ಉಳ್ಳಾಲ: ಗಾಣಿಗ ಸಮುದಾಯದಲ್ಲಿ ಯುವಜನರ ಸಹಕಾರ ಪಡೆದು ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಮುಂಬೈ ಸಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಅಭಿಪ್ರಾಯಪಟ್ಟರು. ಉಳ್ಳಾಲ ಗಾಣಿಗರ ಸಮುದಾಯ ಭವನದಲ್ಲಿ ಉಳ್ಳಾಲ ಗಾಣಿಗರ ಸಂಘ ಹಾಗೂ ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಳ್ಳಾಲ ತಾಲೂಕಿನ 14 ಗ್ರಾಮಗಳ ಸ್ವಜಾತಿ ಬಾಂಧವರಿಗಾಗಿ ಆಯೋಜಿಸಿದ್ದ “ಗಾಣಿಗರ ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕಿರೀಟ ಹೊತ್ತವನಿಗೆ ಕಿರುಕುಳ ತಪ್ಪದು ಎಂಬ ಮಾತಿನಂತೆ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವವರಿಗೆ ಅಡಚಣೆಗಳು ಸಹಜ. ಸಂಘಟನೆ ಕಟ್ಟುವುದರೊಂದಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಬಹಳ ಮುಖ್ಯ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯ,” ಎಂದು ಹೇಳಿದರು. ಸಂಘಟನೆಯ ಚಿಂತನೆ ಬದಲಾಗಬೇಕು. ಕೇವಲ ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಪದವಿಗೆ ಮಹತ್ವ ನೀಡುವುದರಿಂದ ಯುವಕರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಮುದಾಯ ಭವನಗಳನ್ನು ನಿರ್ಮಿಸಿ, ಅದರಿಂದ ಬರುವ ಆದಾಯವನ್ನು ಸಮಾಜದ ಹಾಗೂ ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕೆ ಬಳಸಬೇಕು ಎಂದು…
Author: UllalaVani
ಪುತ್ತೂರು, ಏ. 20 : ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ವೈಭವದ ಸಿಡಿಮದ್ದು ಪ್ರದರ್ಶನದ ವೇಳೆ ಭಕ್ತರಿಗೆ ಕಿಡಿ ತಾಗಿದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಕುಂದಾಪುರ ಮೂಲದ ಸುಮಂತ್ ಶೆಟ್ಟಿ, ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶ್ವಂತ್, ಮೋಹನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ನೇಹಿತರಾಗಿದ್ದು, ಎಲ್ಲರೂ ಪುತ್ತೂರು ಜಾತ್ರೆಗೆ ಆಗಮಿಸಿದ್ದರು ಎನ್ನಲಾಗಿದೆ. ಪ್ರಸ್ತುತ ಗಾಯಾಳುಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಸುಮಂತ್ ಶೆಟ್ಟಿ ಎಂಬುವವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಡಿಮದ್ದು ಪ್ರದರ್ಶನವನ್ನು ನಿರ್ವಹಿಸುತ್ತಿದ್ದವರು ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹೆಚ್ಚಿನ ತೀವ್ರತೆಯ ಸಿಡಿಮದ್ದುಗಳನ್ನು ಸಿಡಿಸುವಾಗ ಭಕ್ತರು ಮತ್ತು ಪ್ರದರ್ಶನದ ಸ್ಥಳದ ನಡುವೆ ಸೂಕ್ತ ಸುರಕ್ಷಿತ ಅಂತರ ಕಾಪಾಡಿಕೊಂಡಿರಲಿಲ್ಲ. ಆಯೋಜಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ…
ಮಂಗಳೂರು: ಕ್ಯಾನ್ಸ್ ಚಲನಚಿತ್ರೋತ್ಸವದ ಮಾರ್ಶೆ ಡು ಫಿಲ್ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಆಲ್ಝೈಮರ್ ಮತ್ತು ಆರೈಕೆದಾರರ ಕುರಿತಾದ ಹಿಂದಿ-ಕನ್ನಡ ಚಿತ್ರ ಕ್ಯಾನ್ಸ್ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಪ್ರೀಮಿಯರ್ ಕಾಣಲಿದ್ದು, ಭಾರತದ ತುರ್ತು ಸಾಮಾಜಿಕ ನಿರೂಪಣೆಗಳನ್ನು ಜಾಗತಿಕವಾಗಿ ಎತ್ತಿ ತೋರಿಸಲಿದೆ. ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ, ಮತ್ತು ಅಮಿತ್ ಬೆಹ್ಲ್ ಅಭಿನಯದ ಸೆಪ್ಟಂಬರ್ 21_ ಚಿತ್ರತಂಡವು, ಮೇ 12 ರಿಂದ ಮೇ 23 ರವರೆಗೆ ನಡೆಯಲಿರುವ 79ನೇ ಕ್ಯಾನ್ಸ್ ಚಲನಚಿತ್ರೋತ್ಸವ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಅಧಿಕೃತವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಪ್ರಮುಖ ಮೈಲಿಗಲ್ಲನ್ನು ಘೋಷಿಸಿದೆ. ಈ ಆಯ್ಕೆ ಯೋಜನೆಗೆ ಜಾಗತಿಕ ಮಹತ್ವದ ಕ್ಷಣವಾಗಿದ್ದು, ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದರಲ್ಲಿ ಸ್ಥಾನ ಪಡೆದಿದೆ. ಕರೆನ್ ಕ್ಷಿತಿ ಸುವರ್ಣ ಅವರ ಸೆಪ್ಟಂಬರ್ 21 ಕ್ಯಾನ್ಸ್ ಚಲನಚಿತ್ರೋತ್ಸವ 2026ರಲ್ಲಿ ಪ್ರೀಮಿಯರ್ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್, ಮತ್ತು ಹಮಾರಾಮೂವಿ ಜೊತೆಗೆ ಫಿಲ್ಮ್ಸ್‌ಮ್ಯಾಕ್ಸ್ ನಿರ್ಮಿಸಿರುವ…
ಮಂಗಳೂರು: ಕ್ಯಾನ್ಸ್ ಚಲನಚಿತ್ರೋತ್ಸವದ ಮಾರ್ಶೆ ಡು ಫಿಲ್ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಆಲ್ಝೈಮರ್ ಮತ್ತು ಆರೈಕೆದಾರರ ಕುರಿತಾದ ಹಿಂದಿ-ಕನ್ನಡ ಚಿತ್ರ ಕ್ಯಾನ್ಸ್ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಪ್ರೀಮಿಯರ್ ಕಾಣಲಿದ್ದು, ಭಾರತದ ತುರ್ತು ಸಾಮಾಜಿಕ ನಿರೂಪಣೆಗಳನ್ನು ಜಾಗತಿಕವಾಗಿ ಎತ್ತಿ ತೋರಿಸಲಿದೆ. ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ, ಮತ್ತು ಅಮಿತ್ ಬೆಹ್ಲ್ ಅಭಿನಯದ ಸೆಪ್ಟಂಬರ್ 21_ ಚಿತ್ರತಂಡವು, ಮೇ 12 ರಿಂದ ಮೇ 23 ರವರೆಗೆ ನಡೆಯಲಿರುವ 79ನೇ ಕ್ಯಾನ್ಸ್ ಚಲನಚಿತ್ರೋತ್ಸವ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಅಧಿಕೃತವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಪ್ರಮುಖ ಮೈಲಿಗಲ್ಲನ್ನು ಘೋಷಿಸಿದೆ. ಈ ಆಯ್ಕೆ ಯೋಜನೆಗೆ ಜಾಗತಿಕ ಮಹತ್ವದ ಕ್ಷಣವಾಗಿದ್ದು, ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದರಲ್ಲಿ ಸ್ಥಾನ ಪಡೆದಿದೆ.ಕರೆನ್ ಕ್ಷಿತಿ ಸುವರ್ಣ ಅವರ ಸೆಪ್ಟಂಬರ್ 21 ಕ್ಯಾನ್ಸ್ ಚಲನಚಿತ್ರೋತ್ಸವ 2026ರಲ್ಲಿ ಪ್ರೀಮಿಯರ್ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್, ಮತ್ತು ಹಮಾರಾಮೂವಿ ಜೊತೆಗೆ ಫಿಲ್ಮ್ಸ್‌ಮ್ಯಾಕ್ಸ್ ನಿರ್ಮಿಸಿರುವ ಸೆಪ್ಟಂಬರ್ 21…
