Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕರ್ಣಾಟಕ ಬ್ಯಾಂಕ್ ನ ತೊಕ್ಕೊಟ್ಟು ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಯಲ್ಲಿ ಹಲವು ದಾಖಲೆಗಳು ಸುಟ್ಟುಹೋಗಿವೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕಿನಲ್ಲಿ ನಿನ್ನೆ ತಡರಾತ್ರಿ 10.00 ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮತ್ತು ಅಗ್ನಿ ಶಾಮಕ ಸಿಬ್ಬಂದಿಗೆ ದೂರು ನೀಡಿದ್ದಾರೆ. ಅಷ್ಟರಲ್ಲಿ ಬೆಂಕಿ ಕಿಟಕಿಯಿಂದ ಹೊರ ವ್ಯಾಪಿಸಿದ್ದು, ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲೆ ಬ್ಯಾಂಕಿನ ಒಳಗಡೆಯೇ ದಟ್ಟವಾಗಿ ವ್ಯಾಪಿಸಿತ್ತು. ಈ ವೇಳೆ ದಾಖಲೆಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಯಿತು. ಕಿಟಕಿ ಮೂಲಕ ಕಿಚ್ಚು: ಬ್ಯಾಂಕಿನ ಹಿಂಬದಿಯ ಕಿಟಕಿ ಮೂಲಕ ಬೆಂಕಿ ಹಾಕಿರುವ ಸಾಧ್ಯತೆಗಳಿದ್ದು, ಅದರಂತೆ ಪೊಲೀಸರು ಕಿಟಕಿ ಸಮೀಪ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಭಾನುವಾರ ತಡರಾತ್ರಿ ಇಲ್ಲೇ ಸಮೀಪ ದಾರಿಬದಿಯಲ್ಲಿರುವ ಮೂರು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಫೆ.24ರಂದು ಕರ್ಣಾಟಕ ಬ್ಯಾಂಕಿನಿಂದ ಕೆಲ ಮೀ. ಅಂತರದಲ್ಲಿರುವ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಉಳ್ಳಾಲ ನಗರಸಭೆ 2017-18ನೇ ಸಾಲಿನಲ್ಲಿ ಒಟ್ಟು 29 .25 ಕೋಟಿ ರೂ.ಗಳ ಆದಾಯವನ್ನು ನೀರಿಕ್ಷಿಸಿದ್ದು 29.11ಕೋಟಿ ಖರ್ಚು ಅಂದಾಜಿಸಿದ್ದು 14. 70 ಲಕ್ಷ ಮಿಗತೆ ಬಜೆಟನ್ನು ಮಂಗಳವಾರ ಪ್ರಕಟಿಸಿದೆ. ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆ ಮತ್ತು ಸಾಮನ್ಯ ಸಭೆಯಲ್ಲಿ ಉಳ್ಳಾಲ ನಗರ ಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಬಜೆಟನ್ನು ಪ್ರಕಟಿಸಿದರು. ನಗರ ಸಭಾ ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಉಪಸ್ಥಿತರಿದ್ದರು. 2017-2018ನೇ ಸಾಲಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 1.88 ಕೋಟಿ, ನೀರಿನ ಶುಲ್ಕದಿಂದ ರೂ. 35 ಲಕ್ಷ, ನಲ್ಲಿ ಜೋಡಣೆಯಿಂದ 5.00ಲಕ್ಷ, ಮಳಿಗೆಗಳ ಬಾಡಿಗೆಯಿಂದ ರೂ. 29.00ಲಕ್ಷ, ಕಟ್ಟಡ ಪರವಾನಿಗೆ ಮತ್ತು ಅಭಿವೃದ್ದಿ ಶುಲ್ಕಗಳಿಂದ ರೂ. 60.00ಲಕ್ಷ , ಉದ್ದಿಮೆ ಪರವಾನಿಗೆಯಿಂದ ರೂ. 