ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು: ಸ್ಕೌಟ್ ಮತ್ತು ಗೈಡ್ಸ್ ಶಾಲೆಯಲ್ಲಿದ್ದರೆ ಅದು ಸಣ್ಣ ಮಟ್ಟಿನ ಪೊಲೀಸ್ ಠಾಣೆಯಿದ್ದಂತೆ ಎಂದು ಪಾವೂರು ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು. ಸ್ಥಳೀಯ ಸಂಸ್ಥೆ ವತಿಯಿಂದ ಪಾವೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಯೋಜಿಸಲಾಗಿರುವ ಸ್ಕೌಟ್-ಗೈಡ್ಸ್, ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪಾವೂರು ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆಯ ಬೇಡಿಕೆಯಿದ್ದ ಸಂದರ್ಭ ಹಲವು ಬಾರಿ ಗ್ರಾಮಸ್ಥರು ಮಾಡಿದ ಮನವಿ ಫಲ ನೀಡಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಗಾಡಿಗದ್ದೆ ಶಾಲೆಯ ಸ್ಕೌಟ್-ಗೈಡ್ಸ್ ಮಕ್ಕಳು ಅಂದಿನ ಶಾಸಕ ಯು.ಟಿ.ಫರೀದ್ ಅವರಿಗೆ ಮಾಡಿದ ಮನವಿಯ ಪರಿಣಾಮವಾಗಿ ಪ್ರೌಢ ಶಾಲೆ ಮಂಜೂರುಗೊಂಡಿತ್ತು ಎಂದು ಹೇಳಿದರು. ವ್ಯಕ್ತಿ ಕ್ರಿಯಾಶೀಲನಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಅಂತಹ ಕ್ರಿಯಾಶೀಲತೆ, ಶಿಸ್ತು, ಇತರರೊಂದಿಗೆ ಹೇಗೆ ಬೆರೆಯಬೇಕು ಎನ್ನುವ ತರಬೇತಿ ಸ್ಕೌಟ್-ಗೈಡ್ಸ್‍ನಲ್ಲಿ ಸಿಗುತ್ತದೆ ಎಂದು ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಶಂಕರನಾಂದ ಎನ್.ಇನವಳ್ಳಿ ಹೇಳಿದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಜಿ.ಕಜೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಹೋದರನೋರ್ವ ಪತ್ನಿ ಜತೆಗೆ ಸೇರಿಕೊಂಡು ಸಹೋದರಿಯನ್ನು ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರದಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಭಾನುವಾರ ಮಾಡೂರಿನಲ್ಲಿ ನಡೆದಿದೆ. ಮಾಡೂರು ನಿವಾಸಿ ರಾಧಾ (45) ಕೊಲೆ ಯತ್ನಕ್ಕೊಳಗಾದವರು. ಇವರ ಕಿರಿಯ ಸಹೋದರ ಕೇಶವ ಮತ್ತು ಆತನ ಪತ್ನಿ ಅಕ್ಷತಾ ಎಂಬವರು ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ. ಘಟನೆ ವಿವರ: ಮಾಡೂರು ನಿವಾಸಿ ರಾಧಾ ಮಾಡೂರಿನ ಮನೆಯಲ್ಲಿದ್ದ ಸಂದರ್ಭ ಭಾನುವಾರ ಬೆಳಿಗ್ಗೆ ಸಹೋದರ ಕೇಶವ ಮತ್ತು ಆತನ ಪತ್ನಿ ಬಂದಿದ್ದರು. ಮನೆಗೆ ಬಂದವರು ತನಗೆ ಸೇರಿದ ಸಾಮಗ್ರಿಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದರು. ಅದಕ್ಕೆ ರಾಧಾ ಅವರು ಸಮ್ಮತಿಯನ್ನು ಸೂಚಿಸಿದ್ದರು. ಈ ವೇಳೆ ಕೇಶವ ಮನೆಯಲ್ಲಿದ್ದ ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರವನ್ನು ಕೈಗೆ ತೆಗೆದುಕೊಂಡು ಏಕಾಏಕಿ ರಾಧಾ ಅವರ ತಲೆಗೆ ಚುಚ್ಚಿ ಕೊಲೆಗೆ ಯತ್ನಿಸಿದ್ದನು. ಆದರೆ ರಾಧಾ ಅವರು ಕೈಯಲ್ಲಿ ತಡೆದಾಗ ಅದು ಕೈಗೆ ತಗಲಿದೆ. ಬಳಿಕ ಮನೆಯಿಂದ ಹೊರ ಓಡಿಬಂದವರು ಸ್ಥಳೀಯರ ನೆರವನ್ನು ಕೋರಿದ್ದಾರೆ. ಕೂಡಲೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೋಳಿಯಾರು: ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ರಂತಡ್ಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಪತಿ ಕಿರುಕುಳಕ್ಕೆ ನೊಂದು ಆಕೆ ಆತ್ಮಹತ್ಯೆಗೈದಿರುವ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೋಳಿಯಾರು ರಂತಡ್ಕ ನಿವಾಸಿ ಇಕ್ಬಾಲ್ ಎಂಬವರ ಪತ್ನಿ ಸಫಿಯಾ(25) ಆತ್ಮಹತ್ಯೆಗೆ ಶರಣಾದವರು. ಮುಡಿಪುವಿನಲ್ಲಿರುವ ಹೊಟೇಲ್ ಮುಚ್ಚಿ ಇಕ್ಬಾಲ್ ಅವರು ಮನೆಗೆ ಹಿಂತುರಿಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಸಂಶಯಗೊಂಡು ಬಾಗಿಲು ಒಡೆದು ಒಳನೋಡಿದಾಗ ಕೋಣೆಯೊಂದರಲ್ಲಿ ಸಫಿಯಾ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಪತಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಕುತ್ತಾರು ಸುಭಾಷನಗರ ನಿವಾಸಿ ಸಫಿಯಾ ಮೂರೂವರೆ ವರ್ಷಗಳ ಹಿಂದೆ ರಂತಡ್ಕದ ಇಕ್ಬಾಲ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 2ರ ಹರೆಯದ ಹೆಣ್ಣು ಮಗು ಇದೆ. ಸಫಿಯಾ ಆತ್ಮಹತ್ಯೆಗೆ ಪತಿ ಇಕ್ಬಾಲ್ ಕಿರುಕುಳವೇ ಕಾರಣ ಎಂದು ಆಕೆ ಸಂಬಂಧಿಕರು ಇಕ್ಬಾಲ್ ಮನೆಮುಂದೆ ಜಮಾಯಿಸಿದ್ದು,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ: ಜಿಲ್ಲೆಯಲ್ಲಿ ಫಾರ್ಮಾ ಪಾರ್ಕ್ (ಸಮೂಹ ಔಷಧ ಉತ್ಪಾಧನಾ ಕೇಂದ್ರಗಳ) ರಚನೆಗೆ ಇರಾ ಗ್ರಾಮದ ಕೆಐಎಡಿಬಿಯ ಸ್ಥಳವನ್ನು ನಿಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರುಗಳ ಸಹಿತ ಇಲಾಖೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆಗಳ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಹೇಳಿದರು. ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರ ಹಾಗೂ ಕೆಐಎಡಿಬಿ ಅಧಿಕಾರಿಗಳ ನಿಯೋಗ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿರುವ ಕೆಐಎಡಿಬಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರ ಚಿಂತನೆ ಮೇರೆಗೆ ಇರಾದಲ್ಲಿ ಔಷಧ ಉತ್ಪಾಧನೆ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 100 ಎಕರೆ ವಿಶಾಲವಾದ ಸ್ಥಳದಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗಲಿದೆ. ಔಷಧ ಉತ್ಪಾಧನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚಿನ ಒಲವು ನೀಡುತ್ತಿದೆ. ಉತ್ಪಾಧನಾ ಘಟಕಗಳಿಗೆ ಬೇಕಾದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಹೈದರಾಬಾದ್ ವಿವಿ ದಲಿತ ಹೈದರಾಬಾದ್ ವಿವಿ ದಲಿತ ವಿದ್ಯಾರ್ಥಿ ರೋಹಿತ್ ರೋಹಿತ್ ಮೇಮುಲರವರ ಸಾವಿಗೆ ಜಾತಿ ಮತ ಬೇಧ ಬಿಟ್ಟು ದೇಶದಾದ್ಯಂತ ಕ್ಯಾಂಪಸ್‍ಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ರೋಹಿತ್ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದು, ರೋಹಿತ್ ಸಾವು ನಿರರ್ಥಕವಾಗದೆ ಈ ದೇಶದ ಸಾಮಾಜಿಕ ನ್ಯಾಯದ ಸ್ಥಾಪನೆಗೆ ಪೂರಕವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಟಿ. ಉಮೇಶ್‍ಚಂದ್ರ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನ ಆಡಳಿತ ಕಚೇರಿ ಎದುರು ವಿ.