Author: UllalaVani

Kannada News From Coastal Karnataka

ಮಂಗಳೂರು,ನ.24:ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ಮೀನಾ ಮೇಷ ಎಣಿಸುವ ರಾಜ್ಯ ಸರಕಾರದ ವಿರುದ್ದ ಬೀಡಿ ಕಾರ್ಮಿಕರು CITU ನೇತ್ರತ್ವದಲ್ಲಿ ಇಂದಿನಿಂದ (24-11-2025) ನಗರದ ಕ್ಲಾಕ್ ಟವರ್ ಬಳಿಯಲ್ಲಿ ರಾತ್ರಿ ಹಗಲು ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಪ್ರಾರಂಭದಲ್ಲಿ ಧರಣಿನಿರತರು ಬೀಡಿ ಮಾಲಕರು ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. :ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಬೀಡಿ ಫೆಡರೇಶನ್ ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿಯವರು, ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ವೇತನ‌ ನೀಡದೆ ನಿರಂತರ ಶೋಷಿಸುತ್ತಿರುವ ಬೀಡಿ ಮಾಲಕರ ವಿರುದ್ಧ ಕ್ರಮ‌ಕೈಗೊಂಡು ಬಾಕಿ ವೇತನವನ್ನು ಕೊಡಿಸಬೇಕು ಹಾಗೂ ಕಾನೂನುಬದ್ದ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕೆಂದು ಹೇಳಿದರು. CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ಮಾತನಾಡುತ್ತಾ, ದುಡಿದ ವೇತನ ನೀಡದ ಮಾಲಕರ ಪರ,ಅತ್ಯಾಚಾರ ಕೊಲೆ ಮಾಡುವ ಆರೋಪಿಗಳ…

Read More

ದೇಶದ ಕ್ರಿಶ್ಚಿಯನ್ ನಾಗರಿಕರ ಹಕ್ಕು-ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ Concerned Christian Citizens of India (CCCI) ಸಂಘಟನೆಯು ರಾಷ್ಟ್ರೀಯ ಕ್ರಿಶ್ಚಿಯನ್ ಕನ್ವೆನ್ನನ್ನನ್ನು ನವೆಂಬರ್ 29ರಂದು ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲು ಘೋಷಿಸಿದೆ. AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇದರಲ್ಲಿ ಭಾಗಿಯಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದವರನ್ನು ಪ್ರತಿನಿಧಿಸಲಿದ್ದಾರೆ. ವಿಭಿನ್ನ ಪಂಥಗಳ ನಾಗರಿಕರ ಒಕ್ಕೂಟದಿಂದ ಆರಂಭವಾದ ಈ ಚಳವಳಿಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಂ (UCF) ಸಂಪೂರ್ಣ ಬೆಂಬಲ ಘೋಷಿಸಿದೆ. ಸಂಘಟಕರು ತಿಳಿಸಿದಂತೆ, ಈ ಕನ್ವೆನ್ನನ್ ಭಾರತದ ಧರ್ಮ ನಿರಪೇಕ್ಷತೆ ಮತ್ತು ಕ್ರಿಶ್ಚಿಯನ್ ಸಮುದಾಯದ ಸಂವಿಧಾನಿಕ ಹಕ್ಕುಗಳಿಗೆ ಎದುರಾಗಿರುವ ತುರ್ತು ಸಂವಿಧಾನ ಸಂಕಟದ” ಬಗ್ಗೆ ರಾಷ್ಟ್ರದ ಗಮನ ಸೆಳೆಯುವ ಗುರಿ ಹೊಂದಿದೆ. ನಾಯಕರು, ಬುದ್ಧಿಜೀವಿಗಳು ಮತ್ತು ಸಮುದಾಯ ಪ್ರತಿಸಿಧಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಸಂವಿಧಾನ ಸಂಕಟದ ನಡುವೆ ಕ್ರಿಶ್ಚಿಯನ್ ಸಮುದಾಯದ ಮೂರು ಮುಖ್ಯ ಪ್ರಮುಖ ಸಂವಿಧಾನಿಕ ಬೇಡಿಕೆಗಳು:

