Author: UllalaVani

Kannada News From Coastal Karnataka

ಬಂಟ್ವಾಳ: ಅರಣ್ಯ ಪ್ರದೇಶದ ನಡುವಿನ ಖಾಸಗಿ ಜಾಗದಲ್ಲಿ ಕ್ವಾರಿ ಕಾರ್ಯಾಚರಣೆ, ದಿನವೊಂದಕ್ಕೆ ಮೂರು ಬಾರಿ ಜಿಲೆಟಿನ್‌ ಮುಖೇನ ಕಲ್ಲುಗಳ ಸ್ಫೋಟ, ಭಾರೀ ಸದ್ದಿನ ಜೊತೆಗೆ ಮನೆಗಳ ಸುತ್ತಮುತ್ತಲೂ ಕಲ್ಲುಗಳ ಅವಶೇಷಗಳು ಬೀಳುತ್ತಿವೆ, ರಸ್ತೆಯಲ್ಲಿ ನಾಲ್ಕರಷ್ಟು ಶಾಲಾ ವಾಹನಗಳು ಸಂಚರಿಸುತ್ತಿದ್ದರೂ ರಸ್ತೆಯಿಂದ ಮೀ. ಅಂತರ ದೂರದಲ್ಲಿನ ಕ್ವಾರಿಯಲ್ಲಿ ನಿರಂತರ ಸ್ಫೋಟಕಗಳ ಬಳಕೆ, ಹೊಸ ಮನೆ ನಿರ್ಮಾಣವನ್ನೇ ಮೊಟಕುಗೊಳಿಸಿದ ಕುಟುಂಬ, ನೀರಿಲ್ಲದೇ ಬಂಜರು ಭೂಮಿಯಾಗುತ್ತಿರುವ ಕೃಷಿ ಭೂಮಿ, ಆತಂಕದ ನಡುವೆ ಜೀವನ ಕಳೆದುಕೊಳ್ಳುತ್ತಿರುವ ಕುಟುಂಬಗಳಿಗೆ ಹೈಕೋರ್ಟ್‌ ಆದೇಶವಿದ್ದರೂ ಪಾಲಿಸದ ಅಧಿಕಾರಿಗಳು. ಇದು ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿ ಕಾರ್ಯಾಚರಣೆಯಿಂದಾಗಿ ಗ್ರಾಮಸ್ಥರು ಅನುಭವಿಸುತ್ತಿರುವ ನರಕಯಾತನೆ ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿಯಿಂದಾಗಿ ಪರಿಸರವಿಡೀ ಮಾಲಿನ್ಯದಿಂದ ಕೂಡಿದ್ದು, ಮನೆ, ಅಂಗನವಾಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ಹೈಕೋರ್ಟ್‌ ನಲ್ಲಿ ಗ್ರಾಮಸ್ಥರು ಹೂಡಿರುವ ದಾವೆಗೆ ರಾಜ್ಯ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು…

