ಕೊಲ್ಕತ್ತಾ, ನವೆಂಬರ್ 27: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್‌ನ ಒಂದು ಕುಟುಂಬದ 6 ಜನರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಅವರೆಲ್ಲರೂ ಮನೆಯಲ್ಲಿ ತಿಂದ ಊಟ. ಆ ಮನೆಯ ಮಹಿಳೆ ನೀರು ಎಂದು ಭಾವಿಸಿ ಆ್ಯಸಿಡ್ ಹಾಕಿ ಅಡುಗೆ ಮಾಡಿದ್ದರು. ಅದನ್ನು ಊಟ ಮಾಡಿದವರ ಸ್ಥಿತಿ ಗಂಭೀರವಾಗಿದೆ. ಈ ವಿಚಿತ್ರ ಘಟನೆ ಕೇಳಿ ಆಸ್ಪತ್ರೆಯ ವೈದ್ಯರು ಹಾಗೂ ಪೊಲೀಸರು ದಂಗಾಗಿದ್ದಾರೆ. ಈ ಘಟನೆ ನವೆಂಬರ್ 23ರಂದು ಘಾಟಲ್‌ನ ಮನೋಹರ್‌ಪುರ I ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನೇಶ್ವರಬತಿ ಪ್ರದೇಶದಲ್ಲಿ ನಡೆದಿದೆ. ನೀರಿನ ಬದಲು ಆಸಿಡ್ ಬಳಸಿ ಬೇಯಿಸಿದ ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ 6 ಜನರು ಅಸ್ವಸ್ಥರಾಗಿದ್ದಾರೆ. ಮೂವರು ಮಕ್ಕಳು ಸೇರಿದಂತೆ 6 ಜನರನ್ನೂ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಂಧು ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಅವರು ಬೆಳ್ಳಿ ಆಭರಣಗಳನ್ನು ತಯಾರಿಸುವ…
Author: UllalaVani
ಉಳ್ಳಾಲ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನಾಭರಣವನ್ನು 22 ಕ್ಯಾರೇಟಿನ ಚಿನ್ನವೆಂದು ನಂಬಿಸಿ ಅಡಮಾನ ಇಡುವ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್‌ಗಳು ಹಾಗೂ ₹47,000 ನಗದು ವಶಪಡಿಸಿಕೊಳ್ಳಲಾಗಿದೆ. ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್‌ನ ಗುರು ರಾಘವೇಂದ್ರ ಫೈನಾನ್ಸ್ & ಇನ್‌ವೆಸ್ಟ್ಮೆಂಟ್ ಸಂಸ್ಥೆಯಲ್ಲಿ 9 ಕ್ಯಾರೇಟಿನ 41 ಗ್ರಾಂ ಚಿನ್ನಾಭರಣವನ್ನು 22 ಕ್ಯಾರೇಟಿನಂತೆ ತೋರಿಸಿ ಝಹೀಮ್ ಅಹ್ಮದ್ ಹೆಸರಿನಲ್ಲಿ ₹3,55,000 ಸಾಲ ಪಡೆದಿದ್ದರು. ಬಳಿಕ ನ 24 ರಂದು ಆರೋಪಿ ಇಮಿತಿಯಾಜ್ ಕೂಡ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಾಗ ಸಂಸ್ಥೆಗೆ ಅನುಮಾನ ಉಂಟಾಗಿ ಚಿನ್ನಾಭರಣವನ್ನು ಪರಿಶೀಲಿಸಿದ್ದು ಅದು ನಕಲಿ ಚಿನ್ನ ಎನ್ನುವುದು ಬಹಿರಂಗವಾಯಿತು. ಇದನ್ನು ಆಧರಿಸಿ ನ. 25ರಂದು ಉಳ್ಳಾಲ ಠಾಣೆಯಲ್ಲಿ…
ಮಂಗಳೂರು, ನ. 25 : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ನಮ್ಮ ಬಂಟರು ವಿಶ್ವದೆಲ್ಲೆಡೆ ಇದ್ದಾರೆ ಅವರೆಲ್ಲ ಒಗ್ಗೂಡಿದರೆ ರಾಷ್ಟ್ರ ಸುಭದ್ರವಾಗುತ್ತದೆ” ಎಂದರು.ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, “ಜಿಲ್ಲೆಯ ಬೇರೆಲ್ಲಾ ಸಂಘಗಳಿಗೆ ಮಾದರಿಯಾಗಿ ನಮ್ಮ ಜಿಲ್ಲೆಗೆ ಗೌರವ ತಂದ ಸಂಘ ಏನಾದರೂ ಇದ್ದರೆ ಅದು ಬಂಟರ ಸಂಘ. ಬಂಟ ಸಮಾಜದ ಜೊತೆಗೆ ಎಲ್ಲ ಸಮಾಜವನ್ನು ಜೊತೆಗೆ ಕೊಂಡೊಯ್ಯುವ ತಾಕತ್ತು ಈ ಸಂಘಕ್ಕಿದೆ. ಭಿನ್ನಾಭಿಪ್ರಾಯ ಇದ್ದಾಗ ಎಲ್ಲ…
ಉಡುಪಿ, ನ. 26 :ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಶ್ರೀ ಕೃಷ್ಣ ಮಠ ಭೇಟಿ ನೀಡುವ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸೂಚನೆ ನೀಡಿದ್ದಾರೆ. ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಅಲ್ಲದೆ ಪ್ರಧಾನಿಗಳು ಸಂಚರಿಸುವ ಮಾರ್ಗದ ಇಕ್ಕೆಲಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದೆ.ನವೆಂಬರ್ 28 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿ ಮುಚ್ಚುವಂತೆ ಡಿಸಿ ಸೂಚಿಸಿದ್ದಾರೆ. ಇನ್ನು ನವಂಬರ್ 26 ಬೆಳಿಗ್ಗೆ 6ಗಂಟೆಯಿಂದ ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಉಳಿದಂತೆ ಪ್ರಧಾನಿಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಹಲವು ಸೂಚನೆಗಳನ್ನು ಕೂಡ ನೀಡಲಾಗಿದೆ.ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್ಸ್, ಬಲೂನ್ಸ್ ,ಪಟಾಕಿ, ಲೂಸ್ ಪಾಲಿಥಿನ್ ತರುವುದು ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ…
ಕುಂದಾಪುರ, ನ. 26: ಖ್ಯಾತ ಯಕ್ಷಗಾನ ಪ್ರಸಂಗಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಅವರು ನವೆಂಬರ್ 26 ಬುಧವಾರ ಬೆಳಗ್ಗೆ ನಿಧನರಾದರು. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ ಮತ್ತು ಕಂದಾವರ ಪುಟ್ಟಮ್ಮ ದಂಪತಿಗಳಿಗೆ ಜನಿಸಿದ ರಘುರಾಮ ಶೆಟ್ಟಿ, ಕಂಡ್ಲೂರಿನ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ ಮತ್ತು ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಅವರ ಸೇವಾ ಅವಧಿಯಲ್ಲಿ ‘ಮಾದರಿ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಯಕ್ಷಗಾನ ಕ್ಷೇತ್ರದಲ್ಲಿ ‘ಕಂದಾವರ’ ಎಂಬ ಹೆಸರಿನಿಂದ ಚಿರಪರಿಚಿತರಾದ ರಘುರಾಮ ಶೆಟ್ಟಿ ಅವರು ಅರ್ಥಧಾರಿ, ವೇಷಧಾರಿ, ನಾಟಕ ಕಲಾವಿದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಗೌರವಾನ್ವಿತ ಪ್ರಸಂಗಕರ್ತರಾಗಿ ವಿಶಿಷ್ಟ ಗುರುತನ್ನು ಪಡೆದವರು. ಮಕ್ಕಳ ಯಕ್ಷಗಾನದಲ್ಲಿ ಅವರ ವಿದ್ಯಾರ್ಥಿ ದಿನಗಳಲ್ಲಿ ಯಕ್ಷಗಾನದೊಂದಿಗಿನ ಅವರ ಸಂಬಂಧ ಪ್ರಾರಂಭವಾಯಿತು. ನಂತರ ಅವರು ಕುಂದಾಪುರದ ಪ್ರಸಿದ್ಧ ವಕೀಲರು ಮತ್ತು ಯಕ್ಷಗಾನ ಮೇಳದ ಪೋಷಕರಾದ ದಿವಂಗತ ಎಂಎಎಂ…
ಉಳ್ಳಾಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಾರುತಿ ಜನಸೇವಾ ಸಂಘ(ರಿ.), ಮಾರುತಿ ಯುವಕ ಮಂಡಲ (ರಿ.) ಉಳ್ಳಾಲ ಇವರ 40ನೇ ವರ್ಷಾಚರಣೆಯ ಪ್ರಯುಕ್ತ ವೃದ್ಧಾಶ್ರಮಕ್ಕೆ ನೆರವು ನೀಡಿದ್ದಾರೆ. ಉಳ್ಳಾಲದ ಪಶ್ಚಿಮ್ ಚಾರಿಟೆಬಲ್ ಟ್ರಸ್ಟ್ ಇವರ ವೃದ್ಧಾಶ್ರಮದಲ್ಲಿರುವ ಹಿರಿಜೀವಗಳಿಗೆ ಒಂದಿಷ್ಟು ನೆರವಾಗುವ ಹಿನ್ನಲೆ ಈ ಮಹತ್ವದ ಕಾರ್ಯವನ್ನು ಮಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕರಾದ ರೋಹಿತ್.