ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ತೊಕ್ಕೊಟ್ಟು ವ್ಯಾಪ್ತಿಯಲ್ಲಿ ನಿರಂತರವಾಗಿ ಅಗ್ನಿ ಅವಘಢಗಳು ಸಂಭವಿಸುತ್ತಿದ್ದು, ಘಟನೆಗಳಿಗೆ ಸಂಬಂಧಿಸಿ ಸೂಕ್ಷ್ಮ ತನಿಖೆ ಹಾಗೂ ಕೋಮುಭಾವನೆ ಕೆರಳಿಸಲು ಯತ್ನಿಸುವವರನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಆಗ್ರಹಿಸಿದೆ. ಕಳೆದ ಎರಡು ವಾರಗಳ ಅಂತರದಲ್ಲಿ ತೊಕ್ಕೊಟ್ಟಿನಲ್ಲಿ ರಾತ್ರಿ ಹೊತ್ತು ಅಂಗಡಿ, ಬ್ಯಾಂಕ್ ಕಟ್ಟಡಗಳಿಗೆ ಬೆಂಕಿ ಹಾಕುವ ಕೃತ್ಯಗಳು ನಡೆಯುತ್ತಿವೆ. ಫೆ.22ರ ರಾತ್ರಿ ಸಿಪಿಐಎಂ ಕಚೇರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಮೂರೇ ದಿನಗಳಲ್ಲಿ ಮತ್ತೆ ಅಗ್ನಿ ಅವಘಢಗಳು ಸಂಭವಿಸುತ್ತಲೇ ಬಂದಿದೆ. ಮಂಗಳವಾರ ತಡರಾತ್ರಿ ಬಾಂಬೆ ಬಝಾರಿಗೆ ಬೆಂಕಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಎಂ ಉಳ್ಳಾಲ ವಲಯ ಸದಸ್ಯರು, ಹಿಂದೆ ನಡೆದ ಘಟನೆಗಳಿಗೆ ಮತ್ತು ಸದ್ಯ ನಡೆದಿರುವ ಘಟನೆಗಳಿಗೆ ಸಾಮ್ಯತೆ ಇರುವುದಾಗಿ ತಿಳಿಸಿದ್ದಾರೆ. ಅಂಗಡಿಯೊಳಗಿದ್ದ ಲಕ್ಷಾಂತರ ಬೆಲೆಬಾಳುವ ಸೊತ್ತುಗಳೆಲ್ಲವೂ ಹೊತ್ತಿ ಉರಿದಿವೆ. ಅಂಗಡಿ ಹಿಂಭಾಗದಲ್ಲಿ ಮುಳಿ ಹುಲ್ಲಿನ ಗುಡ್ಡೆಯಲ್ಲಿ ವಿದ್ಯುತ್ ಕಂಬಗಳಿದ್ದು, ಅಲ್ಲಿ ಶಾಟ್…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಹಿಳೆಯರು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಮ್ಮ ಭ್ರಮೆಯ ಬದುಕನ್ನು ದೂರಗೊಳಿಸಿ ವಾಸ್ತವದ ಬದುಕನ್ನು ನಮ್ಮದಾಗಿಸಿಕೊಂಡು ನಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸೋಣ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕಿ ಭುವನೇಶ್ವರಿ ಹೆಗ್ಡೆ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಮಂಗಳಾ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ನಮ್ಮ ಮೇಲೆ ಆಗುವ ಬಾಹ್ಯ ಆಕ್ರಮಣಗಳನ್ನು ಎದುರಿಸಲು ಸನ್ನದ್ದರಾಗುವಂತೆ ನಾವು ಸಾಹಿತ್ಯ, ಸಂಸ್ಕøತಿಯ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮಾನಸಿಕವಾಗಿಯೂ ನಮ್ಮ ಆತ್ಮಸೈರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಗಟ್ಟಿ ಸ್ವಭಾವದವಾಗಿರುವುದು ವಿಶೇಷವಾಗಿದ್ದು ಇದು ಇಲ್ಲಿಯ ಮಣ್ಣಿನ, ಸಂಸ್ಕøತಿಯ ಲಕ್ಷಣವಾಗಿರಬಹುದು ಎಂದರು. ಇಂದು ವಾಟ್ಸಪ್ ಎಂಬುದು ನಮ್ಮ ದಿನಚರಿಯಾಗಿದ್ದು ವಿದ್ಯಾರ್ಥಿ ಸಮುದಾಯ ಪರೀಕ್ಷೆಗೆ ತಯಾರಾಗಲೂ ಇದು ಅಡ್ಡಿಯಾಗುತ್ತಿದೆ. ಆದ್ದರಿಂದ ಯುವ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಾಸ್ತಿಕಟ್ಟೆ: ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರನ್ನು ಅಡ್ಡಗಟ್ಟಿದ ತಂಡವೊಂದು ಓರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ. ಗಾಯಳುಗಳನ್ನು