ಉಳ್ಳಾಲ ನ್ಯೂಸ್ ನೆಟ್ ವರ್ಕ್ ಸ್ನಾತಕೋತ್ತರ ವಿಭಾಗದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದೀವಿತ್ ಎಸ್ .ಕೋಟ್ಯಾನ್ ಅವರಿಗೆ ಪ್ರಥಮ ರ?ಯಾಂಕ್ನೊಂದಿಗೆ ಎರಡು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪೆರಾಡಿಯ ಶ್ರೀಧರ ಕೋಟ್ಯಾನ್ ಹಾಗೂ ಲಲಿತಾ ದಂಪತಿಯ ಪುತ್ರರಾಗಿರುವ ದೀವಿತ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಿದ್ದಾರೆ. ಅಲ್ಲದೆ ಯಕ್ಷಗಾನ ಕಲಾವಿದನೂ ಆಗಿರುವ ದೀವಿತ್ ಈಗಾಗಲೇ ಸುಮಾರು 300-350ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿ ಯಶಸ್ವಿ ಕಲಾವಿದನೆನಿಸಿಕೊಂಡಿದ್ದಾರೆ. ತಂದೆ ಟೈಲರ್ ವೃತ್ತಿ ಹಾಗೂ ತಾಯಿ ಬೀಡಿ ಕಟ್ಟುವುದರೊಂದಿಗೆ ಸಂಸಾರವನ್ನು ನಡೆಸುತ್ತಿದ್ದು ಬಡತನವಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ ನೀಡುತ್ತಾ ಬಂದ್ದಿದ್ದಾರೆ. ಅಲ್ಲದೆ ಪಿಯುಸಿಯ ನಂತರ ಆಳ್ವಾಸ್ ಕಾಲೇಜಿಗೆ ಸೇರಿದ ನಂತರ ಡಾ. ಮೋಹನ್ ಆಳ್ವಾ ಅವರು ಉಚಿತ ಶಿಕ್ಷಣ ನೀಡಿ ಪೆÇ್ರೀತ್ಸಾಹ ನೀಡಿದ್ದಾರೆ. ಸಮೂಹ ಸಂವಹನ ಹಾಗೂ ಪತ್ರಿಕೋಧ್ಯಮ ವಿಭಾಗದಲ್ಲಿ ಪ್ರಥಮ ರ್ಯಾಂಕಿನೊಂದಿಗೆ, ಡಾ.ಟಿ.ಎಂ.ಎ.ಪೈ ದತ್ತಿ ಚಿನ್ನದ ಪದಕ…
Author: UllalaVani
ಚಿತ್ರ: ನಿತೀಶ್ ಪಿ ಬೈಂದೂರು ಮಂಗಳೂರು ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವದ ಸಂಧರ್ಭದಲ್ಲಿ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ……
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ 35ನೇ ವಾರ್ಷಿಕ ಘಟಿಕೋತ್ಸವವು ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಉನ್ನತ ಶಿಕ್ಷಣ ಸಚಿವ ಬಸವರಾಯ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೊ.ಅಜಯ್ .ಕೆ.ಸೂದ್ ಘಟಿಕೋತ್ಸವ ಭಾಷಣ ನೆರವೇರಿಸಿದರು. ಡಾ.ಬಿ.ಎ.ವಿವೇಕ ರೈ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಸಚಿವರು ಪ್ರಧಾನಿಸಿದರು. ಈ ಸಂದರ್ಭ ಕುಲಪತಿ ಪ್ರೊ.ಕೆ.ಬೈರಪ್ಪ, ಕುಲಸಚಿವ ಪ್ರೊ.ಕೆ.ಎಂ ಲೋಕೇಶ್, ಪರೀಕ್ಷಾಂಗ ಕುಲಸಚಿವ ಎ.ಎಂ ಖಾನ್ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಾಯಕ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ 54 ಪಿಹೆಚ್ ಡಿ, 3,925 ಸ್ನಾತಕೋತ್ತರ ವಿಭಾಗದ , ಸ್ನಾತಕೋತ್ತರ ಅಟನೋಮಸ್ 1037, ಪದವಿ ವಿಭಾಗದ 19,985 ಪದವಿ ಅಟನೋಮಸ್ 2,2,00, ಸ್ನಾತಕೋತ್ತರ ಡಿಪ್ಲೊಮಾ 5, ಪದವಿ ಪಡೆದುಕೊಂಡರು. ಚಿನ್ನದ ಪದಕವನ್ನು 43 ಮಂದಿ ಮತ್ತು ನಗದು ಪುರಸ್ಕಾರ 63 ಮಂದಿ ಪಡೆದುಕೊಂಡರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಣಚೂರು: ಕ್ಷಯ ರೋಗವನ್ನು ಸಮಗ್ರ ರೀತಿಯಲ್ಲಿ ಸಂಪೂರ್ಣವಾಗಿ ನಿಗ್ರಹಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆ ಅರಿವು ಕಾರ್ಯಕ್ರಮವನ್ನು ಆಯೋಜಿಸಿರುವ ಕಾರ್ಯ ಶ್ಲಾಘನೀಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು. ಅವರು ನಾಟೆಕಲ್‍ನ ಕಣಚೂರು ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕ್ಷಯ ರೋಗ ಜಾಗೃತಿ ಬಗ್ಗೆ ಮಾಹಿತಿ ಮತ್ತು ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ವೈದ್ಯಕೀಯ ಸಂಸ್ಥೆಗಳು ಜನರ ಬಗೆಗಿನ ಪ್ರಮುಖವಾಗಿ ಕಾಳಜಿ ವಹಿಸಬೇಕು. ಹೆಚ್‍ಐವಿ ಮತ್ತು ಕ್ಷಯ ರೋಗಿಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಒದಗಿಸುವುದು ಸೂಕ್ತ . ಇದನ್ನು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿರುವ ಕಣಚೂರು ಆಸ್ಪತ್ರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು. ರಾಜೀವ ಗಾಂಧಿ ಆರೋಗ್ಯ ವಿe್ಞÁನ ವಿಶ್ವವಿದ್ಯಾನಿಲಯ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಯೇನೆಪೋಯ:ವೈದ್ಯಕೀಯ ಶಿಕ್ಷಣ ಕ್ಷೇತ್ರದೊಂದಿಗೆ ಪ್ಯಾರಾ ಮೆಡಿಕಲ್ ಕೋರ್ಸಿಗೆ ಹೆಚ್ಚಿನ ಉತ್ತೇಜನಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ , ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಫಿಸಿಯೋಥೆರಪಿ ಕೌನ್ಸಿಲ್ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು. ಅವರು ಯೇನೆಪೋಯ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಸೌತ್ ಕೆನರಾ ಪಿಸಿಯೋಥೆರಪಿ ಟೀಚರ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಶುಕ್ರವಾರ ನಡೆದ `ಮಂಗಳೂರು ಫಿಸಿಯೋಕಾನ್ -2017′ ಅಂತರಾಷ್ಟ್ರೀಯ ಪಿಸಿಯೋಥೆರಪಿ ಕಾನರೆನ್ಸ್‍ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಕ್ಷೇತ್ರದೊಂದಿಗೆ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಸರಕಾರ ಮಹತ್ತರವಾದ ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿರುವಂತೆ ಫಿಸಿಯೋಥೆರಪಿ ಶಿಕ್ಷಣ ಉತ್ತೇಜನಕ್ಕೆ ರಾಜ್ಯದಲ್ಲಿ ಫಿಸಿಯೋಥೆರಪಿ ಕೌನ್ಸಿಲ್ ಪ್ರಾರಂಬಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ ಗಾಂಧಿ ಆರೋಗ್ಯ ವಿe್ಞÁನ ವಿಶ್ವವಿದ್ಯಾನಿಲಯ ಬೆಂಗಳೂರು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಕೌಶಲ್ಯ ತರಭೇತಿ ಕೇಂದ್ರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಪಾಟೀಲ್ ಶುಕ್ರವಾರ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ವೈದ್ಯಕೀಯ ಸಂಸ್ಥೆಗಳು ಬೆಳೆದುನಿಂತಿದ್ದು, ಶೈಕ್ಷಣಿಕ ಹಬ್ ಆಗಿ ಪರಿವರ್ತನೆಗೊಂಡಿರುವ ಅವಳಿ ಜಿಲ್ಲೆಗಳಲ್ಲಿ ಆರೋಗ್ಯದ ಕುರಿತು ಜಾಗೃತಿಯ ಮಟ್ಟ ಹೆಚ್ಚಿದೆ ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶ ರಾಜ್ಯ ಸರಕಾರಕ್ಕಿದೆ. ಈಗಾಗಲೇ 6 ಸರಕಾರಿ ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿ ಕಾರ್ಯಚರಿಸುತ್ತಿದ್ದು, ಇನ್ನು 6 ಕಾಲೇಜು ಸ್ಥಾಪನೆಗೆ ಸರಕಾರ ಚಿಂತನೆ ನಡೆಸಿದೆ. ಸೂಕ್ತ ವ್ಯವಸ್ಥೆಗಳಿಲ್ಲದ ಸ್ಥಳಗಳಲ್ಲೇ ಸ್ಥಾಪಿಸಲಾಗುವುದು ಎಂದ ಅವರು ಸಿಇಟಿ ಮತ್ತು ನೀಟ್ ಆಧಾರದಲ್ಲಿ ಪ್ರಥಮ 100 ಸೀಟುಗಳನ್ನು ಸರಕಾರಕ್ಕೆ ಮೀಸಲಿರಿಸಲಾಗಿದೆ . ಕಡಿಮೆ ವೆಚ್ಛದಲ್ಲಿ ಹಾಗೂ ಗುಣಮಟ್ಟದ ಚಿಕಿತ್ಸೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ದೊರೆಯುವುದರಿಂದ ಹೆಲ್ತ್ ಟೂರಿಸಂಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಉಳ್ಳಾಲ ಮೊಗವೀರಪಟ್ಣ ಶ್ರೀ ವಿಠೋಭ ರುಕ್ಮಯಿ ಭಜನಾ ಮಂದಿರದ 47ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಯುವ ಉದ್ಯಮಿ ಸಂದೀಪ್ ಪುತ್ರನ್ ಉಳ್ಳಾಲ ಮತ್ತು ಅಕ್ಷತಾ ಸಂದೀಪ್ ಪುತ್ರನ್ ಚಾಲನೆ ನೀಡಿದರು. ಈ ಸಂದರ್ಭ ಮಂಡಳಿಯ ಅಧ್ಯಕ್ಷ ಗೋವರ್ಧನ ಸಾಲ್ಯಾನ್, ಗೌರವಾಧ್ಯಕ್ಷ ಸುಂದರ ಗುರಿಕಾರ, ಉಪಾಧ್ಯಕ್ಷ ಶಾಂತರಾಮ್ ಚಂದನ್, ಕಾರ್ಯದರ್ಶಿ ವಿನೋದ್ ಬಂಗೇರ, ಜೊತೆ ಕಾರ್ಯದರ್ಶಿ ರಘುವೀರ್ ಸಾಲ್ಯಾನ್, ಕೋಶಾಧಿಕಾರಿ ಲೋಕನಾಥ ಪುತ್ರನ್, ಪ್ರಧಾನ ಅರ್ಚಕ ಯಾದವ ಬಂಗೇರ, ತಾರಾನಾಥ ಸುವರ್ಣ ಹಾಗೂ ಮಂದಿರದ ಸದಸ್ಯರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇತ್ತೀಚೆಗೆ ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ವಸ್ತು ಪ್ರದರ್ಶನದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಮಳಿಗೆ ವಿಜ್ಞಾನಾಸಕ್ತರ ಹಾಗೂ ಶಾಲಾ ಮಕ್ಕಳ ಗಮನ ಸೆಳೆಯಿತು. ಈ ಮಳಿಗೆಯಲ್ಲಿ ಅರಿವಳಿಕೆ ಶಾಸ್ತ್ರ ವಿಭಾಗದ ವತಿಯಿಂದ ಅಣಕು ಶಸ್ತ್ರಚಿಕಿತ್ಸಾ ಕೊಠಡಿ ವಿದ್ಯಾರ್ಥಿಗಳ ಕುತೂಹಲ ಕೆರಳಿಸಿ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಳ್ಳುವಂತೆ ಮಾಡಿತು. ಪ್ರೇಕ್ಷಕರು ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿತೆ ಹಾಗೂ ತರಬೇತಿಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು. ಶರೀರಶಾಸ್ತ್ರ ವಿಭಾಗದಿಂದ ಪ್ರದರ್ಶಿತವಾದ ಮಾನವನ ಬೇರೆ ಬೇರೆ ಅಂಗಾಂಗಗಳು, ಸಮುದಾಯ ವೈದ್ಯಕೀಯ ಶಾಸ್ತ್ರದ ಪ್ರಾತ್ಯಕ್ಷಿತೆಗಳು ಗಮನ ಸೆಳೆದವು. ಅಭಯಚಂದ್ರ ಜೈನ್, ಮಾಜಿ ಮೀನುಗಾರಿಕಾ ಹಾಗೂ ಯುವಜನ ಕ್ರೀಡಾಸಚಿವರು, ಎಂ.ಎಲ್.