Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಯೇನೆಪೋಯ:ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಯೊಂದಿಗೆ ಸಮಾಜದ ಪೈಪೋಟಿಯಲ್ಲಿ ಭಾಗವಹಿಸಲು ಸಾಧ್ಯ ಎಂದು ಮಂಗಳೂರು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು. ಯೇನೆಪೋಯ ಮೊಯಿದ್ದೀನ್ ಕುಂಞÂ ಮೆಮೋರಿಯಲ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಘಟಕ ಸಂಸ್ಥೆ ಯೇನೆಪೋಯ ಫೌಂಡೇಶನ್ ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಯೇನೆಪೊಯ ವಿವಿಯ ಯೆಂಡ್ಯೂರೆನ್ಸ್ ಝೋನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಸ್‍ಎಸ್‍ಎಲ್‍ಸಿ, ಪಿಯುಸಿ, ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಅತ್ಯುನ್ನತ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಮಾತನಾಡಿದರು. ಗೌರವ ಕೊಟ್ಟು ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಒಳ್ಳೆಯ ದಾರಿ ಮಾಡಿ ಕೊಡುತ್ತಿರುವ ಯೆನೆಪೋಯ ವಿಶ್ವವಿದ್ಯಾನಿಲಯದ ಕಾರ್ಯವೈಖರಿ ಶ್ಲಾಘನೀಯ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊರಗಿನ ಸಮಾಜವನ್ನು ಎದುರಿಸಲು ಉತ್ಕøಷ್ಟ ಪೈಪೋಟಿಗಳಲ್ಲಿ ಭಾಗವಹಿಸಬೇಕು. ಶಿಕ್ಷಣ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಂತ ಚಿಕಿತ್ಸೆಯ ಬಗ್ಗೆ ಸಂಶೋಧನೆಗಳು ನಿರಂತರ ಆಗಬೇಕಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳ ಕುರಿತು ಜ್ಞಾನ ವೃದ್ಧಿಸುವ ಸಲುವಾಗಿ ಇಂತಹ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು ಪೂರಕ ಎಂದು ಅಂತಾರಾಷ್ಟ್ರೀಯ ದಂತ ಕಾಲೇಜುಗಳ ಅಧ್ಯಕ್ಷ ಪ್ರೊ.ಎಸ್.ಎಂ.ಬಾಲಾಜಿ ಅಭಿಪ್ರಾಯಪಟ್ಟರು. ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ, ಎ.ಬಿ.ಶೆಟ್ಟಿ ಇಂಟರ್ನಿಗಳ ಅಕಾಡೆಮಿಕ್ ಕ್ಲಬ್ ಹಾಗೂ ಅಂತಾರಾಷ್ಟ್ರೀಯ ದಂತ ಕಾಲೇಜಿನ ಆಶ್ರಯದಲಿಗುರುವಾರ ಎ.ಬಿ.ಶೆಟ್ಟಿ ಕಾಲೇಜಿನ ವಿಂಶತಿ ಭವನದಲ್ಲಿ ಗುರುವಾರ ನಡೆದ `ಯುವಜನಾಂಗಕ್ಕೆ ದಂತವಿಜ್ಞಾನ ಭವಿಷ್ಯದ ಮಾರ್ಗಸೂಚಿ’ ಕುರಿತ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎ.ಬಿ.ಶೆಟ್ಟಿ ಕಾಲೇಜಿನಲ್ಲಿ ವಿದ್ಯಾರ್ಜನೆ ನಡೆಸಿದವರು ಸದ್ಯ ಉನ್ನತ ಕ್ಷೇತ್ರದಲ್ಲಿ ಇದ್ದಾರೆ. ಆದರೆ ದಂತ ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನೆಗಳಿಗೆ ಹಿನ್ನೆಡೆಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಗಾರಗಳು, ಸಮಾವೇಶಗಳು ನಿರಂತರ ಆಗಬೇಕಿದೆ ಎಂದರು. ಎ.ಬಿ.ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್ ಡಾ.ಯನ್.ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ದಂತ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇತಿಹಾಸ ಪ್ರಸಿದ್ದ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ದರ್ಗಾಕ್ಕೆ ರಾಜ್ಯದ ವಾರ್ತಾ ಸಚಿವರಾದ ರೋಶನ್ ಬೇಗ್‍ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್ ಹಂಝ ಸಚಿವರನ್ನು ಸ್ವಾಗತಿಸಿದರು. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ದಿನವಿಡೀ ಶಾಂತವಾಗಿರೋ ಆ ಊರಲ್ಲಿ ಸಂಜೆಯಾಗುತ್ತಲೇ ಆತಂಕ ಮನೆ ಮಾಡುತ್ತೆ. ಸಂಜೆ ಆರು ಘಂಟೆ ಕಳೆದರೆ ಸಾಕು ಜನ ಮನೆಬಿಟ್ಟು ಹೊರಗೆ ಬರೋದಕ್ಕೆ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗುತ್ತೆ. ಪ್ರತೀನಿತ್ಯ ಒಂದು ಘಂಟೆಗಳ ಕಾಲ ಆ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆಯುತ್ತೆ. ಅಷ್ಟಕ್ಕೂ ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿರೋದು ಅಲ್ಲಿನ ಮನೆಗಳ ಮೇಲೆ ಬೀಳ್ತಾ ಇರೋ ಕಲ್ಲುಗಳು! ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿ ಸಂಜೆ ಆರು ಘಂಟೆಯ ನಂತರ ಜನ ಮನೆ ಬಿಟ್ಟು ಹೊರಗಡೆ ಬರೋದಕ್ಕೆ ಭಯ ಪಡ್ತಾರೆ. ಸಮಯ ಸರಿಯಾಗಿ ಸಂಜೆ 6.30ರಿಂದ 7.30ರ ಅವಧಿಯಲ್ಲಿ ಇಲ್ಲಿನ ನಾಲ್ಕೈದು ಮನೆಗಳ ಮೇಲೆ ಕಲ್ಲುಗಳು ಬೀಳೋದಕ್ಕೆ ಆರಂಭವಾಗುತ್ತೆ. ಕೇವಲ ಒಂದು ಘಂಟೆಯ ಅವಧಿಯಲ್ಲಿ ಹತ್ತಾರು ಜಲ್ಲಿ ಕಲ್ಲುಗಳು ಮನೆಗಳ ಮಾಡಿನ ಮೇಲೆ ಬೀಳುತ್ತಿವೆ. ಹೀಗೆ ಕಳೆದ ಒಂದು ವಾರದಿಂದ ಮನೆಗಳ ಮಾಡಿನ ಮೇಲೆ, ಅಂಗಳಕ್ಕೆ ಅಳವಡಿಸಲಾಗಿರುವ ತಗಡಿನ ಶೀಟುಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಒಂದೊಂದು ದಿಕ್ಕಿನಿಂದ…

Read More

ಜಕಾರ್ತಾ:ಇಲ್ಲಿನ ವಿಶ್ವಸಂಸ್ಥೆಯ ಕಚೇರಿ ಮತ್ತು ಮಾಲ್ ವೊಂದರ ಹತ್ತಿರ ಉಗ್ರರು ನಡೆಸಿದ ಬಾಂಬ್ ಸ್ಪೋಟದಲ್ಲಿ ಕನಿಷ್ಟ 6 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ನಗರದ ಜನ ನಿಬಿಡ ಪ್ರದೇಶಗಳಲ್ಲಿ ಶಸ್ತ್ರಧಾರಿ ಉಗ್ರರು 6 ಕಡೆಗಳಲ್ಲಿ ಬಾಂಬ್‌ ಸ್ಫೋಟಿಸಿದ್ದಾರೆ. ಕಫೆಯೊಂದರ ಬಳಿ ಬಾಂಬ್‌ ಸಿಡಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ.ಮತ್ತು ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಭಾಗಿಯಾದ 14 ಕ್ಕೂ ಹೆಚ್ಚು ಮಂದಿ ಉಗ್ರರು ಕಫೆಯೊಂದರಲ್ಲಿ ಅಡಗಿರುವುದಾಗಿ ಹೇಳಲಾಗಿದ್ದು ,ಪೊಲೀಸರು ಮತ್ತು ಭದ್ರತಾ ಪಡೆಗಳು ಉಗ್ರರ ದಮನಕ್ಕಾಗಿ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ದಾಳಿಯನ್ನು ಯಾವ ಉಗ್ರ ಸಂಘಟನೆ ನಡೆಸಿದೆ ಎನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More

ನಾಟೆಕಲ್: ಕೇರಳ ರಾಜ್ಯಕ್ಕೆ ಆಕ್ರಮವಾಗಿ ಮರುಳು ಸಾಗಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳ ಸಹಿತ ಆರು ಟಿಪ್ಪರ್ ಲಾರಿಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಾಟೆಕಲ್ ಎಂಬಲ್ಲಿ ನಡೆದಿದೆ. ಮುಡಿಪುವಿನ ಆಶ್ರಫ್(30), ದೇರಳಕಟ್ಟೆಯ ನಾಸೀರ್(28), ಮೊಹಮ್ಮದ್ ಆಶ್ರಫ್(33), ನಿಸಾಮುದ್ಧೀನ್(27) ಬೋಳಿಯಾರ್ ಸಂಶುದ್ದೀನ್(29), ಎಂಬವರನ್ನು ಬಂಧನವಾಗಿದ್ದು, ಇತರ ಮೂವರು ಉಸ್ಮಾನ್, ಇಬ್ರಾಹಿಂ, ಶರೀಫ್ ಎಂಬವರು ಪರಾರಿಯಾಗಿದ್ದಾರೆ. ಸಾಂದರ್ಭಿಕ ಚಿತ್ರ ಕಲ್ಲಾಪು ನೇತ್ರಾವತಿ ನದಿ ತೀರದಿಂದ ಮರುಳನ್ನು ಕಳವುಗೈದು ಸರಿಯಾದ ದಾಖಲಾತಿ ಇಲ್ಲದೆ, ಪರವಾನಿಗೆ ಇಲ್ಲದೆ ಆಕ್ರಮವಾಗಿ ಆರು ಲಾರಿಗಳಲ್ಲಿ ಮರುಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಠಾಣಾಧಿಕಾರಿ ಆಶೋಕ್ ನೇತೃತ್ವದ ತಂಡ ನಾಟೆಕಲ್ ಸಮೀಪ ತಪಾಸಣೆ ನಡೆಸಿ ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೆಕಾರಿನ ಬೀರಿಯಲ್ಲಿರುವ ವಾಣಿಜ್ಯ ತಪಾಸಣಾ ಕೇಂದ್ರಕ್ಕೆ ಘನ ಸರಕು ಮತ್ತು ಅನಧಿಕೄತ ಮರಳು ಸಾಗಾಟ ಬೃಹತ್ ಟ್ರಕ್‍ಗಳು ಕರ್ನಾಟಕದ ತಪಾಸಣಾ ಕೇಂದ್ರವೊಂದರ ನಕಲಿ ಮೊಹರನ್ನು ಹಾಕಿ ರಾಜ್ಯ ಸರಕಾರಕ್ಕೆ ರಾಯಲ್ಟಿ ಹಾಗೂ ಅಪಾರ ತೆರಿಗೆ ವಂಚಿಸುವ ಮೂಲಕ ಅಪಾರ ನಷ್ಟವೆಸಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದ್ದು ಅದಕ್ಕೆ ಪೂರಕವಾಗಿ ಒರಿಸ್ಸಾದ ಪರವಾನಗಿ ಹೊಂದಿರುವ ಮಂಗಳೂರಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಅ„ಕಾರಿಗಳು ಹಿಡಿದ ಬಳಿಕ ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ. ನಂಬಲರ್ಹ ಮೂಲಗಳ ಪ್ರಕಾರ ಕಳೆದ ಜ. 7ರಂದು ಒರಿಸ್ಸಾದಿಂದ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿರುವುದಾಗಿ ದಾಖಲಾತಿ ಇರುವ ವಾಹನವೊಂದನ್ನು ಮಂಗಳೂರಿನ ವಾಣಿಜ್ಯ ಇಲಾಖೆ ತಪಾಸಣೆ ಆ„ಕಾರಿಗಳ ತಂಡ ಬೀರಿಯಲ್ಲಿ ತಪಾಸಣೆ ನಡೆಸಿದಾಗ ನಕಲಿ ಮೊಹರು ಸೃಷ್ಟಿಸಿ ಮರಳು ಸಾಗಾಟ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಟೆಕಾರು ವಾಣಿಜ್ಯ ಇಲಾಖೆ ತಪಾಸಣಾ„ಕಾರಿಗಳು ಕಣ್ಣು ಮುಚ್ಚಿ ಕುಳಿತರೇ ಅಥವಾ ಬೀರಿಯಲ್ಲಿ ಇರುವ ವಾಣಿಜ್ಯ ತೆರಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವೀರರಾಣಿ ಅಬ್ಬಕ್ಕಳ ಪ್ರತಿಮೆ ಒಂದೆಡೆ ಧೂಳಿನಿಂದ ಮುಳುಗಿದ್ದರೆ, ಇನ್ನೊಂದೆಡೆ ಕಾಗೆ ಮಾಡಿದ ಗಲೀಜಿನಿಂದ ನೋಡಲಾಗದ ಸ್ಥಿತಿಯಲ್ಲಿದ್ದು, ಕೇವಲ ಅಬ್ಬಕ್ಕ ಉತ್ಸವ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಗೌರವ ಸೀಮಿತವಾಗಿದೆ. ಉಳ್ಳಾಲ ಜಂಕ್ಷನ್ನಿಗೆ ಪ್ರಯಾಣಿಸುವಾಗ ಮೊದಲಿಗೆ ಸಿಗುವುದೇ ಅಬ್ಬಕ್ಕರಾಣಿ ವೃತ್ತ. ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ವನಿತೆಯ ಪ್ರತಿಮೆ ಧೂಳು ಹಿಡಿದರೂ ಜನಪ್ರತಿನಿಧಿಗಳಾಗಲಿ, ಅಬ್ಬಕ್ಕ ಉತ್ಸವ ಸಮಿತಿಯಾಗಲಿ ಕೇವಲ ಉತ್ಸವಗಳ ಸಂದರ್ಭ ಹಾರ ಹಾಕಿ, ಗುಣಗಾನ ಮಾಡುತ್ತಿದ್ದಾರೆಯೇ ಹೊರತು, ದಿನದಲ್ಲಿ ಲಕ್ಷಾಂತರ ಮಂದಿ ನೋಡುವಂತಹ ಪ್ರತಿಮೆಯ ಕನಿಷ್ಟ ಶುಚಿಗೊಳಿಸುವ ಪ್ರಜ್ಞೆಗೆ ಮುಂದಾಗಿಲ್ಲ. ತೊಕ್ಕೊಟ್ಟು-ಉಳ್ಳಾಲ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ತೊಕ್ಕೊಟ್ಟುವಿನಲ್ಲಿ ಅಬ್ಬಕ್ಕ ಭವನ ಶೀಘ್ರದಲ್ಲೇ ನಡೆಯಲಿದೆ. ಆದರೆ ಅಪ್ರತಿಮ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಸ್ಥಾಪಿಸಿರುವ ಪ್ರತಿಮೆಗಳಿಗೆ ಕನಿಷ್ಟ ಪಕ್ಷ ಶುಚಿಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುವ ಮೂಲಕ ನೈಜ ಗೌರವವನ್ನು ವ್ಯಕ್ತಪಡಿಸಬೇಕಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಾಸನ :ನ್ಯಾನೋ ಕಾರು ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಡಣ ತಾಲೂಕು ಚಿಕ್ಕಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ಅದೃಷ್ಟವಷಾತ್‌ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪಾರಾಗಿದ್ದಾರೆ. ಮೃತರು ಉಡುಪಿ ಮೂಲದ ಮುಂಬೈ ನಿವಾಸಿಗಳಾದ ಅಶೋಕ್‌ ಪ್ರಭು(45) ಮತ್ತು ಅಶ್ವಿ‌ನಿ ಪ್ರಭು(35) ಎಂದು ತಿಳಿದು ಬಂದಿದ್ದು, ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಅಶೋಕ್‌ ಅವರು ಬೆಂಗಳೂರಿನ ಕಾನ್ಯೆಂಟ್ರಿಕ್ಸ್‌ ಕಂಪೆನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದು,ಉಡುಪಿಯ ಪೆರ್ಣಂಕಿಲದ ನಿವಾಸದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು:ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಯವಾಗಿ ಧರಿಸಬೇಕೆಂಬ ನಿಯಮ ಇಂದಿನಿಂದ ಜಾರಿಗೆ ಬಂದಿದೆ. ಆದರೆ, ನಿಯಮ ಉಲ್ಲಂಘಿಸಿದ ಸವಾರರ ಮೇಲೆ “ದಂಡ ಪ್ರಯೋಗ ‘ ಮಾತ್ರ ತಿಂಗಳಾಂತ್ಯದಿಂದ ಆರಂಭವಾಗುವ ಸಾಧ್ಯತೆಯಿದೆ. ಬೈಕ್ ಸವಾರರ ಜತೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ಇಲ್ಲವಾದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ಅವರಿಗೆ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿ ನಿಯಮ ಕಡ್ಡಾಯದ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತದೆ. ಮಂಗಳವಾರದಿಂದ ರಾಜ್ಯಾದ್ಯಂತ ಹೆಲ್ಮೆಟ್ ಕಡ್ಡಾಯಗೊಳಿಸುವ ಹಿನ್ನಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅವರ ಶಿರಕ್ಕೆ ತಕ್ಕಂತಹ ಹೆಲ್ಮೆಟ್ ಬಳಸಬೇಕಾಗುತ್ತದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್ ಕಡ್ಡಾಯಗೊಳಿಸುವ ಸಂಬಂಧ ಹಿಂದೆಯೇ ಆಕ್ಷೇಪಣೆಗಳನ್ನು ಆಹ್ವಾನಿಸಿ ಬಳಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅಂತಿಮ ಅಧಿಸೂಚನೆ ಹೊರಡಿಸಿದ ನಂತರವೂ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್ಗಳ ಕೊರತೆ ಇರುವುದರಿಂದ ಪೊಲೀಸರು ಇನ್ನಷ್ಟು ಸಮಯವಾಕಾಶ ನೀಡುವ ಸಾಧ್ಯತೆಗಳಿವೆ.…

Read More