Read More

ಉಳ್ಳಾಲ: ಜುಮಾ ಮಸೀದಿ ಉಚ್ಚಿಲ ಸೋಮೇಶ್ವರ 407 ಇಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ಶರೀಫುಲ್ ಅರೆಬಿ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ 2026ಜನವರಿ ತಿಂಗಳಲ್ಲಿ ನಡೆಯಲಿರುವ ಉರೂಸ್ ನೇರ್ಚೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ದ ಧ್ವಜಾರೋಹಣ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಸ್ಥಳೀಯ ಖತೀಬ್ ಇಬ್ರಾಹಿಂ ಫೈಝಿ ದುಆ ನೆರವೇರಿಸಿದರು.ಜನವರಿ 15 ರಿಂದ 25 ರ ವರೆಗೆ ಉಚ್ಚಿಲ ಉರೂಸ್ ನಡೆಯಲಿದ್ದು, 11 ದಿನಗಳ ಕಾಲ ಧಾರ್ಮಿಕ ಉಪನ್ಯಾಸ ನಡೆಯಲಿದೆ.ಜನವರಿ 25 ಭಾನುವಾರ ಬೆಳಿಗ್ಗೆ 10 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ ಹೇಳಿದರು. ಈ ಕಾರ್ಯಕ್ರಮ ದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಯು.ಎನ್.ಅಬ್ಬಾಸ್, ಕಾರ್ಯದರ್ಶಿ ಅಹ್ಮದ್ ಪೆರಿಬೈಲ್, ಕೌನ್ಸಿಲರ್ ಅಬ್ದುಲ್ ಸಲಾಮ್ ಯು., ಉಪಾಧ್ಯಕ್ಷ ಅಬ್ಬಾಸ್ ಹಾಜಿ ಪೆರಿ ಬೈಲ್, ಕೋಶಾಧಿಕಾರಿ ಹಸೈನಾರ್ ಹಾಜಿ, ಉರೂಸ್ ‌ಸಮಿತಿ ಕೋಶಾಧಿಕಾರಿ ಯು.ಬಿ.ಎಂ. ಹಾಜಿ,ಉರೂಸ್ ಸಮಿತಿ ಕಾರ್ಯದರ್ಶಿ ಅಬೂಬಕರ್…

Read More

ದಾವಣಗೆರೆ: ಮಿಟ್ಲಕಟ್ಟೆ ಬಳಿ ಬೈಕ್ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಯುವತಿ ಪ್ರಿಯಾ (22) ಮೃತಪಟ್ಟಿದ್ದಾಳೆ. ಹಮ್ಸ್​ನಿಂದಾಗಿ ಬ್ಯಾಲೆನ್ಸ್ ತಪ್ಪಿ ಮರಕ್ಕೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.  ಮೃತ ಪ್ರಿಯಾ ಸ್ನೇಹಿತ ಯೋಗೆಶ್ ಜೊತೆ ಪಾರ್ಟಿಗೆ ತೆರಳಿದ್ದಳು. ಜರಕಟ್ಟೆಯಲ್ಲಿರುವ ಆಧ್ಯಾ ಹೋಟೆಲ್​ಗೆ ಹೋದಾಗ ಸ್ನೇಹಿತ ಯೋಗೆಶ್ ಮತ್ತು ಪ್ರಿಯಾ ಮಧ್ಯೆ ವಾಗ್ವಾದ ನಡೆದಿದೆ. ನಂತರ ಪ್ರಿಯಾಳ ಮನವೊಲಿಸಿ ಬೈಕ್​​ನಲ್ಲಿ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಈ ವೇಳೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಯುವತಿ ಮೃತಪಟ್ಟರೆ ಯೋಗೆಶ್ ಗಂಭೀರ ಗಾಯಗೊಂಡಿದ್ದಾರೆ. ಮೃತ ಪ್ರಿಯಾ ಮತ್ತು ಯೋಗೆಶ್​ ವಾಗ್ವಾದದ ಕೊನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾರ್ಟಿಯಲ್ಲಿ ನಿಜಕ್ಕೂ ಇಬ್ಬರ ಮಧ್ಯೆ ಆಗಿರುವ ಗಲಾಟೆ ಏನು ಅನ್ನೋದು ತನಿಖೆಯಿಂದ ತಿಳಿದುಬರಬೇಕಿದೆ.