ಎ., ಈ ಮಳಿಗೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು, ಮೆಚ್ಚುಗೆ ವ್ಯಕ್ತಪಡಿಸಿದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರ ಮಂಜೇಶ್ವರ-ಉಪ್ಪಳದ ರೀಜನಲ್ ಸಂಗಮಂ -2016- 17 ಕಾರ್ಯಕ್ರಮ ಮಾ.5ರಂದು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಶ್ರಮ ವಾಸಿ 10 ಮಂದಿಗೆ ಗಾಲಿ ಕುರ್ಚಿ , ಸ್ಟ್ರೆಚರ್ ವಿತರಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ ಎಂದು ಮಂಜೇಶ್ವರ- ಉಪ್ಪಳದ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲಕ್ಷ್ಣಣ್ ಕುಂಬ್ಲೆ ತಿಳಿಸಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಜೇಶ್ವ-ಉಪ್ಪಳ ಭಾಗದ ಲಯನ್ಸ್ ಕ್ಲಬ್ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.ಲಯನ್ಸ್ ಕ್ಲಬ್‍ಗೆ ಶತಮಾನದ ಅಂಗವಾಗಿ ವಿವಿದೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾ.5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಡಾ.ಅಮೃತ ಸೋಮೇಶ್ವರ, ಸಮಾಜ ಸೇವಕ ಗೋಪಾಲಕೃಷ್ಣ ( ಸಾಯಿರಾಂ ) ಭಟ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲೆ ಕವಿತಾ ಶಾಸ್ತ್ರಿ ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಸಿ.ಎ.ಶಿವಪ್ರಸಾದ್ಕೆ ಇವರಿಗೆ ಸನ್ಮಾನ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕರ್ಣಾಟಕ ಬ್ಯಾಂಕ್ ನ ತೊಕ್ಕೊಟ್ಟು ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಯಲ್ಲಿ ಹಲವು ದಾಖಲೆಗಳು ಸುಟ್ಟುಹೋಗಿವೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕಿನಲ್ಲಿ ನಿನ್ನೆ ತಡರಾತ್ರಿ 10.00 ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮತ್ತು ಅಗ್ನಿ ಶಾಮಕ ಸಿಬ್ಬಂದಿಗೆ ದೂರು ನೀಡಿದ್ದಾರೆ. ಅಷ್ಟರಲ್ಲಿ ಬೆಂಕಿ ಕಿಟಕಿಯಿಂದ ಹೊರ ವ್ಯಾಪಿಸಿದ್ದು, ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲೆ ಬ್ಯಾಂಕಿನ ಒಳಗಡೆಯೇ ದಟ್ಟವಾಗಿ ವ್ಯಾಪಿಸಿತ್ತು. ಈ ವೇಳೆ ದಾಖಲೆಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಯಿತು. ಕಿಟಕಿ ಮೂಲಕ ಕಿಚ್ಚು: ಬ್ಯಾಂಕಿನ ಹಿಂಬದಿಯ ಕಿಟಕಿ ಮೂಲಕ ಬೆಂಕಿ ಹಾಕಿರುವ ಸಾಧ್ಯತೆಗಳಿದ್ದು, ಅದರಂತೆ ಪೊಲೀಸರು ಕಿಟಕಿ ಸಮೀಪ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಭಾನುವಾರ ತಡರಾತ್ರಿ ಇಲ್ಲೇ ಸಮೀಪ ದಾರಿಬದಿಯಲ್ಲಿರುವ ಮೂರು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಫೆ.24ರಂದು ಕರ್ಣಾಟಕ ಬ್ಯಾಂಕಿನಿಂದ ಕೆಲ ಮೀ. ಅಂತರದಲ್ಲಿರುವ…

