Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಕೊಣಾಜೆ ಪರಂಡೆಯಲ್ಲಿ ವಿದ್ಯಾರ್ಥಿಗಳಾದರು ರೈತರು

UllalaVaniBy UllalaVaniDecember 14, 2015Updated:December 14, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ವಿದ್ಯಾರ್ಥಿಗಳು ಗದ್ದೆಗಿಳಿದು ಬಿತ್ತನೆ ಮತ್ತು ನೇಜಿ ನಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೊಣಾಜೆ ಪರಂಡೆಯ ಒಂದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಕಿಟೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೇ ಬಿತ್ತುವುದರಿಂದ ಹಿಡಿದು ಮುಡಿ ಕಟ್ಟುವವರೆಗೆ ಹಂತ ಹಂತವಾಗಿ 3 ತಿಂಗಳ ಅವಧಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅನ್ನದಾತರೆನಿಸಿಕೊಂಡಿದ್ದಾರೆ.

ಮಂಗಳೂರಿನಂತಹ ನಗರದ ಹೃದಯ ಭಾಗದ ಕಾಲೇಜೊಂದರ ವಿದ್ಯಾರ್ಥಿಗಳು ಗದ್ದೆಗೆ ಇಳಿಯುವುದೇ ಸೋಜಿಗ. ಅಂತಹದ್ದರಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಗದ್ದೆಗೆ ಇಳಿದಿಲ್ಲ. ಒಬ್ಬ ಪ್ರಗತಿಪರ ಕೃಷಿಕರು ಮಾಡಿದಂತೆ ಭತ್ತದ ಬಿತ್ತನೆ, ನಾಟಿ, ಕಳೆ ತೆಗೆಯುವುದು, ಕಟಾವು ಮಾಡಿ ಮುಗಿಸಿ ಹಾರಿಸಿ, ಅದೇ ಬಳಿಕ ಭತ್ತವನ್ನು ಹಂಡೆಯಲ್ಲಿ ಬೇಯಿಸಿ ಸೆಗಣಿ ಸಾಸಿದ ಆಂಗಳದಲ್ಲಿ ಒಣಗಿಸಿ ಬಳಿಕ ಭತ್ತ ಕುಟ್ಟುವ ಗುಂಡಿಯಲ್ಲಿ ಕುಟ್ಟಿ ಅದರಿಂದ ಅಕ್ಕಿ ತೆಗೆದು ಮುಡಿ ಕಟಟ್ಟುವವರೆಗೆ ಏನೆಲ್ಲ ಮಾಡಬೇಕು ಅದೆಲ್ಲವನ್ನು ಮಾಡಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆಯೇ ಸರಿ. ಕೊಣಾಜೆ ಪರಂಡೆಯ ಧನಂಜಯ ಬಂಗೇರ ಅವರ ಗದ್ದೆಯಲ್ಲಿ ಕೃಷಿ ಭತ್ತದ ಕಟಾವು ಮುಗಿದ ಬಳಿಕ ಪ್ರಾತ್ಯಕ್ಷಿಕೆ ನಡೆದದ್ದು ಭಾನುವಾರ ಸುದರ್ಶನ್ ಭಟ್ ಅವರ ಮನೆಯಲ್ಲಿ.

1

4

5

6

11

12

13ule1

13ule2

13ule3

13ule4

16ule5

16ule6

DSC_0007

DSC_0022

DSC_0187ಹಾಗಿದ್ದರೆ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಅಂತಹ ಕ್ರಾಂತಿ ಮಾಡಲು ಸಾಧ್ಯವಾದ್ದಾದರೂ ಹೇಗೆ? ಅಂತಹ ಸಾಧನೆಯ ಹಿಂದೆ ಇಲ್ಲಿನ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗೆಗಿನ ಆಸಕ್ತಿ ಮೂಡಿಸುವ ಮನಸ್ಸು ಮಾಡಿದವರು ಕೃಷಿಕ ಕುಟುಂಬದಿಂದಲೇ ಬಂದ ಪ್ರಾಂಶುಪಾಲ ವಿಠಲ ಎ. ಅವರು. ಅವರಿಗೆ ಬೆನ್ನೆಲುಬಾಗಿ ನಿಂತವರು ತೊಕ್ಕೊಟ್ಟು ಮಾಧ್ಯಮ ಕೇಂದ್ರದ ವಸಂತ್ ಎನ್ .ಕೊಣಾಜೆ ಅವರು.

