ತೊಕ್ಕೊಟ್ಟು; ನಿರ್ಮಲ ಭಾರತ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಅಬ್ಬಕ್ಕ @500 ಪ್ರೇರಣಾದಾಯಿ 100 ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಏಪ್ರಿಲ್ 18ರಂದು ಉಳ್ಳಾಲದ ಶಾರದಾನಿಕೇತನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನಿರ್ಮಲ ಭಾರತ್ ಟ್ರಸ್ಟ್ನ ಮುಖ್ಯಸ್ಥರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ತಿಳಿಸಿದ್ದಾರೆ.

ಇವರು ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶ ಮೊದಲು ಎಂಬ ಚಿಂತನೆಯೊAದಿಗೆ ಕಾರ್ಯನಿರ್ವಹಿಸುತ್ತಿರುವ ಎಬಿಆರ್‌ಎಸ್‌ಎಂ ಹಾಗೂ ಅದರ ಅಂಗಸAಸ್ಥೆ ಕೆಆರ್‌ಎಂಎಸ್‌ಎಸ್ 2025ರಿಂದ ರಾಜ್ಯದಲ್ಲಿ ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ತುಳುನಾಡಿನ ವೀರ ವನಿತೆ ರಾಣಿ ಅಬ್ಬಕ್ಕಳ ಇತಿಹಾಸವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ವಿದ್ಯಾಸಂಸ್ಥೆಗಳಲ್ಲಿ 100 ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಈ ಸರಣಿಯ ಸಮಾರೋಪ ಸಮಾರಂಭ ಹಾಗೂ ಅಬ್ಬಕ್ಕ @500 ಸಂಭ್ರಮಾಚರಣೆಯ ಅಂಗವಾಗಿ ಅಬ್ಬಕ್ಕ ನೆನಪಿನೈಸಿರಿ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಧರ್ಮಸ್ಥಳದ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರವೀಣ್ ಕುಮಾರ್, ಡಾ.ಗುರುನಾಥ ಬಡಿಗೇರ್, ಸಂದೀಪ್ ಬೂದಿಹಾಳ್, ಕೆ.ರಮೇಶ್ ಭಾಗಿಯಾಗಲಿದ್ದಾರೆ. ಇದೇ ವೇಳೆ ಡಾ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಎಸ್. ಸುವರ್ಣ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಗುರು ರಾಜಶ್ರೀ ಉಳ್ಳಾಲ್ ನಾಟ್ಯನಿಕೇತನ ಕೊಲ್ಯ ಅವರ ಶಿಷ್ಯರಿಂದ ನೃತ್ಯ ಮೋಹನ ಹಾಗೂ ವೀರರಾಣಿ ಅಬ್ಬಕ್ಕ ಕಿರು ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ ಎಂದು ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸದಸ್ಯರಾದ ಡಾ.ಶರಣ್ ಕುಮಾರ್ ಶೆಟ್ಟಿ ಮಂಗಳಾದೇವಿ, ಉಚ್ಚಿಲ ಶ್ರೀ ಭಗವತಿ ಎಜುಕೇಶನ್ ಟ್ರಿಸ್ಟನ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಉಳ್ಳಾಲ್, ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಸಹ ಕಾರ್ಯದರ್ಶಿ ಗುರು ಪ್ರಸಾದ್ ಉಳ್ಳಾಲ್ ಉಪಸ್ಥಿತರಿದ್ದರು.