20.40ಲಕ್ಷ , ಜಾಹೀರಾತು ತೆರಿಗೆಯಿಂದ 2.00ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಶುಲ್ಕದಿಂದ ರೂ. 35.00ಲಕ್ಷ, ಉಪಕರಣಗಳ ಸಂಗ್ರಹಣೆ ಮತ್ತು ದಂಡ ವಸೂಲಾತಿಯಿಂದ ರೂ.…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕ್ರೀಡಾ ಕ್ಷೇತ್ರಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಬಹಳ ಕೊಡುಗೆಗಳನ್ನು ನೀಡಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎಂ.ಎಸ್ ಮೂಡಿತ್ತಾಯ ಹೇಳಿದ್ದಾರೆ. ಅವರು ದೇರಳಕಟ್ಟೆ ಕ್ಷೇಮ ಕ್ಯಾಂಪಸ್ಸಿನ ಕ್ರೀಡಾಂಗಣದಲ್ಲಿ ಮಂಗಳವಾರ ಜರಗಿದ 4ನೇ ನಿಟ್ಟೆ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್ -2017 ಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ , ಫಾಮ9ಸಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಯಸ್ ಶಾಸ್ತ್ರಿ, ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ. ದನೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಫಾತಿಮಾ ಉಪಸ್ಥಿತರಿದ್ದರು. ಆಕ್ಷಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ವಿಭಾಗದ ಸಲಹೆಗಾರ ಡಾ.ಮುರಳಿಕೃಷ್ಣನ್ ಸ್ವಾಗತಿಸಿದರು. ದೈಹಿಕ ವಿಭಾಗದ ಮುಖ್ಯಸ್ಥ ಕರುಣಾಕರ ಶೆಟ್ಟಿ ವಂದಿಸಿದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಬೆಳ್ಮ: ಬೆಳ್ಮ ಗ್ರಾಮ ಪಂಚಾಯತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡುವಂತೆ ಹೋರಾಟ ನಡೆಸಿದ್ದರೂ ಪ್ರಯೋಜನವಿಲ್ಲ. ಹಕ್ಕುಪತ್ರಕ್ಕಾಗಿ 400ಕ್ಕೂ ಹೆಚ್ಚು ಅರ್ಜಿ ನೀಡಿದ್ದರೂ ಸ್ಪಂಧನೆ ದೊರೆಯದಿರುವುದನ್ನು ಖಂಡಿಸಿ ನಿವೇಶನರಹಿತರು ಸೋಮವಾರ ಬೆಳ್ಮ ಗ್ರಾಮ ಪಂಚಾಯಿತಿ ಎದುರು ಅನಿರ್ಧಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದಾರೆ. ದಲಿತ ಹಕ್ಕುಗಳ ಹೋರಾಟ ಸಮಿತಿ, ಕೋಟೆಕಾರ್ ಸರ್ಕಲ್ ಕರ್ನಾಟಕ ಪ್ರಾಂತ್ಯ, ಸಂಚಾಲನ ಸಮಿತಿ ಬೆಳ್ಮ ಗ್ರಾಮ ಇದರ ನೇತೃತ್ವದಲ್ಲಿ ನಿವೇಶನ ರಹಿತರು ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದಾರೆ. ಮಂಗಳೂರು ತಾಲೂಕಿನ ಬೆಳ್ಮ ಗ್ರಾಮದಲ್ಲಿ ಸರ್ವೆ ನಂಬರ್ 93, 51, 45, 48 ಮತ್ತು ಸರಕಾರಿ ಖಾಲಿ ಸ್ಥಳ 54 ವಿಸ್ತೀರ್ಣ 12 ಎಕ್ರೆ 35 ಸೆಂಟ್ಸ್ , ಸ.