ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ವಾಹನ ಸಾಲ ಬಿಡುಗಡೆ ಕಾರ್ಯಕ್ರಮ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆಯಿತು. ವಾಹನ ಸಾಲ ಪಡೆದ ಪ್ರಥಮ ಗ್ರಾಹಕ ನವೀನ್ ಮತ್ತು ಯು.ಕೆ.ಗೋಪಾಲ ಅವರಿಗೆ ವಾಹನದ ಕೀಲಿ ಕೈ ಹಸ್ತಾಂತರಿಸಲಾಯಿತು. ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ. ಕೃಷ್ಣಪ್ಪ ಸಾಲ್ಯಾನ್, ಉಪಾಧ್ಯಕ್ಷ ಮೊೈದಿನ್ ಕುಂಞ ಮರಾಠಿಮೂಲೆ, ನಿರ್ದೇಶಕರಾದ ಅರುನ್ ಕುಮಾರ್ ತೊಕ್ಕೊಟ್ಟು, ಉದಯ ಶೆಟ್ಟಿ, ಗಣೇಶ್ ಶೆಟ್ಟಿ, ನಾರಾಯಣ ತಲಪಾಡಿ, ಪದ್ಮಾವತಿ ಎಸ್. ಶೆಟ್ಟಿ, ರಾಜೀವಿ ಪಿಲಾರು, ಸಂಘದ ಮುಖ್ಯ ಕಾರ್ಯನಿರ್ವಹಣಾ ಅ„ಕಾರಿ ಯು. ವೇಣುಗೋಪಾಲ ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಾಳೆಪುಣಿ: ಆಧುನಿಕ ಕೃಷಿ ಪದ್ದತಿ, ಹೊಸ ಹೊಸ ತಂತ್ರಜ್ಞಾನ, ಅವಿಷ್ಕಾರಗಳನ್ನು ಬಳಸಿ ಒಂದು ಬೆಳೆಗೆ ಸೀಮಿತವಾಗದೆ ಕೃಷಿ, ತೋಟಗಾರಿಕೆ, ಮೀನುಗಾರಿಗೆ, ಹೈನುಗಾರಿಕೆಯನ್ನು ಸಮಗ್ರ ಕೃಷಿ ಪದ್ದತಿಯಲ್ಲಿ ಅಳವಡಿಸಿ ಕೃಷಿಯಲ್ಲಿ ಲಾಭವನ್ನು ಪಡೆಯಬಹುದು ಎಂದು ಬ್ರಹ್ಮಾವರದ ವಲಯ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ. ಹನುಮಂತಪ್ಪರವರು ಅಭಿಪ್ರಾಯಪಟ್ಟರು. ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ವತಿಯಿಂದ ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡ ಕೃಷಿ ಗ್ರಾಮ ದತ್ತು ಯೋಜನೆಯಡಿಯಲ್ಲಿ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ರಹ್ಮಾವರದ ಕೃಷಿ ವಿಸ್ತರಣಾ ಸಹ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ಮುಖ್ಯಸ್ಥರಾದ ಡಾ.ಲಕ್ಷ್ಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಹೆಚ್.ಹನುಮಂತಪ್ಪ, ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಭಿವೃದ್ದಿ ಅಧಿಕಾರಿ ರವಿಕುಮಾರ್, ಪ್ರಗತಿಪರ ಕೃಷಿಕರಾದ ರಮೇಶ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರೈಲಿನಿಂದ ಬಿದ್ದು ಅಪರಿಚಿತನೋರ್ವ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುಮಾರು 30-35ರ ಹರೆಯದ ವ್ಯಕ್ತಿಯ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾಗಿದೆ. ಬಲಗೈಯಲ್ಲಿ `ಓಂ’ ಮಚ್ಛೆಯನ್ನು ಧರಿಸಿದ್ದು, ವಾರೀಸುದಾರರಿದ್ದಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ. ಚಲಿಸುತ್ತಿರು ರೈಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರಗಳು: ನಿತೇಶ್.ಪಿ.