ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ: ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಆರ್ಥಿಕ ಸಬಲೀಕರಣ ಸಾಧ್ಯವಿದ್ದು, ಸಮುದಾಯ ಭವನ ನಿರ್ಮಿಸುವ ಮೂಲಕ ಮಲೆಯಾಳಿ ಬಿಲ್ಲವ ಸಂಘ ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಆರ್ಥಿಕವಾದ ಸಬಲೀಕರಣಕ್ಕೆ ನಾಂದಿ ಹಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ ಕಲ್ಲಾಡಿಯಲ್ಲಿ ನಿರ್ಮಿಸಿದ ನೂತನ ಮಲೆಯಾಳಿ ಬಿಲ್ಲವ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಸಾಮಾಜಿಕವಾದ ಸಬಲೀಕರಣ ಆದರೆ ಸಾಲದು. ಸಾಮಾಜಿಕ ಸಬಲೀಕರಣ ತನ್ನಿಂತಾನೆ ಆಗುತ್ತದೆ. ಸಾಮಾಜಿಕ ಸಬಲೀಕರಣದೊಂದಿಗೆ ಆರ್ಥಿಕವಾದ ಸಬಲೀಕರಣ ಆಗಬೇಕು ಎಂದ ಅವರು ಇರಾದಂತಹ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಸ್ಥಾಪಿಸುವ ಮೂಲಕ ತಮ್ಮ ತ್ಯಾಗ ಮನೋಭಾವನೆಗೆ ಧಕ್ಕೆ ತರದ ರೀತಿಯಲ್ಲಿ ಯುವ ಜನಾಂಗ ಈ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗಬೇಕು ಇದರೊಂದಿಗೆ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಬೇಕು ಎಂದರು. ತೀಯಾ ಅಮೃತ ಸ್ಮರಣ ಸಂಚಿಕೆಯನ್ನು ಜಿಲ್ಲಾ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಸಮೀಪದ ನಡುಪದವು ಬಳಿ ಗುರುವಾರ ಅಟೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ನಡೆದ ಡಿಕ್ಕಿಯಲ್ಲಿ ರಿಕ್ಷಾ ನಿಯಂತ್ರಣ ತಪ್ಪಿ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಅದು ಅದ್ದೂರಿ ಸಾಹಿತ್ಯ ಜಾತ್ರೆಗಳ ಮಧ್ಯೆ ತಲೆ ಎತ್ತಿದ ವೈಚಾರಿಕ ನುಡಿಹಬ್ಬ. ಖಾಸಗಿ ಸಮ್ಮೇಳನಗಳಿಗೆ ಸಡ್ಡು ಹೊಡೆದ ಪ್ರಗತಿಪರರ ಅಭಿವ್ಯಕ್ತಿಯ ಸಂಗಮ. ಇಲ್ಲಿ ಖಾಸಗಿ ಸಾಹಿತ್ಯ ಜಾತ್ರೆಯ ಅದ್ದೂರಿತನವಿಲ್ಲ, ಸರ್ಕಾರಿ ಆತಿಥ್ಯದ ಆಡಂಬರವಿಲ್ಲ ಇದು ಅಭಿಮತ ಅನ್ನೋ ಸಂಘಟನೆ ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಸುತ್ತಾ ಬರುತ್ತಿರುವ ಜನನುಡಿ ಕಾರ್ಯಕ್ರಮದ ವಿಶೇಷ. ಈ ಬಾರಿ ಮೂರನೇ ವರ್ಷದ ಅದ್ದೂರಿ ಜನನುಡಿ ಕಾರ್ಯಕ್ರಮವು ಹಿರಿಯ ಸಾಹಿತಿ ದೇವನೂರು ಮಹಾದೇವರಿಂದ ಉದ್ಘಾಟನೆಗೊಂಡಿತು.ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ನೂರಾರು ಸಮಾನಮನಸ್ಕರು ಜನನುಡಿಯ ವಿಭಿನ್ನತೆಗೆ ಸಾಕ್ಷಿಯಾಗಿದ್ದರು. ನುಡಿಜಾತ್ರೆಯಲ್ಲಿ ರಾಜ್ಯದ ಹಿರಿಯ ಸಾಹಿತಿಗಳು ಪಾಲ್ಗೊಂಡಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಮುಖ್ಯವಾಗಿ ಅದ್ದೂರಿ ಸಾಹಿತ್ಯ ಜಾತ್ರೆಗಳ ವಿರುದ್ಧ ಹುಟ್ಟಿಕೊಂಡ ಪರಿಕಲ್ಪನೆ ಅನ್ನೋ ಮಾತಿದೆ. ಅದರಲ್ಲೂ ಮೂಡಬಿದ್ರೆಯಲ್ಲಿ ಮೋಹನ್ ಆಳ್ವಾ ನಡೆಸುವ ಆಳ್ವಾಸ್ ನುಡಿಸಿರಿಯ ವಿರುದ್ಧವಾಗಿ ಹುಟ್ಟಿಕೊಂಡ ಪ್ರಗತಿಪರರ ನುಡಿಹಬ್ಬ ಎಂದರೆ ತಪ್ಪಗಲಾರದು. ಕಳೆದ ಮೂರು ವರ್ಷಗಳಿಂದ ಎರಡು ದಿನಗಳ ಕಾಲ ನಡೆಯೋ ಈ ನುಡಿ ಹಬ್ಬದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಾಲೆಗೆ ಹೋದ ಬಾಲಕನನ್ನು ತಂಡವೊಂದು ಅಪಹರಿಸಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮಹಮ್ಮದ್ ರಾಶೀದ್ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಡಿ.16 ರಂದು ಮನೆಯಿಂದ ಶಾಲೆಗೆ ತೆರಳಿದವನು ಮನೆಗೆ ವಾಪಸ್ಸು ಬಂದಿರಲಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿರಲಿಲ್ಲ. ಕಿಡಿಗೇಡಿಗಳು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇರುವುದಾಗಿ ಉಳ್ಳಾಲ ಠಣೆಯಲ್ಲಿ ದೂರು ನೀಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಜ್ಜಿನಡ್ಕ: ಪರವಾನಿಗೆ ಇಲ್ಲದೆ ಕೇರಳ ರಾಜ್ಯಕ್ಕೆ ಮರಳು ಸಾಗಾಟ ನಡೆಸುತ್ತಿದ್ದ ಎರಡು ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಂದರ್ಭಿಕ ಚಿತ್ರ ಉಳ್ಳಾಲ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಅಜ್ಜಿನಡ್ಕ ಬಳಿ ಲಾರಿಯನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಲಾ 14 ಟನ್ ನಂತೆ ಎರಡು ಲಾರಿಗಳಲ್ಲಿ 28 ಟನ್ ಮರಳು ಇತ್ತು. ಒಟ್ಟು 9,50,000 ಬೆಲೆಯ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಲಾರಿ ಚಾಲಕ ಜೋನಿ(48), ವಿ.ತಂಗವೇಲು(48) ಹಾಗೂ ಕೆ.ಸಿರೋಡಿನ ಅಶ್ಫಾಕ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಮರಳು ಕಳವು ನಡೆಸಿ ಸಾಗಾಟ ಮಾಡುತ್ತಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ತೋರಿಸಿ ಕೊಲೆಗೆ ಯತ್ನಿಸಿದ್ದಲ್ಲದೆ ಅದನ್ನು ತಡೆಯಲು ಬಂದ ಇನ್ನೋರ್ವ ಪೊಲೀಸ್ ಸಿಬ್ಬಂದಿ ಚೂರಿಯಿಂದ ತಂಡವೊಂದು ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳ್ಳಾಲದ ದರ್ಗಾ ಎದುರು ತಂಡವೊಂದು ಗಲಾಟೆ ನಡೆಸುತ್ತಿದ್ದುದನ್ನು ಕಂಡು ಪಿಸಿಆರ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಉಮೇಶ್ ಸಪಲ್ಯ ಮತ್ತು ರವೀಂದ್ರ ಎಂಬವರು ಪ್ರಶ್ನಿಸಿದ್ದರು. ಈ ವೇಳೆ ತಂಡದಲ್ಲಿದ್ದ ಮುಸ್ತಾಕ್, ಯಾಸೀನ್, ಅಶ್ರಫ್ ಸಮೋಸಾ, ಜಾಕಿ ಮತ್ತಿತರರು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಿಬ್ಬಂದಿ ಉಮೇಶ್ ಸಪಲ್ಯ ಎಂಬವರಿಗೆ ಚೂರಿಯಿಂದ ಎದೆ ಭಾಗಕ್ಕೆ ತಿವಿಯಲು ಮುಂದಾದಾಗ ಇನ್ನೋರ್ವ ಸಿಬ್ಬಂದಿ ರವೀಂದ್ರ ಅದನ್ನು ತಡೆದಿದ್ದರು. ಈ ವೇಳೆ ಮುಸ್ತಾಕ್ ಎಂಬಾತ ಅವರ ಕೈಯನ್ನು ತಿರುಗಿಸಿ ಕೈಗೆ ಚೂರಿಯಿಂದ ಇರಿದಿದ್ದಾನೆ. ಅಲ್ಲದೆ ತಂಡದಲ್ಲಿದ್ದ ಎಲ್ಲರೂ ಸೇರಿ ಕೈಯಿಂದ ಹಲ್ಲೆಯನ್ನು ನಡೆಸಿ, ` ಪೊಲೀಸರಿಗೆ ಭಾರೀ ಅಹಂಕಾರ ಇದೆ. ನಿಮ್ಮಲ್ಲಿ ಒಬ್ಬರನ್ನು ಕೊಲೆ ಮಾಡಿದರೆ ಮಾತ್ರ ಬುದ್ದಿ ಬರುತ್ತದೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ರಾಜಕೀಯ ಪ್ರೇರಿತ ಉದ್ದೇಶಕ್ಕಾಗಿ ಬಿಜೆಪಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಬ್ರಮಣ್ಯ ಸ್ವಾಮಿ ಬಿಜೆಪಿಯ ಸಾಕು ನಾಯಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ನ್ಯಾಶನಲ್ ಹೆರಾಲ್ಡ್ ಪ್ರತಿಕೆ ಪ್ರಕರಣಕ್ಕೆ ಸಂಬಂಧಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳೂರು ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಸಲಾದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ಮಾಡುವ ಯಾವುದೇ ನೈತಿಕ ಹಕ್ಕು ಬಿಜೆಪಿಗಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾಂಗ್ರೆಸ್ ನಾಯಕತ್ವವನ್ನು ಅಳಿಸಲು ಈ ರೀತಿಯ ಹುನ್ನಾರ ನಡೆಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಕಿಡಿಕಾಡಿದರು. ಅರಣ್ಯ ಸಚಿವ ರಮಾನಾಥ್ ರೈ ಮಾತನಾಡಿ ಬಿಜೆಪಿ ಪಕ್ಷಕ್ಕೆ ಕರುಣೆ ಇಲ್ಲ. ನೆಹರು ಕಾಲದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾಂಗ್ರೆಸ್ ನಡೆಸಿಕೊಂಡು ಬರುತ್ತಿತ್ತು ಆದರೆ ಇದನ್ನು ಬಿಜೆಪಿ ಸರಕಾರ ನುಂಗಲು ಪ್ರಯತ್ನಿಸುತ್ತಿದೆ. ಸುಬ್ರಮಣ್ಯ ಸ್ವಾಮಿ ಒಬ್ಬ ಮಾನಸಿಕ ಅಸ್ವಸ್ಥ.…
ದೇರಳಕಟ್ಟೆ : ದೇರಳಕಟ್ಟೆಯಿಂದ ಅಡ್ಕರೆಪಡ್ಪು ಮೂಲಕ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ತಲುಪುವ ರಸ್ತೆಯ ಡಾಮರೀಕರಣಕ್ಕೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಹಾಗೂ ಅಡ್ಕರೆಪಡ್ಪು, ಮಾರಿಯಮ್ಮಗೋಳಿ, ಬೆಲ್ಮ ಬರಿಕೆ(ಪೆಲತ್ತಡಿ), ಬದ್ಯಾರ್, ಕೊಣಾಜೆ ಸೈಟ್‍ನ ನಾಗರಿಕರು, ರಿಕ್ಷಾ ಚಾಲಕರು ಹಾಗೂ ಮಾಲಕರು ಜಂಟಿಯಾಗಿ ದೇರಳಕಟ್ಟೆಯಲ್ಲಿ ನಡೆಸಿದ ಪ್ರತಿಭಟನೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಿಸಿತು. ಕೊಣಾಜೆ ಬೆಳ್ಮದಿಂದ ದೇರಳಕಟ್ಟೆವರೆಗೆ ಅಡ್ಕರೆಪಡ್ಪುವಿನ ರಸ್ತೆಯಲ್ಲಿ ಬೈಕ್ ರ್ಯಾಲಿ ಮತ್ತು ವಾಹನ ಜಾಥಾ ನಡೆದು, ದೇರಳಕಟ್ಟೆ ಜಂಕ್ಷನ್ನಿನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಬೆಳ್ಮ ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಸೇರಿ ಕೊಣಾಜೆ ಭಾಗದ ಸಮಸ್ಯೆಗೆ ಬೆಳ್ಮ ಪಂಚಾಯಿತಿ ಭಾಗದಲ್ಲಿ ಪ್ರತಿಭಟನೆ ನಡೆಸುವುದು ಖಂಡನೀಯ. ಬೆಳ್ಮ ಪಂ.