ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 100 ಮನೆಗಳ ವಿತರಿಸುವ ಯೋಜನೆಯಿದ್ದು, ಉಳ್ಳಾಲ ಮತ್ತು ಮಂಗಳೂರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು 260 ಕೋಟಿ ಅನುದಾನ ನೀಡಲಾಗಿದೆ ಎಂದು ಎಂದು ರಾಜ್ಯ ಲೋಕೋಪಯೋಗಿ ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ| ಎಚ್.ಸಿ.ಮಹಾದೇವಪ್ಪ ತಿಳಿಸಿದರು. ಉಳ್ಳಾಲ ನಗರದಭೆಯಲ್ಲಿ ಸುಮಾರು 3.7 ಕೋಟಿ ರೂ ವೆಚ್ಚದಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರದ ಜೆ.ಆರ್. ಲೋಬೋ ಅವರ ಕೇಲಿಕೆಯಯ ಮೇರೆಗೆ ಹಲವಾರು ಅನುದಾನಗಳನ್ನು ಬಿಡುಗಡೆ ಮಾಡಿದ್ದು, ಕರಾವಳಿ ರಕ್ಷಣೆ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಇಲ್ಲಿಗೆ ಹರಿದು ಬರಲಿದೆ. ಉಳ್ಳಾಲಕ್ಕೆ ಈಗಾಗಲೇ ನಗರೋತ್ಥಾನ ಅನುದಾನದಡಿ 25 ಕೋಟಿ ಬಿಡುಗಡೆಯಾಗಿದ್ದು, 10 ಕೋಟಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಲಾಗಿದ್ದ 165 ಭರವಸೆಗಳ ಪೈಕಿ 135 ಈಡೇರಿಸಲಾಗಿದ್ದು, ಇನ್ನುಳಿದ ಭರವಸೆಗಳನ್ನು…
Author: UllalaVani
ಉಚ್ಚಿಲ: ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ತಡೆ ಯೋಜನೆಗೆ ಪರಿಣತ ಸಮಿತಿಯಿಂದ ಸಲಹೆ ಪಡೆದು ಟೆಂಡರ್ ಕರೆಯಲಾಗಿದ್ದು, ಮುಂಗಾರು ಮುಗಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು. ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮುದ್ರ ತೀರದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸೋಮೇಶ್ವರ ಉಚ್ಚಿಲ ಸಮುದ್ರ ತೀರಕ್ಕೆ ಭೇಟಿ ನೀಡಿದರು. ಉಳ್ಳಾಲ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ಕೈಗೊಂಡ ಬಳಿಕ ಸೋಮೇಶ್ವರ ಉಚ್ಚಿಲ ತೀರದಲ್ಲಿ ಅನೇಕ ಮನೆಗಳು ಸಮುದ್ರಪಾಲಾಗಿವೆ. ಇಲ್ಲಿನ ಸಮುದ್ರ ತಡೆ ಯೋಜನೆ ರೂಪಿಸಲು ಪರಿಣತ ತಂಡದಿಂದ ಸಲಹೆಯನ್ನು ಪಡೆಯಲಾಗಿದೆ. ಅದಕ್ಕಾಗಿ ಹೆಚ್ಚುವರಿ 4 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ತಾಂತ್ರಿಕತೆ, ಹಣಕಾಸು ವ್ಯವಸ್ಥೆ ಸಿದ್ಧಗೊಳ್ಳುತ್ತಿದ್ದಂತೆ ಮುಂಗಾರು ಕಳೆದ ತಕ್ಷಣ ಕಾಮಗಾರಿಯನ್ನು ಆರಂಭಿಸುವುದಾಗಿ ಹೇಳಿದರು. ಈ ಸಂದರ್ಭ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ನಗರಸಭೆ ಸದಸ್ಯರು, ಸೋಮೇಶ್ವರ ಪಂ. ಸದಸ್ಯರು ಹಾಗೂ ಬಂದರು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ: ದೇಶದಲ್ಲಿ ಜಾತಿಪದ್ದತಿ ವ್ಯವಸ್ಥೆ ದೂರವಾಗಿದ್ದರೂ ಹಿಂದುತ್ವದ ಆಧಾರದಲ್ಲಿ ಆಡಳಿತ ನಡೆಸುವ ರಾಜ್ಯಗಳಲ್ಲಿ ಶೇ.20 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೀಸಲಾತಿಗಳನ್ನು ಒದಗಿಸಲಾಗುತ್ತಿದ್ದು, ಇದು ಹಿಂದಿನ ಜಾತಿಪದ್ಧತಿಗಳನ್ನು ಮತ್ತೆ ನೆನಪಿಸುವಂತಹ ವಾತಾವರಣ ನಿರ್ಮಿಸುವುದರ ಮೂಲಕ ಅಂತಹ ರಾಜ್ಯಗಳಲ್ಲಿ ಅಭಿವೃದ್ಧಿಯೂ ಕುಂಠಿತವಾಗಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಇದರ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜೀವನ ತತ್ವ ಪ್ರಸರಣ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿದರು. 19ನೇ ಶತಮಾನದಲ್ಲಿ ಕೇರಳದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಇದ್ದ ವರ್ಣಬೇಧ ಹಾಗೂ ಜಾತಿಪದ್ದತಿ ವ್ಯವಸ್ಥೆಯ ವಿರುದ್ಧ ನಾರಾಯಣ ಗುರು, ಮಹಾತ್ಮ ಫುಲೆ, ಬಸವಣ್ಣ, ಪೆರಿಯಾರ್‍ರಾಮಸ್ವಾಮಿ, ಗುರುನಾನಕ್ ನಂತಹ ಸಮಾಜ ಸುಧಾರಕರು ಹೋರಾಡಿ ನವೋದಯ ಎಂಬ ಹೊಸ ಬದಲಾವಣೆಯನ್ನು ಹುಟ್ಟು ಹಾಕಿದರು. ಸಮಾನತೆ ಹಾಗೂ ಏಕತೆಯ ಉದ್ದೇಶವನ್ನಿಟ್ಟುಕೊಂಡು ಸಮಾಜ ಸುಧಾರಣೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದರು.…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಧಾರ್ಮಿಕ ಕ್ಷೇತ್ರದಲ್ಲಿದ್ದುಕೊಂಡು ವಿದ್ಯಾರ್ಜನೆಗೈದರೆ ಮಾತ್ರ ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಅರಿವು ಮೂಡಲು ಸಾಧ್ಯ. ಹಿರಯರು, ಗುರುಗಳು, ಪವಾಢ ಪುರುಷರಿಗೆ ಸಲ್ಲಬೇಕಾದ ಗೌರವವನ್ನು ನೀಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಸಯ್ಯದ್ ಆಟಕೋಯ ತಂಙಳ್ ಹೇಳಿದರು. ಅವರು ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮುಸ್ಲಿಯಾರ್‍ರವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಕೂಟು ಝಿಯಾರತ್ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಗೆ ಗೌರವ ಜಾಸ್ತಿ ಇದೆ. ಈ ಪ್ರಾರ್ಥನೆಯಿಂದ ನಮಗೆ ಪ್ರತಿಫಲ ಕೂಡಾ ಸಿಗುತ್ತದೆ. ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಂಡು ಹೆಚ್ಚು ಪುಣ್ಯ ಗಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು. ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಕುಂಞ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಮಸೀದಿಯ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಿದರು. ಸಯ್ಯದ್ ಭಾತಿಷ್ ತಂಙಳ್ ಅಝ್‍ಅರಿ, ಕುತುಬಿನಗರ ಮಸೀದಿ ಖತೀಬ್ ಅಬ್ದುರ್ರಝಾಕ್ ಮದನಿ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಹೊಸದಿಲ್ಲಿ : ಸುಮಾರು 30 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಅಮೂಲ್ಯವಾದ ಸೇವೆ ಸಲ್ಲಿಸಿದ ಐಎನ್ಎಸ್ ವಿರಾಟ್ ತನ್ನ ಸೇವೆಯಿಂದ ನಿವೃತ್ತಿಯಾಗಲಿದ್ದು ಎರಡನೇ ಬೃಹತ್ ಸಮರ ನೌಕೆಯಾಗಿರುವ ಐಎನ್ಎಸ್ ವಿರಾಟ್ ಸೋಮವಾರ ವಿದಾಯ ಹೇಳಲಿದೆ. ಐಎನ್ಎಸ್ ವಿರಾಟ್ ಭಾರತೀಯ ನೌಕಾ ಪಡೆಯು ಈ ಮೊದಲು ಬ್ರಿಟನ್ನ ರಾಯಲ್ ನೇವಿಯೊಂದಿಗೆ ಸೇವೆ ಸಲ್ಲಿಸುವ ಮೂಲಕ 27 ಬಾರಿ ವಿಶ್ವ ಪರ್ಯಟನೆ ಮಾಡಿದೆ. ಬರೋಬ್ಬರಿ 11 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದೆ. ಭಾರತೀಯ ನೌಕಾ ಪಡೆ ಕಳೆದ 30 ವರ್ಷಗಳಲ್ಲಿ ಕೈಗೊಂಡಿರುವ ಹಲವಾರು ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಐಎನ್ಎಸ್ ವಿರಾಟ್, ಆಪರೇಶನ್ ಪವನ್ ಮತ್ತು ಪರಾಕ್ರಮ್ ಆ ಪೈಕಿ ಪ್ರಮುಖವಾಗಿವೆ. ಮುಂಬಯಿಯಿಲ್ಲ ಇಂದು ಸೋಮವಾರ ಐಎನ್ಎಸ್ ವಿರಾಟ್ ವಿದಾಯ ಕಾರ್ಯಕ್ರಮ ನಡೆಯಲಿದ್ದು ಸುಮಾರು 21 ಮಾಜಿ ಕಮಾಂಡರ್ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಐಎನ್ಎಸ್ ವಿರಾಟ್ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಪ್ರಸ್ತಾವವದಲ್ಲಿ ಆಂಧ್ರ ಪ್ರದೇಶ ಸರಕಾರ ಆಸಕ್ತಿ ತೋರಿತ್ತು. ಆದರೆ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಂಬೈ: ದೇಶದೆಲ್ಲೆಡೆ ನೋಟು ಬ್ಯಾನ್ ಬಿಸಿ ಕಡಿಮೆಯಾಗುತ್ತಿದ್ದಂತೆ ಇದೀಗ ಎಸ್‌ಬಿಐ ಬ್ಯಾಂಕ್ ಹೊಸದೊಂದು ನೀತಿಯನ್ನು ಪ್ರಕಟಿಸುವ ಮೂಲಕ ಜನರಿಗೆ ದೊಡ್ಡ ಶಾಕ್ ನೀಡಿದೆ. ನಿಮ್ಮ ಉಳಿತಾಯದ ಖಾತೆಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಮೊತ್ತಕ್ಕೂ ಕಡಿಮೆ ಹಣವಿದ್ದರೆ ಅಂದರೆ ಕನಿಷ್ಠ 5 ಸಾವಿರ ರು ಠೇವಣಿ ಇಲ್ಲದಿದ್ದರೆ ದಂಡ ಬೀಳಲಿದೆ. ಏಪ್ರಿಲ್ 1 ರಿಂದ ನೀತಿ ಜಾರಿಗೆ ಬರಲಿದ್ದು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಮೆಟ್ರೋಪಾಲಿಟನ್ ನಗರಗಳಲ್ಲಿ ಈ ದಂಡದ ಮೊತ್ತ ಹೆಚ್ಚಿರಲಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಮಾಸಿಕ ಸರಾಸರಿ 5 ಸಾವಿರ, ನಗರಗಳಲ್ಲಿ 3 ಸಾವಿರ, ಅರೆನಗರಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1000 ರುಪಾಯಿ ಠೇವಣಿ ಹೊಂದಿರಬೇಕು. ಮೆಟ್ರೋ ಸಿಟಿಯ ಗ್ರಾಹಕರು ಖಾತೆಯಲ್ಲಿ 5 ಸಾವಿರ ಮೊತ್ತ ಇರಲೇಬೇಕು. ಅದು ಶೇ.50ರಷ್ಟು ಕಡಿಮೆ ಆಯಿತೆಂದರೆ 50 ರುಪಾಯಿ ತಂಡದ ಜತೆಗೆ ಸೇವಾ ತೆರಿಗೆಯನ್ನು ಕಟ್ಟಬೇಕು. ಇನ್ನು ಶೇ. 70ರಷ್ಟು ಕಡಿಮೆ ಆದರೆ 75 ರುಪಾಯಿ ಮತ್ತು ಸೇವಾ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಾಸರಗೋಡು: ಕಾರುಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು,ಮತ್ತೊರ್ವ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ನಡೆದಿದೆ. ಮೃತಪಟ್ಟವರನ್ನು ಕಾಸರಗೋಡು ಆಲಂಪಾಡಿ ಅಬ್ದುಲ್ ರಜಾಕ್ (34) ಎಂದು ಗುರುತಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದ ಕಸ್ಟಮ್ಸ್ ಅಧಿಕಾರಿ ವಿಪಿನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಝಿಕೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಮಂಜೇಶ್ವರದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ತಲುಪಿಸಿದರೂ ರಜಾಕ್ ಮೃತಪಟ್ಟರು. ಸೌದಿಯಲ್ಲಿ ಉದ್ಯೋಗದಲ್ಲಿದ್ದ ರಜಾಕ್ ಕೆಲ ತಿಂಗಳ ಹಿಂದೆ ನಡೆದ ಸಹೋದರ ಅಜೀಜ್ ನ್ ವಿವಾಹಕ್ಕೆ0ದು ಊರಿಗೆ ಬಂದಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ :ಎಳೆ ಮಕ್ಕಳ ಮಾಂಸಖಂಡಗಳಲ್ಲಿ ನೋವು, ಚರ್ಮದ ಗುಳ್ಳೆಗಳು ಮತ್ತು ಜ್ವರ ಕಾಣಿಸಿಕೊಂಡರೆ ಅಂತಹ ಮಕ್ಕಳನ್ನು ತಜ್ಞರು ಸರಿಯಾಗಿ ಪರೀಕ್ಷಿಸುವ ಮೂಲಕ ಮಕ್ಕಳು ಸಂಧಿವಾತಕ್ಕೆ ತುತ್ತಾಗದಂತೆ ಶುಶ್ರೂಷೆ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕ್ಷೇಮ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ಅವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ ಜರಗಿದ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಕೆಲವೊಂದು ಸಂಸ್ಥೆಗಳು ಮಾತ್ರ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೀಲುರೋಗ ನೋವಿನ ¨ಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಪ್ರತಿಯೊಂದು ವೈದ್ಯಕೀಯ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಳ್ಳುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದರು. ಭಾರತೀಯ ಪೀಡಿಯಾಟ್ರಿಕ್ಸ್ ಅಕಾಡೆಮಿಯ ಚುನಾಯಿತ ಅಧ್ಯಕ್ಷ ಡಾ.ಸಂತೋಷ್ ಸೋನ್ಸ್, ಎಸ್.ಕೆ.ಬ್ರಾಂಚಿನ ಪೀಡಿಯಾಟ್ರಿಕ್ಸ್ ಅಕಾಡೆಮಿ ಅಧ್ಯಕ್ಷ ಡಾ.