ಬೈಂದೂರ್ ಕೊಣಾಜೆ: ಗುರುವಾರ ಮಂಗಳಾ ಆಡಿಟೋರಿಯಂನಲ್ಲಿ 10ನಾಟಕಗಳು ಪ್ರದರ್ಶನಗೊಂಡವು. ಸಾಮಾಜಿಕ ಸಮಸ್ಯೆ ಮತ್ತು ಜಾತಿ ವರ್ಗ ಸಂಘರ್ಷದ ವಸ್ತುವನ್ನು ಬಿಂಬಿಸುವ ನಾಟಕಗಳು ವೇದಿಕೆಯಲ್ಲಿ ಕಂಡುಬಂದವು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಎಂಡೋಸಲ್ಫಾನ್ ಸಮಸ್ಯೆಯ ಬಗ್ಗೆ, ಗುಲ್ಬರ್ಗ ವಿವಿ ತಂಡ ಸಾಕ್ರಟೀಸ್‍ನ ಜೀವನದ ಕೊನೆಯ ಕ್ಷಣಗಳನ್ನು ಸತ್ಯಾನ್ವೇಷಣೆ ಮಾಡಿ ಬದುಕಿನ ಕರುಣಾಜನಕ ಕಥೆಯನ್ನು, ಧಾರವಾಡ ಕೃಷಿ ವಿದ್ಯಾಲಯದವರು ಮಹಾರಾಷ್ಟ ್ರದ ದಲಿತರ ಕುಟುಂಬವೊಂದರ ಸಮಸ್ಯೆಯನ್ನು ಕೇಂದ್ರೀಕರಿಸಿದ, ಧಾರವಾಡದ ಕರ್ನಾಟಕ ವಿವಿ ನೆರೆಸಂತ್ರಸ್ತರ ಜೀವನ ಕಥೆ, ಅಮೃತ ವಿದ್ಯಾಪೀಠಂ ಕೊಯಮತ್ತೂರು ಗಾಸಿಪ್‍ನ ನಿಜವನ್ನು ಹುಡುಕುವ ಯತ್ನ, ಮಂಗಳೂರು ವಿಶ್ವವಿದ್ಯಾಲಯದವರು ಘಟೋದ್ಗಜನ ಪುತ್ರ `ಬರ್ಬರಿಕಾ’ ಎಂಬ ವಿಶಿಷ್ಠ ಕಥಾನಕವನ್ನುಳ್ಳ ಕಿರುನಾಟಕ ಪ್ರದರ್ಶಿಸಿದರು. ಕೇರಳ ವಿವಿ ತಂಡ ಇತಿಹಾಸದ ಪಾತ್ರಗಳೊಂದಿಗೆ ಸಂವಾದಿಸುವ ಏಕಾಂಕ ನಾಟಕವೂ ಗಮನ ಸೆಳೆಯಿತು. ನಾಟಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂದಿತ್ತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ದೇಶದ ಎಲ್ಲ ಬೃಹತ್ ಸಂಸ್ಥೆಗಳು ಕಂಪ್ಯೂಟರ್ ಅಂತರ್ಜಾಲ ಮತ್ತು ಮೊಬಿಲಿಟಿಯನ್ನೇ ಅವಲಂಬಿಸಿದ್ದು ಆಂಡ್ರಾಯಿಡ್ ಕ್ಷೇತ್ರದಲ್ಲಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನೂತನ ಅವಿಷ್ಕಾರ ಮಾಡಲು ವಿಫುಲ ಅವಕಾಶಗಳಿವೆ ಎಂದು ಮಂಗಳೂರು ನೋವಿಗೋಸೊಲ್ಯೂಷನ್ಸ್‍ನ ಮುಖ್ಯಾಧಿಕಾರಿ ಮತ್ತು ನಿರ್ದೇಶಕ ಪ್ರವೀಣ್ ಕಲ್ಬಾವಿ ಹೇಳಿದರು. ಕೊಣಾಜೆ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಡಿಪಾರ್ಟ್‍ಮೆಂಟ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್‍ನ ವತಿಯಿಂದ ಆಯೋಜಿಸಲಾದ “ಇಂಟರ್ನ್‍ಶಿಫ್ ಪ್ರೋಗ್ರಾಮ್ ಆನ್ ಆಂಡ್ರಾಯಿಡ್ ಅಪ್ಲಿಕೇಶನ್ ಡೆವಲಪ್‍ಮೆಂಟ್” ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ ಭಾರತ ದೇಶವು 50ಶೇ. ಯುವ ಶಕ್ತಿಯನ್ನು ಹೊಂದಿದ್ದು, ಅದರಲ್ಲೂ ಬಹುತೇಕರು ಸುಶಿಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿಯವರೇ ಕಂಪ್ಯೂಟರ್, ಅಂತರ್ಜಾಲ ಮತ್ತು ಮೊಬಿಲಿಟಿ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿದ್ದು, ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೂತನ ಸಂಶೋಧನೆಗಳಿಗೆ ವಿಫುಲ ಅವಕಾಶಗಳಿವೆ ಎಂದು ನುಡಿದರು. ವಿದ್ಯಾರ್ಥಿಗಳು ತಾವು ಹೇಗೆ ಬುದ್ಧಿವಂತರಾಗಬೇಕೆಂಬು ಎಂಬುವುದನ್ನು ಧೃಢಪಡಿಸಿಕೊಳ್ಳಿ. ಆಂಡ್ರಾಯಿಡ್ ಅಪ್ಲಿಕೇಶನ್‍ನ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ದೊರಕಬೇಕಾದ ಆವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಕಾಲೇಜು ಆಡಳಿತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ತೊಕ್ಕೊಟ್ಟುವಿನಿಂದ ಒಳಪೇಟಯ ಓವರ್ ಬ್ರಿಡ್ಜ್ ಬಳಿಯ ಯು.