ಮುಕ್ಕಚ್ಚೆರಿ, ಕಿಲೇರಿಯಾ ನಗರ ನಿವಾಸಿಗಳಾದ ಸಮೀರ್ (25), ಸಿರಾಜ್(26) ಎಂಬವರು ಚೂರಿ ಇರಿತಕ್ಕೆ ಒಳಗಾದವರಾಗಿದ್ದಾರೆ. ಇವರಿಗೆ ಸುರ್ಮಾ ಇಮ್ರಾನ್, ಹಂಝು, ಅಲ್ತಾಫ್ ಕಾಟೀಪಳ್ಳ ಸೇರಿದ ತಂಡ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಪೂರ್ವದ್ವೇಷದ ಹಿನ್ನಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ಗಾಯಾಳುಗಳು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಇರಾ: ಗ್ರಾಮ ಪಂಚಾಯತ್‍ನಲ್ಲಿ 2016- 17ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ 19ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಕಾರ್ಯಕ್ರಮ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಸ್ತಾಂತರಿಸಿದರು. ಇರಾ ಗ್ರಾಮ ಪಂಚಾಯತ್ ಸದಸ್ಯ ಎಂ.ಬಿ. ಉಮ್ಮರ್ ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮಂಗಳಗಂಗೋತ್ರಿ, : ಸಾಹಿತ್ಯ ಮತ್ತು ಚರಿತ್ರೆಯ ಆಶಯ, ಧೋರಣೆ ವಿಭಿನ್ನ ರೂಪದಲ್ಲಿದ್ದರೂ, ಈ ಎರಡೂ ವಿಚಾರಗಳಿಗೂ ಅವಿನಾಭಾವ ಸಂಬಂಧವಿದೆ. ಇವೆರಡನ್ನೂ ಸೇರಿಸಿ ಅಧ್ಯಯನ ನಡೆಸಿದಾಗ ಹಲವಾರು ವಿಷಯಗಳನ್ನು ಅರಿತುಕೊಳ್ಳು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ| | ಬಿ.ಸುರೇಂದ್ರರಾವ್ ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ವಿ.ವಿ. ಇತಿಹಾಸ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ `ಚರಿತ್ರೆ ಮತ್ತು ಸಾಹಿತ್ಯ’ ಎರಡು ದಿನಗಳ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಹಿತ್ಯಿಕ ವಿಚಾರದಲ್ಲಿ ನಮ್ಮ ಕಲ್ಪನೆಗಳಿಗೆ ಅವಕಾಶವಿದ್ದರೆ, ಇತಿಹಾಸದ ವಿಚಾರದಲ್ಲಿ ನೃಜ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇತಿಹಾಸಕಾರರನ್ನು ನಂಬುವವರು ಕಡಿಮೆಯಾಗುತ್ತಿದ್ದಾರೆ ಎಂದ ಅವರು ಇತಿಹಾಸವೆಂದರೆ ಕೇವಲ ಭೂತಕಾಲದ ವಿಚಾರಗಳು ಮಾತ್ರವೇ ಅಲ್ಲ, ವರ್ತಮಾನ ಮತ್ತು ಭೂತಕಾಲದ ನಡುವಿನ ಒಂದು ಪರಿ„ಯನ್ನು ಇತಿಹಾಸವು ನಿರ್ಮಿಸಿಕೊಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಪೆರ್ಮನ್ನೂರು: ವಿಶ್ವದಂತ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ ಪೆರ್ಮನ್ನೂರು ಅಡಂಕುದ್ರುವಿನ ಸಂತ ಸೆಬಾಸ್ಟಿಯನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಚೂಂತಾರು ಸರೋಜಿನಿ ಪ್ರತಿಷ್ಠಾನನ ಟ್ರಸ್ಟಿ ಡಾ. ರಾಜಶ್ರೀ ಮೋಹನ್ ಮಾತನಾಡಿ ಸುಂದರವಾದ ಸುದೃಢವಾದ ಹಲ್ಲು ಆರೋಗ್ಯದ ಸಂಕೇತ. ಆರೋಗ್ಯವಂತ ಹಲ್ಲು ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತೀ ಅವಶ್ಯಕ. ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹಲ್ಲಿನ ಪರೀಕ್ಷೆ ಮಾಡಿಸಿಕೊಳ್ಳಿ. ಹಲ್ಲಿನ ಆರೋಗ್ಯಕ್ಕೆ ಮತ್ತು ದೇಹದ ಆರೋಗ್ಯಕ್ಕೆ ಪೂರಕವಾದ ಹಸಿ ತರಕಾರಿ ಹಣ್ಣು ಹಂಪಲುಗಳನ್ನು ಹೆಚ್ಚು ತಿನ್ನಬೇಕು. ಜಂಕ್ ಫುಡ್‍ಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಲೀಡಿಯಾ ಡಿಸೋಜ, ಶಿಕ್ಷಕಿಯರುಗಳಾದ ಕವಿತ ಮತ್ತು ಸುಮಾ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಉಪಸ್ಥಿತರಿದ್ದರು. ಇದೇ ಸಂದರ್ಭ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಸಮಾಜಕ್ಕೆ ಅಂಟಿಕೊಂಡಿರುವ ಅನೇಕ ಸಾಮಾಜಿಕ ಪಿಡುಗುಗಳ ಪೈಕಿ ಬಾಲ್ಯ ವಿವಾಹ ಕೂಡ ಒಂದು. ಬಾಲ್ಯ ವಿವಾಹ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಧರ್ಮ, ಪಂಗಡಗಳಲ್ಲೂ ನಡೆಯುತ್ತಿರುವುದನ್ನು ಕಾಣುತ್ತೇವೆ. ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಯಿಂದ ಸಣ್ಣವಯಸ್ಸಿನ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಚಿಕ್ಕ ಪ್ರಾಯದಲ್ಲೇ ಗರ್ಭಧಾರಣೆಯ ಅಪಾಯವನ್ನು ಎದುರಿಸುತ್ತಾರೆ ಮತ್ತು ನಿರಂತರ ಲೈಂಗಿಕ ಮತ್ತು ದೈಹಿಕ ಶೋಷಣೆಗೆ ತುತ್ತಾಗುತ್ತಾರೆ. ಬಾಲ್ಯವಿವಾಹ ಅಂದರೇನು?: 21 ವರ್ಷ ತುಂಬದ ಹುಡುಗ ಮತ್ತು 18 ವರ್ಷ ತುಂಬದ ಹುಡುಗಿಯನ್ನು ಬಾಲಕ/ಬಾಲಕಿ ಎಂದು ಪರಿಗಣಿಸಲಾಗುತ್ತದೆ. ವಿವಾಹವಾಗಲು ನಿಗದಿ ಪಡಿಸಿರುವ ಅರ್ಹ ವಯಸ್ಸು ಹುಡುಗನಿಗೆ 21 ವರ್ಷಗಳು ಮತ್ತು ಹುಡುಗಿಗೆ 18 ವರ್ಷಗಳು. ಆದ್ದರಿಂದ ವಿವಾಹವಾಗುವ ಗಂಡು/ಹೆಣ್ಣಿನಲ್ಲಿ ಯಾರಾದರೊಬ್ಬರು ನಿಗದಿಪಡಿಸಿದ ವಯಸ್ಸನ್ನು ಪೂರ್ಣಗೊಳಿಸದಿದ್ದರೆ ಅದು ಬಾಲ್ಯ ವಿವಾಹ ಎಂದು ಕರೆಯಲ್ಪಡುತ್ತದೆ. ಸಣ್ಣ ವಯಸ್ಸಿನಲ್ಲೇ ಸಂಸಾರದ ಹೊಣೆ: ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಲ್ಲಿ ಹೆತ್ತವರು ತಮ್ಮ ಹದಿಹರೆಯದ ಹೆಣ್ಣನ್ನು ಮದುವೆ ಮಾಡಿಕೊಡುವ ಮೂಲಕ ಸಣ್ಣ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬಾಳೆಪುಣಿ : ಮಹಾತ್ಮಾ ಗಾಂಧಿ ರಾಷ್ಟಿ ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ನಡೆಸಲು ಅವಕಾಶವಿದ್ದು ಈ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮದ ಅತಿ ಹೆಚ್ಚಿನ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಡಾ.ಎಂ.ಆರ್.ರವಿ ಹೇಳಿದರು. ಬಾಳೆಪುಣಿ ಗ್ರಾಮ ಪಂಚಾಯಿತಿಯ ಹೂ ಹಾಕುವ ಕಲ್ಲಿನ ಜಿ.ಪ.ಹಿ.