Author: UllalaVani

Kannada News From Coastal Karnataka

ಚೆನ್ನೈ: ಕುಂಭದ್ರೋಣ ಮಳೆಯ ಪ್ರವಾಹಕ್ಕೆ ತತ್ತರಿಸಿದ ತಮಿಳುನಾಡು ಸಂಪೂರ್ಣ ಜಲಾವೃತಗೊಂಡಿದೆ. ಮನೆ, ಕಚೇರಿ, ಶಾಪಿಂಗ್ ಮಾಲ್ ಹೀಗೆ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳು ನಷ್ಟಹೊಂದಿದೆ. ಚೆನ್ನೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಇದುವರೆಗೂ 185 ಮಂದಿ ಜನ ಸಾವನ್ನಪ್ಪಿದ್ದು, ಅನೇಕ ಜನರು ಪ್ರವಾಹದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಪ್ರಮುಖ ನಗರಗಳಲ್ಲಿ ತುಂಬಿ ಹರಿಯುತ್ತಿರುವ ನೀರಿನಿಂದಾಗಿ ಜಲಾವೃತಗೊಂಡಿರುವ ಮೆಟ್ರೋ ಸಿಟಿ ಇದೀಗ ದ್ವೀಪ ಪ್ರದೇಶವಾಗಿದ್ದು, ದೊಣಿ ಮತ್ತು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಪ್ರವಾಹದಲ್ಲಿ ಸಿಲುಕಿ ಹಾಕಿರುವ ಜನರ ರಕ್ಷಣೆಗೆಂದು ನೌಕದಳ ಸಜ್ಜಾಗಿದೆ. ದಶಕಗಳ ನಂತರ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಪ್ರವಾಹದ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಹವಾಮಾನ ವರದಿ ತಿಳಿಸಿದೆ. ಇನ್ನು ನಿರಂತರವಾಗಿ 24 ಗಂಟೆಗಳ ಕಾಲ ತಮಿಳುನಾಡಿನಾದ್ಯಂತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜನರು ನೀರು ಹಾಗೂ ಆಹಾರಕ್ಕಾಗಿ ಪರದಾಡುತ್ತಿದ್ದು,ಆಹಾರ…