Read More

ಕಾರ್ಕಳ, ನ. 21: ಬಸ್ ಚಾಲಕನಿಗೆ ಆಕಸ್ಮಿಕವಾಗಿ ಲೋ ಬಿಪಿ ಉಂಟಾದ ಕಾರಣ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಉಚ್ಛಂಗಿ ಮಾರಿಯಮ್ಮ ದೇವಸ್ಥಾನದ ಬಳಿ ನವೆಂಬರ್ 20ರಂದು ನಡೆದಿದೆ. ಸಂಜೆ ಸುಮಾರು 3 ಗಂಟೆಗೆ ಈ ಘಟನೆ ಸಂಭವಿಸಿದೆ. ರಿಕ್ಷಾ ಚಾಲಕ ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಒಳಗಡೆ ಕುಳಿತಿದ್ದಾಗ, ಬಸ್ ದಿಢೀರನೆ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ರಿಕ್ಷಾ ಚಾಲಕರಿಗೆ ತಲೆ, ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಜೊತೆಗೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಬಸ್ ಚಾಲಕ ಮತ್ತು ರಿಕ್ಷಾ ಚಾಲಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆ ನಡೆದ ಸಮಯದಲ್ಲಿ ರಸ್ತೆಯಲ್ಲಿ ಹೆಚ್ಚು ಜನಸಂದಣಿ ಇಲ್ಲದ ಕಾರಣ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಅಪಘಾತದಲ್ಲಿ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.

Read More

ಸುಳ್ಯ, ನ. 21: ‘ಸಂಸದರ ನಡೆ ಗ್ರಾಮದ ಕಡೆ’ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಬೆಳಗ್ಗೆ ತಾಲೂಕಿನ ಬಾಳುಗೋಡು, ಮಧ್ಯಾಹ್ನ ಕಲ್ಮಕಾರು ಹಾಗೂ ಕೊಲ್ಲಮೊಗ್ರುವಿನಲ್ಲಿ ಕ್ಯಾ. ಚೌಟ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಆ ಬಳಿಕ ಸ್ಥಳೀಯರ ಕುಂದು-ಕೊರತೆ ಆಲಿಸಿದ್ದಾರೆ. ಈ ವೇಳೆ ಅನೇಕ ಸ್ಥಳೀಯ ನಾಗರಿಕರು ತಮ್ಮ ಊರಿನ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದಿದ್ದಾರೆ. ಸಂಸದರು ಕೂಡ ಎಲ್ಲರ ಕುಂದು-ಕೊರತೆಗಳನ್ನು ಆಲಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಪ್ರಕ್ರಿಯಿಸಿರುವ ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಭಾಗದ ಜನರನ್ನು ತಲುಪುವುದು; ಆ ಮೂಲಕ ಅವರ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂಬ ಆಶಯ ನನ್ನದು. ಜನರ ಸಮಸ್ಯೆಗಳು-ಸವಾಲುಗಳಿಗೆ ಖುದ್ದು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ…

Read More

ಉಡುಪಿ: ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಲಿಸುತ್ತಿದ್ದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಬೈಂದೂರು ತಾಲೂಕಿನ ನಾವುಂದ ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್ ಮೇಲೆ ಸಂಭವಿಸಿದೆ. ಕುಂದಾಪುರದಿಂದ ಉಪ್ಪುಂದಕ್ಕೆ ಚಲಿಸುತ್ತಿದ್ದ ಕಾರಿನಲ್ಲಿ ದುರ್ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ನಿತೇಶ್ (31) ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು (73) ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಬೈಂದೂರು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಲಬುರಗಿ: ಬಿಜೆಪಿ‌ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್ ಆಗಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ರಾಠೋಡ್​ ಅವರನ್ನು ತಡರಾತ್ರಿ ಬಂಧಿಸಿದ್ದಾರೆ.  ಕೊಲೆಯತ್ನ ಆರೋಪದಡಿ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ‌ ಬಳಿ ಬಿಜೆಪಿ ಮುಖಂಡನ ಬಂಧನವಾಗಿದೆ. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ನಾಟಿ ಔಷಧಿ ವೈದ್ಯ ರಶೀದ್ ಮುತ್ಯಾ ಬಂಧನಕ್ಕೆ ಮಣಿಕಂಠ ರಾಠೋಡ್ ಆಗ್ರಹಿಸಿದ್ದರು.  ಅಂತೆಯೇ ಮಣಿಕಂಠ ರಾಠೋಡ್, ಬೆಂಬಲಿಗರೊಂದಿಗೆ ಗ್ರಾಮಕ್ಕೆ ತೆರಳಿ ದೊಡ್ಡ ಹೈಡ್ರಾಮಾ ಕ್ರಿಯೇಟ್ ಮಾಡಿದ್ದರು. ಈ ವೇಳೆ ರಶೀದ್ ಮತ್ಯಾ ಕಾರು ಚಾಲಕನ ತಲೆಗೆ ಕಲ್ಲೇಟು ಬಿದ್ದಿತ್ತು. ರಶೀದ್ ಮುತ್ಯಾ ಚಾಲಕನ ದೂರಿನ ಮೇರೆಗೆ ಬಂಧನವಾಗಿದೆ. ಮಣಿಕಂಠ್ ರಾಠೋಡ್ ವಿರುದ್ಧ ಕೊಲೆಯತ್ನ ಆರೋಪದಡಿ ದೂರು ದಾಖಲಾಗಿದೆ. ನೆಲೋಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

