Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ನೀಡುವ ಕೇಂದ್ರಗಳು ಬೆಳೆಯತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕು ಕಟ್ಟಿಕೊಳ್ಳುವ ಅವಕಾಶವಾಗುತ್ತಿದೆ. ಜಾತಿಧರ್ಮದ ಎಲ್ಲೆ ಮೀರಿ ಸೌಹಾರ್ದತೆ ಸಾರುವ ಶಿಕ್ಷಣ ಸಂಸ್ಥೆಗಳಿಗೆ ಜನತೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕರಾವಳಿ ಕಾಲೇಜಿನ ಅಧ್ಯಕ್ಷರಾದ ಎಸ್.ಗಣೇಶ್ ರಾವ್ ಹೇಳಿದ್ದಾರೆ.ಅವರು ಹರೇಕಳದ ನಿಶಾರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ನಿಶಾರ ಪದವಿ ಪೂರ್ವಕಾಲೇಜಿನ ನೂತನ ಕಟ್ಟಡವನ್ನು ವಾರ್ತಾಭಾರತಿಯ ಚೇರ್‍ಮೇನ್ ಜ|ಸೈಯದ್ ಖಲೀಲ್ ಸಾಹೇಬ್ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಪತ್ರಕರ್ತರಾದ ಶÀಶಿಧರ್ ಪೊಯ್ಯತ್ತಬೈಲ್ ಮತ್ತು ಉದ್ಯಮಿ ಮನ್ಸೂರ್ ಅಹ್ಮದ್ ಅವರನ್ನು ಗೌರವಿಸಲಾಯಿತು. ಸಂದೇಶ ಪ್ರತಿಷ್ಟಾನದ ಫಾ|ವಿಕ್ಟರ್ ವಿಜಯ್ ಲೋಬೋ ಅತಿಥಿಯಾಗಿದ್ದರು. ಸಭಾದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚÉೀರ್ ಮೇನ್ ಹಾಜಿ| ಅಬ್ದುಲ್ ರಜಾಕ್ ಮಾತನಾಡಿ ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಇರಾದೆ ಹೈದ್ರೋಸ್ ಹಾಜಿ ಟ್ರಸ್ಟಿಗೆ ಇದೆ ಎಂದರು. ಶಾಲಾ ಸಂಚಾಲಕಿ ಶ್ರೀಮತಿ ಶೆಹನಾಜ್ ಎ. ರಝಾಕ್, ಪ್ರಾಂಶುಪಾಲರಾದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ವಿಟ್ಲ: ಕರೋಪಾಡಿ ಗ್ರಾಮದ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಮುಕ್ತಾಯದ ಹಂತದಲ್ಲಿದೆ. ಜ.24ರಿಂದ 31ರ ವರೆಗೆ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯ ದೇವರ ಬಿಂಬಗಳ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು. ಅವರು ದೇಗುಲದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ನೀಡಿ, 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ಇದೀಗ ಮತ್ತೆ 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ತುಳುನಾಡಿನ ಮಣ್ಣಿನಲ್ಲಿ ವಿಶೇಷ ಸತ್ವಗುಣವಿದೆ. ಕೃಷಿಕನಿಗೂ ಮಣ್ಣಿಗೂ ಉತ್ತಮ ಸಂಬಂಧವಿದೆ. ಈ ದೇಗುಲದಲ್ಲಿ ಆಳುಪ ವಂಶದ ರಾಜನು ಡೊಂಬ ಹೆಗ್ಗಡೆ ಸಹಿತವಾಗಿ ಸಭೆ ನಡೆಸಿದ ಶಿಲಾ ಶಾಸನವಿದೆ. ಎಂದು ಅವರು ವಿಶ್ಲೇಷಿಸಿದರು. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಅವರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಎಟ್ಟಿಕ್ಕುಳಂನಲ್ಲಿ ನಡೆಯುವ ತಾಜುಲ್ ಉಲಮಾ (ಖ.