ಪ್ರಾ. ಶಾಲೆಯ ರಂಗಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಾಳೆಪುಣಿ, ನರಿಂಗಾನ, ಪಜೀರು, ಇರಾ ಹಾಗೂ ಕುರ್ನಾಡು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕೊಳವೆ ಬಾವಿ ತೋಡಿ ನೀರು ಸಿಗದಿರುವುದು ಸಾಮಾನ್ಯವಾಗಿಬಿಟ್ಟಿದ್ದು ಅದಕ್ಕಾಗಿ ಬದಲಿ ಪರಿಹಾರ ಅಗತ್ಯವಿದೆ. ಹಾಗಾಗಿ ನೂರಾರು ವರ್ಷದಿಂದ ಮುಚ್ಚಿ ಹೋಗಿರುವ ಕೆರೆಯನ್ನು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಇಲ್ಲಿನ ಜಂಕ್ಷನ್ನಿನ ರಸ್ತೆಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ವಿವಿಧ ವಸ್ತುಗಳ ಮಳಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಭಾರೀ ಅಗ್ನಿ ಅವಘಢ ಸಂಭವಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘmನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಎರಡು ವಾರಗಳಲ್ಲಿ ತೊಕ್ಕೊಟ್ಟುವಿನಲ್ಲಿ ಸಂಭವಿಸಿದ ನಾಲ್ಕನೇ ಅಗ್ನಿ ಪ್ರಕರಣ ಇದಾಗಿದೆ. ಮಂಗಳವಾರ ತಡರಾತ್ರಿ 11ರ ವೇಳೆಗೆ ಏಕಾಏಕಿ ಬಾಂಬೆ ಬಝಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲೆ ವ್ಯಾಪಕವಾಗಿ ಹರಡಲು ಆರಂಭವಾಗಿ ಇಡೀ ಮಳಿಗೆಯನ್ನೇ ವ್ಯಾಪಿಸಿತು. ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ಬರಲಿಲ್ಲ. ಒಳಗಿದ್ದ ಸೊತ್ತುಗಳೆಲ್ಲವೂ ಉರಿದು, ತಗಡು ಶೀಟುಗಳು ಕೆಂಡದಂತಾಗಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡುವಷ್ಟರಲ್ಲಿ ಬಝಾರ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ನಾಲ್ಕನೇ ಅವಘಢ: ಫೆ.23 ರ ತಡರಾತ್ರಿ ಸಿಪಿಎಂ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರು. ಫೆ.27ರ ತಡರಾತ್ರಿ ತೊಕ್ಕೊಟ್ಟು ರೈಲ್ವೇ ಹಳಿ ಸಮೀಪ ಎರಡು ಗೂಡಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು.…
ನರಿಂಗಾನ: ಜಿಲ್ಲೆಯಾದ್ಯಂತ 1,000 ಕಿಂಡಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಕಳೆದ ವರ್ಷದ ಬರ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸರಕಾರ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕೃಷಿಗೆ ಪೂರಕವಾಗಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಮಹಾತ್ಮಾ ಗಾಂಧಿ ರಾಷ್ಟಿ ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲ ಬಾಳಿಕೆಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಅಣೆಕಟ್ಟು ನಿರ್ಮಾಣದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ನೇತ್ರಾವತಿ ನದಿ ಹರಿಯುತ್ತಿದ್ದರೂ, ಜನರಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಕೃಷಿ ಚಟುವಟಿಕೆಗೂ ಬಹಳ ತೊಂದರೆಯಾಗಿತ್ತು. ಕೊಳವೆ ಬಾವಿಗಳ ನಿರ್ಮಾಣದಿಂದ ಭೂಮಿಯ ಮೇಲೆ ಮಾನವ ಅತ್ಯಾಚಾರ ನಡೆಸುವಂತಹ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ 600 ಅಡಿಯಷ್ಟು ಕೊಳವೆ ಬಾವಿ ನಿರ್ಮಿಸುವ ಮೂಲಕ ಜಿಲ್ಲೆಗೂ ಕೋಲಾರ…