ಕೆಸರುಗದ್ದೆ ಕ್ರೀಡೆಯಲ್ಲಿ ಖರ್ಚು ಮಾತ್ರ ಕಾಣಿಸುತ್ತದೆ. ಅದು ಬಿಟ್ರೆ ಬೇರೇನೂ ಇಲ್ಲ. ಮಕ್ಕಳಿಗೆ ಮನೋರಂಜನೆಯೂ ಆಗಬೇಕು. ಕೃಷಿ ಚಟುವಟಿಕೆಗಳ ಅನುಭವವೂ ಆಗಬೇಕು. ಒಳ್ಳೆಯ ಬದುಕು ಕಾಣುವಂತಾಗಬೇಕು ಎಂಬ ನೆಲೆಯಲ್ಲಿ ಕೊಣಾಜೆಯ ಪರಂಡೆಯ ಧನಂಜಯ ಬಂಗೇರ ಅವರ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸುವ ಕನಸು ಸಾಕಾರಗೊಂಡಿತು. ವಿದ್ಯಾರ್ಥಿಗಳಿಂದ ಈ ಸಮಾಜಕ್ಕೆ ಏನಾದರೂ ಮಾದರಿ ಕೆಲಸ ಮಾಡಿ ತೋರಿಸಬೇಕು ಎಂಬ ಆಶೆ ಈಡೇರಿದೆ ಎಂಬ ಅಭಿಪ್ರಾಯ ವಿಠಲ ಅವರದ್ದು.

ಮಕ್ಕಳ ಮೇಲೆ ನಂಬಿಕೆ ಇಟ್ಟು ಗದ್ದೆ ನೀಡಿದ ಗದ್ದೆ ಮಾಲೀಕರಿಗೆ ತೊಂದರೆ ಆಗಬಾರದು ಎಂಬ ಚಿಂತೆ ಜೊತೆಗೆ ಮಕ್ಕಳು ನೀಟಾಗಿ ಅಚ್ಚುಕಟ್ಟಾಗಿ ನಾಟಿ ಮಾಡುವ ನಂಬಿಕೆ ಸ್ವತಃ ವಿಠಲ ಅವರಿಗೆ ಇರಲಿಲ್ಲ. ಬಿತ್ತನೆ, ನಾಟಿ, ನೇಜಿ ನೆಡುವುದನ್ನು ಎಲ್ಲವನ್ನೂ ಹಿರಿಯರಾದ ರತ್ನಕ್ಕ, ಮುತ್ತಕ್ಕ, ಸುದರ್ಶನ ಭಟ್, ಧನಂಜಯ ಬಂಗೇರ ಮೊದಲಾದ ಕೃಷಿಕರು ಹೇಳಿಕೊಟ್ಟರು. ನಾಟಿ ಮಾಡಿದ ಫೆÇಟೋಗಳು ಮಾಧ್ಯಮದಲ್ಲಿ ಪ್ರಚಾರವಾದಾಗ ಮಕ್ಕಳ ಹುರುಪು ಇಮ್ಮಡಿಯಾಯಿತು. ಈಗ ನಮ್ಮನ್ನು ಗುರುತಿಸಿದ್ದಾರೆ ಎಂಬ ಸಂತಸ ಮಕ್ಕಳಲ್ಲಿ ಉಂಟು ಎಂದು ವಿಠಲ ಸಂತಸದಿಂದಲೇ ಹೇಳುತ್ತಾರೆ.