Read More

ನವದೆಹಲಿ: ಜೀವಾವಧಿ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ನೀಡುವ ಅಧಿಕಾರ ರಾಜ್ಯಸರ್ಕಾರಗಳಿಗೆ ಇಲ್ಲ ಈ ನಿಟ್ಟಿನಲ್ಲಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿ, ಅವರನ್ನು ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.ಈ ಹಿನ್ನೆಲೆಯಲ್ಲಿ ರಾಜೀವ್ ಹಂತಕರ ಬಿಡುಗಡೆಗೆ ತಡೆ ಬಿದ್ದಂತಾಗಿದೆ. ರಾಜೀವ್‌ ಹತ್ಯೆ ಪ್ರಕರಣದ 7 ಜನ ದೋಷಿಗಳಿಗೆ ಗಲ್ಲು ಶಿಕ್ಷೆ  ಈ ಹಿಂದೆ ನೀಡಲಾಗಿತ್ತು, ಆದರೆ ಶಿಕ್ಷೆ ಜಾರಿ ಮಾಡುವಲ್ಲಿ ವಿಳಂಬ ಆಗಿದ್ದ ಹಿನ್ನೆಲೆಯಲ್ಲಿ ಅವರ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಜೀವಾವಧಿಗೆ ಇಳಿಸಿತ್ತು. ಬಳಿಕ ತಮಿಳುನಾಡಿನ ಜಯಲಲಿತ ಸರಕಾರ ರಾಜೀವ್‌ ಹಂತಕರಿಗೆ ಕ್ಷಮಾದಾನ ನೀಡಿ ಅವರ ಬಿಡುಗಡೆ ಆದೇಶ ಹೊರಡಿಸಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶ್ನಿಸಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ್ದು ಸಿಬಿಐ. ಹಾಗಾಗಿ ಪ್ರಕರಣದ ದೋಷಿಗಳ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕೇ ವಿನಃ, ರಾಜ್ಯ ಸರ್ಕಾರವಲ್ಲ. ದೋಷಿಗಳ ಬಿಡುಗಡೆ ನಿರ್ಧಾರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನ ಶೈಲಿ ಇತರ ಎಲ್ಲರಿಗಿಂತ ಭಿನ್ನ. ಅದರಲ್ಲೂ ಆರೋಗ್ಯ ಸಂಬಂಧಿ ವಿಚಾರದಲ್ಲಿ ಸಾಮಾನ್ಯ ಜನರು ಕೂಡಾ ವಿಶೇಷ ನಿಲುವು ಹೊಂದಿರುತ್ತಾರೆ. ರೋಗಕ್ಕೆ ತುತ್ತಾದಾಗ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧಿ ಬಗ್ಗೆ ಒಂಥರಾ ನಿರಾಸಕ್ತಿ ಪ್ರದರ್ಶಿಸುತ್ತಾರೆ. ಜೇಬಿನಲ್ಲಿ ಕೇವಲ ಹತ್ತು ರೂ. ಗಳಿದ್ದರೂ ಧರ್ಮಾರ್ಥ ಸಿಗುವ ಔಷಧಿ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಿರುವುದಿಲ್ಲ. ಧರ್ಮದ ಮದ್ದು ಧರ್ಮದ್ದೇ ಎಂಬ ಭಾವನೆ ಬೇರೂರಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಎಸ್. ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಸಹಕಾರದೊಂದಿಗೆ ಮಂಗಳೂರಿನ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಸಹಕಾರದಲ್ಲಿ ನಡೆದ ಬಂಟ್ಸ್ ಕ್ಷೇಮ ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಶ್ರೇಷ್ಠ ಎಂಬ ಮನಸ್ಥಿತಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ತುಳು ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ಸಿಗದೇ ಇರುವುದು ಬೇಸರದ ವಿಷಯ. ಪ್ರಸ್ತುತ ದಿನಗಳಲ್ಲಿ ತುಳು ಭಾಷೆಯಲ್ಲಿ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ತುಳು ಸಂಸ್ಕøತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಪಂಚದ ಮೂಲೆಗಳಲ್ಲಿ ತುಳುವರು ಒಟ್ಟಾಗಿ ಕೂಟಗಳನ್ನು ನಡೆಸುತ್ತಿದ್ದು, ಆದರೂ ಭಾಷೆಗೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ತುಳು e್ಞÁತಿ ಪದಕೋಶ(ತುಳು, ಕನ್ನಡ, ಕೊಡವ, ಮಲಯಾಳಂ, ತಮಿಳು, ತೆಲುಗು)ದ ಪ್ರಥಮ ಹಂತದ ಕೃತಿಯ ಸಾಂಕೇತಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತುಳು ಭಾಷೆಯ ಗಟ್ಟಿತನ ತೋರಿಸಲು ವಿಶ್ವವಿದ್ಯಾಲಯ, ಅಕಾಡೆಮಿ ಶ್ರಮಿಸಿದರೆ ಸಾಲದು. ತುಳು ಭಾಷೆಯ ಸೊಗಡು ಇನ್ನಷ್ಟು ಅರಿತುಕೊಳ್ಳಲು ತುಳು ಸಾಹಿತ್ಯಗಳನ್ನು ಓದುವ ಕಾರ್ಯ ನಡೆಯಬೇಕಿದೆ. ಕಳೆದ 18ವರ್ಷಗಳ ಸತತ ಪರಿಶ್ರಮದ ಮೂಲಕ ತುಳು ಭಾಷೆಯಲ್ಲಿ 6 ಸಂಪುಟದ ಬೃಹತ್ ಗಾತ್ರದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೆ.ಸಿ.ರೋಡ್: ಮುದುಂಗಾರುಕಟ್ಟೆ ಶಾಲೆ ಬಳಿ ಕೆ.ಸಿ.