ಮುಡಿಪು: ಭಕ್ತಿ ಮತ್ತು ಶ್ರದ್ಧೆಯ ಪಾವನ ಭಾವನೆಗಳೊಂದಿಗೆ ಯೋಗಭಾಗ್ಯಗಳ ಅದ್ಭುತ ಸಂಯೋಜನೆ ಕಾರ್ಯಕ್ರಮದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಲಿ. ಎಲ್ಲರ ಸಹಕಾರ, ಸಮರ್ಪಣೆ ಹಾಗೂ ಹೃದಯಪೂರ್ವಕ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರ́ಮವು ಅತ್ಯಂತ ಯಶಸ್ವಿಯಾಗಿ, ಸಾರ್ಥಕವಾಗಿ ನೇರವೇರಲಿ. ಇದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಆತ್ಮೀಯತೆಯ ವಾತಾವರಣ ವಿಸ್ತರಿಸಲಿ ಎಂದು ಶ್ರೀ ಕ್ಷೇತ್ರ ಕಣಂತೂರು ಇಲ್ಲಿನ ಗಡಿ ಪ್ರಧಾನರು ಪದ್ಮನಾಭ ರೈ ಯಾನೆ ಮಂಜು ಭಂಡಾರಿ ಹೇಳಿದರು. ಅವರು ಮೇ.7 ರಿಂದ ಮೇ.10 ರವರೆಗೆ ನಡೆಯಲಿರುವ ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರ ಕಳ ನಾರ್ಯ ಇದರ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಬ್ರಹ್ಮಕಲಶೋತ್ಸವದ ಮುಡಿಪು ಶ್ರೀ ಕಿರಾತೇಶ್ವರ ಮುಡುಪ್ಪಿನ್ನಾರ್ ದೈವಸ್ಥಾನ ದಲ್ಲಿ ಶುಕ್ರವಾರ ಜರಗಿದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮಿ ಫ್ಯೂಯೆಲ್ಸ್ ಮಾಲಕರು ಸೂರ್ಯನಾರಾಯಣ ಭಟ್ ಕೈರಂಗಳ , ಮಂಟಮೆ ಫೈನಾನ್ಸ್ ಅಸೈಗೋಳಿಯ ಚಂದ್ರಶೇಖರ ಶೆಟ್ಟಿ ಮಂಟಮೆ, ಪ್ರಗತಿಪರ ಕೃಷಿಕರು ಪ್ರಶಾಂತ್ ಮಾರ್ಲ ಧರ್ಮ, ಉದ್ಯಮಿ ಸೀತಾರಾಮ ಗಟ್ಟಿ ಗುಂಡ್ಯ, ಮುಡಿಪು ವಲಯ…
ಮಂಗಳೂರು, ಏ. 18 : ಖಾಸಗಿ ಎಕ್ಸ್‌ಪ್ರೆಸ್ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ವಾಮಂಜೂರು ಬಳಿಯ ಕೇತಿಕಲ್ ನಲ್ಲಿ ಏಪ್ರಿಲ್ 17 ರಂದು ನಡೆದಿದೆ. ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಕೇತಿಕಲ್ ಬಳಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.ಡಿಕ್ಕಿಯ ಪರಿಣಾಮ ಆಟೋರಿಕ್ಷಾದ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರಿಗೂ ಗಾಯಗಳಾಗಿವೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು, ಏ. 18: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್‌ನಿಂದ ಪೂಂಜಾಲಕಟ್ಟೆವರೆಗಿನ ಹೆದ್ದಾರಿ ನಿರ್ವಹಣೆ, ಬಿ.ಸಿ. ರೋಡ್ ಜಂಕ್ಷನ್‌ನಿಂದ ಗಾಣದಪಡ್ಪು ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 64 ಕೋಟಿ ರೂ. ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಕಾಮಗಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವ ಸಂಸದರು, ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಸುಮಾರು 20 ಕಿಮೀ. ಹೆದ್ದಾರಿಯ ನಿರ್ವಹಣೆ ಕಾಮಗಾರಿಗಳಿಗಾಗಿ ಒಟ್ಟು 34.53 ಕೋಟಿ ರೂ.ಗಳ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಜೂರು ಮಾಡಿದೆ. ಜತೆಗೆ, ಬಿ.ಸಿ. ರೋಡ್ ಜಂಕ್ಷನ್‌ನಿಂದ ಬಂಟ್ವಾಳ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಶ್ರೀ ನಾರಾಯಣಗುರು ಮಂದಿರದವರೆಗಿನ ರಸ್ತೆ ಸದ್ಯ ಅಗಲೀಕರಣಕ್ಕೆ ಬಾಕಿಯಿದೆ. ಈ ಭಾಗದ ಹೆದ್ದಾರಿಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಒಟ್ಟು 22.59 ಕೋಟಿ ರೂ.ಗಳ ಅನುದಾನ ದೊರೆತಿದೆ ಎಂದು…
