ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಇತ್ತೀಚೆಗೆ ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ವಸ್ತು ಪ್ರದರ್ಶನದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಮಳಿಗೆ ವಿಜ್ಞಾನಾಸಕ್ತರ ಹಾಗೂ ಶಾಲಾ ಮಕ್ಕಳ ಗಮನ ಸೆಳೆಯಿತು.
ಈ ಮಳಿಗೆಯಲ್ಲಿ ಅರಿವಳಿಕೆ ಶಾಸ್ತ್ರ ವಿಭಾಗದ ವತಿಯಿಂದ ಅಣಕು ಶಸ್ತ್ರಚಿಕಿತ್ಸಾ ಕೊಠಡಿ ವಿದ್ಯಾರ್ಥಿಗಳ ಕುತೂಹಲ ಕೆರಳಿಸಿ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಳ್ಳುವಂತೆ ಮಾಡಿತು. ಪ್ರೇಕ್ಷಕರು ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿತೆ ಹಾಗೂ ತರಬೇತಿಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು. ಶರೀರಶಾಸ್ತ್ರ ವಿಭಾಗದಿಂದ ಪ್ರದರ್ಶಿತವಾದ ಮಾನವನ ಬೇರೆ ಬೇರೆ ಅಂಗಾಂಗಗಳು, ಸಮುದಾಯ ವೈದ್ಯಕೀಯ ಶಾಸ್ತ್ರದ ಪ್ರಾತ್ಯಕ್ಷಿತೆಗಳು ಗಮನ ಸೆಳೆದವು.
ಅಭಯಚಂದ್ರ ಜೈನ್, ಮಾಜಿ ಮೀನುಗಾರಿಕಾ ಹಾಗೂ ಯುವಜನ ಕ್ರೀಡಾಸಚಿವರು, ಎಂ.ಎಲ್.ಎ., ಈ ಮಳಿಗೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು, ಮೆಚ್ಚುಗೆ ವ್ಯಕ್ತಪಡಿಸಿದರು.