ವಿ. ಎಸ್‍ಸಿಎಸ್‍ಟಿ ಸ್ನಾತಕೋತ್ತರ ಹಾಗೀ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹೈದರಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ಮೇಮುಲರವರ ಅಸಹಜ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ಹಿಂದೆ ಕೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ದಲಿತರ ವಿರುದ್ಧ ಅನ್ಯಾಯ, ಅತ್ಯಾಚಾರವಾದಾಗ ಇಷ್ಟು ದೊಡ್ಡ ಮಟ್ಟಿನ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಮೃತಪಟ್ಟಿರುವ ಘಟನೆ ಪಜೀರು ಗ್ರಾಮದ ಕಂಬ್ಲಪದವು ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ. ಸಹಸವಾರ ಮುಡಿಪು ನಿವಾಸಿ ಯೋಗೀಂದ್ರ(35) ಮೃತರು. ದೇರಳಕಟ್ಟೆಯಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎ.ಪಿ.ಅಶ್ರಫ್ ಎಂಬವರ ಬೈಕಿನಲ್ಲಿ ಯೋಗೀಂದ್ರ ಅವರು ಪ್ರಯಾಣಿಸುತ್ತಿದ್ದರು. ಕಂಬ್ಲಪದವು ಬಳಿ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬೈಕ್ ರಸ್ತೆಯ ಎಡ ದಿಕ್ಕಿನಲ್ಲಿ ಹಾಕಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಯೋಗೀಂದ್ರ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಪರಮೇಶ್ವರ್ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಆದರೆ ಯೋಗೀಂದ್ರ ದಾರಿಮಧ್ಯೆ ಮೃತಪಟ್ಟಿದ್ದಾರೆ. ಕೊಣಾಜೆ ಠಾಣೆಯಲ್ಲಿ ಬೈಕ್ ಸವಾರ ಅಶ್ರಫ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಗಾರೆ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ಲಿಪು ನಾಯ್ಕ್ (24) ಮೃತ ಕಾರ್ಮಿಕ. ಜ.11 ರಂದು ಮುಡಿಪುವಿನ ಶೋಭಾ ಡೆವಲಪ್ಪರ್ಸ್ ಸಂಸ್ಥೆಯಲ್ಲಿ ಸಿಮೆಂಟ್ ಗಾರೆಗೆ ನೀರು ಹಾಯಿಸುತ್ತಿದ್ದ ಸಂದರ್ಭ ಕಾಲು ಜಾರಿ ಇಮ್ಮುಖವಾಗಿ ನೆಲಕ್ಕೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಸಂಬಂಧಿಕರು ಲಿಪು ನಾಯ್ಕ್ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೊಣಾಜೆ ಠಾಣೆಗೆ ಮೃತರ ಸಂಬಂಧಿಕರು ದೂರು ನೀಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಐದು ದಿನಗಳಿಂದ ನಡೆದ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್’-2015ರಲ್ಲಿ ಕೇರಳದ ವಿ.ವಿ.ಗಳು ಪಾರಮ್ಯ ಮೆರೆದಿದ್ದು, ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ಕೊಟ್ಟಾಯಂನ ಮಹಾತ್ಮಾಗಾಂ„ ವಿಶ್ವವಿದ್ಯಾಲಯ ರನ್ನರ್ ಅಪ್ ಪಡೆದುಕೊಂಡು ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ. ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ ಮಂಗಳೂರು ಸಂಸ್ಕ ೃತಿಯ ನೆಲವಾಗಿದ್ದು ಯುವಜನೋತ್ಸವದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಲ್ಲ ರಂಗದಲ್ಲಿ ತೊಡಗಿಸಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಇಂತಹ ವೇದಿಕೆಯಲ್ಲಿ ಪಾಲುಪಡೆಯುವ ಅವಕಾಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು . ಯುವಜನೋತ್ಸವದ ಯಶಸ್ವಿ ಆಯೋಜನೆಯಿಂದ ಮಂಗಳೂರು ವಿವಿಯ ಕೀರ್ತಿ ಶಿಖರಕ್ಕೇರಿದೆ. ಯುವಜನೋತ್ಸವ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ತೈವಾನ್‍ನಲ್ಲಿ ನಡೆದ ಅಂತರಾಷ್ಟಿ ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅನಿವಾರ್ಯತೆ ಇದ್ದುದರಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೈರಂಗಳ: ಕೈರಂಗಳದ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಶಾರದೋತ್ಸವದ ಅಂಗವಾಗಿ ಶ್ರೇಷ್ಠಭಾರತ (ವಿಜ್ಞಾನ, ಸಂಸ್ಕøತಿ, ಜೀವವೈವಿಧ್ಯ, ವೃಕ್ಷ ಸಂಪತ್ತು) ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಕಾರ್ಯಕ್ರಮವನ್ನು ಉದ್ಘಾಟಿಸಿ ವಸ್ತು ಪ್ರದರ್ಶನ ವೀಕ್ಷಣೆಗೆ ಚಾಲನೆ ನೀಡಿದರು. ಸಂಸ್ಥೆಯ ಮಾರ್ಗದರ್ಶಕ ಪಿ.ಶಂಕರ ಭಟ್, ಸಂಸ್ಥೆಯ ಸಂಚಾಲಕ ಟಿ. ಜಿ. ರಾಜಾರಾಮ ಭಟ್, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಬಾಲಕೃಷ್ಣ ರೈ ಮುಂಡಾಜೆ, ಸತ್ಯನಾರಾಯಣ ಎಸ್. ಎಡಂಬಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಅನುಕರಣೆ ಮಾಡಿ ಪ್ರವಾದಿಯವರ ಉಪದೇಶಗಳನ್ನು ಸಮುದಾಯದತ್ತ ತಲುಪಿಸುವ ಕಾರ್ಯ ನಾವು ಮಾಡಬೇಕು. ಮುಸ್ಲಿಮರು ದಾರಿ ತಪ್ಪದಂತೆ ಅವರಿಗೆ ಶಿಕ್ಷಣ ಒದಗಿಸಿಕೊಡುವ ವ್ಯವಸ್ಥೆಯನ್ನು ಎಸ್‍ವೈಎಸ್ ವತಿಯಿಂದ ಆಗಬೇಕು ಎಂದು ಡಿ.ಕೆ. ಉಮ್ಮರ್ ಸಖಾಫಿ ಹೇಳಿದರು. ಅವರು ದೇರಳಕಟ್ಟೆಯ ಸುನ್ನಿ ಸೆಂಟರ್‍ನಲ್ಲಿ ನಡೆದ ಎಸ್‍ವೈಎಸ್ ಬ್ರಾಂಚ್ ಎಕ್ಸಿಕ್ಯುಟಿವ್ ಕ್ಯಾಂಪ್‍ನಲ್ಲಿ ಭಾಗವಹಿಸಿ ಮಾತನಾಡಿದರು. ಎಸ್‍ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಎಸ್‍ವೈಎಸ್ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಕಾರ್ಯಕ್ರಮ ಉದ್ಘಾಟಿಸಿದರು. ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಮೆನೇಜರ್ ಮುಹಮ್ಮದಾಲಿ ಸಖಾಫಿ ವಿಚಾರ ಮಂಡನೆ ಮಾಡಿದರು. ವಿ.ಯು. ಇಸ್ಹಾಕ್ ಝುಹ್‍ರಿ ಕಾನೆಕೆರೆ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಸಯ್ಯಿದಲವಿ ತಂಙಳ್ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು. ಇಸ್ಮಾಯಿಲ್ ಕಿನ್ಯ ವಂದಿಸಿದರು.