ಸಿ.) ಉರೂಸ್ ಪ್ರಚಾರಾರ್ಥ ಅಂಗವಾಗಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ 60 ಫಲಾನುಭವಿಗರಿಗೆ ಅಕ್ಕಿ ವಿತರಣಾ ಕಾರ್ಯಕ್ರಮವು ಸೇವಂತಿಗುಡ್ಡೆಯ ವಿಕಾಯತುಲ್ ಇಸ್ಲಾಂ ಮದ್ರಸಾ ಹಾಲ್‍ನಲ್ಲಿ ನಡೆಯಿತು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಾಯತುಲ್ ಇಸ್ಲಾಂ ಮದ್ರಸ ಉಪಾಧ್ಯಕ್ಷರಾದ ನೌಶಾದ್ ಸೇವಂತಿಗುಡ್ಡೆ ವಿತರಿಸಿದರು. ಮನ್ಸೂರ್ ಮದನಿ ವಳವೂರು ಮಾತನಾಡಿ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ನಡೆಸುತ್ತಿರುವ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ಇನ್ನು ಹಲವಾರು ಸಾಮಾಜಿಕ ಸೇವೆಗೈಯಲು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಲ್ತಾಫ್ ಕುಂಪಲ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಫಾರೂಕ್ ಸೇವಂತಿಗುಡ್ಡೆ, ಆಶ್ರಫ್ ಸೇವಂತಿಗುಡ್ಡೆ, ಇಸ್ಮಾಯಿಲ್ ಸೇವಂತಿಗುಡ್ಡೆ, ಬದ್ರುದ್ದೀನ್ ಸೇವಂತಿಗುಡ್ಡೆ, ಶಮೀರ್ ಸೇವಂತಿಗುಡ್ಡೆ, ವಿಕಾಯತುಲ್ ಇಸ್ಲಾಂ ಮದ್ರಸದ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಪಸ್ಥಿತರಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿದರು ಜಾಫರ್ ಯು.ಎಸ್. ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಖಾಝಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ಉಳ್ಳಾಲ ಕ್ಷೇತ್ರದಲ್ಲಿ ಅರೆಬಿಕ್ ಕಾಲೇಜು ಸ್ಥಾಪನೆಗೆ ಮೂಲ ಕಾರಣಕರ್ತರಾರ ತಾಜುಲ್ ಉಲಮಾ ದರ್ಗಾ ಉರೂಸ್ ಸಂದಲ್ ಮೆರವಣಿಗೆ ಕಾರ್ಯಕ್ರಮ ಆರಂಭಿಸುವ ಮೂಲಕ ಉಳ್ಳಾಲದಲ್ಲಿ ಚಾಲನೆ ನೀಡಲಾಯಿತು. ಕೇರಳ ಎಟ್ಟಿಕುಳಂನಲ್ಲಿ ಜ.11ರಿಂದ ಮೂರು ದಿನಗಳ ಕಾಲ ನಡೆಯಲಿರುವ ಉರೂಸ್ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿದ್ದ ಸಂದಲ್ ಮೆರವಣಿಗೆಯನ್ನು ಸಯ್ಯಿದ್ ಆಟಕೋಯ ತಂಙಳ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ತಾಜುಲ್ ಉಲಮಾ ಶಿಕ್ಷಣ ಬೆಳವಣಿಗೆಗೆ ಶ್ರಮವಹಿಸಿದ್ದವರು. ಅವರು ಮಾಡಿದ ಸೇವೆಯಿಂದ ಇಂದು ಬಹಳಷ್ಟು ಮಂದಿ ಧನ್ಯರಾಗಿದ್ದಾರೆ ಎಂದರು. ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಮುಸ್ಲಿಯಾರ್ ತಾಜುಲ್ ಉಲಮಾ ಅವರ ಸಾಧನೆಗಳ ಬಗ್ಗೆ ವಿವರಿಸಿದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಶೀದ್ , ಮಾಣಿ ಉಸ್ತಾದ್, ಏಷ್ಯನ್ ಬಾವಾ, ಉಂಞÂ , ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಕಾರ್ಯದರ್ಶಿ ಯಿ.ಟಿ. ಇಲ್ಯಾಸ್, ಉಳ್ಳಾಲ ದರ್ಗಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಗೃಹವೈದ್ಯರ ಮಾಹಿತಿ ಕಾರ್ಯಗಾರ ಇತ್ತೀಚೆಗೆ ಜರುಗಿತು. ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಪೂರ್ಣ ವೈದ್ಯರಾಗಲು ಗೃಹವೈದ್ಯಕೀಯ ಅವಧಿಯು ಪೂರಕವಾಗಿರುತ್ತದೆ. ಇದರ ಸಮರ್ಪಕ ಪ್ರಯೋಜನ ಪಡೆದು, ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದರು. ಕಾಲೇಜಿನ ವೈದ್ಯಕೀಯ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ| ಕರುಣಾ ರಮೇಶ್, ಕುಲಸಚಿವೆ ಡಾ| ಜಯಪ್ರಕಾಶ್ ಶೆಟ್ಟಿ ಕೆ. , ಸಹ ಪ್ರಾಚಾರ್ಯರಾದ ಡಾ| ಪಿ.