Read More

ಮೈಸೂರು, ನ. 24 ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ವೇಳೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಹಾರೈಕೆಗಾಗಿ ಮೈಸೂರು ಜಿಲ್ಲೆಯಲ್ಲೇ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಈ ವಿಶೇಷ ಪೂಜೆಯನ್ನು ಶಬರಿಮಲಾ ಯಾತ್ರಿಕರು ನೆರವೇರಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಶಬರಿಮಲಾ ಯಾತ್ರಿಗಳು ಡಿಕೆ ಶಿವಕುಮಾರ್ ಅವರ ಫೋಟೋ ಹಿಡಿದು, ‘‘ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ’’ ಎಂದು ಘೋಷಣೆ ಕೂಗುತ್ತಾ ದೇವರ ಕೃಪೆಯನ್ನು ಬೇಡಿಕೊಂಡರು. ಯಾತ್ರಿಕರು ಕೈಯಲ್ಲಿ ಇಟ್ಟಿದ್ದ ಚಿತ್ರ ಮತ್ತು ಘೋಷಣೆಗಳು ದೇವಾಲಯದ ವಾತಾವರಣದಲ್ಲೇ ರಾಜಕೀಯ ಚರ್ಚೆಗಳನ್ನು ಮರುಜ್ವಲಿಸುತ್ತಿತ್ತು.ಈ ಘಟನೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ನಡೆದಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹಗಳು ಜೋರಾಗಿರುವ ಸಂದರ್ಭದಲ್ಲಿ ನಡೆದಿರುವ ಈ ವಿಶೇಷ ಪೂಜೆ ಗಮನ ಸೆಳೆಯುತ್ತಿದೆ.ಜಿಲ್ಲೆಯಲ್ಲಿನ ರಾಜಕೀಯ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್ ಬೆಂಬಲಿಗರ ಈ ಹಾರೈಕೆ…

Read More

ಮಂಗಳೂರು, ನ. 24 : ಕರ್ನಾಟಕ-ಕೇರಳ ಗಡಿಯಲ್ಲಿ ಅಪರಾಧ ನಿಯಂತ್ರಣ, ಆರೋಪಿಗಳನ್ನು ಪತ್ತೆಹಚ್ಚುವುದು ಮತ್ತು ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಜಂಟಿ ಕಾರ್ಯಾಚರಣೆಗಳ ಕುರಿತು ಚರ್ಚಿಸಲು ನವೆಂಬರ್ 22 ರಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ  ಗಡಿಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಗಡಿ ಅಪರಾಧ ಸಭೆ ನಡೆಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳದಿಂದ ಕಣ್ಣೂರು ವಲಯದ ಡಿಐಜಿಪಿ ಯತೀಶ್ ಚಂದ್ರ ಜಿಎಚ್ ಮತ್ತು ಕಾಸರಗೋಡು ಎಸ್ಪಿ ವಿಜಯ್ ಭರತ್ ರೆಡ್ಡಿ ಭಾಗವಹಿಸಿದ್ದರು.ಎರಡೂ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಿಧ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಯಿತು, ಇದರಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು, ಬಾಕಿ ಇರುವ ವಾರಂಟ್‌ಗಳಿರುವವರು, ಅಂತರರಾಜ್ಯ ಅಪರಾಧ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿವೆ.ಎರಡೂ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಬೇಕಾಗಿರುವ ಮತ್ತು ಗಡಿ ಜಿಲ್ಲೆಗಳಲ್ಲಿ ಅಡಗಿಕೊಂಡಿರುವ ಶಂಕಿತ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲಾಯಿತು. ಅಪರಾಧ ನಿಯಂತ್ರಣ ಮತ್ತು…