ಗೆ ಸೇರಿದ ರಸ್ತೆಯ ದುರಸ್ತಿಯನ್ನು ನಡೆಸಲಾಗಿದೆ. ಸಚಿವರು ಹೆಚ್ಚಿನ ಒಲವು ತೋರಿಸುವ ಮೂಲಕ ಬೆಳ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ, ಏಳಿಗೆಯನ್ನು ಸಹಿಸಲಾಗದವರು ರಾಜಕೀಯ ದುರುದ್ದೇಶ ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬೆಳ್ಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಪಜೀರು ಚರ್ಚ್ ಹಾಗೂ ಇನ್ನಿತರ ಕಡೆಗಳಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೊರ್ವನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾವೂರು ಗ್ರಾಮದ ಮಲಾರ್‍ನ ಅಕ್ಷರನಗರದ ಅಬ್ದುಲ್ ಖಾದರ್ ಎಂಬವರ ಪುತ್ರ ಅಬ್ದುಲ್ ಜಾಫರ್(19) ಎಂದು ಗುರುತಿಸಲಾಗಿದೆ. ಈತ ಪಜೀರಿನ ಚರ್ಚ್‍ಗೆ ನುಗ್ಗಿ ಕಳ್ಳತನ ನಡೆಸಿದ್ದು ಮಾತ್ರವಲ್ಲದೆ ದೇರಳಕಟ್ಟೆ ಮೊಬೈಲ್ ಹಾಗೂ ಫ್ಯಾನ್ಸಿ ಅಂಗಡಿಗಳಿಗೆ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದನು. ಚರ್ಚ್‍ಗೆ ನುಗ್ಗಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಜರುದ್ದೀನ್, ಮುಷ್ತಾಕ್ ಹಾಗೂ ಅಫ್ರೀಝ್ ಎಂಬವರನ್ನು ಕಳೆದ ಕೆಲವು ದಿನಗಳ ಹಿಂದೆಯೇ ಬಂಧಿಸಿದ್ದರು. ಬಳಿಕ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಜಾಫರ್ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈತನ ಬಳಿ ಇದ್ದ ಆ ಮೊಬೈಲ್, ಪ್ಯಾನ್ಸಿ ಸಾಮಾಗ್ರಿ ಹಾಗೂ ಚರ್ಚ್‍ನಲ್ಲಿ ಕಳ್ಳತನ ನಡೆಸಿದ ಕೆಲವು ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಬಂಧಿತ ಆರೋಪಿಯಿಂದ ಕಳ್ಳತನ ನಡೆಸಿದ್ದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ನಾಗಾರಾಧನೆಯ ಮೂಲಕೇಂದ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವರ್ಷಾಂಪ್ರತಿಯಂತೆ ಈ ಭಾರಿಯು ಕೂಡ ಚಂಪ ಷಷ್ಠಿಯು ಸಂಭ್ರಮದಲ್ಲಿ ಜರುಗಿತು. ಚಂಪ ಷಷ್ಠಿಯ ಪ್ರಯುಕ್ತ ಜರುಗಿದ ವಾರ್ಷಿಕ ಬ್ರಹ್ಮರಥೋತ್ಸದಲ್ಲಿ ಸಾವಿರಾರು ಭಕ್ತರು ಭಾಗಹಿಸಿದ್ದರು. ಬೆಳಗ್ಗೆ ಮಂಗಳವಾದ್ಯ, ವೇದಘೋಷ, ಬ್ಯಾಂಡ್, ಶಂಖ, ಜಾಗಟೆ, ಸ್ಯಾಕ್ಸೋಫೋನ್, ಚೆಂಡೆಗಳ ನಿನಾದದಲ್ಲಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳ ಪೈಕಿ ಸುಬ್ರಮಣ್ಯ ದೇವಸ್ಥಾನವು ಕೂಡ ಒಂದು. ಪ್ರಮುಖ ನಾಗಾರಾಧನೆಯ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ದೇವಾಲಯದಲ್ಲಿ ಚಂಪ ಷಷ್ಠಿಯ ಪ್ರಯುಕ್ತ ಮಡೆ ಸ್ನಾನ ನಡೆಯುತ್ತದೆ. ಭಕ್ತರು ಹರಕೆಯ ರೂಪದಲ್ಲಿ ಬ್ರಹ್ಮಾಣರು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡುವ ಮೂಲಕ ಹರಕೆಯನ್ನು ನೀಡುತ್ತಾರೆ. ಈ ಆಚರಣೆಯ ಬಗ್ಗೆ ಅಡೆ-ತಡೆಗಳಿದ್ದರೂ ಸಹ ಈ ಭಾರಿಯೂ ಪ್ರತಿ ವರ್ಷದಂತೆ ಈ ಭಾರಿಯು ಕೂಡ ಮಡೆ ಸ್ನಾನವನ್ನು ಆಚರಿಸಲಾಯಿತು. ಅತ್ಯಂತ ಸಂಭ್ರಮ ಸಡಗರದ ಜೊತೆ ನಡೆಯುವ ಸುಬ್ರಮಣ್ಯ ಚಂಪ ಷಷ್ಥಿಯ…