ಎಲ್ಲ ವಿದ್ಯಾರ್ಥಿಗಳಂತೆ ಕೇವಲ ನೇಜಿ ನೆಟ್ಟು ಮುಗಿಸಿದರೆ ಸಾಕದು. ಭತ್ತದ ಗದ್ದೆಯಲ್ಲಿ ಕಳೆ ಬರುವಾಗ ಅದನ್ನು ತೆಗೆಯಲು ಸುಮಾರು 15ಮಕ್ಕಳ ಜೊತೆಗೆ ಗದ್ದೆಗೆ ಇಳಿದರು. ಒಂದು ದಿನದಲ್ಲಿ ಅದು ಮುಗಿಯುವ ಲಕ್ಷಣ ಕಂಡು ಬರಲಿಲ್ಲ. ಅದಕ್ಕಾಗಿ ಮರುದಿನ ಸುಮಾರು 60ವಿದ್ಯಾರ್ಥಿಗಳು ಗದ್ದೆಗೆ ಇಳಿದು ಎಲ್ಲ ಕಳೆಯನ್ನು ತೆಗೆದರು. ಬಳಿಕ ಕಟಾವಿಗೆ ಬಂದಾಗ ಮತ್ತೆ ಎಲ್ಲ ಮಕ್ಕಳನ್ನು ಸೇರಿಸಿಕೊಂಡು ಒಂದೇ ದಿನ ಕಟಾವು ಮಾಡಿ ಭತ್ತದ ಸೂಡಿಗಳನ್ನು ಧನಂಜಯ ಬಂಗೇರ ಅವರ ಮನೆಗೆ ತೆಗೆದುಕೊಂಡು ಹೋಗಿ ಮಧ್ಯಾಹ್ನದ ಹೊತ್ತಿಗೆ ಎಲ್ಲ ಕೆಲಸ ಮುಗಿಸಿದರು. ಅದಕ್ಕಾಗಿ ಊರಿನವರಿಂದ ಯಾವುದೇ ರೀತಿಯ ಧನಸಂಗ್ರಹ ಮಾಡಲಿಲ್ಲ. ದುಡ್ಡು ತೆಗೆದರೆ ವ್ಯವಸ್ಥೆ ಹಾಳಾಗುತ್ತದೆ ಎಂಬುದು ವಿಠಲ ಅವರಿಗೆ ಗೊತ್ತಿತ್ತು. ಎಲ್ಲದ್ದಕ್ಕೂ ಉಪನ್ಯಾಸಕರು ಸಿಬ್ಬಂದಿಗಳು ಹಣ ಭರಿಸಿದರು. ಮೋಜು ಮಸ್ತಿಗೆ ಅವಕಾಶ ಕೊಡಲಿಲ್ಲ. ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಟೀಂ ವರ್ಕ್ ಎಲ್ಲರಿಗೂ ಇಷ್ಟವಾಯಿತು. ಮೂರೂವರೆ ತಿಂಗಳ ಅವಿರತ ಶ್ರಮ ಖುಷಿ ಕೊಟ್ಟಿದೆ. ಅದರ ಮುಂದುವರಿದ ಭಾಗವಾಗಿ ಭಾನುವಾರದ ಬೇಸಾಯದ ಬೇಸುಗೆ ಪ್ರಾತ್ಯಕ್ಷಿಕೆ.

ಲಕ್ಷಗಟ್ಟಲೆ ಖರ್ಚು ಮಾಡುವ ಕೆಸರುಗದ್ದೆ ಕ್ರೀಡಾಕೂಟಗಳಿಗೆ ನಮ್ಮ ವಿರೋಧವಿಲ್ಲ. ಅದು ಕೇವಲ ಮನರಂಜನೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಭಾಗವಹಿಸಿದವರಲ್ಲಿ ಕೃಷಿಯ ಬಗ್ಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ಮೂಡುವಂತಹ ಕಾರ್ಯಕ್ರಮ ಮೂಡಿಬರಬೇಕು. ಗೋರಿಗುಡ್ಡೆಯ ಕಿಟೆಲ್ ಕಾಲೇಜಿಗೆ ಬರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆರ್ಥಿಕವಾಗಿ ಅಷ್ಟೊಂದು ಸಮರ್ಥರಲ್ಲದವರು. ಜೊತೆಗೆ ಇಲ್ಲಿ ಕನಿಷ್ಠ ಅಂಕ ಪಡೆದರೂ ಎಲ್ಲೂ ಪ್ರವೇಶ ಸಿಗದಿದ್ದರೂ ಇಲ್ಲಿ ಸಿಗುತ್ತದೆ ಎಂಬ ನಂಬಿಕೆ. ಹಾಗಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಜಸ್ಟ್ ಪಾಸ್ ಮಾರ್ಕ್ ತೆಗೆದುಕೊಂಡವರು 500ಮೇಲೆ ಅಂಕ ಪಡೆದ ಉದಾಹರಣೆ ಹಲವು ಇದೆ.
ವಿಠಲ ಎ.
ಪ್ರಾಂಶುಪಾಲರು