ರೋಡಿನ ಮದರಸದಲ್ಲಿ ಉಸ್ತಾದರಾಗಿರುವ ಮಹಮ್ಮದ್ ಮುನೀರ್ ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿ, ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಬಾಳೆಪುಣಿಯ ಅನಿತಾ ಎಂಬವರಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದಡಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿರುವ ಉಸ್ತಾದ್ ಅವರಿಗೂ ಠಾಣೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಫೈಲ್ ಫೋಟೊ ಕೆ.ಸಿ.ರೋಡಿನ ಮದರಸದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಸಾಲೆತ್ತೂರು ಕೊಳ್ನಾಡು ನಿವಾಸಿ ಮಹಮ್ಮದ್ ಮುನೀರ್ ಬೈಕಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಮುದುಂಗಾರುಕಟ್ಟೆ ಶಾಲೆಯ ಬಳಿ ಸಚಿನ್(26), ಪ್ರಶಾಂತ್ (28), ಪ್ರವೀಣ್ (28), ಪ್ರಸಾದ್ (33), ಸಂತೋಷ್, ಚಂದ್ರಶೇಖರ್ ಎಂಬವರು ಅಡ್ಡಗಟ್ಟಿ ಗಂಭೀರ ಹಲ್ಲೆ ನಡೆಸಿದ್ದರು. ಗಾಯಾಳು ಉಸ್ತಾದರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐದು ಮಂದಿಯ ವಿರುದ್ಧ ದೂರು ದಾಖಲಾಗಿತ್ತು. ಪ್ರತಿದೂರು : ಎರಡು ವಾರಗಳ ಹಿಂದೆ ಬಾಳೆಪುಣಿ ನಿವಾಸಿ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಳೇಕಲ: ಖಾಸಗಿ ಶಾಲೆ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ನಡೆದ ಗಲಭೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಅಮಾಯಕರನ್ನು ಬಂಧಿಸಿದ್ದರೂ, ದರ್ಗಾ ಅಧ್ಯಕ್ಷರು ಮೌನ ವಹಿಸಿದ್ದಾರೆಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಅಧ್ಯಕ್ಷರ ಅಳೇಕಲದ ಮನೆಗೆ ಮುತ್ತಿಗೆ ಹಾಕಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರ ವಾಹನಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಅಳೇಕಲದಲ್ಲಿರುವ ದರ್ಗಾ ಅಧ್ಯಕ್ಷ ಯು.ಹೆಚ್ .ಹಂಝ ಅವರ ಮನೆಗೆ ತಡರಾತ್ರಿ ಸುಮಾರು 20-20 ರಷ್ಟು ಮಂದಿ ಆಗಮಿಸಿದ್ದ ಎಸ್ ಡಿಪಿಐ ಕಾರ್ಯಕರ್ತರು , ಪೊಲೀಸರು ತೊಕ್ಕೊಟ್ಟು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮನೆಯೊಳಗೆ ಏಕಾಏಕಿ ಪ್ರವೇಶಗೈದು ಅಮಾಯಕರನ್ನು ಕೊಂಡೊಯ್ದಿದ್ದಾರೆ. ನಸುಕಿನ ಜಾವ ಮಹಿಳೆ, ಮಕ್ಕಳು ಮನೆಯಲ್ಲಿರುವ ಸಂದರ್ಭ ಪೊಲೀಸರು ಮನೆಯೊಳಗೆ ಪ್ರವೇಶಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ದರ್ಗಾ ಅಧ್ಯಕ್ಷರು ಪೊಲೀಸರ ಜತೆಗೆ ಮಾತುಕತೆ ನಡೆಸಬೇಕು. ಅಲ್ಲದೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಖಾಸಗಿ ಶಾಲೆ ವಿದ್ಯಾರ್ಥಿನಿಗೆ ಶಾಲಾ ವಾಹನ ಚಾಲಕನಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತೊಕ್ಕೊಟ್ಟುವಿನ ಆಸ್ಪತ್ರೆ ಎದುರುಗಡೆ ನಡೆದ ಹಿಂಸಾಚಾರ, ಗಲಭೆ ಮತ್ತು ವಾಹನ ಚಾಲಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾಡೂರು ನಿವಾಸಿಗಳಾದ ಆಸೀಫ್ (33) ಮತ್ತು ಸೈಯ್ಯದ್ ಉಮ್ಮರ್ ಕೋಯ (25) ಎಂಬವರನ್ನು ಬಂಧಿಸಲಾಗಿದೆ. ಘಟನೆ ಹಿನ್ನೆಲೆ: 2015ರ ಎ.13ರಂದು ತೊಕ್ಕೊಟ್ಟು ಖಾಸಗಿ ಶಾಲೆ ಯುಕೆಜಿ ವಿಭಾಗದ ವಿದ್ಯಾರ್ಥಿನಿಯ ಮೇಲೆ ಶಾಲಾ ವಾಹನ ಚಾಲಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ತಂಡವೊಂದು ಶಾಲೆಗೆ ಅಕ್ರಮ ಪ್ರವೇಶಗೈದು, ಚಾಲಕನಿಗೆ ಗಂಭೀರವಾಗಿ ಹಲ್ಲೆ ನಡೆಸಿತ್ತು. ಬಳಿಕ ತೊಕ್ಕೊಟ್ಟು ಸಹಾರಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ವಿದ್ಯಾರ್ಥಿನಿಯನ್ನು ಕೊಂಡೊಯ್ದ ಸಂದರ್ಭ ಆಸ್ಪತ್ರೆ ಹೊರಗೆ ಜಮಾಯಿಸಿದ್ದ ತಂಡ ಬಸ್ಸಿಗೆ ಮತ್ತು ಪೊಲೀಸ್ ವಾಹನಕ್ಕೆ ಕಲ್ಲೆಸೆದು ಹಾನಿಗೊಳಿಸಿತ್ತಲ್ಲದೆ, ಮಾಧ್ಯಮದವರ ಮೇಲೂ ಮುಗಿಬಿದ್ದು, ಕೆಮರಾ ಕಸಿಯಲು ಯತ್ನಿಸಿ…

Read More

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಮಳೆ ಅವಾಂತರದಿಂದ ರಾಜ್ಯವೇ ತತ್ತರಿಸಿಹೋಗಿದೆ. ಇದೀಗ ಮತ್ತೆ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಲ್ಲಿನ ಮನೆ ಜಲಾವೃತಗೊಂಡಿದೆ. ಭೂಕುಸಿತ, ಟ್ರಾಫಿಕ್ ಜಾಮ್ ನಿಂದ ಜನರು ಕಂಗಾಲಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇದೀಗ 100 ವರ್ಷಗಳ ದಾಖಲೆಯನ್ನು ಮುರಿದಿದೆ. ಮಳೆಯಿಂದಾಗಿ ತಮಿಳುನಾಡಿನ ಪ್ರಮುಖ ಮಧ್ಯಕೈಲಾಶ್ ಸಿಗ್ನಲ್ ರಸ್ತೆ ಕುಸಿತಗೊಂಡಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿದ್ದು ಭಾರೀ ಮಳೆಗೆ ಈಗಾಗಲೇ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಹಲವು ಶಾಲಾ, ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಘೋಷಿಸಿದೆ. ಚೆನ್ನೈನಲ್ಲಿ ಇನ್ನೂ 3, 4 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮಣನ್ ತಿಳಿಸಿದ್ದು ಇದೇ ರೀತಿ ಮಳೆ ಸುರಿಯುತ್ತಿದ್ದರೆ ಕರಾವಳಿ ತೀರ ಪ್ರದೇಶಗಳಲ್ಲಿ ಪ್ರವಾಹವುಂಟಾಗುವ ಭೀತಿ ಇದೀಗ ಎಲ್ಲರಲ್ಲೂ ಉಂಟು ಮಾಡಿದೆ. ಬೆಂಗಳೂರು, ಕೋಲಾರ ಸೇರಿದಂತೆ ಕರ್ನಾಟಕದ ಹಲವೆಡೆಯೂ ಮಳೆಯಾಗುವ ಸಾಧ್ಯತೆ…