Read More

ಬಂಟ್ವಾಳ, ನ. 23 : ಕಳೆದ ಮೇ 27ರಂದು ನಡೆದಿದ್ದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ 14 ಆರೋಪಿಗಳ ವಿರುದ್ಧದ ಕೋಕಾ ಪ್ರಕರಣದ ತನಿಖೆಗೆ ಕಾಲಾವಕಾಶ ವಿಸ್ತರಿಸಬೇಕೆಂದು ಕೋರಿ ಬಂಟ್ವಾಳ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸೆಷನ್ಸ್ ಹಾಗೂ ವಿಶೇಷ (ಕೋಕಾ) ನ್ಯಾಯಾಲಯವು ಶನಿವಾರ ವಜಾಗೊಳಿಸಿ ಆದೇಶಿಸಿದೆ. ಪ್ರಕರಣದಲ್ಲಿ ಸುಮಿತ್.ಬಿ, ದೀಪಕ್, ವಿ.ರವಿರಾಜ ಮೂಲ್ಯ, ಪೃಥ್ವಿರಾಜ್ ಜೋಗಿ, ಚಿಂತನ್, ಅಭಿನ್ ರೈ, ತೇಜಾಕ್ಷ, ಶಿವಪ್ರಸಾದ್ ತುಂಬೆ, ಪ್ರದೀಪ, ಶಾಹಿತ್, ಸಚಿನ್, ರಂಜಿತ್, ರವಿಸಂಜಯ್ ಅವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ಆರೋಪಿಯಾಗಿದ್ದ ಭರತ್ ಕುಮ್ಡೇಲ್ ತಲೆಮರೆಸಿಕೊಂಡಿದ್ದ. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುತ್ತಿರುವಾಗ, ಭರತ್ ಕುಮ್ಡೇಲ್ ಮತ್ತೊಂದು ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ. ಆ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು, 14 ಆರೋಪಿಗಳ ಮೇಲೆ ಕೋಕಾ ಕಾಯ್ದೆಯಡಿ ತನಿಖೆ ನಡೆಸಲು ಅವಕಾಶ ಕೇಳಿದರು.ಮೈಸೂರು ನ್ಯಾಯಾಲಯದಲ್ಲಿ ಕೋಕಾ…

Read More

ಚಿಕ್ಕಮಗಳೂರು, ನ. 24: ಜಿಲ್ಲೆಯ ಅಜ್ಜಂಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳನ್ನು ಸೆರೆ ಹಿಡಿಯಲು ವಿಶೇಷ ತಂಡ ರಚಿಸುವಂತೆ ಸೂಚನೆ ನೀಡಿದ್ದಾರೆ. ಅವರು ಸೂಚಿಸಿರುವಂತೆ, ಸರ್ಪಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲು ಯಾವುದೇ ಖಾಸಗಿ ಸಂಸ್ಥೆಗಳ ನೆರವಿಗೆ ಅವಶ್ಯಕತೆ ಇಲ್ಲದೆ, ಅರಣ್ಯ ಇಲಾಖೆಯ 5 ಸಿಬ್ಬಂದಿಗೆ ತರಬೇತಿ ನೀಡುವಂತೆ ನಿರ್ದೇಶಿಸಲಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಉಡುಪಿ ಭಾಗಗಳಲ್ಲಿ ಜನವಸತಿ ಪ್ರದೇಶಗಳಲ್ಲಿ, ಮನೆಯೊಳಗೆ ಮತ್ತು ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪಗಳು ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿವೆ. ಇದನ್ನು ಪರಿಹರಿಸಲು ಉರಗ ತಜ್ಞರು ಅಥವಾ ಖಾಸಗಿ ಸಂಸ್ಥೆಗಳ ನೆರವಿನ ಅಗತ್ಯವಿಲ್ಲ, ನಮ್ಮದೇ ಅರಣ್ಯಾಧಿಕಾರಿಗಳ ತಂಡಕ್ಕೆ ತರಬೇತಿ ನೀಡಿ, ಪ್ರಾದೇಶಿಕ ಅರಣ್ಯಾಧಿಕಾರಿಯ ನೇತೃತ್ವದಲ್ಲಿ 5 ಜನರ ತಂಡವನ್ನು ರಚಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.ವಾಣಿಜ್ಯ ಚಟುವಟಿಕೆಗಳು ಮತ್ತು ಸಂಶೋಧನಾ ಅನುಮತಿಗಳ ದುರುಪಯೋಗದ ಆರೋಪವೂ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಕಾಳಿಂಗ ಸರ್ಪಗಳನ್ನು…