ಮೇಜರ್ ರಾಜೇಶ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಡಾ. ಆನಂದ ರಾವ್, ಕೊಚ್ಚಿ ಅಮೃತ ವೈದ್ಯಕೀಯ ಕಾಲೇಜಿನ ಡಾ.ಸುಮಾ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ತಖ್ವೀಯ ಟೋಪ್ ಟೆನ್ ಯೂನಿಟ್ ಲೀಡರ್ಸ್ ಮೀಟ್ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷ ಮನ್ಸೂರು ಹಿಮಮಿ ಮೊಂಟೆಪದವು ಉಸ್ತಾದರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಹಾಗೂ ಡಿವಿಷನ್ ಉಪಾಧ್ಯಕ್ಷರು, ಮೋಂಟುಗೋಳಿ ಸೆಕ್ಟರ್ ಉಸ್ತುವಾರಿ ಫಾರೂಕ್ ಸಖಾಫಿ ಮದನಿ ನಗರ ಪ್ರಾಸ್ತವಿಕವಾಗಿ ಮಾತನಾಡಿದರು. ಸುಲೈಮಾನ್ ಮುಸ್ಲಿಯಾರ್ ಕರಿವೆಲ್ಲೂರು ಸಮಸ್ತ ನಡೆದು ಬಂದ ದಾರಿ ಎಂಬ ವಿಷಯದಲ್ಲಿ ಹಾಗೂ ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ.ಎಂ ಅಬ್ದುಲ್ ರ್ರಹಿಮಾನ್ ಕಳತೂರು ಸಂಘಟನೆ ತರಗತಿಯನ್ನು ನಡೆಸಿದರು. ಎಸ್.ವೈ.ಎಸ್ ನಾಯಕರಾದ ಖಾಲಿದ್ ಹಾಜಿ ಭಟ್ಕಳ, ಅಝೀಝ್ ಮೊಂಟೆಪದವು, ಮೋಂಟುಗೋಳಿ ಸೆಕ್ಟರ್ ನಾಯಕರಾದ ನಾಸಿರ್ ಮೊಂಟುಗೋಳಿ, ಸಿರಾಜ್ ನಡುಪದವು, ಮುಸ್ತಫಾ ನಡುಪದವು, ನಿಯಾಝ್ ಪಡಿಕ್ಕಲ್, ಸಿರಾಜ್ ಪಡಿಕ್ಕಲ್,…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಎಸ್ಸೆಸ್ಸೆಫ್ ಸಂಘಟನೆ ಧಾರ್ಮಿಕ ಚಟುವಟಿಕೆಗಳೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರ್ಯವೈಖರಿ ಶ್ಲಾಘನೀಯ ಎಂದು ಕೊಣಾಜೆ ಠಾಣೆಯ ಉಪನಿರೀಕ್ಷಕ ಸುಗುಮಾರನ್ ಅಭಿಪ್ರಾಯಪಟ್ಟರು. ಅವರು ಗುರುವಾರ ಎಸ್ಸೆಸ್ಸೆಫ್ ದೇರಳಕಟ್ಟೆ ವತಿಯಿಂದ ರಿಫಾಈ ಶೈಖ್ ರವರ ಅನುಸ್ಮರಣೆ ಅಂಗವಾಗಿ ಕೊಣಾಜೆ ಅಸೈಗೋಳಿಯ ಅಭಯ ಅಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು. ಧಾರ್ಮಿಕ ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಇದೆ. ಸಮಾಜದಲ್ಲಿ ಹಿಂದುಳಿದವರ ಸೇವೆಗೆ ನಿಲ್ಲುವ ಮೂಲಕ ಧಾರ್ಮಿಕ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು . ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಹಸನ್ ಸಅದಿ, ಉಪಾಧ್ಯಕ್ಷರುಗಳಾದ ಜುನೈದ್ ಸಖಾಫಿ,ಸುಹೈಲ್ ಶಾಂತಿಬಾಗ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಕಾರ್ಯದರ್ಶಿ ಶರೀಫ್ ಮುಡಿಪು, ಪ್ರ.ಕಾರ್ಯದರ್ಶಿ ಸಫೀರ್ ರೆಂಜಾಡಿ, ಸದಸ್ಯರಾದ ಸಿದ್ದೀಕ್ ಮದನಿ, ಸಿದ್ದೀಕ್ ಕೋಟೆಕಾರ್ ಹಮೀದ್ ನಾಟೆಕಲ್, ಅಲಿ ಬದ್ಯಾರ್, ನೌಷಾದ್ ಬದ್ಯಾರ್, ಅಲ್ತಾಫ್ ಕಲ್ಪಾದೆ, ಅಶ್ರಫ್ ಅಸೈ, ರಫೀಕ್ ತಿಬ್ಲೆಪದವು ಉಪಸ್ಥಿತರಿದರು.

