರ್ಭ ತಾನು ಶಾಸಕನಾಗಿ ಆಯ್ಕೆಯಾಗಿದ್ದು, ಕೊಲ್ಯದಲ್ಲಿ ನಾಗಮಂಡಲೋತ್ಸವ ಸಂದರ್ಭ ಸಚಿವನಾಗಿದ್ದೇನೆ. ಇದಕ್ಕೆ ದೇವರ ಕೃಪೆ, ಹಿರಿಯರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾ ಆಡಳಿತ ಸಮಿತಿಗಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾಸಭೆಯ ಪ್ರಥಮ ಹಂತ ಶುಕ್ರವಾರ ಮಧ್ಯಾಹ್ನ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜರಗಿತು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಮದನಿ ಇವರ ನೇತೃತ್ವದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಯು.ಎಸ್.ಹಂಝ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಳ್ಳಾಲದ ಖಾಝಿ ನೇಮಕ ವಿರುದ್ಧ ಉಳ್ಳಾಲದಲ್ಲಿ ಬಣಗಳು ಆರಂಭವಾಗಿತ್ತು. ಇದರಿಂದ ದರ್ಗಾ ಆಡಳಿತ ಮಂಡಳಿ ಮತ್ತು ಮೇಲಂಗಡಿ ಹೊಸಪಲ್ಲಿಯ ನಡುವೆ ವಿವಾದ ಏರ್ಪಟ್ಟಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಹಿಂದೆ ಆಡಳಿತ ಸಮಿತಿ ರಚಿಸುವ ಸಂದರ್ಭ ಗಲಾಟೆ ನಡೆದು ಮೇಲಂಗಡಿಯ ಹೊಸಪಲ್ಲಿ ಆವರಣದಲ್ಲಿ ಹಿಂಸಾಚಾರ ನಡೆದಿತ್ತು. ಘಟನೆ ಮತ್ತೆ ಮರುಕಳಿಸದಂತೆ ದರ್ಗಾ ಸಮಿತಿ ಪೊಲೀಸ್ ಬಂದೋಬಸ್ತಿಗಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ನಾಲ್ಕು ತುಕಡಿಗಳು, ಮಂಗಳೂರಿನಿಂದ ಹೆಚ್ಚುವರಿ ಠಾಣಾ ಪೊಲೀಸರು, ತಹಶೀಲ್ದಾರ್ , ಡಿಸಿಪಿ, ಎಸಿಪಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸರಕಾರಕ್ಕೆ ವೈದ್ಯಕೀಯ ಕಾಲೇಜುಗಳ ಮತ್ತು ಆಸ್ಪತ್ರೆಗಳ ಸಲಹೆಯ ಅಗತ್ಯವಿದ್ದು, ಈ ಮೂಲಕ ಸರಕಾರಿ ಆಸ್ಪತ್ರೆಗಳ ಸುಧಾರಣೆ ಸಾಧ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ಮತ್ತು ಮಣಿಪಾಲದ ಆಸ್ಪತ್ರೆ ಆಡಳಿತ ಅಕಾಡೆಮಿ ವತಿಯಿಂದ ದೇರಳಕಟ್ಟೆಯ ಯೆನೆಪೋಯ ವಿ.ವಿ.ಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾದ ಸುರಕ್ಷಿತ ಮತ್ತು ಸುಸ್ಥಿರ ಆಸ್ಪತ್ರೆಗಳು `ಸಾಷ್-2015′ ಕುರಿತ ರಾಷ್ಟ್ರೀಯ ಸಮಾವೇಶವನ್ನು  ಉದ್ಘಾಟಿಸಿದರು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಶುಶ್ರೂಷೆ ಮಾಡುವಾಗ ಅತ್ಯಂತ ಜಾಗರೂಕತೆಯ ಅವಶ್ಯಕತೆ ಇದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಆಸ್ಪತ್ರೆ ಯಿಂದ ಆಗಬೇಕಿದೆ. ತಪ್ಪುಗಳಾದಾಗ ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳಬೇಕಿದೆ. ಆಸ್ಪತ್ರೆಯ ಆಡಳಿತವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಶಿಕ್ಷಣ ಪಡೆದುಕೊಂಡವರ ಕೈಯ್ಯಲ್ಲಿ ನೀಡಿದಲ್ಲಿ ಅವರು ಹಣದ ಕಡೆ ಮಾತ್ರ ಗಮನಹರಿಸುತ್ತಾರೆ. ಬದಲಾಗಿ ವೈದ್ಯರೇ ಆಡಳಿತ ನಡೆಸುವವರಾದರೇ ರೋಗಿಗಳ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಕರ್ನಾಟಕ ಸರಕಾರ ಯಾವುದೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿಕಲಚೇತನರಿಗೆ ಹುಟ್ಟಿನಿಂದ 18 ರ ಹರೆಯದವರೆಗೆ ಉಚಿತ ಚಿಕಿತ್ಸೆ ಹಾಗೂ ಔಷಧ ನೀಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದ್ದು, ಅಂಗವೈಕಲ್ಯ ತಡೆಗಟ್ಟುವುದೇ ಸರಕಾರದ ಮುಖ್ಯ ಉದ್ದೇಶ ಆಗಿರುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಪನ್ಮೂಲ ಶಿಕ್ಷಣಾಲಯ ಕೇಂದ್ರದ ಉಪನಿರ್ದೇಶಕ ಬೆಂಗಳೂರಿನ ಡಾ.ಪ್ರಭುದೇವ ಗೌಡ ಹೇಳಿದರು. ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲ ಚೇತನರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಳೆ ವಯಸ್ಸಿನಲ್ಲಿರುವ ಅಂಗವಿಕಲರಿಗೆ ಉಚಿತ ಔಷಧ ಮತ್ತು ಚಿಕಿತ್ಸೆ ನೀಡಲು ಸರಕಾರ ಮುಂದಾಗಿರುವುದರಿಂದ ಪ್ರತೀ ಅಂಗನವಾಡಿ ಕೇಂದ್ರ, ಶಾಲೆಗಳಿಗೆ ವೈದ್ಯರು ಭೇಟಿ ನೀಡಿ ಪರೀಕ್ಷಿಸಿ ಔಷಧ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಅಂಗವೈಕಲ್ಯತೆಯನ್ನು ಶಾಶ್ವತವಾಗಿ ತಡೆಗಟ್ಟಬಹುದು ಎಂದರು. ಕ್ಷೇಮಾ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಂಪಲ ಕೇಸರಿ ಮಾತೃ ಮಂಡಳಿ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಮೀಳ ವಿಜಯ್ ಆಯ್ಕೆಯಾದರು. ಸಮಿತಿಯ ನೂತನ ಕಾರ್ಯದರ್ಶಿಯಾಗಿ ಮಮತಾ ಜಿತೇಂದ್ರ, ಕೋಶಾಧಿಕಾರಿಯಾಗಿ ಆಶಾ ಸುರೇಶ್. ಉಪಾಧ್ಯಕ್ಷರಾಗಿ ಶಾಲಿನಿ ದೇವದಾಸ್, ದಿವ್ಯಾ ರಾಕೇಶ್., ಜೊತೆ ಕಾರ್ಯದರ್ಶಿಯಾಗಿ ಮೋಹಿನಿ ಸುವರ್ಣ, ರೇಣುಕ ಪುರುಷೋತ್ತಮ್, ಕ್ರೀಡಾ ಕಾರ್ಯದರ್ಶಿಯಾಗಿ ರೂಪಾ ನವೀನ್, ಚಂದ್ರಾವತಿ, ಜೀವಿತಾ, ಸಾಂಸ್ಕ್ರತಿಕ ಕಾರ್ಯದರ್ಶಿಗಳಾಗಿ ಗೀತಾ ಅಶೋಕ್, ವೈಷ್ಣವಿ, ಮುಖ್ಯಸಲಹೆಗಾರರಾಗಿ ಶಕುಂತಲಾ ರಾಜ್, ಸವಿತಾ ಚಂದ್ರಶೇಖರ್, ಲಲಿತಾ ಕೇಶವ್, ವಿದ್ಯಾದಿನೇಶ್ ಆಯ್ಕೆಯಾದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು : ಪಾಲಿಟೆಕ್ನಿಕ್‍ಗಳ ಮೂಲಕ ಸಮುದಾಯದ ಅಭಿವೃದ್ಧಿ ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಹಾಗೂ ಆದರ್ಶ ಮಹಿಳಾ ಮಂಡಲ ಸಂತೋಷ್ ನಗರ ಕುತ್ತಾರು ಇವುಗಳ ಜಂಟಿ ಆಶ್ರಯದಲ್ಲಿ ಸಂತೋಷ್ ನಗರದಲ್ಲಿ ನಡೆಯುವ 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯನ್ನು ಕರ್ನಾಟಕ ಪಾಲಿಟೆಕ್ನಿಕ್ ಆಂತರಿಕ ಸಂಯೋಜಕ ಸುಶಾಂತ್ ಇತ್ತೀಚೆಗೆ ಉದ್ಘಾಟಿಸಿದರು. ಸಮುದಾಯ ಅಭಿವೃದ್ಧಿ ಅಧಿಕಾರಿ ಸುಧೀರ್, ಆದರ್ಶ ಮಹಿಳಾ ಮಂಡಲದ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ, ತರಬೇತಿದಾರರಾದ ನಳಿನಾಕ್ಷಿ ಉಪಸ್ಥಿತರಿದ್ದರು.

Read More

ನವದೆಹಲಿ: ತಮಿಳುನಾಡು ಹಾಗೂ ರಾಜಧಾನಿ ಚೆನ್ನೈನಲ್ಲಿ ಸತತ ಮಳೆಯಿಂದ ಉಂಟಾದ ಜಲಪ್ರಳಯಕ್ಕೆ ರಾಜ್ಯವೇ ತತ್ತರಿಸಿಹೋಗಿದ್ದು, ಚೆನ್ನೈ ಬುಧವಾರ ಸಂಪೂರ್ಣ ಮುಳುಗಡೆಯಾಗಿದೆ.ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ರು.5  ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಆಹಾರ, ಸಾರಿಗೆ, ಔಷಧ ಸೇರಿದಂತೆ ಯಾವುದೇ ರೀತಿಯ ನೆರವು ಬೇಕಾದರೂ ನೀಡಲು ರಾಜ್ಯ ಸಿದ್ಧವಿದೆ. ಈ ಸಂಬಂಧ ತಮಿಳುನಾಡು ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯದಲ್ಲಿನ ರಸ್ತೆ, ವಾಯುಯಾನ, ರೈಲು ಸಂಪರ್ಕ ಸ್ಥಗಿತಗೊಂಡಿವೆ. ಮೊಬೈಲ್‌, ಸ್ಥಿರ ದೂರವಾಣಿ ಸಂಪರ್ಕ, ವಿದ್ಯುತ್‌ ಮತ್ತು ಅಗತ್ಯ ವಸ್ತುಗಳ ಪೂರೈಕೆ ಭಾರಿ ಏರುಪೇರಾಗಿದ್ದು, ಆಹಾರ ಮತ್ತು ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ದಶಕಗಳ ಬಳಿಕ ಕಂಡ ಜಲಪ್ರಳಯದಲ್ಲಿ ಇದುವರೆಗೆ ಸತ್ತವರ ಸಂಖ್ಯೆ ೨೦೦ಕ್ಕೂ ಹೆಚ್ಚಾಗಿದೆ. ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಚೆನ್ನೈ, ಕಾಂಚಿಪುರಂ, ತಿರುವಳ್ಳೂರು, ಕಡಲೂರು ಮತ್ತು…

Read More