Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಾನಸಿಕ, ದೈಹಿಕ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪ ಹೊಂದಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ. ಘಟನೆಯ ವಿವರ: ಕೊಣಾಜೆ ಗ್ರಾಮದ ಅಡ್ಕರೆಪಡ್ಪು ನಿವಾಸಿ ಹಸನಬ್ಬ ಎಂಬವರ ಮಗಳು ರಮ್ಲತ್ ಅವರಿಗೆ ನಡಾರ್-ಮಾಡೂರು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಜೊತೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರಿಗೆ ಮೂರು ಮಕ್ಕಳಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅಬೂಬಕ್ಕರ್ ಸಿದ್ದೀಕ್, ಅತ್ತೆ ನೆಬಿಸಾ, ನಾದಿಯರಾದ ಮುಮ್ತಾಜ್, ಅಸ್ಮಾ. ಆಕೆಯ ಗಂಡ ಯೂನುಸು ಸೇರಿಕೊಂಡು ರಮ್ಲತ್‍ಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಐದು ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ತರುವಂತೆ ಪೀಡಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಎರಡು ಬಾರಿ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ನಡೆದಿದ್ದು ನಿಷ್ಪ್ರಯೋಜಕವಾಗಿತ್ತು. ಇದರಿಂದ ಬೇಸತ್ತ ರಮ್ಲತ್ ಕಳೆದ ತಿಂಗಳು 13ರಂದು ತವರಿಗೆ ಬಂದು ಗಂಡನ ಮನೆಯಲ್ಲಿ ಹಿಂಸೆ ತಾಳಲಾಗುತ್ತಿಲ್ಲ ಎಂದು ಅಲವತ್ತುಕೊಂಡು ಮರುದಿನ ಆತ್ಮಹತ್ಯೆಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಜತೆಗೆ ಸೇರಿಕೊಂಡು ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿ ಉಳ್ಳಾಲವನ್ನು ಸುಂದರ, ಸ್ವಚ್ಛವಾಗಿ ರೂಪಿಸಲು ಶ್ರಮಿಸುವೆವು ಎಂದು ನಗರಸಭೆ ಅಧ್ಯಕ್ಷೆ ಎಂ.ಗಿರಿಜಾ ಬೈ ಹೇಳಿದ್ದಾರೆ. ಅವರು ಉಳ್ಳಾಲನಗರಸಭೆಯಲ್ಲಿ ಸೋಮವಾರ ಜರಗಿದ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಫತ್ತಾಕ್ ಅವರಿಗೆ ನಡೆದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಅಲ್ಲೇ ಸರಿಪಡಿಸಿ ತಪ್ಪಿಹೋಗಲು ಅವಕಾಶ ಕೊಡದೆ ಉತ್ತಮ ಮಾರ್ಗದರ್ಶನದ ಜತೆಗೆ ಬಾಕಿಯಿರುವ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಶಕ್ತಿ ಮೀರಿ ಪ್ರಯತ್ನಿಸೋಣ ಎಂದರು. ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ ಮಾತನಾಡಿ ನಗರಸಭೆಯ 27 ಸದಸ್ಯರು ಜತೆಗಿದ್ದೇವೆ. ಬೇಕಾದ ಅನುದಾನವನ್ನು ಉಳ್ಳಾಲಕ್ಕೆ ಸಚಿವರು ತರುತ್ತಲೇ ಇದ್ದು, ಅದರ ವಿನಿಯೋಗವನ್ನು ಎಲ್ಲರೂ ಮಾಡುವುದರ ಜತೆಗೆ , ಸ್ಥಾಯಿ ಸಮಿತಿ ಅಧ್ಯಕ್ಷರ ಗೌರವ ನೀಡುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಈ ಸಂದರ್ಭ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಲೆಯ ಕುರಿತು ಸಂರಕ್ಷಣೆ, ಸಂವರ್ಧನ, ಅಧ್ಯಯನಗಳು ಆಗಬೇಕಿದ್ದು, ಸಾಂಸ್ಕøತಿಕ ನೀತಿಗಳ ಜಾರಿ ಹಾಗೂ ಬದಲಾವಣೆ ವಿಶ್ವವಿದ್ಯಾನಿಲಯಗಳಿಂದ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಪ್ರಭಾಕರ ಜೋಶಿ ಹೇಳಿದರು. ಅವರು ಸೋಮವಾರ ನವದೆಹಲಿಯ ಅಸೋಸಿಯೇಟ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಹಾಗೂ ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಆತಿಥ್ಯದಲ್ಲಿ ಮಂಗಳಗಂಗೋತ್ರಿಯ ಕ್ಯಾಂಪಸ್‍ನ ಮಂಗಳ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ಗೆ ಚಾಲನೆ ನೀಡಿ ಮಾತನಾಡಿದರು. ಯುವಜನಾಂಗ ಕಲೆ ಹಾಗೂ ಸಂಸ್ಕøತಿಯಿಂದ ಹಿಂದೆ ಸರಿಯುತ್ತಿದೆ ಅನ್ನುವ ಮಾತು ಸುಳ್ಳಾಗಿದೆ. ಇಂತಹ ಸಾಂಸ್ಕøತಿಕ ಕಲೆಗಳ ಪ್ರವಾಹವಾಗಿರುವ ದೇಶದಲ್ಲಿ ಲಕ್ಷಾಂತರ ಯುವ ಸಮುದಾಯ ಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದೆ. ಇದಕ್ಕೆ ಅಂತರ್ಜಾಲದಲ್ಲಿ ದೇಶದ ವಿವಿಧ ಸಂಸ್ಕøತಿಗಳ ಪರಿಚಯ ಹಾಗೂ ಮಾಹಿತಿ ಲಭ್ಯವಿರುವುದೇ ಸಾಕ್ಷಿಯಾಗಿದೆ. ಯುವಪೀಳಿಗೆಯ ಸಂಸ್ಕøತಿಯ ಅರಿವು ಮತ್ತು ಪಾಲ್ಗೊಳ್ಳುವಿಕೆ ಇದ್ದರೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ಬೇಲಿಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಪಂಪ್ ವೆಲ್ ಸಮೀಪದ ಪಡೀಲ್ ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದ್ದು, ನುಜ್ಜುಗುಜ್ಜಾದ ಕಾರೊಳಗಡೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಅರ್ಧ ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ. ಮಾರಿಪಳ್ಳ ನಿವಾಸಿ ಮಹಮ್ಮದ್ (25) ಗಂಭೀರ ಗಾಯಗೊಂಡವರು. ಮಂಗಳೂರಿನಿಂದ ಮಾರಿಪಳ್ಳ ಕಡೆಗೆ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಡೀಲ್ ಸಮೀಪ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಗೆ ಕಾರು ಡಿಕ್ಕಿ ಹೊಡೆದಿದೆ, ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮಹಮ್ಮದ್ ಅದರ ಒಳಗಡೆಯೇ ಸಿಲುಕಿದ್ದರು. ರಸ್ತೆಯಿಂದ ಕೆಲ ದೂರದಷ್ಟು ಕಾರು ಚಲಿಸಿದ್ದರಿಂದ ಕೆಲ ಸಮಯ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಕುಂಬಳೆಯ ಸಿಡಿಮದ್ದು ಪ್ರದರ್ಶನ ಕಾಂiÀರ್iಕ್ರಮದಲ್ಲಿ ಭಾಗವಹಿಸಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ಕಲ್ಲಡ್ಕ ನಿವಾಸಿಗಳಿಬ್ಬರು ರಸ್ತೆಬದಿಯಲ್ಲಿ ಕಾರಿನ ಹೆಡ್ ಲೈಟ್ ಉರಿಯುತ್ತಿರುವುದನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: 37ರ ಹರೆಯದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಕುರಿತು ನಾಲ್ಕು ವರ್ಷಗಳ ಬಳಿಕ ಉಳ್ಳಾಲ ಠಾಣೆಯಲ್ಲಿ ಆತನ ಸಹೋದರ ನಾಪತ್ತೆ ದೂರು ದಾಖಲಿಸಿದ್ದಾರೆ. ಉಳ್ಳಾಲದ ಅಕ್ಕರೆಕೆರೆ ನಿವಾಸಿ ಅಬ್ದುಲ್ ನಾಸಿರ್ (37) ಎಂಬವರು ನಾಪತ್ತೆಯಾದವರು. 2011 ರಲ್ಲಿ ಅಬ್ದುಲ್ ನಾಸಿರ್ ಮನೆಮಂದಿಗೆ ಹೇಳದೆ ಹೋಗಿ ಈವರೆಗೂ ನಾಪತ್ತೆಯಾಗಿದ್ದಾರೆ. ಇವರ ಇರುವಿಕೆಯ ಬಗ್ಗೆ ಈವರೆಗೂ ಯಾವುದೇ ಮಾಹಿತಿಗಳಿಲ್ಲ. ಆದರೆ ಮುಂಬಯಿಯಲ್ಲಿರುವ ಗುಮಾನಿ ಇದೆಯಾದರೂ ಮನೆಮಂದಿಯ ಸಂಪರ್ಕದಲ್ಲಿಲ್ಲ ಎಂದು ಸಹೋದರ ಮಹಮ್ಮದ್ ಇಕ್ಬಾಲ್ ಎಂಬವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಹಿಂದೆಯೂ 2 ವರ್ಷ ನಾಪತ್ತೆಯಾಗಿದ್ದ: ಸಹೋದರ ನಾಸಿರ್ ಆಗಾಗ ಮನೆ ಬಿಟ್ಟು ಹೋಗುವ ಚಾಳಿಯವನಾಗಿದ್ದು, ಮನೆಯವರಲ್ಲಿ ಹೇಳದೆ ಹೊರಗಡೆ ಹೋಗಿ ಮನಸಾದಾಗ ವಾಪಾಸು ಬರುತ್ತಿದ್ದ. 2009ರ ಇಸವಿಯಲ್ಲಿ ಮನೆಬಿಟ್ಟು ಹೋದಾತ ಎರಡು ವರ್ಷ ಕಳೆದ ಬಳಿಕ 2011ರಲ್ಲಿ ವಾಪಸ್ಸಾಗಿದ್ದ. ಮತ್ತೆ ಅದೇ ಇಸವಿಯಲ್ಲಿ ಯಾರಲ್ಲೂ ಹೇಳದೇ ನಾಪತ್ತೆಯಾಗಿದ್ದು, ವಾಪಸ್ಸು ಬರುವನೆಂದು ಮನೆಮಂದಿ ಭರವಸೆಯಿಂದಿದ್ದರೂ ನಾಲ್ಕು ವರ್ಷಗಳಾದರೂ ಬಾರದೇ ಇದ್ದುದರಿಂದ ಉಳ್ಳಾಲ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಲು ಜನ ಹಿಂಜರಿಯುತ್ತಿದ್ದು, ಆತಂಕಗಳನ್ನು ದೂರವಿರಿಸಿ ತಪಾಸಣೆಗಳನ್ನು ನಡೆಸಿದಲ್ಲಿ ಉಲ್ಬಣಗೊಳ್ಳುವ ರೋಗಗಳನ್ನು ತಪ್ಪಿಸಬಹುದು ಎಂದು 317ಡಿ ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್‍ನ ಜಿಲ್ಲಾ ಉಪ ಗವರ್ನರ್ ಲಯನ್ ಎಂ.