ಸ್ಯಾಂಕ್ಟಸ್ ಮಾತನಾಡಿ, ಪಶ್ವಿಮ್ ಚಾರಿಟೇಬಲ್ ಸ್ಥಾಪಿಸಲು ಕಾರಣ ಅಸೌಖ್ಯದಲ್ಲಿದ್ದಂತಹ ತಂದೆ-ತಾಯಿ. ಅನಾರೋಗ್ಯದ ಸಂದರ್ಭದಲ್ಲಿ ನನ್ನ ತಂದೆ-ತಾಯಿ ಕಷ್ಟಪಡುತ್ತಿರುವುದನ್ನು ನೋಡುತ್ತಿದ್ದೆ. ಕೆಲಸದಿಂದ ವಾಪಸ್ಸಾಗುವ ವೇಳೆ ಪುಟ್ಟ ಮಕ್ಕಳಂತೆ ಕಾಯುತ್ತಿದ್ದರು. ಮಾತು ನಿಂತೂ ಹೋಗಿದ್ದರೂ ಅವರ ಮೊಗದಲ್ಲಿ ಪ್ರೀತಿ, ಕಾಳಜಿ ಕಾಣಿಸುತ್ತಿತ್ತು. ಅವರನ್ನು 24 ಗಂಟೆಯು ಒಟ್ಟಿಗೆ ಇರಿಸಿಕೊಳ್ಳುವ ಎಂಬ ಅಲೋಚನೆಯಲ್ಲಿ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ನ್ನು ಸ್ಥಾಪಿಸಿದೆ. ತಂದೆ-ತಾಯಿ ಇಂದು ಜೊತೆಗೆ ಇಲ್ಲದಿದ್ದರೂ ಆಶ್ರಮದಲ್ಲಿರುವ ಹಿರಿಜೀವಗಳಲ್ಲಿ ಅವರನ್ನು ಕಾಣುತ್ತಿದ್ದೇನೆ. ಇಂದು ಮಾರುತಿ ಸಂಘಟನೆ ತಾನು ಸಂಪಾದಿಸಿದ ಹಣವನ್ನು ತಮಗೆ ಉಪಯೋಗಿಸಿಕೊಳ್ಳದೇ ಸಮಾಜದ ಹಿತಕ್ಕಾಗಿ ಉಪಯೋಗಿಸಿಕೊಳ್ಲುತ್ತಿರುವುದು…
ಪುತ್ತೂರು,ನ. 26 : ನವೆಂಬರ್ 24 ರಂದು ಸಂಜೆ 34 ನೆಕ್ಕಿಲಾಡಿ ಸುಭಾಷ್ ನಗರದಲ್ಲಿರುವ ಜನತಾ ಕಾಲೋನಿಯಲ್ಲಿ ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಭಾರಿ ಅನಾಹುತ ತಪ್ಪಿದೆ. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಬ್ಬಾರ್ ನಂದಾವರದ ಇಲ್ಯಾಸ್ ಎಂಬುವರಿಗೆ ಬಾಡಿಗೆಗೆ ನೀಡಿದ್ದ ಮನೆಗೆ ಕುಟುಂಬವು ಇತ್ತೀಚೆಗೆ ಸ್ಥಳಾಂತರಗೊಂಡಿತ್ತು. ಮುಂಜಾನೆ, ಕುಟುಂಬವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತ್ತು ಮತ್ತು ಸಂಬಂಧಿಕರು ಒಟ್ಟುಗೂಡಿದ್ದರು. ಸಂಜೆ, ಅಡುಗೆಮನೆಯಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದವು.ಬಾಡಿಗೆ ಮನೆಯ ಹಿಂದೆ, ಎತ್ತರದ ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ವಾಸಿಸುವ ಸುಶೀಲಾ ಅವರಿಗೆ ಸೇರಿದ ಮನೆ ಇದೆ. ಕಳೆದ 10 ದಿನಗಳಿಂದ ಅಲ್ಲಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು.ನವೆಂಬರ್ 24 ರಂದು ಸಂಜೆ 5 ಗಂಟೆ ಸುಮಾರಿಗೆ, ಗೋಡೆ ಕುಸಿಯುವ ಹಂತದಲ್ಲಿದ್ದನ್ನ ಮೇಸ್ತ್ರಿ ಗಮನಿಸಿದರು. ಅಪಾಯವನ್ನು ಅರಿತ ಅವರು, ಕೆಳಗಿದ್ದ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಹೇಳಿದರು. ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವರು…
ಥೈಲ್ಯಾಂಡ್‌ನಲ್ಲಿ (woman wakes up coffin) ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿ ಪ್ರಾಂತ್ಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ನಲ್ಲಿ ನಡೆದಿದೆ. ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾದ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಮಹಿಳೆಯ ತೋಳುಗಳು ಮತ್ತು ತಲೆ ಸ್ವಲ್ಪ ಅಲುಗಾಡಿದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್‌ಥೂಪ್ ಸೋಮವಾರ ಎಪಿ ನೀಡಿದ ಮಾಹಿತಿ ಪ್ರಕಾರ, “ಅರವತ್ತೈದು ವರ್ಷದ ಮಹಿಳೆಯನ್ನು ಆಕೆಯ ಸಹೋದರ ಫಿಟ್ಸಾನುಲೋಕ್ ಪ್ರಾಂತ್ಯದಿಂದ ಅಂತ್ಯಕ್ರಿಯೆಗಾಗಿ ಕರೆತಂದಿದ್ದಾರೆ. ಸಿಬ್ಬಂದಿಗಳು ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ವೇಳೆ ಶವಪೆಟ್ಟಿಗೆಯಿಂದ ಶಬ್ದ ಬಂದಿದೆ. ನನಗೆ ಸ್ವಲ್ಪ ಆಶ್ಚರ್ಯವಾಯಿತು,…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರಿನಲ್ಲಿ 455 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸರು ಮತ್ತು ಅಧೀಕ್ಷಕರು ಆದ ಡಾ| ಶಿವ ಪ್ರಕಾಶ್ ಡಿ. ಎಸ್ ಹಾಗೂ ಡಾ. ಸದಾನಂದ ಪೂಜಾರಿ( HOD & Proffessor Urology) ಮತ್ತು ಡಾ. ಅವಿನಾಶ್ ಸಹಾಯಕ ಪ್ರಾಧ್ಯಪಕರು Urology ಮತ್ತು ಡಾ. ಅಭಿಷೇಕ್, ಡಾ| ಸುಬ್ರಮಣ್ಯ, ಪಿ ಆರ್ ಓ ನಿಕೇಶ್ ಕುಮಾರ್, ಡಾ| ರಾಘವೇಂದ್ರ ಪ್ರಕಾಶ್ ಕಾರಂತ್ ಮಾಜಿ ಗವರ್ನರ್ ರೋಟರಿ ಕ್ಲಬ್ ಮಂಗಳೂರು , ಆಶಿಕ್ ಕುಮಾರ್ ಜೈನ್ ಕೂಳೂರು ಬೀಡು, ರತ್ನಾಕರ ಜೈನ್ ಅಧ್ಯಕ್ಷರು ಜೈನ್ ಮಿಲನ್ ಮಂಗಳೂರು, ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಸಿ ಟ್ರಸ್ಟ್ (ರಿ) ದ.ಕ -1 ಜಿಲ್ಲಾ…
ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಎಂಬ 25 ವರ್ಷದ ಯುವತಿ ಹಲವು ವರ್ಷಗಳಿಂದ ಅಪರೂಪದ ಹಾಗೂ ಗುಣಪಡಿಸಲಾಗದ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾರೆ. ಇದೀಗ ಈ ರೋಗದಿಂದ ಬೇಸತ್ತು ದಯಾಮರಣಕ್ಕೆ ಮುಂದಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರಿಗೆ 18ನೇ ವಯಸ್ಸಿನಲ್ಲಿ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ಇರುವುದು ಪತ್ತೆಯಾಯಿತು. ಈ ಕಾಯಿಲೆ ಇರುವ ಜನರಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನರಕೋಶಗಳ ಮೇಲೆ ದಾಳಿಯನ್ನು ಮಾಡಿ. ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೊನೆಗೆ ಇದು ನರವೈಜ್ಞಾನಿಕ ರೋಗಕ್ಕೆ ಕಾರಣವಾಗುತ್ತದೆ. ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ತಮ್ಮ ಬಾಲ್ಯದ ಬಹುಪಾಲು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ. ವೈದ್ಯರು ಅವರಿಗೆ ಇರುವ ರೋಗದ ಬಗ್ಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಅಪರೂಪದ ರೋಗದಿಂದ ಸ್ಥಿತಿ ಹದಗೆಟ್ಟಿತು, ಅಡಿಲೇಡ್ ಅವರು ನಿರಂತರ ನೋವು, ವಾಕರಿಕೆ, ದಿನನಿತ್ಯ ವಾಂತಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ಸಂಪೂರ್ಣವಾಗಿ ಪ್ಯಾರೆನ್ಟೆರಲ್ ಪೌಷ್ಟಿಕಾಂಶವನ್ನು (TPN)…