Read More

ಚಳಿಗಾಲ ಈಗಾಗಲೇ ಆರಂಭವಾಗಿಬಿಟ್ಟಿದೆ. ಈ ಚಳಿಗಾಲದಲ್ಲಿ ಅನಾರೋಗ್ಯ, ತ್ವಚೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಅದೇ ರೀತಿ ಪಾದದ ಆರೈಕೆಯ ಬಗ್ಗೆಯೂ ಗಮನ ವಹಿಸಬೇಕು. ಏಕೆಂದರೆ ಚಳಿಗೆ ಅನೇಕರ ಹಿಮ್ಮಡಿ ಬಿರುಕು (cracked heels) ಬಿಡುತ್ತದೆ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಇದಾಗಿದ್ದು, ಇದರಿಂದ ಇಡೀ ಪಾದದ ಸೌಂದರ್ಯವೇ ಕೆಡುತ್ತದೆ. ಬಿರು ಬಿಟ್ಟ ಈ ಹಿಮ್ಮಡಿಯನ್ನು ಸರಿಪಡಿಸಲು, ಪಾದಗಳ ಸೌಂದರ್ಯವನ್ನು ಕಾಪಾಡಲು ಅನೇಕರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಹೀಗೆ ನಿಮ್ಮ ಹಿಮ್ಮಡಿಯೂ ಬಿರುಕು ಬಿಟ್ಟಿದ್ಯಾ, ಇದಕ್ಕೆ ದುಬಾರಿ ಚಿಕಿತ್ಸೆಯ ಅವಶ್ಯಕತೆಯಿಲ್ಲ, ಈ ಕೆಲವು ಮನೆಮದ್ದುಗಳ ಸಹಾಯದಿಂದ ಸಲಭವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತ ಸಂಪೂರ ಮಾಹಿತಿ ಇಲ್ಲಿದೆ ನೋಡಿ. ಬಿರುಕು ಬಿಟ್ಟ ಹಿಮ್ಮಡಿಯನ್ನು ಗುಣಪಡಿಸಲು ಸರಳ ಮನೆಮದ್ದುಗಳು: ನಿಂಬೆ, ಗ್ಲಿಸರಿನ್ ಮತ್ತು ರೋಸ್ ವಾಟರ್: ಅರ್ಧ ಬಕೆಟ್‌ ಬಿಸಿ ನೀರು ತುಂಬಿಸಿ, ಅದಕ್ಕೆ ನಿಂಬೆ ರಸ, ಒಂದು…