ನಾವು ಗಂಡಸರಿಗೆ ಸ್ಪರ್ಧೆ ಒಡ್ಡುತ್ತಿಲ್ಲ. ಬದುಕಿನಲ್ಲಿ ಆರ್ಥಿಕ ಸಂಕಷ್ಟ ಮರ ಹತ್ತುವ ಕಾಯಕವನ್ನು ತಂದುಕೊಟ್ಟಿದೆ. ಅನಾರೋಗ್ಯಕ್ಕೆ ತುತ್ತಾದ ತಾಯಿಯನ್ನು ಉಳಿಸಲು ನನ್ನಿಂದ ಸಾಧ್ಯವಾಗಿಲ್ಲ. ಕನಿಷ್ಠ ನನ್ನ ತಂದೆಯನ್ನಾದರೂ ಚೆನ್ನಾಗಿ ಸಾಕಬೇಕೆಂಬುದೇ ನನ್ನು ಕನಸು.
ಲಕ್ಷಿ ್ಮ
ಕೈಕಂಬ ಮುಳ್ಳುಗುಡ್ಡೆ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮೇ 10- ಬದ್ರಿಯಾ ವೆಲ್ಫೇರ್ ಸೊಸೈಟಿ (ರಿ) ಅಜ್ಜಿನಡ್ಕ ಇದರ ವತಿಯಿಂದ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

May 6, 2026

ಹಿರಾ ಮಹಿಳಾ ಕಾಲೇಜು ವತಿಯಿಂದ ರಕ್ತದಾನ ಶಿಬಿರ

May 6, 2026

ಸುಂದರಿಬಾಗ್‌ನಲ್ಲಿ ಯುವಕ ಆತ್ಮಹತ್ಯೆ..!!

May 5, 2026
Leave A Reply

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಶೃಂಗೇರಿ ಶಾಸಕರ ‘ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಯಾವುದೇ ವಿಳಂಬ ಮಾಡಿಲ್ಲ’ – ಸ್ಪೀಕರ್ ಯು.ಟಿ. ಖಾದರ್

By UllalaVaniMay 6, 20260

ಮಂಗಳೂರು, ಮೇ. 06 : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಹಾಗೂ ಶಾಸಕರ ಪ್ರಮಾಣವಚನ ಸ್ವೀಕಾರ ವಿಳಂಬವಾಗುತ್ತಿದೆ…

ಮೇ 10- ಬದ್ರಿಯಾ ವೆಲ್ಫೇರ್ ಸೊಸೈಟಿ (ರಿ) ಅಜ್ಜಿನಡ್ಕ ಇದರ ವತಿಯಿಂದ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

May 6, 2026

ಹಿರಾ ಮಹಿಳಾ ಕಾಲೇಜು ವತಿಯಿಂದ ರಕ್ತದಾನ ಶಿಬಿರ

May 6, 2026

ಮುಂದುವರಿದ ಅಡುಗೆ ಅನಿಲದ ಕೊರತೆ; ಸಂಕಷ್ಟದಲ್ಲಿ ಹೋಟೆಲ್ ಉದ್ಯಮ

May 6, 2026
1 2 3 … 1,899 Next
Automatic YouTube Gallery

|| ULLALA TALUK HIGHLIGHTS || 06.05.2026

|| ULLALA TALUK HIGHLIGHTS || 06.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| ULLALA TALUK HIGHLIGHTS || 06.05.2026
Now Playing
|| ULLALA TALUK HIGHLIGHTS || 06.05.2026
|| ULLALA TALUK HIGHLIGHTS || 06.05.2026 📍 Ullal | Dakshina Kannada | ...
|| ULLALA TALUK HIGHLIGHTS || 06.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೇ.7ರಿಂದ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ
Now Playing
ಮೇ.7ರಿಂದ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ
ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರ;ಮೇ.7ರಿಂದ ...
ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರ;ಮೇ.7ರಿಂದ ಮೇ.10ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾಹಿತಿ


📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version