ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಸರಗೋಡು ಗೋ-ಕುಟೀರದ ಕಾಮಗಾರಿಯು ಮತ್ತೊಂದು ಮಹತ್ವದ ಹಂತಕ್ಕೆ ತಲುಪಿರುತ್ತದೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯ ನೆನಪಿಗಾಗಿ ಶಾಶ್ವತವಾದ ಕಾಸರಗೋಡು ಗೋ-ಕುಟೀರದ ನಿರ್ಮಾಣದ ಮೂಲಕ ಸಾರ್ಥಕ ಸೇವೆಯನ್ನು ಗುರುತಿಸಿಕೊಳ್ಳುವುದಕ್ಕಾಗಿ 2025 ನವಂಬರ್ 4 ರಂದು ಕಾಸರಗೋಡು ಗೋ -ಕುಟೀರವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಕಾಸರಗೋಡು ಗೋ-ಕುಟೀರದ ನೆಲ ಅಂತಸ್ಥಿನಲ್ಲಿ ಗೋವುಗಳಿಗೆ ಕುಟೀರ ( ಗೋ -ಹಟ್ಟಿ) ನಿರ್ಮಾಣವಾಗಿದ್ದು, ಮೊದಲ ಅಂತಸ್ತಿನಲ್ಲಿ ಗೋ ಮೇವು ಸಂಗ್ರಹಾಲಯ ಹಾಗೂ ಮೇಲ್ಚಾವಣಿ ನಿರ್ಮಾಣ ಕಾಮಗಾರಿಯು 5 ತಿಂಗಳಲ್ಲಿ ಪೂರ್ಣಗೊಂಡಿದೆ.ಗೋ – ಕರುಗಳಿಗೆ ಕಾಮಧೇನು- ಕಲ್ಪವೃಕ್ಷ ಗೋ – ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಆ ನಂತರ ಶೀಘ್ರದಲ್ಲೇ ಗೋ – ಧಾರ್ಮಿಕ ಪೂಜಾ ಕಾರ್ಯಕ್ರಮವು ವಿವಿಧ ಮಠಗಳ ಸ್ವಾಮೀಜಿಗಳು, ಗುರುಹಿರಿಯರ
ಆಶೀರ್ವಾದದೊoದಿಗೆ, ಕೇರಳ- ಕರ್ನಾಟಕ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾ ಪಂಚಾಯತು,ಗ್ರಾಮ ಪಂಚಾಯತು ಕಾಸರಗೋಡು ನಗರಸಭೆ ಅಧ್ಯಕ್ಷರು, ಜನ ಪ್ರತಿನಿಧಿಗಳು ಪಾಲ್ಗೊಳ್ಳುವಿಕೆಯಿಂದ ಕಾಸರಗೋಡು ಗೋ- ಕುಟೀರದ ಪ್ರವೇಶೋತ್ಸವ- ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗುವುದು.
ದಾರಿ :- ಕಾಸರಗೋಡು ಗೋ-ಕುಟೀರಕ್ಕೆ ಕಾಸರಗೋಡು ಮಧೂರು ರಸ್ತೆಯ ಮೀಪುಗುರಿ ಬಸ್ ಸ್ಟಾಪ್ ನಿಂದ ಪಾರೆಕಟ್ಟೆ ರಸ್ತೆಯ ಮೂಲಕ ಜೆ.ಪಿ.ನಗರ ಕನ್ನಡ ಗ್ರಾಮಕ್ಕೆ ಬನ್ನಿ
ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ – ಕುಟೀರದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಎಲ್ಲಾ ಸಮುದಾಯದವರು, ಸಮಾಜದ ಬಂಧುಗಳು, ಕುಟುಂಬಸ್ಥರು ಹಾಗೂ ದೇವಸ್ಥಾನಗಳು,ಕ್ಷೇತ್ರಗಳು, ಮಠ,ಮಂದಿರ, ದೈವಸ್ಥಾನಗಳಲ್ಲಿ ವರ್ಷoಪ್ರತಿ ನಡೆಯುವ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ,ಬ್ರಹ್ಮ ಕಲಶ ಪುನರ್ ಪ್ರತಿಷ್ಠಾ ಮಹೋತ್ಸವ,ವಿವಿಧ ಧಾರ್ಮಿಕ ಉತ್ಸವಗಳು ಹಾಗೂ ಸಮಾಜ ಬಾಂಧವರ ಗೃಹ ಪ್ರವೇಶೋತ್ಸವ, ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಗೋವುಗಳನ್ನು ಆರಾಧಿಸುವುದಕ್ಕಾಗಿ ಗೋವುಗಳನ್ನು ನೀಡುವುದು ಧಾರ್ಮಿಕ ಪೂಜಾ ಕಾರ್ಯಗಳಿಗೆ ಗೋ- ಮೂತ್ರ ಗೋ -ಪಂಚಗವ್ಯ ಮತ್ತುಗೋ – ಸಗಣಿ ಗೋ – ಮಯವನ್ನು ಅವಶ್ಯಕತೆ ಇರುವವರಿಗೆ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಸಿದ್ಧತೆ ಮಾಡಲಾಗುತ್ತದೆ. ಗೋವುಗಳನ್ನು ದತ್ತು ಪಡೆದು ಒಂದು ವರ್ಷ ಕಾಲ ಗೋ – ಗ್ರಾಸ ನೀಡಿ ಪೋಷಿಸಲು ಗೋ- ಭಕ್ತರಿಗೆ ಗೋ -ಸೇವೆ ಮಾಡಲು ಅವಕಾಶ ನೀಡಲು ಉದ್ದೇಶಿಸಲಾಗಿದೆ. ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),(ಕಾಸರಗೋಡು ಗೋ- ಕುಟೀರ ), ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು -671121
ಮೊಬೈಲ್ :-9448572016
ಇ ಮೇಲ್ :-
Shivaramakasaragod @gmail.com
ಗೂಗಲ್ ಪೇ ಸಂಖ್ಯೆ :-9448572016 ಇಲ್ಲಿಗೆ ತಮ್ಮ ದೇಣಿಗೆಯನ್ನು ಕಳುಹಿಸಬಹುದು.