ಅರುಣ್ ಶೆಟ್ಟಿ ಹೇಳಿದರು. ಅಶೋಕನಗರದ ಲಯನ್ಸ್ ಕ್ಲಬ್, ಉಳ್ಳಾಲದ ಧರ್ಮರಕ್ಷಣ ಮೊಗವೀರ ವೇದಿಕೆ ಹಾಗೂ ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಳ್ಳಾಲದ ಮೊಗವೀರಪಟ್ಣ ಅನುದಾನಿತ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆ ಜನುಪಯೋಗಿಯಾಗಿ ಆಸ್ಪತ್ರೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ. ಇದರ ಪ್ರಯೋಜನವನ್ನು ಜನ ಆತಂಕವಿಲ್ಲದೆ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮಾಧವ್ ಉಳ್ಳಾಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ .66ರ 14 ಕಿ.ಮೀ ಉದ್ದದಲ್ಲಿ ಗಿಡ ನೆಡುವ ಯೋಜನೆಯನ್ನು ರೂಪಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮರಕ್ಷಣ ಮೊಗವೀರ ವೇದಿಕೆಯ ಗೌರವ ಸಲಹೆಗಾರ ಉಮೇಶ್.ಟಿ.ಕರ್ಕೇರ ಹೊಸಬೆಟ್ಟು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಡಸ್ಟರ್ ಕಾರೊಂದು ಚರಂಡಿಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿರುವ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಕೇರಳ ಮೂಲದ ಹೆಲ್ಫಿನ್ (34)ಗಂಭೀರ ಗಾಯಗೊಂಡಿದ್ದು, ಸಹಸವಾರನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲದಿಂದ ಕೇರಳದ ಕಡೆಗೆ ತೆರಳುತ್ತಿದ್ದ ಕಾರು ಚಾಲಕ ರಾತ್ರಿ ವೇಳೆ ಚರಂಡಿಗಾಗಿ ಅಗೆಯಲಾಗಿದ್ದ ಹೊಂಡವನ್ನು ಗಮನಿಸದೇ ಕಾರು ಚಲಾಯಿಸಿದ್ದೇ ಅಪಘಡ ಸಂಭವಿಸಲು ಕಾರಣವಾಗಿದೆ. ಕಾಮಗಾರಿಯ ವೇಳೆ ಇಂತಹ ಅಪಘಢಗಳು ಸಂಭವಿಸದಂತೆ ಗುತ್ತಿಗೆದಾರರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಜಗದ್ಗುರುಗಳಾದ ಫೋಪ್ ಪ್ರಾನ್ಸಿಸ್ ಅವರು ಈ ವರ್ಷವನ್ನು ಕರುಣಾಮಯ ವರ್ಷವೆಂದು ಘೋಷಿಸಿದ್ದು, ಆ ಪ್ರಕಾರ ಜನರು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ರೆ| ಡಾ| ಎಲೋಷಿಯಸ್ ಪಾವ್ಲ್ ಡಿ.ಸೋಜ ಅಭಿಪ್ರಾಯಪಟ್ಟರು. ಅವರು ಮುಡಿಪುವಿನ ಸಂತ ಮುಕ್ತಿಧರ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಕೃತಜ್ಞತಾ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂತ ಜೋಸೆಫ್ ವಾಝರ ಕ್ಷೇತ್ರವನ್ನು ಅ„ಕೃತ ಪುಣ್ಯ ಕ್ಷೇತ್ರವಾಗಿ ಘೋಷಣೆ ಮಾಡಿದ ಅವರು ಇಲ್ಲಿಗೆ ಬರುವ ಭಕ್ತರಿಗೆ ವಿಶೇಷ ಆಶಿರ್ವಾದ ಕೃಪೆ ಲಭಿಸಲಿದೆ ಎಂದರು. ಮಹೋತ್ಸವದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಭಕ್ತಾ„ಗಳು ಭಾಗವಹಿಸಿ ಅನ್ನ ಪ್ರಸಾದವನ್ನನು ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಮಂಗಳೂರು ದಕ್ಷಿಣ ವಲಯದ ಪ್ರದಾನ ಧರ್ಮ ಗುರುಗಳಾದ ವಂದನೀಯ ಫಾ| ಜೆ.