ನಂಬರ್ 33ರಲ್ಲಿ 7 ಎಕ್ರೆ 13ಸೆಂಟ್ಸ್ ಖಾಲಿ ಸ್ಥಳವಿದ್ದು, ಸರ್ವೆ ನಂಬರ್ 54ರಲ್ಲಿ 3 ಎಕ್ರೆ ಸ್ಥಳವನ್ನು ನಿವೇಶನಕ್ಕೆ ಹಸ್ತಾಂತರಿಸಲಾಗಿದ್ದರೂ ಸುಮಾರು 400ಕ್ಕೂ ಮಿಕ್ಕಿ ನಿವೇಶನ ಅರ್ಜಿಗಳು ಬಾಕಿ ಉಳಿದಿವೆ. ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡುವಂತೆ ಹೋರಾಟ ಮಾಡಿಕೊಂಡು…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಿಕ್ಷಾ ಬ್ರೇಕ್ ವೈಫಲ್ಯಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೆಳಗೆಡೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ರಿಕ್ಷಾ ಚಾಲಕ ಅಬ್ದುಲ್ ಖಾದರ್ (42) ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಆರೀಫ್ (16) ಮತ್ತು ಸುಹೈಲ್ (17) ಗಾಯಗೊಂಡವರು. ಉಳ್ಳಾಲದಿಂದ ತೊಕ್ಕೊಟ್ಟು ಒಳಪೇಟೆಗೆ ಪಾರ್ಕಿಗೆ ಬರುವ ಸಂದರ್ಭ ಓವರ್ ಬ್ರಿಡ್ಜ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಬ್ರೇಕ್ ವೈಫಲ್ಯಕ್ಕೀಡಾಗಿತ್ತು. ಪರಿಣಾಮ ಕೆಳಗಿದ್ದ ರಾಘವ.ಯಸ್.ಉಚ್ಚಿಲ್ ಎಂಬವರ ವಾಚ್ ರಿಪೇರಿ ಅಂಗಡಿಯೊಳಗೆ ನುಗ್ಗಿದ ರಿಕ್ಷಾ , ಅಂಗಡಿ ಷೋಕೇಸಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಶಾಲೆಗೆ ಬರುವವರಿದ್ದ ವಿದ್ಯಾರ್ಥಿಗಳನ್ನು ರಿಕ್ಷಾ ಚಾಲಕ ಕರೆತಂದಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದಾರಿಬದಿಯಲ್ಲಿದ್ದ ಒಣ ಮೀನು ಮಾರಾಟ ಮತ್ತು ಹೂವಿನ ಮಾರಾಟದ ಮೂರು ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ತೊಕ್ಕೊಟ್ಟು ಸಮೀಪ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಮಹಮ್ಮದ್ ಹನೀಫ್ , ಹೆಚ್.ಮನ್ಸೂರ್, ಅಬೂಬಕರ್ ಎಂಬವರ ಸೇರಿದ ಅಂಗಡಿಗಳಿಗೆ ಹಾನಿಗೀಡಾಗಿದೆ. ಭಾನುವಾರ ಸಂಜೆಯೂ ನಡೆದ ಘಟನೆಯಲ್ಲಿ ರೆಡು ಅಂಗಡಿಗಳಿಗೆ ಬೆಂಕಿ ತಗಲಿರುವುದನ್ನು ಕಂಡು ಸ್ಥಳೀಯರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಆದರೂ ಅಂಗಡಿಯೊಳಗಿದ್ದ ಒಣಮೀನು ಮತ್ತು ಹೂವು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಿಂದ ಸಾವಿರಾರು ರೂ ನಷ್ಟ ಸಂಭವಿಸಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಇಲ್ಲಿನ ಗೂಡಂಗಡಿಗಳು ಬೆಂಕಿ ಅನಾಹುತಕ್ಕೆ ಒಳಗಾಗುತ್ತಿದೆ. ಕಳೆದ ವರ್ಷ ರಸ್ತೆಬದಿಯಲ್ಲಿದ್ದ ಎಂಟು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಘಟನೆಯಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಲಕ್ಷಾಂತರ ನಷ್ಟ ಉಂಟಾಗಿತ್ತು. ಸಂಶಯಾಸ್ಪದವಾಗಿ ಸ್ಥಳದಲ್ಲಿ ತಿರುಗಾಡುತ್ತಿದ್ದ ಬೇರೆ ರಾಜ್ಯದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಮಲಗಿದ್ದ ಭಿಕ್ಷುಕರು ನೀಡಿದ ಮಾಹಿತಿಯಂತೆ ಆತನನ್ನು ವಶಕ್ಕೆ…

Read More

ವಿಜಯವಾಡ :ಸೇತುವೆಯಿಂದ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 40 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ದಿವಾಕರ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ವೈಜಾಗ್ ನಿಂದ ಹೈದರಾಬಾದ್ ಗೆ ತೆರಳುವಾಗ ಘಟನೆ ನಡೆದಿದ್ದು, ಗಾಯಾಳುಗಳಲ್ಲಿ 17 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಜಖಂಗೊಂಡಿದೆ. ಕೃಪೆ: ನ್ಯೂಸ್ ಕನ್ನಡ

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಂದ್ ಮಾಡುವವರು ಕೇರಳ ಸಿ ಎಂ ಚಪ್ಪಲಿಗೂ ಸಮಾನರಲ್ಲ ಎಂಬ ಹೇಳಿಕೆಯನ್ನು ನಾನು ಯಾರನ್ನೂ ಅವಮಾನಿಸಲು ಮತ್ತು ಅವರ ಮನಸ್ಸನ್ನು ನೋಯಿಸಲು ಹೇಳಿಕೆ ನೀಡಿಲ್ಲ .ಅಚಾತುರ್ಯದಿಂದ ಚಪ್ಪಲಿ ಎಂಬ ಶಬ್ದ ಬಂದಿದೆ. ಕ್ಷಮೆ ಕೇಳಲ್ಲ, ಈ ಬಗ್ಗೆ ವಿಷಾದವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಸ್ಪಷ್ಟಪಡಿಸಿದ್ದಾರೆ. ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಅರ್ಥದ ಉದ್ದೇಶ ಹೇಳಿಕೆಯಲ್ಲಿ ಇರಲಿಲ್ಲ .ಸಂವಿಧಾನ ವಿರೋಧಿಗಳಿಗೆ ನೀಡಿದ ಹೇಳಿಕೆ ಬಾಯಿ ತಪ್ಪಿ ಬಂದಿದೆ. ಹಿರಿಯ ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಸಣ್ಣ ಮಗಳು ಕೂಡ ಇದನ್ನು ತಪ್ಪು ಎಂದು ಹೇಳಿದ್ದಾಳೆ. ಮುಂದೆ ಈ ರೀತಿ ಮಾತಾಡುವುದಿಲ್ಲ.ಇದನ್ನು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ವಾಟ್ಸಪ್ ನಲ್ಲಿ ತಿರುಚುತ್ತಿದ್ದಾರೆ ಎಂದು ಹೇಳಿದರು. ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋಗಿ ಚಹಾ ಕುಡಿದು ಬಂದಾಗ ಯಾರು ಮಾತನಾಡಲಿಲ್ಲ. ಆದರೆ ಹಿರಿಯರು, ದೇಶದ ಏಕೈಕ ಬಿಲ್ಲವ ಸಿ ಎಂ ದಕ್ಷಿಣ ಕನ್ನಡಕ್ಕೆ ಬಂದಾಗ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ಬಂದ್ ಹಿನ್ನಲೆಯಲ್ಲಿ ಕೇರಳ ಸಾರಿಗೆ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ 5 ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಚೆಂಬುಗುಡ್ಡೆ ನಿವಾಸಿ ರಜೀತ್(19), ತೊಕ್ಕೊಟ್ಟು ಭಟ್ನಗರ ನಿವಾಸಿ ಆತೀಶ್(22), ಮಂಜೇಶ್ವರ ನಿವಾಸಿಗಳಾದ ದಿನೇಶ್(25) ಸಂತೋಷ್ ಕುಮಾರು(28) ನವೀನ್(25) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳೆಲ್ಲರೂ ಮಂಗಳೂರು ಬಂದ್ ನ ಹಿಂದಿನ ದಿನವಾದ ಫೆ.24ರ ತಡ ರಾತ್ರಿ ಕೋಟೆಕಾರು ಬೀರಿ ಮತ್ತು ತಲಪಾಡಿಯಲ್ಲಿ ಕೇರಳ ಸಾರಿಗೆ ಬಸ್ಸುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ತನಿಖೆ ಕೈಗೆತ್ತಿಗೊಂಡು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಿನ್ಯಾ:ಕಿನ್ಯಾದಲ್ಲಿ ರೇಷನ್ ವಿತರಣೆಯಲ್ಲಿ ಬಹಳಷ್ಟು ತೊಂದರೆಯಾಗಿ, ಗ್ರಾಮಸ್ಥರು ಕೆಲಸ ಬಿಟ್ಟು ಅಂಗಡಿ ಎದುರು ಸಾಲಿನಲ್ಲಿ ನಿಲ್ಲುವಂತಾಗಿದೆ. ಸಮರ್ಪಕವಾಗಿ ಅಕ್ಕಿಯ ಪೂರೈಕೆಯಾಗದೇ ಜನ ಬಹಳಷ್ಟು ತೊಂದರೆಗೀಡಾಗಿದ್ದಾರೆ. ಇದನ್ನು ಅಧಿಕಾರಿಯ ಜತೆ ಹೇಳೋಣವೆಂದರೆ ಅಧಿಕಾರಿಯೇ ಬಂದಿಲ್ಲ. ಇದರಿಂದ ಗ್ರಾಮಸಭೆ ನಡೆಯುವುದು ಸಮಂಜಸವಲ್ಲ ಎಂಬ ಗ್ರಾಮಸ್ಥರ ಒಮ್ಮತದ ಅಭಿಪ್ರಾಯದ ಮೂಲಕ ಇಡೀ ಗ್ರಾಮಸಭೆ ಗೊಂದಲದಲ್ಲಿ ಮುಂದುವರಿದ ಪ್ರಸಂಗ ಕಿನ್ಯಾ ಗ್ರಾಮಸಭೆಯಲ್ಲಿ ನಡೆಯಿತು. ಕಿನ್ಯಾದ ಸರಕಾರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2016-17 ನೇ ಸಾಲಿನ ಗ್ರಾಮಸಭೆ ಸಮರ್ಪಕ ರೇಷನ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಾದ-ವಿವಾದಗಳ ನಡುವೆ ಮುಗಿಯಿತು. ಹಿಂದಿನ ಗ್ರಾಮಸಭೆಯಲ್ಲಿ ಅಧಿಕಾರಿಗಳ ಅನುಪಸ್ಥಿತಿಯಿಂದ ಗ್ರಾಮಸ್ಥರು ಗ್ರಾಮಸಭೆಯನ್ನೇ ರದ್ದುಗೊಳಿಸುವಂತೆ ಆಗ್ರಹಿಸಿ ಹೊರನಡೆದಿದ್ದರು. ಕಳೆದ ಗ್ರಾಮಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಮುಂದಿನ ಗ್ರಾಮಸಭೆಯಲ್ಲಿ ಬರಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲೂ ಆಹಾರ ಇಲಾಖೆಯ ಯಾವುದೇ ಅಧಿಕಾರಿಯ ಉಪಸ್ಥಿತಿ ಇರಲಿಲ್ಲ. ಕಿನ್ಯಾದಲ್ಲಿ ರೇಷನ್ ಅಂಗಡಿಯಲ್ಲಿ ಸಮರ್ಪಕವಾಗಿ ಅಕ್ಕಿಯ ಪೂರೈಕೆಯಾಗದೇ ಜನ ಬಹಳಷ್ಟು ತೊಂದರೆಗೀಡಾಗಿದ್ದಾರೆ.…

Read More