ಬಂಟ್ವಾಳ, ಏ. 18 ; ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 18 ಗ್ರಾಮ್ ತೂಕದ ಚಿನ್ನದ ಸರ ಕಳವಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಸರಸ್ವತಿ ಎಂಬವರು ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ಹೋಗಲು ಧರ್ಮಸ್ಥಳ ದಿಂದ ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಏ.15ರಂದು ಬೆಳಗ್ಗೆ ಸುಮಾರು 8.20ಕ್ಕೆ ಹತ್ತಿದ್ದರು. ಬಸ್ ನಲ್ಲಿ ಜನಸಂದಣಿ ಇದ್ದು, ಮಗಳು ಕುಳಿತಿದ್ದರೆ, ಮಹಿಳೆ ನಿಂತು ಪ್ರಯಾಣಿಸಿದ್ದರು.ಮಗಳೊಂದಿಗೆ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಸುಮಾರು 9 ಗಂಟೆಗೆ ಕುತ್ತಿಗೆ ನೋಡಿದ್ದು, ಈ ವೇಳೆ ಚಿನ್ನದ ಸರ ಇರಲಿಲ್ಲ. ಬಸ್ಸಿನಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಮಡಂತ್ಯಾರುನಿಂದ ಬಿ.ಸಿ ರೋಡ್ ಗೆ ಬರುವ ಸಮಯ ಬಸ್ಸಿನಲ್ಲಿ ಕಳ್ಳತನ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳತನವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ಆಗಬಹುದು ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ…
ಮಂಗಳೂರು: ಸಾಧಕರನ್ನು ಗೌರವಿಸಿದಾಗ ಮುಂದಿನ ಯುವ ಪೀಳಿಗೆಗೂ ಸ್ಪೂರ್ತಿ ದೊರೆಯುತ್ತದೆ, ಅಲ್ಲದೆ ಸಾಧಿಸಿದವರನ್ನು ಅಭಿನಂದಿಸುವುದು ಮತ್ತು ಪ್ರೋತ್ಸಾಹಿಸುವುದು ಎಲ್ಲರ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಅಭಿಪ್ರಾಯಪಟ್ಟರು. ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿದ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಸಮನ್ಯೂ ಎಸ್ ಶೆಟ್ಟಿ ಮತ್ತು ನಂದನ್ ನಾಯಕ್ ಇವರುಗಳನ್ನು ಅಭಿನಂದಿಸಿ ಮಾತನಾಡಿದರು.ಅಭಿನಂದನ ಭಾಷಣವನ್ನು ಮಾಡಿದ ರಾಜ್ಯ ಕಾರ್ಯದರ್ಶಿ ತ್ಯಾಗಮ್ ಹರೇಕಳ, ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರ ಸಾಧನೆಯನ್ನು ಮಾಡದೇ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ರಾಜ್ಯಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ಇದು ಶ್ರೇಷ್ಠ ಮಟ್ಟದ ಸಾಧನೆಯಾಗಿದೆ . ಅಂತಹ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ, ತಾಳ್ಮೆ ಮತ್ತು ಛಲದ ಹಾದಿ ಇರಬೇಕು. ಇದರಿಂದ…
ಕೋಟೆಕಾರ್: ಹಿದಾಯತ್ ನಗರ ಹುಸೈನಿಯಾ ದಅವಾ ದರ್ಸ್ ಆರಂಭೋತ್ಸವ ಇಂದು ಜುಮಾ ನಮಾಝ್ ಬಳಿಕ ಮಸೀದಿಲ್ಲಿ ಆರಂಭಗೊಂಡಿತು. ಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ದರ್ಸ್ ಆರಂಭಕಾರ್ಯಗೊಳಿಸಿ ದರ್ಸ್ ಕಲಿಕೆಯ ಮಹತ್ವದ ಬಗ್ಗೆ ವಿವರಿಸಿದರು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ದುವಾ ಮಾಡಿದರು. ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಮುಹಧ್ಸಿನ್ ಶಕೂರ್ ಸಅದಿ,ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ,ಇನ್ನಿತರರು ಭಾಗವಹಿಸಿದ್ದರು.ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ನಿರೂಪಿಸಿದರು.