Read More

ಕಾಸರಗೋಡು, ನ. 24; ಗಡಿನಾಡು ಕಾಸರಗೋಡಿನ ಕನ್ನಡಿಗರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದಂತೆ, ಕೇರಳ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿಗಳಲ್ಲಿ (ರೇಷನ್ ಕಾರ್ಡ್) ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ. ಕೇರಳ ಸರ್ಕಾರದಿಂದ ಬಂದಿರುವ ಈ ಮಹತ್ವದ ಆದೇಶವು ಗಡಿಭಾಗದ ಕನ್ನಡಿಗರಿಗೆ ದೊಡ್ಡ ಸಂತಸದ ಸಂಗತಿ. ಈ ಸಂಬಂಧ, ಇತ್ತೀಚೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮತ್ತು ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಕಾಸರಗೋಡು ಪ್ರದೇಶದಲ್ಲಿ ವಾಸಿಸುವ ಸಾವಿರಾರು ಕನ್ನಡಿಗರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂಬ ಬೇಡಿಕೆಯನ್ನು ಅವರು ಮುಖ್ಯಮಂತ್ರಿಗೆ ಒತ್ತಾಯಪೂರ್ವಕವಾಗಿ ತಿಳಿಸಿದ್ದರು.ಪ್ರಸ್ತುತ ಕಾಸರಗೋಡಿನಲ್ಲಿ ಮುದ್ರಿಸಲ್ಪಡುವ ಗುರುತಿನ ಚೀಟಿಗಳು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಲಭ್ಯ. ಇದರಿಂದ…

Read More

ಕೋಟೆಕಾರ್; ಇತ್ತೀಚೆಗೆ ನಿಧನ ರಾದ ಕೊಮರಂಗಳ ನಿವಾಸಿ ಅಬ್ದುಲ್ ಅಝೀಝ್ ಹಾಗೂ ಅಜ್ಜಿನಡ್ಕ ಮದರಸದಲ್ಲಿ ಈ ಹಿಂದೆ ಸೇವೆಸಲ್ಲಿಸಿದ್ದ ಬಶೀರ್ ಹನೀಫ್ ಉಸ್ತಾದ್ ಎಂಬವರ ಹೆಸರಲ್ಲಿ ಅಜ್ಜಿನಡ್ಕ ಮದರಸ ವಿಧ್ಯಾರ್ಥಿಗಳಿಂದ ಕೂಟು ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕ ವೃಂದ ಆಡಳಿತ ಮಂಡಳಿ ಸದಸ್ಯರು ಊರಿನ ನಾಗರಿಕರು ಉಪಸ್ಥಿತರಿದ್ದರು

