ಕೈರಂಗಳ; ತೆಂಕುತಿಟ್ಟು ಯಕ್ಷಗಾನ ಲೋಕದಲ್ಲಿ ಅಪೂರ್ವ ಮತ್ತು ವಿಶಿಷ್ಟ ಸನ್ನಿವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಏಪ್ರಿಲ್ 19ರಂದು ಕೈರಂಗಳ ಪುಣ್ಯಕೋಟಿನಗರದಲ್ಲಿ ವಿಭಿನ್ನ ಶೈಲಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಯಕ್ಷಗಾನದಲ್ಲಿ ಜೋಡಾಟ ವೆಂಬುದು ಅತ್ಯಂತ ವಿಶೇಷವಾದ ಕಲಾಪ್ರಕಾರವಾಗಿದ್ದು, ಈ ಬಾರಿ ಅದನ್ನು ಶಾಲಾ ವಿದ್ಯಾರ್ಥಿಗಳೇ ನಿರ್ವಹಿಸುವುದು ವಿಶೇಷವಾಗಿರುತ್ತದೆ. 16 ಬಗೆಯ ಲಲಿತ ಕಲೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಖ್ಯಾತಿ ಪಡೆದ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಎರಡು ತಂಡಗಳಾಗಿ ವಿಭಜನೆಗೊಂಡು ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ರಂಗದಲ್ಲಿ ಮೂಡಿಸಲಿದ್ದಾರೆ.
ಖ್ಯಾತ ಯಕ್ಷಗಾನ ನಾಟ್ಯಗುರು ಕಟೀಲು ಮೇಳದ ಸಿಡಿಲ ಮರಿ ಎಂದೇ ಪ್ರಸಿದ್ಧರಾದ ಅಶ್ವಥ್ ಮಂಜನಾಡಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಕಟೀಲಿನ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರ ಆಶೀರ್ವಾದವು ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ತಂದಿದೆ.
ಇಲ್ಲಿಯವರೆಗೆ ಯಕ್ಷಗಾನ ಲೋಕದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜೋಡಾಟ ಪ್ರದರ್ಶನ ನಡೆದಿರುವ ಉದಾಹರಣೆ ಇಲ್ಲದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಕ್ಕಳ ಪ್ರತಿಭೆಯನ್ನು ಬೆಂಬಲಿಸುವAತೆ ಆಯೋಜಕರು ವಿನಂತಿಸಿಕೊAಡಿದ್ದಾರೆ.

