ಉಳ್ಳಾಲ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ:ತಮ್ಮ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಜನಸೇವೆ ನಡೆಸಿದ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಆಡಳಿತ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಸೋಮನಾಥೇಶ್ವರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಹಿಂದಿನ ಹುಟ್ಟುಹಬ್ಬದ ಸಂದರ್ಭ ಸೋಮನಾಥ ದೇವರಿಗೆ ಪೂಜೆ ಸಲ್ಲಿಸಿದಂತೆ ಅವರು ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಬಾರಿ ಪೂಜೆ ಸಲ್ಲಿಸಿದ ಫಲವಾಗಿ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಚುನಾಯಿತರಾಗಲಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕವನ್ನು ರೂಪಿಸಲಿದ್ದಾರೆ ಎಂದರು. ಈ ಸಂದರ್ಭ ಸೌಮ್ಯಾ.ಆರ್.ಶೆಟ್ಟಿ, ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲ ಕುತ್ತಾರ್, ಬಿಜೆಪಿ ಮುಖಂಡರಾದ ಚಮದ್ರಶೇಖರ್ ಉಚ್ಚಿಲ್, ಯಶವಂತ ಅಮೀನ್, ಉದಯ ಶೆಟ್ಟಿ ಸೊಳ್ಳೆಂಜೀರು, ಸುಜಿತ್ ಮಾಡೂರು, ಗೋಪಿನಾಥ್ ಬಗಂಬಿಲ, ದಯಾನಂದ ತೊಕ್ಕೊಟ್ಟು, ಶಿವಪ್ರಸಾದ್ ಕಿನ್ಯಾ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಜಾನುವಾರು ಪೋಷಣೆ, ಕೆರೆ ಅಭಿವೃದ್ಧಿಗೆ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪ್ರತಿಭಟಿಸುವುದು ಸಂವಿಧಾನಾತ್ಮಕ ಹಕ್ಕು, ಅದನ್ನು ವಿರೋಧಿಸಿ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಜವಾಬ್ದಾರಿಯುತ ಸಚಿವರು ತಮ್ಮ ಸ್ಥಾನಕ್ಕೆ ಯೋಗ್ಯರಲ್ಲ, ಈ ಕೂಡಲೇ ಕ್ಷಮೆ ಯಾಚಿಸದೇ ಇದ್ದಲ್ಲಿ ಹಿರಿಯರ ಜತೆಗೆ ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ. ಸಚಿವ ಖಾದರ್ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಕೇರಳ ರಾಜ್ಯದಲ್ಲಿ ನೂರಾರು ಹಿಂದು ಸಂಘಟನೆಯ ಕಾರ್ಯಕರ್ತರ ಹತ್ಯೆಗೆ ಕಾರಣರಾಗಿರುವ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದಕ್ಕೆ ಜಿಲ್ಲೆಯಲ್ಲಿ ಸಂಘಪರಿವಾರದವರು ಕರೆ ನೀಡಿದ್ದ ಹರತಾಳಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಇದು ಹಿಂದುಗಳ ನೋವನ್ನು ವ್ಯಕ್ತಪಡಿಸಿದೆ. ಅದನ್ನು ಬಿಜೆಪಿ ಕೂಡಾ ಬೆಂಬಲಿಸಿದೆ. ಹೊರಜಿಲ್ಲೆಯ ಕಾಂಗ್ರೆಸ್ ಮುಖಂಡರ ಮಾತಿಗೆ ಹಿಡಿತವಿಲ್ಲ ಆದರೆ ಜಿಲ್ಲೆಯ ಸಚಿವನಾಗಿ , ಉಳ್ಳಾಲ ಭಾಗದ ಶಾಸಕರಾಗಿದ್ದುಕೊಂಡು