ಎಸ್. ಪ್ರಕಾಶ್ ಹಾಗೂ ಡಾ| ಅಮೃತ್ ಮೀರಜ್‍ಕರ್ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವಿರಾರು ರೂ. ಬೆಲೆಬಾಳುವ ಸೊತ್ತುಗಳು ಭಸ್ಮವಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತಿಬ್ಲಪದವು ಎಂಬಲ್ಲಿ ಸೋಮವಾರ ನಸುಕಿನ ಜಾವ ಬೆಳಕಿಗೆ ಬಂದಿದೆ. Jpeg ಹಮೀದ್ ಎಂಬವರಿಗೆ ಸೇರಿದ ಫರ್ನಿಚರ್ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಹಳೇ ಮನೆ ಸಾಮಗ್ರಿಗಳು ಬೆಂಕಿಗೆ ಉರಿದು ರೂ.50,000 ನಷ್ಟ ಸಂಭವಿಸಿದೆ. ಘಟನೆಗೆ ಶಾರ್ಟ್ ಸಕ್ರ್ಯೂಟ್ ಕಾರಣವಾಗಿರಬಹುದೆಂಬ ಹೇಳಲಾಗುತ್ತಿದ್ದರೂ, ಕಿಡಿಗೇಡಿಗಳು ಕೃತ್ಯ ಎಸಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಸುಕಿನ ಜಾವ ಸ್ಥಳೀಯರೋರ್ವರು ಮಸೀದಿಗೆ ನಮಾಜಿಗೆ ತೆರಳುವ ಸಂದರ್ಭ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಬಳಿಕ ಅಂಗಡಿ ಮಾಲೀಕ ಹಮೀದ್ ಅವರಿಗೂ ಮಾಹಿತಿ ನೀಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಇಲ್ಲಿನ ಕಾಪಿಕಾಡ್‍ನ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ(ಸುಕ) ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಆಮೆಚೂರು ಮತ್ತು ಗ್ರಾಮಾಂತರ ಕಬಡ್ಡಿ ಎಸೋಶಿಯೇಶನ್ ಉಳ್ಳಾಲ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಒನ್ ಸ್ಕೂಲ್ ಕ್ರೀಡಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಕ್ರೀಡೋತ್ಸವ ಶನಿವಾರ ಸಂಜೆ ಸಮಾರೋಪಗೊಂಡಿತು. ಫಲಿತಾಂಶ : ಪ್ರಾಥಮಿಕ ಶಾಲೆ ಬಾಲಕರ ವಿಭಾಗ 1. ಸರಕಾರಿ ಹಿ. ಪ್ರಾ. ಶಾಲೆ ಬೈಕಂಪಾಡಿ 2. ಸ.ಹಿ.ಪ್ರಾ. ಶಾಲೆ ಮಾಲಾಡಿ ಬೆಳ್ತಂಗಡಿ 3. ಟಿ.ಇ.ಎಂ.ಎಸ್. ಬಂಟ್ವಾಳ 4. ಕಾರ್ಮೆಲ್ ಶಾಲೆ ಕೋಟೆಕಾರು ಬಾಲಕಿಯರ ವಿಭಾಗ: 1. ಸ.ಹಿ.ಪ್ರಾ. ಶಾಲೆ ಮಾಲಾಡಿ ಬೆಳ್ತಂಗಡಿ 2. ಭಾರತಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ 3. ಟಿ.ಇ.ಎಂ.ಎಸ್. ಬಂಟ್ವಾಳ 4. ಸ.ಹಿ.ಪ್ರಾ. ಶಾಲೆ ಬೈಕಂಪಾಡಿ ಪ್ರೌಢ ಶಾಲಾ ಬಾಲಕರ ವಿಭಾಗ 1. ಸರಕಾರಿ ಪ್ರೌಢ ಶಾಲೆ ಒಕ್ಕೆತ್ತೂರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಗೆ ಸುಪ್ತ ಪ್ರತಿಭೆ ಜಾಗೃತವಾಗಬೇಕಿದೆ. ಅದಕ್ಕಾಗಿ ಕ್ರೀಡೆ ಸಹಕಾರಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಹೇಳಿದ್ದಾರೆ. ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ(ಸುಕ) ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಗ್ರಾಮಾಂತರ ಕಬಡ್ಡಿ ಎಸೋಶಿಯೇಶನ್ ಸಹಭಾಗಿತ್ವದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಸಾಧನೆಗೆ ಕಬ್ಬಡ್ಡಿ ಸ್ಫೂರ್ತಿ. ಆರೋಗ್ಯದ ವಿಚಾರದಲ್ಲಿಯೂ ಪುಷ್ಠಿದಾಯಕವಾಗಿದ್ದು, ವಿದ್ಯೆ ಜತೆಗೆ ಕ್ರೀಡೆ ಅಗತ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿ ಜಗತ್ತಿನಲ್ಲಿ ವಿಶ್ವಾಸ ಮೂಡುವಲ್ಲಿ ಧರ್ಮ ಜಾತಿ ಮತಬೇಧ ಮರೆತು ಆಡುವ ಹಾಗೂ ನೋಡುವಂತ ಕ್ರೀಡೆ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅದಕ್ಕಾಗಿ ಕ್ರೀಡೆಗೆ ಎಲ್ಲೆಡೆಯಿಂದ ಪ್ರೋತ್ಸಾಹ ಅಗತ್ಯ ಎಂದು ನುಡಿದರು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮನೆಮಂದಿಗೆ ಬೆದರಿಸಿ ಹಟ್ಟಿಯಲ್ಲಿದ್ದ ಮೂರು ದನಗಳ ಪೈಕಿ ಎರಡು ದನಗಳನ್ನು ಗೋಕಳ್ಳರು ಕಳವು ಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಬಳಿ ನಿನ್ನೆ ತಡರಾತ್ರಿ ಸಂಭವಿಸಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಇಂದು ನಡೆದಿದೆ. ನಡುಪದವು ನಿವಾಸಿ ಪುರುಷೋತ್ತಮ ಎಂಬವರಿಗೆ ಸೇರಿದ ಮನೆಯಿಂದ ಗೋಕಳವು ನಡೆದಿದ್ದು, ಮೂರು ಗೋಕಳ್ಳರ ತಂಡ ತಡರಾತ್ರಿ ಹಟ್ಟಿಗೆ ನುಗ್ಗಿ ದನಗಳನ್ನು ಕಳವುಗೈಯ್ಯಲು ಯತ್ನಿಸುತ್ತಿದ್ದ ಸಂದರ್ಭ ಮನೆಯ ನಾಯಿ ಬೊಗಳುವುದನ್ನು ಮನಗಂಡ ಮನೆಮಂದಿ ನಿದ್ರೆಯಿಂದ ಎಚ್ಚೆತ್ತು ಹೊರಬಂದು ಗೋಕಳ್ಳರನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳು ಕಲ್ಲುಗಳನ್ನು ಎತ್ತಿ ಸಾಯಿಸುವುದಾಗಿ ಬೆದರಿಸಿ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ. ವರ್ಷದ ಅವಧಿಯಲ್ಲಿ ೭ ದನಗಳ ಕಳವು: ವೃತ್ತಿಯಲ್ಲಿ ಹೈನುಗಾರಿಕೆ ನಡೆಸುತ್ತಾ ಬಂದಿರುವ ಪುರುಷೋತ್ತಮ ಅವರ ಹಟ್ಟಿಯಿಂದ ವರ್ಷದ ಅವಧಿಯಲ್ಲಿ ೭ ದನಗಳನ್ನು ದುಷರ್ಮಿಗಳು ಕಳವು ಗೈದಿದ್ದಾರೆ ಆದರೆ ಕೊಣಾಜೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಸ್ಥಳೀಯರಿಂದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುನ್ನೂರು: ಕೊಣಾಜೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಘನತ್ಯಾಜ್ಯ ವಿಲೇವಾರಿ ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಘಟಕದಿಂದಾಗುವ ಪ್ರಯೋಜನದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಗ್ರಾಮ ಪಂಚಾಯಿತಿಯಿಂದ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ ಹೇಳಿದರು. ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಂಡಾರ್ ಬೈಲ್‍ನಲ್ಲಿ ಜಿಲ್ಲಾ ಪಂಚಾಯಿತಿಯ 20 ಲಕ್ಷ ಹಾಗೂ ಸುವರ್ಣ ಗ್ರಾಮ ಯೋಜನೆಯ 10 ಲಕ್ಷ ಅನುದಾನದಿಂದ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕ  ಉದ್ಘಾಟಿಸಿ ಮಾತನಾಡಿದರು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತೀ ಗ್ರಾಮದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ 20 ಲಕ್ಷ ಅನುದಾನ ನೀಡುತ್ತಿದೆ. ಈ ಬಗ್ಗೆ ತನ್ನ ವ್ಯಾಪ್ತಿಯಲ್ಲಿರುವ ಏಳು ಗ್ರಾಮ ಪಂಚಾಯಿತಿಗಳಲ್ಲೂ ಮಾಹಿತಿ ನೀಡಿ ಘಟಕ ನಿರ್ಮಾಣಕ್ಕೆ ಒತ್ತಾಯಿಸಿದ್ದರೂ ಜಮೀನು ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಘಟಕ ಆರಂಭದ ಸಂದರ್ಭ ನಿರ್ವಹಣೆ ಕಷ್ಟ ಎನಿಸಿದರೂ ಬಳಿಕ ಸರಳವಾಗುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಸಂಯೋಜಕಿ…

Read More