ಬಿ. ಸಲ್ದಾನ, ಮುಕ್ತಿಧರ ಸಂತ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ| ಬೆಂಜಮೀನ್ ಪಿಂಟೋ, ಚರ್ಚ್ ಪಾಲನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿನ ಕೆಲ ಮನೆಗಳ ಮೇಲೆ ಪ್ರೈಂ ಟೈಂನಲ್ಲಿ ಬೀಳುತ್ತಿದ್ದ ಜಲ್ಲಿಕಲ್ಲುಗಳ ಎಸೆತ ನಿನ್ನೆ ಇದ್ದಕ್ಕಿದ್ದಂತೆ ನಿಂತುಬಿಟ್ಟಿದೆ. ಇಲ್ಲಿನ ಕೆಲ ಮನೆಗಳ ಮೇಲೆ 6-30ರಿಂದ 7-30ರ ಅವಧಿಯಲ್ಲಿ ಬೀಳುತ್ತಿದ್ದ ಜಲ್ಲಿ ಕಲ್ಲುಗಳು ಸ್ಥಳೀಯ ಜನರಲ್ಲಿ ಅವ್ಯಕ್ತ ಭಯವೊಂದನ್ನು ಹುಟ್ಟಿಸಿದ್ದವು. ನಾಲ್ಕು ದಿಕ್ಕುಗಳಿಂದ ತೂರಿಬರುತ್ತಿದ್ದ ಸಾಧಾ ರಣ ಗಾತ್ರದ ಜಲ್ಲಿಕಲ್ಲಿನಿಂದಾಗಿ ಸ್ಥಳೀಯರು ನೆಮ್ಮದಿ ಕೆಡಿಸಿಕೊಂಡಿ ದ್ದರೆ, ಇನ್ನೂ ಕೆಲ `ಪೀಡೆ’ಗಳು ಮನಸ್ಸಲ್ಲಿಯೇ ಮಂಡಿಗೆ ಮೆಲ್ಲುವಂತೆ ಮಾಡಿದ್ದವು. ಈ ನಡುವೆ ಮಾಧ್ಯಮ ಗಳಲ್ಲಿ ಈ ಬಗ್ಗೆ ಸುದ್ದಿ ಬಂದ ನಂತರ ನಿನ್ನೆ ಯಾವಾಗಲೂ ಕಲ್ಲುಬೀಳುವ ಸಮಯದಲ್ಲಿ ಯಾವುದೇ ಜಲ್ಲಿಕಲ್ಲು ತೂರಿ ಬರಲಿಲ್ಲ. ನಿರ್ದಿಷ್ಟ ಸಮಯದ ಅಂತರದಲ್ಲಿ ಕೆಲ ಮನೆಗಳ ಮೇಲೆ ಬೀಳುವ ಕಲ್ಲುಗಳ ಹಿಂದೆ ಸಾಕಷ್ಟು ಅಂತೆ-ಕಂತೆಗಳ ಕಥೆಗಳೂ ಹುಟ್ಟಿಕೊಂಡಿತ್ತು. ಕೆಲವರು ಈ ಜಲ್ಲಿಕಲ್ಲಿನ ವಾರಸುದಾರರನ್ನು ಪತ್ತೆಹಚ್ಚಲು ಪ್ರಯತ್ನ ಪಟ್ಟರೂ ಯಾರೆಂದು ಸಿಗದೆ ತಲೆಬಿಸಿ ಮಾಡಿಕೊಂಡಿದ್ದರು. ಯಾರೂ ವಾರೀಸುದಾರರು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಪಂಜುರ್ಲಿ ದೈವದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಕೇಂದ್ರ ಕಾರಾಗೃಹಕ್ಕೆ ಡಿಸಿಪಿ ನೇತೃತ್ವದಲ್ಲಿ ನೂತನ ಕಮೀಷನರ್ ಚಂದ್ರಶೇಖರ್ ಹಾಗೂ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ 12 ಮೊಬೈಲ್ ಹಾಗೂ ಚಾರ್ಜರ್, 3 ಸಿಮ್ ಕಾರ್ಡ್‍ಗಳು ಮತ್ತು 5 ಗಾಂಜಾ ಪ್ಯಾಕೆಟ್ ಮತ್ತು ಚಾರ್ಜರ್ ಪತ್ತೆಯಾಗಿದೆ. ಫೈಲ್ ಫೋಟೋ ಜೈಲಿನಲ್ಲಿ ಡಬಲ್ ಮರ್ಡರ್ ನಡೆದ ನಂತರ ಭದ್ರತೆ ಹೆಚ್ಚಿಸಲಾಗಿತ್ತು. ಭದ್ರತೆ ಹೆಚ್ಚಿಸಿದ್ದರೂ ಜೈಲಿನೊಳಗೆ ಮಾದಕ ವಸ್ತುಗಳು ಮತ್ತು ಮಾರಕಾಯುಧಗಳ ಪೂರೈಕೆ ನಿಂತಿರಲಿಲ್ಲ. ಈ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಡಿಸಿಪಿ ಸಂಜೀವ ಪಟೇಲ್ ನೇತೃತ್ವದಲ್ಲಿ ನಡೆದ ದಾಳಿ ನಡೆಸಿದ್ದಾರೆ. ಇಂದು ನಡೆದ ದಾಳಿಯಲ್ಲಿ ಬರ್ಕೆ ಠಾಣೆ ಸಿಸಿಬಿ, ಮತ್ತು ಡಿಸಿಪಿ ತಂಡದ ಪೊಲೀಸರು ಭಾಗಿಯಾಗಿದ್ದಾರೆ.

Read More