ಸಂವಿಧಾನವನ್ನು ತಿಳಿಯದೆ ಮಾತನಾಡಿರುವುದು ಕಳವಳಕಾರಿ. ಇದು ಅವರ ಯೋಗ್ಯತೆಯನ್ನು ಪ್ರಶ್ನಿಸುವಂತಾಗಿದೆ. ಈ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಲ್ಯ: ಹಿಂದು ಸಂಘಟನೆಯ ಕಾರ್ಯಕರ್ತರನ್ನು ಚಪ್ಪಲಿಗೆ ಹೋಲಿಸಿದ ಹಿನ್ನಲೆಯಲ್ಲಿ ಕೊಲ್ಯ ಸಮೀಪ ಕಾರ್ಯಕ್ರಮಕ್ಕೆಂದು ಭಾಗವಹಿಸಲಿದ್ದ ಸಚಿವ ಯು.ಟಿ.ಖಾದರ್ ವಿರುದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಘೇರಾವ್ ಹಾಕಲು ನಿರ್ಧರಿಸಿದ್ದ ಘಟನೆ ಕೊಲ್ಯ ಸಮೀಪ ಭಾನುವಾರ ಸಂಜೆ ನಡೆದಿದೆ. ಕೊಲ್ಯದಲ್ಲಿ ನಡೆಯುತ್ತಿದ್ದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲು ಸಚಿವ ಖಾದರನ್ನು ಆಹ್ವಾನಿಸಲಾಗಿತ್ತು. ಆದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿ ಶನಿವಾರ ನಡೆಸಿದ ಸೌಹಾರ್ದ ರ್ಯಾಲಿಯನ್ನು ಖಂಡಿಸಿ ಸಂಘ ಪರಿವಾರಗಳು ಮಂಗಳೂರು ಬಂದ್‍ಗೆ ಕರೆ ನೀಡಿದ್ದವು . ಇದಕ್ಕೆ ಪ್ರತಿಕ್ರಿಯಿಸಿ ಸಚಿವ ಖಾದರ್ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಪಿಣರಾಯಿ ಚಪ್ಪಲಿಗೆ ಹೋಲಿಸಿದ್ದರು. ಇದನ್ನು ಖಂಡಿಸಿ ಭಾನುವಾರ ಹಿಂದು ಸಂಘಟನೆಯ ಕಾರ್ಯಕರ್ತರುನ ಕೊಲ್ಯದಲ್ಲಿ ಆಗಮಿಸಲಿದ್ದ ಖಾದರ್‍ಗೆ ಘೇರಾವ್ ಹಾಕಲು ಜಮಾಯಿಸಿದ್ದರು. ಆದರೆ ಸಚಿವ ಖಾದರ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ಕಾರಣ ಹಿಂದು ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಹಿಂದುರುಗಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಲ್ಲಿ ಶನಿವಾರ ನಸುಕಿನ ಜಾವ ಸಂಭವಿಸಿದ್ದು, ಸಹಸವಾರ ಮೃತನ ಸಹೋದರ ಗಂಭೀರ ಗಾಯಗೊಂಡಿದ್ದಾರೆ. ತೊಕ್ಕೊಟ್ಟು ಟಿ.ಸಿ.ರೋಡಿನ ಅಕ್ಕರೆಕೆರೆ ನಿವಾಸಿ ಮಯ್ಯದ್ದಿ ಎಂಬವರ ಪುತ್ರ ಸಂಶುದ್ದೀನ್ (23) ಮೃತರು. ಸಹೋದರ ಸಹಸವಾರ ವಾಸಿಂ (16) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಬೆಳಿಗ್ಗೆ ಮನೆಯಿಂದ ಸಹೋದರನ ಜತೆಗೆ ಧಕ್ಕೆಗೆ ಕೆಲಸಕ್ಕೆ ತೆರಳುವ ಸಂದರ್ಭ ಘಟನೆ ಸಂಭವಿಸಿದೆ. ಸ್ಕೂಟರಿನಲ್ಲಿ ತೆರಳುವ ಸಂದರ್ಭ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಶುದ್ದೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ಸಹಸವಾರನನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಶುದ್ದೀನ್ ಅವಿವಾಹಿತರಾಗಿದ್ದು, ಧಕ್ಕೆಯಲ್ಲಿ ಬಾಕ್ಸ್ ಮಾರಾಟದ ಕೆಲಸ ನಿರ್ವಹಿಸುತ್ತಿದ್ದರು. ಸಹೋದರ ವಾಸಿಂ ಧಕ್ಕೆಯಲ್ಲಿ ಅವರ ತಂದೆಗಿರುವ ಸ್ವಂತ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಐವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಮತ್ತು ತಂದೆ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಭೇಟಿ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಜಿಲ್ಲೆಯಾದ್ಯಂತ ಕರೆ ನೀಡಿರುವ ಮಂಗಳೂರು ಬಂದ್ ಹಿನ್ನೆಲೆಯಲ್ಲಿ ಉಳ್ಳಾಲ, ಕೊಣಾಜೆ ಹಾಗೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಕೃತ್ಯವನ್ನು ಮುಂದುವರಿಸಿದ್ದು, ಮೂರು ಕರ್ನಾಟಕ ಸಾರಿಗೆ ಸೇರಿದಂತೆ ಒಂದು ಖಾಸಗಿ ಬಸ್ಸುಗಳಿಗೆ ಕಲ್ಲುತೂರಾಟ ನಡೆಸಿರುವ ಘಟನೆಯಲ್ಲಿ ಚಾಲಕರಿಬ್ಬರು ಗಾಯಗೊಂಡಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ತಲಪಾಡಿ ಎಂಬಲ್ಲಿ ಪೊಲೀಸ್ ಗಸ್ತು ನಿರತ ಕರ್ನಾಟಕ ಸಾರಿಗೆ ಬಸ್ಸಿಗೆ ಕಲ್ಲೆಸೆಯಲಾಗಿತ್ತು. ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ದುಷ್ಕøತ್ಯ ಎಸೆಯಲಾಗಿದೆ. ಪರಿಣಾಮ ಗಾಜು ಸಂಪೂರ್ಣ ಪುಡಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಮಧ್ಯಾಹ್ನ 11ರ ವೇಳೆಗೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿ ಎಂಬಲ್ಲಿ ಗ್ರಾಮಾಂತರ ಸಾರಿಗೆ ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಸಂದರ್ಭ ಘಟನೆ ನಡೆದಿದೆ. ಬಳಿಕ .11.30 ಸುಮಾರಿಗೆ ತಲಪಾಡಿಯಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಮರೋಳಿ ಬಸ್ಸಿನ ಗಾಜನ್ನು 6 ಮಂದಿಯ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತಲಪಾಡಿ: ಕೇರಳ ಸಾರಿಗೆಯ ಎರಡು ಬಸ್ಸುಗಳಿಗೆ ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಕಲ್ಲೆಸೆದು ಹಾನಿ ಮಾಡಿರುವ ಘಟನೆ ಕೇರಳ -ಕರ್ನಾಟಕ ಗಡಿ ಪ್ರದೇಶ ತೂಮಿನಾಡು ಮತ್ತು ಕೋಟೆಕಾರು ಬೀರಿ ಸಮೀಪ ನಡೆದಿದೆ. ಇಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಶುಕ್ರವಾರದಂದು ಭೇಟಿ ವಿರೋಧಿಸಿ ಹರತಾಳವನ್ನು ಆಯೋಜಿಸಿತ್ತು. ಇದೇ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲೆಸೆದಿರುವ ಶಂಕೆ ಇದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ವೇಳೆ ತೂಮಿನಾಡು ಸಮೀಪ 9.00 ಗಂಟೆಯ ವೇಳೆ ಕಲ್ಲೆಸೆದರೆ ಇನ್ನೊಂದೆಡೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಎಂಬಲ್ಲಿ ಕಲ್ಲೆಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸೆಕ್ಷನ್ ಜಾರಿಯಲ್ಲಿದ್ದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಉಳ್ಳಾಲ ಹಾಘೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಫೆ.25ರಂದು ಮಂಗಳೂರಿನಲ್ಲಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಾಮರಸ್ಯದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಬದ್ರಿಯ ಕಾಲೇಜಿನ ಪ್ರಾಚಾರ್ಯರಾಗಿರುವ ಡಾ| ಇಸ್ಮಾಯಿಲ್ ಎಸ್. ಅಬಿಪ್ರಾಯಪಟ್ಟರು. ಅವರು ಕಿನ್ಯಾದಲ್ಲಿ ಸಾಮರಸ್ಯದ ಸಾಹಿತಿ ಗುಣವತಿ ಕಿನ್ಯಾ ಅವರು ಹಮ್ಮಿಕೊಂಡಿದ್ದ `ಸಾಮರಸ್ಯ ಸಾಹಿತ್ಯೋತ್ಸವ’ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ ಗಣೇಶ್ ಪ್ರಸಾದ್ ವಹಿಸಿದ್ದರು. ಒಲವಿನ ಚರ್ಚ್‍ನ ಧರ್ಮಗುರು ರೆ| ಫಾ| ಲಾರೆನ್ಸ್ ಡಿ’ಸೋಜಾ ಶುಭಹಾರೈಸಿದರು. ಹಿರಿಯ ಸಾಹಿತಿ ಚಂದ್ರಕಲಾ ನಂದಾವರ, ಪ್ರಸಾದ್ ನೇತ್ರಾಲಯದ ಅಬ್ದುಲ್ ಖಾದರ್ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು. ಕವಿ ಸಾಹಿತಿಗಳಾದ ಅಶೋಕ್ ಕುಮಾರ್ , ಜನಶಿಕ್ಷಣ ಟ್ರಸ್ಟ್‍ನ ಶೀನ ಶೆಟ್ಟಿ, ಕೃಷ್ಣಮೂಲ್ಯ, ಕಾರ್ಯಕ್ರಮದ ಸಂಘಟಕಿ ಸಾಹಿತಿ ಗುಣವತಿ ಉಪಸ್ಥಿತರಿದ್ದರು. ಸುಧಾ ನಾಗೇಶ್ ವಂದಿಸಿದರು. ನಳಿನಾಕ್ಷಿ ಬಿಜೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ನಾಡಗೀತೆ ಪ್ರಸ್ತುತ ಪಡಿಸಿದರು. ಶ್ರೀಕಾಂತ್ ಕೊಂಡಾಣ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ರಾಣಿಪುರ: ರಾಣಿಪುರ ವಿಶ್ವಮಾತೆ ಮರಿಯಮ್ಮನವರ ದೇವಾಲಯಕ್ಕೆ ಒಳಪಟ್ಟ ರೆಜಿನಾ ಚೇಲಿ ಕಾನ್ವೆಂಟಿನ ಸುವರ್ಣ ಮಹೋತ್ಸವ ಇತ್ತಿಚೇಗೆ ನಡೆಯಿತು. ಮಂಗಳೂರು ದಕ್ಷಿಣ ವಲಯದ ಮುಖ್ಯ ಗುರುಗಳಾದ ಜೆ.ಬಿ. ಸಲ್ದಾನ ಪೆರ್ಮನ್ನೂರು , ರಾಣಿಪುರ ಇಗರ್ಜಿಯ ಧರ್ಮಗುರು ಸಂತೋಷ್ ಡಿ’ಸೋಜಾ, ಮತ್ತು ರಿಶಿವನದ ಗುರು ಅಲ್ವಿಟೊ ದಿವ್ಯ ಬಲಿಪೂಜೆ ಅರ್ಪಿಸಿದರು. ಸನ್ಮಾನ ಸಮಾರಂಭದಲ್ಲಿ ಬೆಥನಿ ಸಂಸ್ಥೆಯ ಸಹಾಯಕಿ ಮಹಾಮಾತೆ ಭಗಿನಿ ಲಿಲ್ಲಿಸ್ ಬಿ.ಎಸ್. ಹಾಗೂ ಪೆÇ್ರವಿನ್ ಶಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ ಬಿ.ಎಸ್ ಇವರನ್ನು ಸನ್ಮಾನಿಸಲಾಯಿತು. ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಮೀನಾರವರು ಸ್ವಾಗತಿಸಿದರು. ಭಗಿನಿ ಅಮಲ ವಂದಿಸಿದರು. ಹೋಲಿ ಏಂಜಲ್ಸ್ ಶಾಲೆ ಪೆರ್ಮನ್ನೂರಿನ ಭಗಿನಿ ಸಿಸ್ಟರ್ ಸೆನ್ರಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್ ಬಳಸಿಕೊಂಡು ತಮ್ಮ ರೇಷನ್ ಕಾರ್ಡನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಸೆಕ್ಟರ್ ವತಿಯಿಂದ ಮದೀನಾದ ಕೆ.ಸಿ.ಎಫ್ ಭವನದಲ್ಲಿ ನಡೆದ ಅಸುಪ್ಪಾ 2ನೇ ಆವೃತ್ತಿಯ ಸ್ಪೋಕನ್ ಇಂಗ್ಲೀಷ್ ತರಗತಿ ಉದ್ಘಾಟಿಸಿ ಮಾತನಾಡಿದರು. ರೇಷನ್ ಕಾರ್ಡ್ ಇಲ್ಲದೆ ವಿದೇಶದಲ್ಲಿರುವ ರಾಜ್ಯದ ಪ್ರತಿಯೊಬ್ಬರು ತಾವು ಅರ್ಜಿ ಸಲ್ಲಿಸಿದ ತಿಂಗಳೊಳಗೆ ರೇಷನ್ ಕಾರ್ಡ್ ಅರ್ಜಿದಾರರ ಕೈ ಸೇರಲಿದೆ ಎಂದ ಅವರು ಕೆಸಿಎಫ್‍ನ ಮದೀನಾ ಸೆಕ್ಟರ್ ಅಂಗ್ಲ ಭಾಷೆ ಕಲಿಕೆಗೆ ವ್ಯವಸ್ಥೆ ಮಾಡುವ ಮೂಲಕ ಉತ್ತಮ ಕಾರ್ಯ ನಡೆಸುತ್ತಿದ್ದು, ನಮ್ಮ ಮಾತೃಭಾಷೆಯೊಂದಿಗೆ ಇತರ ಭಾಷೆಗಳಿಗೆ ಆದ್ಯತೆ ನೀಡಿದರೆ ಭಾಷಾ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ. ಪ್ರಸಕ್ತ ಸನ್ನಿವೇಶದಲ್ಲಿ ಇಂಗ್ಲೀಷ್ ಭಾಷೆ ಅತ್ಯಗತ್ಯವಾಗಿದ್ದು, ನಾವು ಇತರೆ ಭಾಷೆಗಳನ್ನು ಕಲಿತಂತೆ ನಮ್ಮ ವ್ಯಕ್ತಿತ್ವವು ಕೂಡ ಬೆಳೆಯುತ್ತಾ ಹೋಗುತ್ತದೆ ಎಂದರು. ಇದೇ ವೇಳೆ ಕರ್ನಾಟಕ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಪೊಯ್ಯತ್ತಬೈಲ್: ಉತ್ತಮ ಪಾಂಡಿತ್ಯವನ್ನು ಹೊಂದಿದ ಮಣವಾಠಿ ಬೀವಿಯವರು ಪವಾಢದಿಂದ ಪೊಯ್ಯತ್ತಬೈಲ್ ಎಂಬ ಕುಗ್ರಾಮ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟು ಈಗಲೂ ಹೆಸರು ಉಳಿಸಿಕೊಂಡಿದೆ. ಇಲ್ಲಿನ ಉರೂಸ್ ಕಾರ್ಯಕ್ರಮದಲ್ಲಿ ಯಾವುದೇ ಭಿನ್ನಮತ ತೋರದೇ ಎಲ್ಲರೂ ಸಹಮತದಿಂದ ವರ್ತಿಸಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ ಎಂದು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸ್ಸಯ್ಯದ್ ಅತ್ತಾವುಲ್ಲ ತಂಙಳ್ ಹೇಳಿದರು. ಅವರು ಪೊಯ್ಯತ್ತಬೈಲ್ ನಲ್ಲಿರುವ ಮಣವಾಠಿಬೀವಿ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಶುಕ್ರವಾರ ಧ್ವಜಾರೋಹಣ ನಡೆಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಉಳ್ಳಾಲದ ನಂತರ ಸ್ಥಾನ ಈ ದರ್ಗಾಕ್ಕಿದೆ. ಅದನ್ನು ಎಲ್ಲರೂ ಒಗ್ಗಟ್ಟಿನಿಂದ ಇದ್ದುಕೊಂಡು ಉಳಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ವಿ. ಅಹಮದ್ ಕುಂಞ ಓಡಂಗಳ, ಜಮಾಅತ್‍ನ ಮಾಜಿ ಅಧ್ಯಕ್ಷ ರಾದ ನಡಿಬೈಲ್ ಅಹ್ಮದ್ ಕುಂಞ ಪಿ.ಕೆ.ಕುಂಞ ಅಹ್ಮದ್ ಮುಸ್ಲಿಯಾರ್, ಟಿ. ಅಹ್ಮದ್, ಟಿ. ಇಸ್ಮಾಯಿಲ್ ಮಾಸ್ಟರ್, ಎಸ್.ಎಂ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಸಮಿತಿ ಕಾರ್ಯದರ್ಶಿ ಪಿ.ಕೆ. ಇಬ್ರಾಹಿಂ…