ಎಸ್.ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಶಾಖೆಯನ್ನು ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಸದಾಶಿವ ಉಳ್ಳಾಲ್ ಹಾಗೂ ಟಿ.ಜಿ.ರಾಜಾರಾಂ ಭಟ್ ಉಪಸ್ಥಿತರಿದ್ದರು. ಉಪ ಮಹಾ ಪ್ರಧಾನ ವ್ಯವಸ್ಥಾಪಕ ಸತೀಶ್ .ಎಂ ಸ್ವಾಗತಿಸಿದರು. ಕಟ್ಟಡದ ಮಾಲಕಿ ಪ್ರಭಾವತಿ ಹಾಗೂ ಶಾಖಾ ವ್ಯವಸ್ಥಾಪಕ ರಾಧಾಕೃಷ್ಣ .ಎಂ.ಜೆ ಅವರನ್ನು ಸನ್ಮಾನಿಸಲಾಯಿತು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶ್ವನಾಥ ನಾಯರ್ ಸ್ವಾಗತಿಸಿ ವಂದಿಸಿದರು.
ಪೇಶಾವರ:ಪಾಕಿಸ್ತಾನದ ವಿಶ್ವ ವಿದ್ಯಾಲಯವೊಂದರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ಮೂವರು ಉಗ್ರರು ನಡೆಸಿದ ದಾಳಿಯಲ್ಲಿ ಕೆಮೆಸ್ಟ್ರಿ ಪ್ರೊಫೆಸರ್ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವುದಾಗಿ ಪಾಕ್ ನ ಮಾಧ್ಯಮದ ವರದಿಗಳು ತಿಳಿಸಿವೆ. ಮೂವರು ಬಂದೂಕುಧಾರಿ ಉಗ್ರರು ಪೇಶಾವರದಲ್ಲಿನ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದ್ದು, ವಿಶ್ವವಿದ್ಯಾಲಯದೊಳಗೆ ಭಾರೀ ಪ್ರಮಾಣದಲ್ಲಿ ಸ್ಫೋಟದ ಶಬ್ಧಗಳು ಕೇಳಿಬರುತ್ತಿದೆ ಮೂಲಗಳಿಂದ ತಿಳಿದುಬಂದಿದೆ. ಪಾಕ್ ಸೇನಾಪಡೆ ಯೂನಿರ್ವಸಿಟಿ ಸುತ್ತಮುತ್ತ ಸುತ್ತವರಿದಿದ್ದಾರೆ. ಪಾಕ್ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ. ಬಚಾಖಾನ್ ಯೂನಿರ್ವಸಿಟಿಯೊಳಗೆ 3 ಸಾವಿರ ಮಂದಿ ಇದ್ದಿರುವುದಾಗಿ ವರದಿ ತಿಳಿಸಿದ್ದು, ಈಗಾಗಲೇ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. 50 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಈಗಾಗಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಉಗ್ರರರನ್ನು ಸದೆಬಡಿಯಲು ಈಗಾಗಲೇ ಸ್ಥಳಕ್ಕಾಗಮಿಸಿರುವ ವಿಶೇಷ ಭದ್ರತಾ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಪಾಕ್ ಸೇನಾ ಪಡೆ ನಡೆಸಿದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಾನುವಾರುಗಳನ್ನು ಕಳವುಗೈಯ್ಯಲು ಕಾರೊಂದರಲ್ಲಿ ಹೊಂಚು ಹಾಕುತ್ತಿದ್ದ ಮೂವರು ಕುಖ್ಯಾತ ಜಾನುವಾರು ಚೋರರನ್ನು ಉಳ್ಳಾಲ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಮಂಗಳವಾರ ತಡರಾತ್ರಿ 3.30ಕ್ಕೆ ಬಂಧಿಸಿದ್ದು, ಅವರಿಂದ ಡಕಾಯಿತಿಗೆ ಬಳಸಲಾಗುತ್ತಿದ್ದ ತಲವಾರು, ಮೆಣಸಿನ ಹುಡಿ, ಹಗ್ಗ ಮೊದಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಮುಖ ಆರೋಪಿ ಚೆಂಬುಗುಡ್ಡೆಯ ಇರ್ಷಾದ್ (30) ಹಾಗೂ ಫರಿಂಗಿಪೇಟೆಯ ಇಮ್ರಾನ್(24), ಮಂಜನಾಡಿ ಕಲ್ಕಟ್ಟದ ಮುತಲಿಬ್ (35) ಬಂಧಿತರು. ಇವರ ಜತೆಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತವೇರಾ ಕಾರಿನ ನಂಬರ್ ಪ್ಲೇಟನ್ನು ಬದಲಿಸಿ ಐವರ ತಂಡ ತಲಪಾಡಿ ಭಾಗದಲ್ಲಿ ಜಾನುವಾರು ಕಳವು ನಡೆಸಲು ಹೊಂಚುಹಾಕುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ದನ, ಆಡು, ಕುರಿ ಹಾಗೂ ಸರ ಕಳವು ಜಾಲದಲ್ಲಿ ಸಕ್ರಿಯವಾಗಿದ್ದು, ಸೋಮವಾರ ರಾತ್ರಿ ವೇಳೆ ಮನೆಮಂದಿಗೆ ಹೆದರಿಸಿ ಜಾನುವಾರು ಕಳವಿಗೆ ಯತ್ನಿಸಲು ತೆರಳುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ. ಚೆಂಬುಗುಡ್ಡೆಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ನ ಸ್ಪರ್ದೆಯ ಪ್ರಥಮ ದಿನವಾದ ಬುಧವಾರ ಮಿಮಿಕ್ರಿ ಮತ್ತು ಮೈಮ್ ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು. ಕ್ಯಾಂಪಸ್‍ನ ಪ್ರಮುಖ ವೇದಿಕೆಯಾದ ಮಂಗಳಾ ಆಡಿಟೋರಿಯಂನ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆ ನಡೆದರೆ, ಡಾ| ಕಯ್ಯಾರ ಕಿಂಜಣ್ಣ ರೈ ವೇದಿಕೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀ ಸಮೂಹ ಗಾನ ಸ್ಪರ್ಧೆ ನಡೆಯಿತು. ವಿe್ಞÁನ ಸಂಕೀರ್ಣದ ಗಿರಿಬಾಲೆ ವೇದಿಕೆಯಲ್ಲಿ ಹಿಂದುಸ್ಥಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಗಾಯನ , ತಾಳವಾದ್ಯ ಸ್ಪರ್ಧೆ ನಡೆಯಿತು. ಹಳೆ ಸೆನೆಟ್ ಸಭಾಂಗಣದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆದರೆ ಮಾನವಿಕ ಮತ್ತು ಯೋಗಿಕ್ ಸೈನ್ಸ್ ಬ್ಲಾಕ್‍ನ ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಸ್ಪಾಟ್ ಪೈಂಟಿಂಗ್ ಮತ್ತು ಸ್ಪಾಟ್ ಫೋಟೋಗ್ರಾಫಿ ಸ್ಪರ್ಧೆ ನಡೆಯಿತು. ಕ್ವಿಜ್ ಕೇರಳಕ್ಕೆ ಪ್ರಶಸ್ತಿ : ಸ್ಪರ್ಧೆಯ ಎಲ್ಲಾ ವಿಜೇತರ ವಿವರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪೆರ್ಮನ್ನೂರು: ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಚರ್ಚ್‍ನಲ್ಲಿ ವಾರ್ಷಿಕ ಮಹೋತ್ಸವದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಎಲೋಷಿಯಸ್ ಪಾವ್ಲ್ ಡಿ.ಸೋಜ ವಿಶೇಷ ಪೂಜೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಚರ್ಚ್‍ನ ಪ್ರಧಾನ ಧರ್ಮಗುರುಗಳಾದ ಜೆ.ಬಿ.ಸಲ್ದಾನ, ಫಾ| ರೂಪೇಶ್ ಮಾಡ್ತ, ಫಾ| ಪ್ರವೀಣ್ ಜಾಯ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.

