ಮಂಗಳೂರು: ಸಮಾಜಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅನನ್ಯ ಕೊಡುಗೆ ನೀಡಿದ ಉದ್ಯಮಿ ಶರೀಫ್ ಹಾಜಿ ವೈಟ್ ಸ್ಟೋನ್ ಅವರಿಗೆ ಗೆಳೆಯರ ಬಳಗ ಮಂಗಳೂರು ವತಿಯಿಂದ ಸನ್ಮಾನ ಕಾರ್ಯಕ್ರಮವು ನಗರದ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಸಾಪ ದ.ಕ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಂಡೆ ಪೆಂಙಳ್ ಅಭಿಯಾನದ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಅಝಾದ್, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿದರು. ಹರ್ಷದ್ ಕಂದಕ್, ಉದ್ಯಮಿ ಸಿ.ಆರ್ ಅಬೂಬಕ್ಕರ್ ಉಪಸ್ಥಿತರಿದರು. ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ತೊಕ್ಕೊಟ್ಟು ಅಭಿನಂದನಾ ಪತ್ರ ವಾಚಿಸಿದರು. ಗೆಳೆಯರ ಬಳಗ ಮಂಗಳೂರು ಅಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಕಾರ್ಯದರ್ಶಿ ಸಾಜಿದ್ ಉಳ್ಳಾಲ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