Read More

ನವದೆಹಲಿ, ನವೆಂಬರ್ 21: ಸಂಸತ್ ಚಳಿಗಾಲದ ಅಧಿವೇಶನ(Parliament Winter Session) ಡಿಸೆಂಬರ್ 1ರಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್ 30ರಂದು ಸರ್ವಪಕ್ಷ ಸಭೆ ಕರೆದಿದೆ. ಸಂಸತ್ತಿನ ಚಳಿಗಾಲ ಸುಸೂತ್ರವಾಗಿ ನಡೆಯುವಂತೆ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡಲಾಗುತ್ತದೆ. ಈ ಸಭೆಯು ಎಲ್ಲಾ ರಾಜಕೀಯ ಪಕ್ಷಗಳ ಸದನ ನಾಯಕರನ್ನು ಒಟ್ಟುಗೂಡಿಸಿ ಚರ್ಚೆ ನಡೆಸಲಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬೆಳಗ್ಗೆ 11 ಗಂಟೆಗೆ ಸಭೆಗೆ ಆಹ್ವಾನಿಸುವಂತೆ ಔಪಚಾರಿಕವಾಗಿ ಸದನದ ನಾಯಕರಿಗೆ ಪತ್ರ ಬರೆದಿದ್ದಾರೆ. ಅಧಿವೇಶನಕ್ಕೆ ಮುಂಚಿತವಾಗಿ ಎಲ್ಲಾ ಕಡೆಯಿಂದ ಸಹಕಾರ ಪಡೆಯಲು ಮತ್ತು ಕಳವಳಗಳನ್ನು ಪರಿಹರಿಸಲು ಈ ಸಭೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ. ಚಳಿಗಾಲದ ಅಧಿವೇಶನವು ಡಿಸೆಂಬರ್ 1 ರಿಂದ 19 ರವರೆಗೆ 19 ದಿನಗಳವರೆಗೆ ನಡೆಯಲಿದ್ದು, ಆದರೆ ಕೇವಲ 15 ಅಧಿವೇಶನಗಳನ್ನು ಒಳಗೊಂಡಿದೆ. ಈ ಅಧಿವೇಶನವು ಸಂಸತ್ತಿನ ಹಿಂದಿನ ಚಳಿಗಾಲದ ಅಧಿವೇಶನಗಳಿಗಿಂತ ಕಡಿಮೆ ಅವಧಿಯದ್ದಾಗಿರುತ್ತದೆ.ಸರ್ಕಾರವು ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತಿದೆ ಎಂದು…

Read More

ಮಂಗಳೂರು, ನ. 21 : ಪಾದೇಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್(ರಿ)ನಿಂದ ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಂದ ತಣ್ಣೀರುಬಾವಿ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನವೆಂಬರ್ 21 ರಂದು ಯಶಸ್ವಿಯಾಗಿ ನಡೆಸಲಾಯಿತು. ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಅತಿಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಡಲತೀರದಲ್ಲಿ ಕಸ ಸಂಗ್ರಹ, ಪ್ಲಾಸ್ಟಿಕ್ ನಿವಾರಣೆ ಹಾಗೂ ತ್ಯಾಜ್ಯ ವಿಭಜನೆ ಕುರಿತು ಜಾಗೃತಿ ಮೂಡಿಸಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್ ನ ಅಧ್ಯಕ್ಷ ಯತೀಶ್ ರೈ, ಪ್ರಾಣಿ ರಕ್ಷಣಾ ಮತ್ತು ಆಹಾರ ಕೇಂದ್ರದ ರಜನಿ ಹಾಗೂ ದಾಮೋದರ ಶೆಟ್ಟಿ, ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬಬಿತಾ ಆರ್. ನಾಥ್, ಕಾರ್ಯದರ್ಶಿಗಳಾದ ಶಿವಾಣಿ ಆರ್. ನಾಥ್, ಟ್ರಸ್ಟಿಗಳಾದ ಜಯನಿ ಆರ್ ನಾಥ್, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ. ನಾಯಕ್, ಪದವಿ ವಿಭಾಗ ಮುಖ್ಯಸ್ಥರಾದ ದೀಕ್ಷಿತಾ, ಪದವಿ ಪೂರ್ವ ವಿಭಾಗದ ಮುಖ್ಯಸ್ಥರಾದ ಸೌಮ್ಯಾ…

Read More