Read More

ಹೈದರಾಬಾದ್‌: ಶಾಲಾ ಶೌಚಾಲಯದಲ್ಲೇ 13 ವರ್ಷ ಪ್ರಾಯದ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿ ಘಟನೆಯೊಂದು ತೆಲಂಗಾಣದ ಮಾಧಾಪುರ ಪಟ್ಟಣದಲ್ಲಿ ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು, ತರಗತಿ ನಡೆಯುತ್ತಿದ್ದಾಗಲೇ ಹೆರಿಗೆ ನೋವನ್ನು ಅನುಭವಿಸತೊಡಗಿದ ಈಕೆಗೆ ತನಗೆ ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ತನಗೆ ಹೊಟ್ಟೆ ನೋವು ಬರುತ್ತಿದೆ ಎಂದು ವಿದ್ಯಾರ್ಥಿನಿಯು ತರಗತಿಯ ಶಿಕ್ಷಕಿಯಲ್ಲಿ ಹೇಳಿಕೊಂಡಾಗ ಆ ಶಿಕ್ಷಕಿಯು ಶೌಚಾಲಯಕ್ಕೆ ಹೋಗುವಂತೆ ಆಕೆಗೆ ಸೂಚಿಸಿದರು. ಶೌಚಾಲಯಕ್ಕೆಂದು ತೆರಳಿದ ವಿದ್ಯಾರ್ಥಿನಿ ಅಲ್ಲೇ ಹೆಣ್ಣು ಮಗುವಿಗೆ ನೀಡಿದ್ದಾಳೆ. ಒಡನೆಯೇ ಶಾಲೆಯ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿಯ ಹೆತ್ತವರಿಗೆ ಸುದ್ದಿ ಮುಟ್ಟಿಸಿದರು. ಆದರೆ ವಿಚಿತ್ರವೆನೆಂದರೆ ಆಕೆ ಗರ್ಭಿಣಿಯೆಂದು ಹೆತ್ತವರಿಗಾಗಲಿ ಅಥವಾ ಶಾಲಾ ಶಿಕ್ಷಕರಿಗಗಾಲಿ ಗೊತ್ತಿರಲಿಲ್ಲವಂತೆ! ತಮ್ಮ ಮಗಳು ಗರ್ಭಿಣಿಯಾಗಿದ್ದಳೆಂಬುದು ತಮ್ಮ ಗಮನಕ್ಕೆ ಎಂದೂ ಬಂದದ್ದೇ ಇಲ್ಲ ಎಂದವರು ಹೇಳಿದರು. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ವಿದ್ಯಾರ್ಥಿನಿಯ ಹೆರಿಗೆಯು ನಡೆದದ್ದು ಶನಿವಾರ – ಆದರೆ ಎಲ್ಲರ ಗಮನಕ್ಕೆ ಬಂದದ್ದು ಸೋಮವಾರ !…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ನಾವು ಮಾಡುವ ಕಾರ್ಯ, ಮಾತು ಮಾನಸಿಕವಾಗಿ ನಮ್ಮಿಂದ ಯಾರಿಗಾದರೂ ನೋವಾಗಿರುತ್ತದೆ. ಕಾಯಿಕ, ವಾಚಿಕ, ಮಾನಸಿಕ ತಪ್ಪುಗಳು ಒಂದಿಲ್ಲೊಂದು ರೀತಿಯಲ್ಲಿ ನಡೆದಿರುವುದರಿಂದ ಅದರಿಂದ ಎದುರಾಗುವ ಪಾಪಕೃತ್ಯ ದೂರವಾಗಬೇಕಾದರೆ ನಾವು ದೇವರಿಗೆ ಶರಣಾಗುವುದೊಂದೇ ದಾರಿ. ಆ ದಿಸೆಯಲ್ಲಿ ಪರಿಹಾರಕ್ಕೋಸ್ಕರ ನಾಗದೇವರ ಪೂಜೆಯೂ ಒಂದಾಗಿದ್ದು ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲು ಹಾಗೂ ಪುಣ್ಯಕಟ್ಟಿಕೊಳ್ಳಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ವೆಂಕಟರಮಣ ಆಸ್ರಣ್ಣ ನುಡಿದರು. ಅವರು ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದ ವತಿಯಿಂದ ಕ್ಷೇತ್ರದ ವಠಾರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಸೋಮವಾರ ನಡೆದ ಭೂಮಿಪೂಜೆ(ಚಿಟ್ಟೆ ಪೂಜೆ)ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಭೂಕಂಪ ಎಂಬುದು ಆದಿಶೇಷನ ಅಲುಗಾಡುವಿಕೆಯ ಪರಿಣಾಮ ಎಂಬ ನಂಬಿಕೆ ಇರುವುದರಿಂದಲೇ ನಾಗದೇವರನ್ನು ತೃಪ್ತಿಪಡಿಸಿದರೆ ನಾಗದೇವರು ಸ್ವಲ್ಪಮಟ್ಟಿಗೆ ಶಾಂತನಾಗುತ್ತಾರೆ. ಶಾಸ್ತ ್ರದಲ್ಲಿ ಉಲ್ಲೇಖಿಸಿರುವಂತೆ ನಿಧಿಯನ್ನು ಕಾಯುವವ…

Read More