Read More

ತೊಕ್ಕುಟ್ಟು, ನ.22: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ತೊಕ್ಕೊಟಿನ ಕ್ಲಿಕ್ ಸಭಾಂಗಣದಲ್ಲಿ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಚುನಾವಣಾಧಿಕಾರಿಯಾಗಿ ಪ್ರತಿಷ್ಠಾನದ ಗೌರವ ಸಲಹೆಗಾರರು ಆನಂದ ಕೆ.ಅಸೈಗೋಳಿ ಯವರು ಮುಂದಿನ ಎರಡು ವರುಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ. ಅಧ್ಯಕ್ಷರಾಗಿ ಜೀವನ್ ಕುಮಾರ್ ತೊಕ್ಕೊಟು ಆಯ್ಕೆಯಾಗಿದ್ದು,ಗೌರವ ಸಲಹೆಗಾರರಾಗಿ ಆನಂದ ಕೆ.ಅಸೈಗೋಳಿಯನ್ನು ಆರಿಸಲಾಯಿತು. ಗೌರವಧ್ಯಕ್ಷರಾಗಿ ರಾಕೇಶ್ ಕುಮಾರ್, ಉಪಾಧ್ಯಕ್ಷರುಗಳಾಗಿ ಮಾಧವ ಉಳ್ಳಾಲ, ದಾಮೋದರ ನಡಾರ್, ಪ್ರವೀಣ್ ಬಸ್ತಿ, ಹರೀಶ್ ಅಂಬ್ಲಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿಯಾಗಿ ಪ್ರಸಾದ್ ಕೊಂಡಾಣ, ಕಾರ್ಯದರ್ಶಿಯಾಗಿ ದೀಕ್ಷಿತ್ ನಿಸರ್ಗ ಕುಂಪಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ಕೊಲ್ಯ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಪೊನ್ನೆತೋಡು, ಸಂಘಟನಾ ಕಾರ್ಯದರ್ಶಿ ಯಾಗಿ ರಮೇಶ್ ಸಾಮಾನಿ, ಜತೆ ಸಂಘಟನಾ ಕಾರ್ಯದರ್ಶಿ ನವೀನ್ ಎ.ಕೆ., ಲಕ್ಷ್ಮೀನಾರಾಯಣ, ವೃಕ್ಷಾಂಕುರ ರಕ್ಷಾ ಸಂಚಾಲಕರಾಗಿ ರಾಜೇಂದ್ರ ಸೇವಂತಿಗುಡ್ಡೆ, ಗುರುವಂದನೆ ಸಂಚಾಲಕರಾಗಿ: ಮೋಹನ್ ಸಾಲ್ಯಾನ್, ಸ್ವಚ್ಚತಾ ಸಂಚಾಲಕರಾಗಿ: ನಟರಾಜ್, ಮಾಧ್ಯಮ…

Read More

ಮಂಗಳೂರು, ನ. 22 : ಅಥೆನಾ ಆಸ್ಪತ್ರೆ ಮತ್ತು ಅಥೆನಾ ಸಮೂಹ ಸಂಸ್ಥೆಗಳ ಛೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್. ಶೆಟ್ಟಿಯಾನ್(65) ಅವರು ನವೆಂಬರ್ 21 ರಂದು ನಿಧನರಾಗಿದ್ದಾರೆ. ಶೆಟ್ಟಿಯಾನ್ ಅವರು ಪ್ರೈವೇಟ್ ಮತ್ತು ನಾನ್ ಪ್ರೋಫಿಟ್ ಕ್ಷೇತ್ರಗಳಲ್ಲಿ ಅನೇಕ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರು ವೈ.ಎಂ.ಸಿ.ಎ. ಆಫ್ ಇಂಡಿಯಾದ ರಾಷ್ಟ್ರೀಯ ಖಜಾಂಚಿ ಮತ್ತು ಟ್ರಸ್ಟಿ ಆಗಿ ಆಯ್ಕೆಯಾಗಿದ್ದರು. 158 ವರ್ಷಗಳ ಭಾರತೀಯ ವೈ.ಎಂ.ಸಿ.ಎ. ಚಳವಳಿಯ ಇತಿಹಾಸದಲ್ಲಿ, ಭಾರತೀಯ ವೈ.ಎಂ.ಸಿ.ಎ.ದ ರಾಷ್ಟ್ರೀಯ ಖಜಾಂಚಿ ಮತ್ತು ವೈ.ಎಂ.ಸಿ.ಎ. ಕರ್ನಾಟಕದ ಟ್ರಸ್ಟಿ ಹುದ್ದೆಗಳಿಗೆ ಆಯ್ಕೆಯಾದ ಕರ್ನಾಟಕದ ಮೊದಲಿಗ ಇವರಾಗಿದ್ದರು.ಶೆಟ್ಟಿಯಾನ್ ಅವರು ಬಲ್ಮಠದಲ್ಲಿರುವ ಸಿಎಸ್‌ಐ ಶಾಂತಿ ಕ್ಯಾಥೆಡ್ರಲ್‌ನ ಸದಸ್ಯರಾಗಿದ್ದರು. ಅವರು ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Read More